ಜೀ ಕನ್ನಡದ ‘ಬ್ರಹ್ಮಗಂಟು’ ಸೀರಿಯಲ್ ಸಖತ್ ಜನಪ್ರಿಯತೆ ಪಡೆದಿದೆ. ಇದರ ಹೀರೋಯಿನ್ ಗೀತಾ. ಉಳಿದೆಲ್ಲ ಸೀರಿಯಲ್‌ ನಾಯಕಿಯರು ತೆಳ್ಳಗೆ ಬೆಳ್ಳಗೆ ಇದ್ರೆ ಬ್ರಹ್ಮ ಗಂಟು ಸೀರಿಯಲ್ ನಾಯಕಿ ತನ್ನ ದಪ್ಪಕ್ಕೇ ಫೇಮಸ್.

ದಪ್ಪಗಿರೋರನ್ನು ಎಲ್ಲರೂ ಲೇವಡಿ ಮಾಡೋರೇ. ಸ್ಕೂಲ್, ಕಾಲೇಜ್ ಟೈಮ್‌ನಲ್ಲಿ ಸಹಪಾಠಿಗಳಿಂದ ಗೇಲಿಗೊಳಗಾದರೆ ದೊಡ್ಡವರಾದ್ಮೇಲೆ ಉದ್ಯೋಗ ಮಾಡೋ ಜಾಗದಲ್ಲಿ, ಸಮಾಜದಲ್ಲಿ ದಪ್ಪವನ್ನು ಆಡಿಕೊಂಡು ನಗುವವರೇ ಹೆಚ್ಚು. ನಮ್ಮ ಹೆಚ್ಚಿನವರಲ್ಲಿ ಸಿಕ್ಕಾಪಟ್ಟೆ ತಿನ್ನೋರೇ ದಪ್ಪಗಿರ್ತಾರೆ ಅನ್ನುವ ತಪ್ಪುಕಲ್ಪನೆ ಇದೆ.

ಇನ್‌ಸ್ಟಾಗ್ರಾಂನಲ್ಲಿ ಒಂದಾದ ನಟಿ ರಮ್ಯಾ-ರಾಧಿಕಾ; ಕಾಮೆಂಟ್‌ ನೋಡಿ 

ಹೀಗೆ ದಪ್ಪಗಾಗಲು ಹೆಚ್ಚಿನ ಹೆಣ್ಮಕ್ಕಳಿಗೆ ಪಿಸಿಒಡಿಯಂತಹ ಸಮಸ್ಯೆಗಳು, ಹಾರ್ಮೋನಲ್ ಸಮಸ್ಯೆಗಳು ಕಾರಣವಾಗುತ್ತವೆ. ಥೈರಾಯ್ಡ್ ಕಾರಣಕ್ಕೂ ದಪ್ಪಗಾಗೋರಿದ್ದಾರೆ. ಆದರೆ ಬ್ರಹ್ಮಗಂಟು ಸೀರಿಯಲ್ ನಾಯಕಿ ಗೀತಾ ಭಾರತಿ ಭಟ್ ಮೊದಲು ಸ್ಪೋರ್ಟ್ಸ್ ನಲ್ಲಿದ್ದವರು. ಕ್ರೀಡಾಪಟುವಾಗಿ ಗುರುತಿಸಿಕೊಂಡು ಬಾಸ್ಕೆಟ್ ಬಾಲ್ ಆಡುವಾಗ ಬಿದ್ದು ಏಟು ಮಾಡಿಕೊಂಡಿದ್ದೇ ಈಕೆಗೆ ಸವಾಲಾಯ್ತು. ನಾಲ್ಕು ತಿಂಗಳ ಕಾಲ ಬೆಡ್ ರೆಸ್ಟ್ ಮಾಡಿದ ಮೇಲೆ ಗೀತಾ ಭಟ್ ದೇಹ ವಿಪರೀತ ಊದಿಕೊಂಡಿತು.

ತನ್ನ ದೇಹ ನೋಡಿ ಕಮೆಂಟ್ ಮಾಡೋದು ಶುರು ಶುರುವಿನಲ್ಲಿ ಗೀತಾ ಅವರ ಆತ್ಮವಿಶ್ವಾಸವನ್ನು ಕುಂದಿಸಿದ್ದು ಹೌದು. ಆದರೆ ಒನ್ ಫೈನ್ ಡೇ, ಈ ಥರ ಕೀಳರಿಮೆ ಪಟ್ಟುಕೊಂಡರೆ ಏನೂ ಸಾಧಿಸಲು ಸಾಧ್ಯವಿಲ್ಲ ಅಂತ ತೀವ್ರವಾಗಿ ಅನಿಸಿತು. ಬಹುಶಃ ಗೀತಾ ಅವರ ಲೖಫ್ ಚೇಂಜಿಂಗ್ ಮೊಮೆಂಟ್ ಅದು. ಆಮೇಲಿಂದ ಇವರ ಆತ್ಮವಿಶ್ವಾಸದ ಗ್ರಾಫ್ ಏರುತ್ತಾ ಹೋಯ್ತು.

