ನೃತ್ಯದಿಂದ ಪ್ರಸಿದ್ಧರಾದ ಕಿಶನ್ ಬಿಳಗಲಿ, ಬಿಗ್ ಬಾಸ್ ಸೀಸನ್ 7ರಲ್ಲಿ ಕನ್ನಡಿಗರಿಗೆ ಪರಿಚಿತರಾದರು. ಸದ್ಯಕ್ಕೆ ನೃತ್ಯ ಪ್ರದರ್ಶನ, ಸಿನಿಮಾ, ಧಾರಾವಾಹಿಗಳಲ್ಲಿ ಬ್ಯುಸಿಯಾಗಿರುವ ಕಿಶನ್, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ, ತಮ್ಮ ತಂದೆಯ 65ನೇ ಹುಟ್ಟುಹಬ್ಬಕ್ಕೆ ವಿಶೇಷ ವಿಡಿಯೋ ಮೂಲಕ ಶುಭಾಶಯ ತಿಳಿಸಿದ್ದಾರೆ.  

ತಮ್ಮ ಡ್ಯಾನ್ಸ್ ಮೂಲಕ ದೇಶಾದ್ಯಂತ ಅಭಿಮಾನಿಗಳನ್ನು ಪಡೆದಿರುವ ಕಿಶನ್ ಬಿಳಗಲಿ, ಕನ್ನಡಿಗರಿಗೆ ಹೆಚ್ಚು ಪರಿಚಯವಾಗಿದ್ದು, ಬಿಗ್ ಬಾಸ್ ಸೀಸನ್ 7 (Bigg Boss Season 7) ರ ಮೂಲಕ. ಈ ಸೀಸನ್ ನಲ್ಲಿ ಮನರಂಜನೆ ನೀಡುತ್ತಾ, ತಮ್ಮ ಡ್ಯಾನ್ಸ್ ಮೂವ್ ಪ್ರದರ್ಶನ ಮಾಡುವ ಮೂಲಕ, ತಮ್ಮ ಜೀವನದ ಹಲವು ವಿಷಯಗಳನ್ನು ಬಿಚ್ಚಿಟ್ಟಿದ್ದರು ಕಿಶನ್ ಬಿಳಗಲಿ. ಸದ್ಯಕ್ಕೆ ಡ್ಯಾನ್ಸ್ ಶೋ, ಸಿನಿಮಾ, ಸೀರಿಯಲ್ ಎಂದು ಬ್ಯುಸಿಯಾಗಿರುವ ಕಿಶನ್, ಹೆಚ್ಚಾಗಿ ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಫೋಟೋಸ್ ಹಾಗೂ ವಿಡಿಯೋಗಳ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ತಂದೆಯ ಹುಟ್ಟುಹಬ್ಬದ ದಿನ ವಿಶೇಷ ವಿಡೀಯೋ ಮೂಲಕ ಶುಭಾಶಯ ತಿಳಿಸಿದ್ದಾರೆ. 

ರಂಗಿತರಂಗ ಬೆಡಗಿ ಜೊತೆ ಸಖತ್ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ ಕಿಶನ್ ಬಿಳಗಲಿ… ವಿಡೀಯೋ ವೈರಲ್

ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಅಪ್ಪನ ಜೊತೆಗಿನ ಹಳೆಯ ನೆನಪುಗಳನ್ನು ತೆರೆದಿಡುವ ಫೋಟೋ ಹಾಗೂ ವಿಡಿಯೋಗಳನ್ನು ರೀಲ್ಸ್ ಮಾಡಿ ಹಾಕಿರುವ ಕಿಶನ್ (Kishen Bilagali). ಅಪ್ಪಾ 65ನೇ ಹುಟ್ಟುಹಬ್ಬದ ಶುಭಾಶಯಗಳು!! ನಾವು ವರ್ಷಕ್ಕೆ 5 ರಿಂದ 6 ಬಾರಿ ಭೇಟಿಯಾಗಬಹುದು. ಆದರೆ ಇಲ್ಲಿಯವರೆಗೆ ನೀವು ಎಸಿ ಕಾರನ್ನು ಖರೀದಿಸಿಲ್ಲ, ನಿಮ್ಮ ಪಾಸ್ಪೋರ್ಟ್ನಲ್ಲಿ ಒಂದೇ ಒಂದು ವಿದೇಶಿ ಸ್ಟಾಂಪ್ ಇಲ್ಲ, ಒಮ್ಮೆಯೂ ನೀವು ಮತ್ತೆ ಮದುವೆಯಾಗುವ ಬಗ್ಗೆ ಯೋಚಿಸಲಿಲ್ಲ .. ಆತ್ಮವು ಇಷ್ಟು ಅನ್ ಕಂಡೀಶನ್ ಆಗಿರಲು ಹೇಗೆ ಸಾಧ್ಯ. ನೀವು ನನ್ನನ್ನು 16 ವರ್ಷದವರಿದ್ದಾಗ ಸ್ವತಂತ್ರರನ್ನಾಗಿ ಮಾಡಿದ್ದೀ. ಆದರೆ ಇಂದು ನಾನು ಹಿಂತಿರುಗಿ ನೋಡಿದಾಗ ಅವತ್ತು ನನ್ನನ್ನು ನೀವು ಸ್ವತಂತ್ರ್ಯವಾಗಿರುವಂತೆ ಮಾಡದೇ ಇದ್ದರೆ, ನಾನು ಇವತ್ತು ಇಲ್ಲಿರುತ್ತಿರಲಿಲ್ಲ ಹಾಗೂ ಜೀವನವನ್ನು ಇಷ್ಟು ಆಳವಾಗಿ ಅರ್ಥಮಾಡಿಕೊಳ್ಳುತ್ತಿರಲಿಲ್ಲ .. ಧನ್ಯವಾದಗಳು.. ಮತ್ತು ಅತ್ಯಂತ ಮುಖ್ಯವಾಗಿ ನೀವು ಅತ್ಯುತ್ತಮ ಮಕ್ಕಳನ್ನು ಹೊಂದಿದ್ದೀರಿ, ಮತ್ತೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಕಿಶನ್ ತಂದೆಯವರಿಗೆ ಶುಭ ಕೋರಿದ್ದಾರೆ. 

ಮತ್ತೊಮ್ಮೆ ರೆಟ್ರೋ ಹಾಡಿಗೆ ಕಿಶನ್- ನಮ್ರತಾ ಡುಯೆಟ್…. ಮದ್ವೆ ಆಗ್ಬಿಡಿ ಎಂದ ಫ್ಯಾನ್ಸ್!

ಕಿಶನ್ ಹುಟ್ಟಿದ್ದು, ಚಿಕ್ಕಮಗಳೂರಿನಲ್ಲಿ, ಅವರ ತಂದೆ ಇಂದಿಗೂ ಅದೇ ಊರಲ್ಲಿ ಕೃಷಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಿಶನ್ ಡ್ಯಾನ್ಸ್, ಪ್ರೋಗ್ರಾಂ, ನಟನೆ ಎನ್ನುತ್ತಾ, ದೇಶ, ವಿದೇಶ ಸುತ್ತುತ್ತಲೇ ಇರುತ್ತಾರೆ. ಕಿಶನ್ ಹೆಚ್ಚಾಗಿ ಅಪ್ಪನ ಜೊತೆಗೆ ಸಂಕ್ರಾಂತಿ, ದೀಪಾವಳಿ ಹಬ್ಬ ಆಚರಿಸಿದ, ಗದ್ದೆಯಲ್ಲಿ ಕೆಲಸ ಮಾಡುವ, ಅಡುಗೆ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಬಿಗ್ ಬಾಸ್ ಸೀಸನ್ ನಲ್ಲೂ ಕಿಶನ್ ತಂದೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. 

ಇನ್ನು ಇತ್ತೀಚೆಗಷ್ಟೇ ಕಿಶನ್ ತಮ್ಮ ತಾಯಿಯ ಹುಟ್ಟುಹಬ್ಬದ ದಿನವೂ ಅಗಲಿದ ತಾಯಿಯನ್ನು ನೆನೆದು ಪೋಸ್ಟ್ ಮಾಡಿದ್ದರು. ನಿನ್ನ ಬಳೆಗಳನ್ನು ನೋಡಿ, ನಿನ್ನನ್ನು ಮಿಸ್ ಮಾಡದ ದಿನಗಳಿಲ್ಲ. ಎಲ್ಲಾ ಪ್ರಣಯ ಗೀತೆಗಳು ಸಹ ನಿನ್ನನ್ನೇ ನೆನಪಿಸುತ್ತೆ. ನನ್ನ ಕಣ್ಣಿರನ್ನು ಒರೆಸೋದಕ್ಕೆ ನೀನು ಇರಬೇಕು ಎಂದು ಯಾವಾಗಲೂ ಅನಿಸುತ್ತೆ ಎಂದು ಕಿಶನ್ ಬರೆದಿದ್ದರು. 

View post on Instagram