ಸ್ಯಾಂಡಲ್’ವುಡ್ ನಿಂದ ಬಾಲಿವುಡ್ ವರೆಗೂ ತನ್ನ ಡ್ಯಾನ್ಸ್ ಮೂಲಕ ಕ್ರೇಜ್ ಹುಟ್ಟಿಸಿದ ಡ್ಯಾನ್ಸರ್ ಅಂದ್ರೆ ಕಿಶನ್ ಬಿಳಗಲಿ. ಅವರ ನೃತ್ಯಕ್ಕೆ ಸೋಲದವರು ಯಾರೂ ಇಲ್ಲ.
ಕನ್ನಡ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿದ್ದ ಕಿಶನ್, ಅಲ್ಲಿ ತಮ್ಮ ತುಂಟತನ, ಮಾತು, ನೃತ್ಯ, ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಹೇಳುವ ಮೂಲಕ ಜನರ ಜೊತೆ ಕನೆಕ್ಟ್ ಆಗಿದ್ದರು.
ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಕಿಶನ್ ತನ್ನ ಅಮ್ಮನ ಬಗ್ಗೆ ಹಲವಾರು ಬಾರಿ ಮಾತನಾಡಿದ್ದು, ಅಮ್ಮನನ್ನು ಕಳೆದುಕೊಂಡ ನೋವು ಇಂದಿಗೂ ಕಿಶನ್ ರನ್ನು ಬಾಧಿಸುತ್ತಿದ್ದು, ಅಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಇದೀಗ ಅಮ್ಮನ ಹುಟ್ಟುಹಬ್ಬದಂದು ಕಿಶನ್ ಸೋಶಿಯಲ್ ಮೀಡಿಯಾದಲ್ಲಿ ಅಮ್ಮನ ಅಪರೂಪದ ಫೋಟೊಗಳನ್ನು ಶೇರ್ ಮಾಡುವ ಮೂಲಕ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾ, ಅಮ್ಮನಿಗೆ ಶುಭ ಕೋರಿದ್ದಾರೆ.
ಹ್ಯಾಪಿ ಬರ್ತ್ ಡೇ ಆಮ್ಮ, ನಿನ್ನ ಬಳೆಯನ್ನು ನೋಡಿ, ನಿನ್ನನ್ನು ಮಿಸ್ ಮಾಡದ ದಿನಗಳಿಲ್ಲ. ಎಲ್ಲಾ ಪ್ರಣಯ ಗೀತೆಗಳು, ನಿನ್ನನ್ನೇ ನೆನಪಿಸುತ್ತೆ, ನನ್ನ ಕಣ್ಣೀರು ಒರೆಸೋದಕ್ಕೆ ನೀನು ಇರಬೇಕಿತ್ತು ಎಂದಿದ್ದಾರೆ ಕಿಶನ್.
ಕಿಶನ್ ಬೆಳಗಲಿ ಚಿಕ್ಕಮಗಳೂರಿನವರು, ತಮ್ಮ ನೃತ್ಯದ ಮೂಲಕವೇ ಭಾರತದಾದ್ಯಂತ ಹೆಸರು ಮಾಡಿದ್ದಾರೆ. ಇವರಲ್ಲಿ ಡ್ಯಾನ್ಸ್ ನ ಕಿಚ್ಚು ಹಚ್ಚಿದ್ದೆ ಅಮ್ಮ. 8ನೇ ವಯಸದ್ದಿ ಅಮ್ಮ ಇವರನ್ನು ಡ್ಯಾನ್ಸ್ ಕ್ಲಾಸಿಗೆ ಸೇರಿಸಿದ್ದರು.
ಬಾಲ್ಯದಿಂದಲೇ ಮನೆಯಿಂದ ದೂರವಿದ್ದ ಕಿಶನ್, 3ನೇ ವಯಸ್ಸಿನಲ್ಲೇ ಬೆಂಗಳೂರಿನ ಬೋರ್ಡಿಂಗ್ ಸ್ಕೂಲ್ ಗೆ ಹಾಕಲಾಗಿದ್ದು. 18 ವರ್ಷದವರೆಗೂ ಕಿಶನ್ ಓದಿದ್ದು ಬೋರ್ಡಿಂಗ್ ಸ್ಕೂಲ್. ಹಾಗಾಗಿ ಕುಟುಂಬ ಜೊತೆ ಇದ್ದಿದ್ದು ಕಡಿಮೆ.
ಅಮ್ಮನನ್ನು ತುಂಬಾನೆ ಹಚ್ಚಿಕೊಂಡಿದ್ದ ಕಿಶನ್, ತಮ್ಮ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಉಳಿದಿರುವಾಗ 2013ರಲ್ಲಿ ಕಿಶನ್ ತಾಯಿ ತೀರಿಕೊಂಡಿದ್ದರು. ತಾಯಿಯ ಸಾವು ಕಿಶನ್ ಗೆ ಬರಸಿಡಲಿನಂತೆ ಶಾಕ್ ನೀಡಿತ್ತು.
ಕಿಶನ್ ದೆಹಲಿಯಲ್ಲಿದ್ದಾಗ ಅಮ್ಮನಿಗೆ ಸೀರಿಯಸ್ ಎನ್ನುವ ಕರೆ ಕೇಳಿ, ಹೊರಟು ಬಂದಿದ್ದ ಕಿಶನ್ ಗೆ ಅಲ್ಲಿ ಕಂಡಿದ್ದು, ತಾಯಿಯ ಶವ. ಸಮಾಧಿ ಮಾಡುವ ಮುನ್ನ ಅಮ್ಮನ ಮುಖವನ್ನು ಒಂದು ಗಂಟೆಯಷ್ಟೇ ನೋಡೊದಕ್ಕೆ ಸಾಧ್ಯವಾಗಿತ್ತಂತೆ.
ಕಿಶನ್ ತಾಯಿ ಜೀನ್ ರೋಸ್ ಫರ್ನಾಂಡೀಸ್, ಮದುವೆಯಾದ ನಂತರ ಸುಮಾ ಎಂದು ಹೆಸರು ಬದಲಾಯಿಸಿದ್ದರು. ರೋಹಿತ್ ಬಿಳಗಲಿ ಮತ್ತು ಪ್ರತೀಕ್ ಬಿಳಗಲಿ ಕಿಶನ್ ಸಹೋದರರು. ತಂದೆ ಅಶೋಕ್ ಬಿಳಗಲಿ.