ಶ್ರೀಕೃಷ್ಣನಾದ ತಾರೆಗಳ ಮಕ್ಕಳು.. ಐರಾ ಸಂಭ್ರಮ 

ಕೀಳರಿಮೆ ಇಳಿಯುತ್ತ ಹೋಯ್ತು. ತನ್ನಿಷ್ಟದ ಸಂಗೀತ ಕ್ಷೇತ್ರದಲ್ಲಿ ಈಕೆ ಸಾಧನೆ ಮಾಡಿದ್ರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ರು. ಎರಡು ವರ್ಷ ಕೆಲಸ ಮಾಡಿ ಆ ಉದ್ಯೋಗ ತೊರೆದರು. ಯಾವಗ ಕಿರುತೆರೆಗೆ ಕಾಲಿಟ್ಟರೋ ಆಮೇಲಿಂದ ಈಕೆ ಹಿಂತಿರುಗಿ ನೋಡಲೇ ಇಲ್ಲ. ರಾಜ್ಯದ ಜನತೆ ಈಕೆಯ ನಟನೆಗೆ ಶಭಾಷ್ ಅಂದು ಅಕ್ಕರೆಯಿಂದ ಪ್ರೋತ್ಸಾಹಿಸಿದರು.

ಇದೆಲ್ಲ ಹಳೇ ಕತೆ. ಹೊಸ ವಿಷ್ಯ ಅಂದರೆ ಗೀತಾ ಭಟ್ ಅವರ ಫೋಟೋ ಶೂಟ್. ಸೋಷಿಲ್ ಮೀಡಿಯಾದಲ್ಲಿ ಕಡು ಹಸಿರು ಬಣ್ಣದ ಮೈ ತುಂಬ ಪ್ರಿಲ್ ಇರೋ ಗೌನ್‌ನಲ್ಲಿ ಸಖತ್ ಮುದ್ದಾಗಿ ಕಾಣುತ್ತಿದ್ದಾರೆ. ಜೊತೆಗೆ ಒಂದು ಅದ್ಭುತವಾದ ಲೈನ್ ಅನ್ನು ಪೋಸ್ಟ್ ಮಾಡಿದ್ದಾರೆ. ‘ನಿಮ್ಮ ಆತ್ಮ ಬಯಸುವ ಎಲ್ಲವನ್ನೂ ನಿಮ್ಮ ಕಣ್ಣುಗಳು ಸೆರೆ ಹಿಡಿಯುತ್ತವೆ’’ ಎಂಬ ವಾಕ್ಯವದು.

'ಮೆಜೆಸ್ಟಿಕ್' ಹೀರೋ ಆಗೋ ಮುಂಚೆ 6 ಸಿನಿಮಾ ಮಾಡಿದ್ರು ದರ್ಶನ್..! 

ಇದರ ಜೊತೆಗೆ ಈ ಫೋಟೋಶೂಟ್ ಗೆ ಸಹಕರಿಸಿದವರು, ಮೇಕಪ್, ಹೇರ್ ಡಿಸೖನ್ ಮಾಡಿರುವವರ ಹೆಸರನ್ನೂ ಗೀತಾ ಟ್ಯಾಗ್ ಮಾಡಿದ್ದಾರೆ. ಫ್ರೀ ಹೇರ್ ಬಿಟ್ಕೊಂಡು ಕಿವಿಗೆ ಆಂಟಿಕ್ ಜ್ಯುವೆಲ್ಲರಿ ತೊಟ್ಟಿದ್ದಾರೆ. ಈ ಗೌನ್ ಗೆ ಗೋಲ್ಡನ್ ಕಲರ್ ನ ಅಂಚು ಇದೆ. ಇದೊಂಥರ ಚಿನ್ನದ ರೇಖೆಯ ಹಾಗೆ ಕಾಣಿಸುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಶೂಟ್ ಸಣ್ಣಮಟ್ಟಿನ ಹವಾ ಸೃಷ್ಟಿಸಿದೆ. ಗುಂಡಮ್ಮನ ಚೆಲುವಿಗೆ ನೆಟಿಜನ್ಸ್ ಫಿದಾ ಆಗಿದ್ದಾರೆ. ಗೀತಾ ಚೆಲುವನ್ನು ಹಾಡಿ ಹೊಗಳಿದ್ದಾರೆ. 

ಸಣ್ಣಗೆ ಇದ್ದರೆ ಮಾತ್ರ ಚೆಂದ ಅಂದುಕೊಂಡು ದಪ್ಪಗಿರುವವರು ಕೀಳರಿಮೆಯಿಂದ ಕುಗ್ಗುವ ಇಂದಿನ ಲೖಫ್ ಸ್ಟೖಲ್ ನಲ್ಲಿ ಆತ್ಮವಿಶ್ವಾಸದಿಂದ ಬದುಕೋ ಜೊತೆಗೆ ಲೈ ಫ್ ಅನ್ನೂ ಎಂಜಾಯ್ ಮಾಡ್ತಿದ್ದಾರೆ ಗೀತಾ ಭಟ್. ಸ್ಟೈಲ್, ಫ್ಯಾಶನ್ ಎಲ್ಲವೂ ಸಣ್ಣಗಿರುವವರಿಗೆ ಅನ್ನೋ ಟೈಮ್ ನಲ್ಲಿ ದಪ್ಪಗಿದ್ದುಕೊಂಡೂ ಫೋಟೋ ಶೂಟ್ ಮಾಡಿಸಿಕೊಳ್ಳಬಹುದು. ಅದು ಅದ್ಭುತವಾಗಿಯೂ ಕಾಣುತ್ತೆ ಅಂತ ತೋರಿಸಿಕೊಟ್ಟಿದ್ದಾರೆ.  ಅವರ ಈ ಫೋಟೋ ಶೂಟ್ ದಪ್ಪಗಿರುವವರಲ್ಲಿ ಆತ್ಮವಿಶ್ವಾಸ ಹೆಚ್ಚಿಸೋದರ ಜೊತೆಗೆ ಸಮಾಜದಲ್ಲಿ ದಪ್ಪಗಿರುವವರ ಬಗೆಗೆ ಇರುವ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿದೆ.