ಸೀತಾ ಮತ್ತು ರಾಮಳ ನಡುವೆ ಪ್ರೀತಿಯ ಸೇತುವೆಯಾಗಿ ಬಂದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಇಬ್ಬರನ್ನೂ ಒಂದು ಮಾಡ್ತಾರಾ? ಸೀತಾರಾಮ ಸೀರಿಯಲ್‌ನಲ್ಲಿ ಟ್ವಿಸ್ಟ್‌ ಏನು? 

ಮನಸ್ಸಿನಿಂದ ಏನನ್ನೂ ಯೋಚನೆ ಮಾಡಬೇಡಿ, ಹೃದಯದಿಂದ ಯೋಚಿಸಿ, ಇವರು ನಿಮ್ಮ ಬಾಸ್‌ ಎನ್ನೋದನ್ನು ಮನಸ್ಸಿನಿಂದ ತೆಗೆದುಹಾಕಿ ಎಂದು ಸೀತಾಳಿಗೆ ಟಿಪ್ಸ್‌ ಕೊಟ್ಟ ಕ್ರೇಜಿಸ್ಟಾರ್‌ ರವಿಚಂದ್ರನ್‌, ಹೃದಯದಲ್ಲಿ ಏನಿದೆ ಎಲ್ಲವನ್ನೂ ಹೇಳಿಬಿಡಿ, ಮನಸ್ಸಿಯಲ್ಲಿಯೇ ಇಟ್ಟುಕೊಳ್ಳಬೇಡಿ ಎಂದು ರಾಮ್‌ಗೂ ಕಿವಿಮಾತು ಹೇಳಿದ್ದಾರೆ. ಇವರ ಟಿಪ್ಸ್‌ ವರ್ಕ್‌ ಆಗತ್ತಾ? ಸೀತಾಳನ್ನು ಸಿಕ್ಕಾಪಟ್ಟೆ ಲವ್‌ ಮಾಡುತ್ತಿರೋ ರಾಮ್‌, ಅದನ್ನು ಆಕೆಗೆ ಹೇಳಲೂ ಆಗದೇ, ಬಿಡಲೂ ಆಗದೇ ಒದ್ದಾಡುವುದರಿಂದ ಹೊರಕ್ಕೆ ಬರುತ್ತಾನಾ? ತನ್ನ ಪ್ರೀತಿಯನ್ನು ಸೀತಾಳಿಗೆ ಹೇಳುತ್ತಾನಾ? ರಾಮ್‌ ಈ ಪರಿ ತನ್ನನ್ನು ಪ್ರೀತಿಸುತ್ತಿರುವ ವಿಷಯ ತಿಳಿಯದ ಸೀತಾಳ ಮುಂದಿನ ನಡೆಯೇನು? ಇವೆಲ್ಲಕ್ಕೂ ಉತ್ತರ ಕೊಡಲಿದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್‌.

ಹೌದು. ಸೀತಾಳಲ್ಲಿ ಪ್ರೀತಿಯ ವಿಷಯ ಹೇಳದೇ ರಾಮ್‌ ಒದ್ದಾಡುತ್ತಿದ್ದಾನೆ. ಅದರ ಬದಲು ಆಕೆಯನ್ನು ಬೇರೆಯವರ ಜೊತೆ ಮದುವೆ ಮಾಡಿಸಲೂ ರೆಡಿಯಾಗಿದ್ದ ಆತ. ಆದರೆ ಕೊನೆ ಕ್ಷಣದಲ್ಲಿ, ಆ ಮದುವೆಯಾಗುವವ ಮೋಸಗಾರ ಎಂದು ಗೊತ್ತಾಗಿ ತಾನೇ ಖುದ್ದು ಹೋಗಿ ಮದುವೆಯನ್ನು ತಡೆದ. ಆದರೆ ಇಷ್ಟಾದರೂ ತನ್ನ ಪ್ರೀತಿಯನ್ನು ಸೀತಾಳಿಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಅದೇ ಇನ್ನೊಂದೆಡೆ ಸೀತಾಳಿಗೆ ರಾಮ ಈ ಪರಿ ತನ್ನನ್ನು ಪ್ರೀತಿ ಮಾಡುವ ವಿಷಯವೂ ಗೊತ್ತಿಲ್ಲ.

ಡ್ರೋನ್‌ ಪ್ರತಾಪ್‌ ರನ್ನರ್‌ ಅಪ್‌ಗೆ ಅರ್ಹರಿದ್ದರೆ ಎಂಬ ಫ್ಯಾನ್‌ ಪ್ರಶ್ನೆಗೆ ಸುದೀಪ್‌ ಹೀಗೊಂದು ಜಾಣ ಉತ್ತರ!

ಈಗ ಏನಿದ್ದರೂ ಸೀತಾಳಿಗೆ ರಾಮನ ಮೇಲೆ ಕೋಪವಷ್ಟೇ. ಅಷ್ಟು ದೊಡ್ಡ ಕಂಪೆನಿಯ ಓನರ್‌ ಆಗಿದ್ದರೂ ಅದನ್ನು ಮುಚ್ಚಿಟ್ಟು ಮಾಮೂಲಿ ಕೆಲಸಗಾರನಂತೆ ನಡೆದುಕೊಂಡ ರಾಮ್‌ ಮೇಲೆ ಆಕೆಗೆ ಕೋಪ. ಮಾಲೀಕ ಮತ್ತು ಕೆಲಸಗಾರರು ಹೇಗೆ ಸ್ನೇಹಿತರಾಗಿ ಇರಲು ಸಾಧ್ಯ ಎನ್ನುವುದು ಈಕೆಯ ವಾದ. ಅದರಲ್ಲಿಯೂ ಸತ್ಯ ಮುಚ್ಚಿಟ್ಟ ರಾಮ್‌ ಮೇಲೆ ಆಕೆಗೆ ಇನ್ನಿಲ್ಲದ ಕೋಪ. ಈ ಕೋಪವನ್ನು ತಣ್ಣಗೆ ಮಾಡಲು ರಾಮ್‌ ಪಟ್ಟ ಪ್ರಯತ್ನವೆಲ್ಲವೂ ಟುಸ್‌ ಆಗಿದೆ. ಅದೇ ಇನ್ನೊಂದೆಡೆ ಸೀತಾಳ ಮಗಳು ಪುಟಾಣಿ ಸಿಹಿಗೆ ರಾಮ್‌ ಎಂದರೆ ಪಂಚಪ್ರಾಣ. ಆತನನ್ನು ಬಿಟ್ಟಿರಲು ಆಗಲ್ಲ. ಆದರೆ ಅಮ್ಮನ ಕೋಪದ ಮುಂದೆ ಆಕೆಗೆ ಏನು ಮಾಡುವುದು ತಿಳಿಯುತ್ತಿಲ್ಲ.

ಇದರ ನಡುವೆಯೇ ಸೀತಾರಾಮ ಸೀರಿಯಲ್‌ನಲ್ಲಿ ಸೀತಾ ಮನೆಯ ಮೇಲಿನ ಸಾಲ ಕಟ್ಟದ ಕಾರಣ, ಮನೆ ಹರಾಜಿಗೆ ಬಂದಿದೆ. ಸೀತಾ ಮತ್ತು ರಾಮನನ್ನು ಬೇರ್ಪಡಿಸಲು ಕುತಂತ್ರ ಮಾಡುತ್ತಿರುವ ರಾಮ್‌ ಚಿಕ್ಕಮ್ಮ ಈ ಮನೆಯನ್ನು ಖರೀದಿಸಿ ಸೀತಾಳನ್ನು ಬೀದಿಪಾಲು ಮಾಡಲು ನೋಡುತ್ತಿದ್ದಾಳೆ. ಚಿಕ್ಕಮ್ಮನ ಕುತಂತ್ರ ರಾಮ್‌ಗೆ ಗೊತ್ತಿಲ್ಲ. ಈ ಮಧ್ಯೆಯೇ ಸಿಹಿಯ ಶಾಲೆಯ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಗೆಸ್ಟ್‌ ಆಗಿ ಬಂದಿದ್ದರು. ಇದೀಗ ಸೀತಾ ಮತ್ತು ರಾಮ್‌ ಅವರನ್ನು ಒಂದು ಮಾಡುವ ಟಿಪ್ಸ್‌ ಕೊಟ್ಟು ಹೋಗಿದ್ದಾರೆ. ಇದೆಷ್ಟು ವರ್ಕ್ ಆಗುತ್ತದೆ ಎನ್ನುವುದನ್ನು ಸೀರಿಯಲ್‌ ನೋಡಿ ತಿಳಿಯಬೇಕಿದೆ. 

ಬಿಗ್​ಬಾಸ್​ನಲ್ಲಿ ವಿನ್ನರ್​ ಕೂಡ ಮೊದ್ಲೇ ಫಿಕ್ಸ್​ ಆಗ್ತಿರ್ತಾರಾ? ಟ್ರೋಫಿ ವಿಜೇತ ಹೇಳಿದ್ದೇನು ಕೇಳಿ...

View post on Instagram