Asianet Suvarna News Asianet Suvarna News

ಕೊರೋನಾ ಎಫೆಕ್ಟ್! ಮತ್ತೆ ಬರ್ತಿದೆ ವೀಕೆಂಡ್ ವಿತ್ ರಮೇಶ್, ಜೊತೆ ಜೊತೆಯಲಿ

ಬೆಳ್ಳಿತೆರೆಯ ಮನರಂಜನೆ ಸಂಪೂರ್ಣವಾಗಿ ಬಂದ್‌ ಆಗಿದ್ದರೂ ಕಿರುತೆರೆ ಮಾತ್ರ ಮನೆಯಲ್ಲಿ ಕೂತವರಿಗೆ ಮನರಂಜನೆಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಿದೆ. ಹಾಗಂತ ಕಿರುತೆರೆ ಧಾರಾವಾಹಿಗಳು, ರಿಯಾಲಿಟಿ ಶೋಗಳ ಚಿತ್ರೀಕರಣ ಆಗುತ್ತಿದೆಯೇನೋ ಎಂದುಕೊಳ್ಳಬೇಡಿ. ಏಕೆಂದರೆ ಕಿರುತೆರೆಯಲ್ಲಿ ಶುರುವಾಗ್ತಿರೋದು ಮರುಪ್ರಸಾರದ ಹವಾ. ಹಲವು ಧಾರಾವಾಹಿಗಳು, ಸಿನಿಮಾ, ಕಾರ್ಯಕ್ರಮಗಳು ಇದೀಗ ರಿಪೀಟ್‌ ಟೆಲಿಕಾಸ್ಟ್‌ ಲಿಸ್ಟ್‌ನಲ್ಲಿವೆ.

Coronavirus effect top soaps to re telecast shows
Author
Bangalore, First Published Apr 6, 2020, 4:32 PM IST

ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾ ಮತ್ತು ಈವೆಂಟ್‌

ಜೀ ಕನ್ನಡ ಧಾರಾವಾಹಿಗಳ ಜತೆಗೆ ಸಿನಿಮಾ ಮರು ಪ್ರಸಾರಕ್ಕೂ ಮುಂದಾಗಿದೆ. ಜೊತೆ ಜೊತೆಯಲಿ, ಗಟ್ಟಿಮೇಳ, ಕಮಲಿ, ನಾಗಿಣಿ-2, ಪಾರು, ಮಹರ್ಷಿವಾಣಿ, ರಿಯಾಲಿಟಿ ಶೋಗಳಾದ ಸರಿಗಮಪ -15 ಹಾಗೂ 17ನೇ ಸೀಜನ್‌, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌, ಕಾಮಿಡಿ ಕಿಲಾಡಿಗಳು-3, ಡ್ರಾಮಾ ಜೂನಿಯರ್ಸ್‌, ಚೋಟಾ ಚಾಂಪಿಯಾನ್‌, ವೀಕ್‌ ಎಂಡ್‌ ವಿತ್‌ ರಮೇಶ್‌ ಶೋಗಳನ್ನು ಮತ್ತೊಮ್ಮೆ ನೋಡಬಹುದು.

WWR ಹಾಟ್ ಸೀಟ್‌ನಲ್ಲಿ ಅಸಾಮಾನ್ಯ ಶ್ರೀಸಾಮಾನ್ಯ ನಿವೇದನ್ ನೆಂಪೆ!

ಇದರ ಜತೆಗೆ ಸುದೀಪ್‌ ಅಭಿನಯದ ಪೈಲ್ವಾನ್‌ ಚಿತ್ರದ ಆಡಿಯೋ ಬಿಡುಗಡೆ ಈವೆಂಟ್‌, ಪಾರು ಧಾರಾವಾಹಿಯ ಜಾತ್ರೆ, ಜೀ ಕನ್ನಡದ ಹೆಮ್ಮೆಯ ಕನ್ನಡಿಗ-2020 ಕಾರ್ಯಕ್ರಮವನ್ನು ಕಣ್ಣು ತುಂಬಿಕೊಳ್ಳಬಹುದು. ದಿ ವಿಲನ್‌, ದೊಡ್ಮನೆ ಹುಡುಗ, ಉಪ್ಪು ಹುಳಿ ಖಾರ ಚಿತ್ರಗಳು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿವೆ.

