ಕೊರೋನಾ ಎಫೆಕ್ಟ್‌ನಿಂದಾಗಿ 21 ದಿನ ಇಡೀ ದೇಶ ಲಾಕ್‌ಡೌನ್ ಆಗಿದೆ. ಮನೆಯಲ್ಲಿ ಸುಮ್ಮನೆ ಕುಳಿತು ಬೋರ್ ಆಗಿದೆ. ಧಾರಾವಾಹಿಗಳನ್ನಾದರೂ ನೋಡೋಣ ಅಂತಿದ್ರೆ ಅದಕ್ಕೂ ಕೊರೋನಾ ಎಫೆಕ್ಟ್ ತಟ್ಟಿದೆ.  ಧಾರಾವಾಹಿ ಮತ್ತು ರಿಯಾಲಿಟಿ ಶೋ ಚಿತ್ರೀಕರಣ ಬಂದ್ ಆಗಿದೆ. ಇದು ಕಿರುತೆರೆಗೆ ಭಾರಿ ಹೊಡೆತ ಕೊಟ್ಟಿದೆ. 

#LockDown ಆಗಿರುವ ಅಜಯ್‌ ರಾವ್‌ ಮಗಳ ಮುಖಕ್ಕೆ ಮಾಡಿರುವ ಅವಾಂತರ ನೋಡಿ!

ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಾದ  'ಜೊತೆ ಜೊತೆಯಲಿ' ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ. ದಿನೇ ದಿನೇ ಟ್ವಿಸ್ಟ್ ತೆಗೆದುಕೊಳ್ಳುತ್ತಿದೆ. ಆರ್ಯ, ಅನುಗೆ ಯಾವಾಗ ಪ್ರಪೋಸ್ ಮಾಡುತ್ತಾರೆ ಎಂದು ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಈಗ ಶೂಟಿಂಗ್ ಬಂದ್ ಆಗಿರುವುದರಿಂದ ಮಾರ್ಚ್ 31 ರವರೆಗೆ ಮಾತ್ರ ಪ್ರಸಾರವಾಗಬಹುದು ಎನ್ನಲಾಗುತ್ತಿದೆ.  ಅದೇ ರೀತಿ  ಗಟ್ಟಿಮೇಳ ಧಾರವಾಹಿ ಕೂಡಾ ಏಪ್ರಿಲ್ 2 /3 ನೇ ತಾರೀಖಿನವರೆಗೆ ಮಾತ್ರ ಪ್ರಸಾರವಾಗಬಹುದು ಎಂದು ಹೇಳಲಾಗುತ್ತಿದೆ.

 

' ಶೂಟಿಂಗ್ ನಿಲ್ಲಿಸಿರೋದ್ರಿಂದ ಈಗಾಗಲೇ ಸಿಕ್ಕಾಪಟ್ಟೆ ಸಮಸ್ಯೆ ಆಗಿರೋದು ನಿಜ.  ಆದ್ರೆ ಜೀವಕ್ಕಿಂತ ದೊಡ್ಡದು ಏನಿಲ್ಲ.‌ ಸದ್ಯಕ್ಕೆ ಯಾವುದೇ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣ ನಡೆಯುತ್ತಿಲ್ಲ.  ಇದು ಏಪ್ರಿಲ್ 15 ರ ತನಕವೂ ಮುಂದುವರೆಯಲಿದೆ.  ಕೆಲವು ಧಾರವಾಹಿಗಳ ಎಪಿಸೋಡ್ಸ್ ಕಂಪ್ಲೀಟ್ ಆಗಿವೆ.  ಸದ್ಯಕ್ಕೆ ರಿಪೀಟ್ ಎಪಿಸೋಡ್ಸ್ ಹಾಕಲು ತಿಳಿಸಿದ್ದೇವೆ. ಜೊತೆಗೆ ಬೆಸ್ಟ್ ಎಪಿಸೋಡ್‌ಗಳ ಪ್ರಸಾರ ಆಗಲಿದೆ ಎಂದು ಕರ್ನಾಟಕ ಟೆಲಿವಿಷನ್  ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಹೇಳಿದ್ದಾರೆ.