Asianet Suvarna News Asianet Suvarna News

ಈ ಸಲ ಬಿಗ್‌ಬಾಸ್ ಕಿರೀಟ ಸಂಗೀತಾ ಮುಡಿ ಏರುತ್ತಾ? ಫಿನಾಲೆಗೆ ಕಾತರದಿಂದ ಎದುರು ನೋಡ್ತಿರೋ ಫ್ಯಾನ್ಸ್

ಬಿಗ್‌ಬಾಸ್ ಶೋ ನೋಡೋ ಯಾರನ್ನೇ ಕೇಳಿ ಈ ಸಲ ಬಿಗ್‌ಬಾಸ್ ವಿನ್ನರ್ ಯಾರು ಆಗಬಹುದು ಅಂತ, ಅವರು ಹೇಳೋ ಹೆಸರು ಸಂಗೀತಾ ಶೃಂಗೇರಿ. ರೋಚಕ ಫಿನಾಲೆಗೆ ಫ್ಯಾನ್ಸ್ ಎಲ್ಲಾ ಎದುರು ನೋಡ್ತಿದ್ದಾರೆ.

 

countdown for bigboss kannada finale sangeetha Sringeri likely to win reality show bni
Author
First Published Jan 23, 2024, 3:40 PM IST

ಸಂಗೀತಾ ಶೃಂಗೇರಿ ಅನ್ನೋ ಹುಡುಗಿ ರಕ್ಷಿತ್ ಶೆಟ್ಟಿ ಜೊತೆಗೆ 777 ಚಾರ್ಲಿ ಅನ್ನೋ ಸಕ್ಸಸ್ ಫುಲ್ ಮೂವಿಗೆ ಹೀರೋಯಿನ್ ಆದವರು. ಒಂದು ಸಂದರ್ಶನದಲ್ಲಿ ಮಾತಾಡ್ತಾ, ಕೋವಿಡ್ ವೇಳೆ ತನಗೆ ಯಾವ ಬಗೆಯ ನಷ್ಟ ಆಯ್ತು ಅನ್ನೋದನ್ನು ವಿವರಿಸ್ತಾ ಇದ್ರು. ಬಹುಶಃ ಈ ಮಾತನ್ನು ದೇವ್ರು ಕೇಳಿಸ್ಕೊಂಡ ಅನಿಸುತ್ತೆ. ಕೋವಿಡ್ ಮುಗಿದ ಮೇಲೆ ಚಾರ್ಲಿ ರಿಲೀಸ್ ಆಗಿ ಸಕ್ಸಸ್ ಆಯ್ತು. ಪುನೀತ್ ರಾಜ್‌ಕುಮಾರ್, ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿ ಅವರು ನಾಯಕಿ ಆದ್ರು. ಇನ್ನೂ ಕೆಲವು ಸಿನಿಮಾಗಳು ಕೈ ಹಿಡಿದವು. ಈ ನಡುವೆ ಮತ್ತೆ ಗ್ಯಾಪ್ ಆಗತೊಡಗಿತು. ಆಗ ಸಡನ್ನಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಇಂಟರ್‌ವ್ಯೂ ಮೇಲೆ ಇಂಟರ್‌ವ್ಯೂ ಕೊಡಲಾರಂಭಿಸಿದರು ಸಂಗೀತಾ.

ಇದರ ಜೊತೆಗೆ ಪಿಸಿಓಡಿ ವಿಷಯದಲ್ಲಿ ತನಗಾದ ಸಮಸ್ಯೆ, ಎಷ್ಟೋ ಜನ ಹೆಣ್ಣುಮಕ್ಕಳು ಇದರಿಂದ ಬಳಲ್ತಿರೋದನ್ನೆಲ್ಲ ಸಮಾಜದ ಮುಂದಿಟ್ಟರು. ಈ ಬಗ್ಗೆ ಜಾಗೃತಿ ಮೂಡಿಸಲು ಮುಂದಾದರು. ಮುಂದಿನ ಸಿನಿಮಾ ಅಂತ ಜನ ಪ್ರಶ್ನೆ ಮಾಡೋ ಮೊದಲೇ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡರು. ಶುರುವಿಗೆ ಏನೇನೋ ಆಯ್ತು. ಒಂದು ಹಂತದಲ್ಲಂತೂ ಇವರ ಮೇಲೆ ಜನ ಹಿಗ್ಗಾಮಗ್ಗಾ ಬೈಗುಳದ ಸುರಿಮಳೆ ಸುರಿಯತೊಡಗಿದರು. ಬಿದ್ದೇ ಬಿಟ್ರು ಸಂಗೀತಾ ಅಂದ್ಕೊಳ್ಳೋ ಹೊತ್ತಿಗೆ ಮತ್ತೆ ಮೇಲೆದ್ದು ತಾನೊಬ್ಬ ಸ್ಪೋರ್ಟ್ಸ್ ವುಮೆನ್, ಸೋಲು ಗೆಲವು ಎಲ್ಲ ಕಾಮನ್. ಎಂಥಾ ಸೋಲನ್ನೂ ಮೆಟ್ಟಿ ಮೇಲೇಳಬಲ್ಲೆ ಅಂತ ತೋರಿಸಿದ್ರು. ಸದ್ಯ ಬಿಗ್‌ಬಾಸ್ ವಿನ್ನರ್ ಸಂಭಾವಿತರಲ್ಲಿ ಮೊದಲನೇ ಹೆಸರಾಗಿ ಕೇಳಿ ಬರ್ತಿರೋದು ಸಂಗೀತಾ.

