Asianet Suvarna News Asianet Suvarna News

ಹೀನಾಯ ಕಳಪೆ ಪಟ್ಟ ಪಡೆದ ಭಾರತದ ಟಿವಿ ಶೋ; ಅಮೆರಿಕಾ ನಂಟಿನಿಂದ ಇಂಡಿಯಾದಲ್ಲಿ ಗಂಟುಮೂಟೆ ಕಟ್ಟಿತಾ?

ಭಾರತದಲ್ಲಿ ಈಗ ಟಿಆರ್‌ಪಿ ಪದ್ಧತಿ ಜಾರಿಯಲ್ಲಿದೆ. ಆದರೆ, ಅಂದು ಸುಮಾರು 1990, 2000ಗಳ ದಶಕಗಳಲ್ಲಿ ಇಲ್ಲಿ ರೇಟಿಂಗ್ ಕೊಡುವ ಯಾವುದೇ ಸಿಸ್ಟಮ್ ಇರಲಿಲ್ಲ. 

Copy of iconic American sitcom hello friends is the worst Indian TV show ever srb
Author
First Published Dec 25, 2023, 2:53 PM IST

ಭಾರತೀಯ ಕಿರುತೆರೆ ಶೋಗಳಲ್ಲಿ ಹಲವು ಶೋಗಳು ಕ್ಲಿಕ್ ಆಗುತ್ತವೆ, ಇನ್ನೂ ಕೆಲವು ಫ್ಲಾಪ್ ಆಗುತ್ತವೆ. ಅಮೆರಿಕಾದ ಸಂಸ್ಥೆಯೊಂದು ಭಾರತೀಯ ಟೆಲಿವಿ‍ಷನ್ ಶೊಗಳಿಗೆ ಪಪ್ಯುಲಾರಿಟಿ ಮೇಲೆ ರಾಂಕಿಂಗ್ ಕೊಡುವ ಪದ್ಧತಿ ಮಾಡಿಕೊಂಡಿದೆ. ಸಾರ್ವಜನಿಕರನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಪಡೆದು ಆ ಸಂಸ್ಥೆ ಶೊಗಳಿಗೆ ರೇಟಿಂಗ್ ನೀಡುತ್ತದೆ.  ಐಎಂಡಿಬಿ (IMDb)ರೇಟಿಂಗ್ 1-10 ಇದ್ದು ಸಾಮಾನ್ಯವಾಗಿ ಯಾವುದೇ ಶೋ ರೇಟಿಂಗ್ 1ಕ್ಕಿಂತ ಹೆಚ್ಚಾಗಿರುತ್ತದೆ. ಆದರೆ, ಅಚ್ಚರಿ ಎಂಬಂತೆ ಭಾರತದ ಈ ಒಂದು ಶೋ ರೇಟಿಂಗ್ ಒಂದು ಮಾತ್ರ ಇದ್ದು, ಇದನ್ನು ಭಾರತದ ಅತ್ಯಂತ ಕಳಪೆ ಶೋ ಎಂದೇ ಐಎಂಡಿಬಿ ಹೇಳಿದೆ. 

ಕೈ ಖಾಲಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ; ದಿ ಕಾಶ್ಮೀರ್ ಫೈಲ್ಸ್‌ ವಿವಾದಕ್ಕೆ ಸಿಕ್ಕ ಬಹುಮಾನವೇ?

ಭಾರತದಲ್ಲಿ ಈಗ ಟಿಆರ್‌ಪಿ ಪದ್ಧತಿ ಜಾರಿಯಲ್ಲಿದೆ. ಆದರೆ, ಅಂದು ಸುಮಾರು 1990, 2000ಗಳ ದಶಕಗಳಲ್ಲಿ ಇಲ್ಲಿ ರೇಟಿಂಗ್ ಕೊಡುವ ಯಾವುದೇ ಸಿಸ್ಟಮ್ ಇರಲಿಲ್ಲ. ಅಮೆರಿಕಾದ ಸಂಸ್ಥೆ ಕೊಡುವ ಆ ರೇಟಿಂಗ್ ನೋಡಿ ಭಾರತೀಯ ಟಿವಿ ಚಾನೆಲಗಳು ಹಾಗೂ ಶೋ ನಿರ್ಮಾಣ ಸಂಸ್ಥೆಗಳು ಶೋವನ್ನು ನಿಲ್ಲಿಸುವುದೋ ಅಥವಾ ಮುಂದುವರೆಸುವುದೋ ಎಂಬ ತೀರ್ಮಾನ ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿತ್ತು. ಈ ಕಾರಣಕ್ಕೆ ಆ ಶೋ ರೇಟಿಂಗ್ ಕೇವಲ ಒಂದು ಇದ್ದ ಕಾರಣಕ್ಕೆ ಅದನ್ಜು 26 ಎಪಿಸೋಡ್‌ಗಳಿಗೇ ನಿಲ್ಲಿಸಿಬಿಟ್ಟಿತು. ಈ ಕಾರಣದಿಂದ ಐಎಂಡಿಬಿ ಪ್ರಕಾರ ಭಾರತದ ಆ ಶೋ ಅತ್ಯಂತ ಕಳಪೆ ಎಂಬ ಪಟ್ಟದಿಂದ ಕೆಳಕ್ಕೆ ಇಳಿಯಲೇ ಇಲ್ಲ. 

ಶಾರುಖ್ ಖಾನ್ 'ಡಂಕಿ' ಫ್ಲಾಪ್ ಆಗಿದ್ದೇಕೆ; ಸೋಲು ನಿರೀಕ್ಷಿಸದ ಶಾರುಖ್ ಕಥೆ ಮುಂದೇನು?

ಹೀಗೆ ಐಎಂಡಿಬಿ ರೇಟಿಂಗ್‌ನಲ್ಲಿ 1ನ್ನು ದಾಖಲಿಸಿ ಕಳಪೆ ಪಟ್ಟ ಗಿಟ್ಟಿಸಿಕೊಂಡ ಶೋ ಹೆಲೋ ಫ್ರೆಂಡ್ಸ್ (Hello Friends).ಅಮೆರಿಕಾದ ಸಿಟ್‌ ಕಾಮ್ (American sitcom Friends)ಶೋ ದ ಡಿಟ್ಟೋ ಕಾಪಿ ಎಂಬಂತಿದ್ದ ಈ ಹೆಲೋ ಫ್ರೆಂಡ್ಸ್‌ ಶೋ, ಕೇವಲ 26 ಸಂಚಿಕೆಗೆ ಕೊನೆಗೊಂಡಿದ್ದು ದುರಂತ ಮಾತ್ರವಲ್ಲ, ಟಿವಿ ಶೋಗಳಿಗೆ ಒಂದು ಮಹತ್ವದ ಪಾಠ ಕೂಡ ಆಯಿತು. ಕಾರಣ, ನಮ್ಮ ನೇಟಿವಿಟಿ ಇಲ್ಲಾ ಅಂದ್ರೆ ಶೋ ಕ್ಲಿಕ್ ಆಗುವುದು ಕಷ್ಟ, ಯಾವುದೋ ದೇಶದ ನೇಟಿವಿಟಿ ಇಲ್ಲಿ ಕೆಲಸಕ್ಕೆ ಬರುವುದಿಲ್ಲ ಎಂಬ ಸತ್ಯವನ್ನು ಎಲ್ಲ ಟಿವಿ ಶೋ ನಿರ್ಮಾಪಕರಿಗೆ ತಿಳಿಸಿಕೊಟ್ಟಿತು. 

ಸುಮಲತಾ ಎದುರೇ ಮಾಲಾಶ್ರೀ ಹೇಳಿದ್ರು; ಅಂಬರೀಷ್ ಜತೆ ಸುಮಲತಾ ಬಂದಾಗೆಲ್ಲ ಹೊಟ್ಟೆಕಿಚ್ಚು ಆಗ್ತಿತ್ತು..!

ಸಿಟ್ ಕಾಮ್ ಶೋ ದ ಡುಪ್ಲಿಕೇಟ್ ಶೋ ಆಗಿದ್ದ ಹಲೋ ಫ್ರೆಂಡ್ಸ್‌, ಹಳ್ಳಿಯ ಆರು (6) ಹುಡುಗರು ಸಿಟಿಯಲ್ಲಿ ಹೋಗಿ ಅಲ್ಲಿನ ಪರಿಸರದಲ್ಲಿ ಜೀವನ ಮಾಡುವ ಕಾನ್ಸೆಪ್ಟ್ ಹೊಂದಿತ್ತು. 1999ರಲ್ಲಿ ಟೆಲೆಕಾಸ್ಟ್ ಆದ ಆ ಶೋ, ಆಗ ಭಾರತದಲ್ಲಿ ಕ್ಲಿಕ್ ಆಗಲೇ ಇಲ್ಲ. ಕಾರಣ, ಅಂದಿನ ಭಾರತೀಯ ಸಮಾಜದಲ್ಲಿ ಅವುಗಳನ್ನೆಲ್ಲ ನೋಡಿ ಎಂಜಾಯ್ ಮಾಡುವ ಮನಸ್ಥಿತಿ ಖಂಡಿತವಾಗಿಯೂ ಇರಲಿಲ್ಲ. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ವಿದೇಶಿ ಮನಸ್ಥಿತಿಯ 'ಬಿಗ್ ಬಾಸ್' ಶೋ ನಂತಹ ಸಾಕಷ್ಟು ಶೋಗಳು ಇಂದು ಜನಪ್ರಿಯ ಶೋಗಳಾಗಿ ಬದಲಾಗಿವೆ. 

Follow Us:
Download App:
  • android
  • ios