ಕಲರ್ಸ್‌ ಕನ್ನಡ ಹಂಗಾಮ

ಕಲರ್ಸ್‌ ಕನ್ನಡ ಹಾಗೂ ಕಲರ್ಸ್‌ ಸೂಪರ್‌ನಲ್ಲೂ ರಿಪೀಟ್‌ ಟೆಲಿಕಾಸ್ಟ್‌ ಇದೆ. ನನ್ನರಸಿ ರಾಧೆ, ಕನ್ನಡತಿ, ಗೀತಾ ಹಾಗೂ ಮಂಗಳ ಗೌರಿ ಮದುವೆ ಧಾರಾವಾಹಿಗಳು ಕಲರ್ಸ್‌

ಕನ್ನಡದಲ್ಲಿ ಮರು ಪ್ರಸಾರ ಆರಂಭಿಸಿದ್ದರೆ, ಇತ್ತ ಕಲರ್ಸ್‌ ಸೂಪರ್‌ ನಲ್ಲಿ ಮಗಳು ಜಾನಕಿ, ಸಿಲ್ಲಿ ಲಲ್ಲಿ, ಮಾಂಗಲ್ಯಂ ತಂತು ನಾನೇನಾ, ಭೂಮಿ ತಾಯಾಣೆ ಧಾರಾವಾಹಿಗಳು ಮರು ಪ್ರಸಾರಗೊಳ್ಳುತ್ತಿವೆ. ಇದರ ಜತೆಗೆ 425 ಎಪಿಸೋಡ್‌ಗಳಿಗೆ ಮುಗಿದು ಹೋಗಿದ್ದ ‘ಪಾಪ ಪಾಂಡು’ ಮತ್ತೆ ಪ್ರಸಾರ ಆರಂಭಿಸಿದೆ. ಹಾಗೆ ಮಜಾ ಭಾರತಕ್ಕೂ ಮರುಪ್ರಸಾರ ಭಾಗ್ಯವಿದೆ.

ಮತ್ತೆ ಬಂದ ಮಹದೇವ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಎರಡು ಧಾರಾವಾಹಿಗಳು ಸೋಮವಾರದಿಂದ ಮರು ಪ್ರಸಾರ ಆರಂಭಿಸಲಿವೆ. ಹರಹರ ಮಹದೇವ ಧಾರಾವಾಹಿಯಲ್ಲಿ ಮತ್ತೆ ಬರಲಿದ್ದಾನೆ. ಇದರ ಜತೆಗೆ ಮರಳಿ ಬಂದಳು ಸೀತೆ ಧಾರಾವಾಹಿ ಜಾಗದಲ್ಲಿ ಅರಮನೆ ಗಿಳಿ ಪ್ರತ್ಯಕ್ಷವಾಗಲಿದೆ.

ಉದಯವಾಹಿನಿಯಲ್ಲಿ ಯಾವ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳು ಮರು ಪ್ರಸಾರ ಆಗಲಿವೆ ಎಂಬುದು ಸೋಮವಾರ ನಂತರ ಗೊತ್ತಾಗಲಿದೆ. ಈಗಾಗಲೇ ಬಂದಿರುವ ಮಾಹಿತಿ ಪ್ರಕಾರ ನಂದಿನಿ ಧಾರಾವಾಹಿಯ ಹಳೆಯ ಕಂತುಗಳು ಮರಳಿ ದರ್ಶನ ಕೊಡಲಿವೆ ಎಂಬುದು.

ಅನು ಬದುಕೇ ಬದಲಿಸಿದ 'ಜೊತೆ ಜೊತೆಯಲಿ';ಹೇಗಿದ್ದ ಲೈಫ್ ಹೇಗಾಯ್ತು ನೋಡಿ!

ಒಟ್ಟಿನಲ್ಲಿ ಬಹುತೇಕ ಎಲ್ಲ ವಾಹಿನಿಗಳ ಧಾರಾವಾಹಿಗಳು ಹೊಸ ಎಪಿಸೋಡ್‌ಗಳನ್ನು ಸೋಮವಾರದಿಂದ ಪ್ರಸಾರ ಮಾಡುವುದು ಕಷ್ಟ. ಹೀಗಾಗಿ ಎಲ್ಲರೂ ಮರು ಪ್ರಸಾರದ ಮೊರೆ ಹೋಗಿದ್ದು, ಕಿರುತೆರೆ ತನ್ನ ಮನರಂಜನೆ ಸೇವೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ಮುಂದುವರಿಸುವ ನಿರ್ಧಾರಕ್ಕೆ ಬಂದಿದೆ ಎನ್ನಬಹುದು.

"

Follow Us:
Download App:
  • android
  • ios