ನಾನು ಎಮೋಷನಲ್‌, ಕಣ್ಣೀರಿಟ್ಟಿದ್ದೀನಿ ಯಾಕೆ ತೋರಿಸಿಲ್ಲ; ಪ್ರತಾಪ್- ಕಿಚ್ಚ ಸುದೀಪ್‌ಗೆ ಇಶಾನಿ ಕ್ಷಮೆ?

ಆರು ಮಂದಿ ಬಿಗ್ ಬಾಸ್ ಫಿನಾಲೆ ವಾರ ತಲುಪಿದ್ದಾರೆ. ತುಕಾಲಿ ಸಂತೋಷ್, ವರ್ತೂರು ಸಂತೋಷ್, ವಿನಯ್ ಗೌಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಮಹೇಶ್ ಮಧ್ಯೆ ಸ್ಪರ್ಧೆ ಜೋರಾಗಿದೆ. ಈಗ ವೋಟಿಂಗ್ ಮಾಡೋಕೆ ಬಿಗ್ ಬಾಸ್ ಅವಕಾಶ ನೀಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆ ವಾರ ತಲುಪಿದೆ. ಸದ್ಯ ಇರೋ 6 ಸ್ಪರ್ಧಿಗಳ ಪೈಕಿ ಒಬ್ಬರು ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಲಿದ್ದಾರೆ. ಆ ಮೂಲಕ ಫಿನಾಲೆಗೆ ಐದು ಜನ ತೆರಳಲಿದ್ದಾರೆ. ಸದ್ಯ ಓಟಿಂಗ್‌ಗಾಗಿ ಬಿಗ್ ಬಾಸ್​ನ ಆರೂ ಸ್ಪರ್ಧಿಗಳ ಫೋಟೋ ಹಾಕಲಾಗಿದೆ. ಶನಿವಾರ ಮಧ್ಯಾಹ್ನ 2 ಗಂಟೆವರೆಗೆ ವೋಟ್ ಮಾಡೋಕೆ ಅವಕಾಶ ಇದೆ.

ಕಳೆದ ವಾರ ನಮ್ರತಾ ಗೌಡ ಅವರು ಬಿಗ್ ಬಾಸ್​ನಿಂದ ಎಲಿಮಿನೇಟ್ ಆದರು. ಫಿನಾಲೆ (Big boss finale) ವಾರ ತಲುಪಬೇಕು ಎನ್ನುವ ಅವರ ಕನಸು ನುಚ್ಚು ನೂರಾಯಿತು. ಈಗ ದೊಡ್ಮನೆಯಲ್ಲಿ ವರ್ತೂರು ಸಂತೋಷ್, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ವಿನಯ್ ಗೌಡ, ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ ಇದ್ದಾರೆ. ಕಡಿಮೆ ವೋಟ ಪಡೆದವರ ಪೈಕಿ ಒಬ್ಬರು ನಾಳೆ ಒಬ್ಬರು ಔಟ್ (out) ಆಗೋ ಸಾಧ್ಯತೆ ಇದೆ. ಈ ಎಲಿಮಿನೇಷನ್ ಹೇಗೆ ನಡೆಯುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಹೀಗಾಗಿ, ಈ ಎಲಿಮಿನೇಷನ್ ಸರ್​ಪ್ರೈಸ್ ಆಗಿರಲಿದೆ ಎನ್ನಲಾಗುತ್ತಿದೆ. ಈ ಮೊದಲ ಎಪಿಸೋಡ್​​ಗಳಲ್ಲಿ ಮಿಡ್ ವೀಕ್ ಎಲಿಮಿನೇಷನ್​ಗಳನ್ನು (elamination) ಸರ್​ಪ್ರೈಸ್ ಆಗುವ ರೀತಿಯಲ್ಲೇ ನಡೆಸಲಾಗಿದೆ. ಈ ಸೀಸನ್ ಕೂಡ ಹಾಗೆಯೇ ಇರಬಹುದು ಎನ್ನಲಾಗುತ್ತಿದೆ. ಇನ್ನೂ ಕೆಲವರು ಕೇವಲ ವೋಟಿಂಗ್ ಆಧಾರದ ಮೇಲೆ ಎಲಿಮಿನೇಷನ್ ನಡೆಯೋದಿಲ್ಲ ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ.

ಬಿಗ್‌ಬಾಸ್ ಕನ್ನಡದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ತುಕಾಲಿ ಸಂತೋಷ್!

ಸದ್ಯ ಸಂಗೀತಾ ಫಿನಾಲೆ ತಲುಪಿದ್ದಾರೆ. ಒಂದು ವೇಳೆ ಅವರು ಗೆದ್ದರೆ 50 ಲಕ್ಷ ರೂಪಾಯಿ ಬಹುಮಾನ ಮೊತ್ತ ಕೈ ಸೇರಲಿದೆ. ಜೊತೆಗೆ ಮಾರುತಿ ಸುಜುಕಿ ಬ್ರೇಜಾ ಕಾರು ಹಾಗೂ ಇಲೆಕ್ಟ್ರಿಕ್ ಬೈಕ್ ಸಿಗಲಿದೆ.

Follow Us:
Download App:
  • android
  • ios