ಬಿಗ್ ಬಾಸ್‌ ಸೀಸನ್ 8 ಈವರೆಗೂ ನಡೆಯದೇ ಇರುವ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ರಾಜೀವ್ ದೆಸೆಯಿಂದ ಲ್ಯಾಗ್‌ ಮಂಜನ ಹಲ್ಲೇ ಕಿತ್ತೋಗಿದೆ! 

ಬಿಗ್‌ಬಾಸ್‌ ಸೀಸನ್‌ ೮ನ ಹೊಸ ಹೊಸ ಟಾಸ್ಕ್‌ಗಳು ಗಮನಸೆಳೆಯುತ್ತಿವೆ. ಕಳೆದ ವಾರ ಚದುರಂಗದ ಟಾಸ್ಕ್‌ ಇತ್ತು. ಅದರಲ್ಲಿ ಸ್ಪರ್ಧಿಗಳ ದೈಹಿಕ ಕಾದಾಟ ಇರಲಿಲ್ಲ. ಆದರೆ ಅದಕ್ಕೂ ಹಿಂದಿನ ಕೊರೋನಾ ಟಾಸ್ಕ್‌ ಮಾತ್ರ ಬಿಗ್‌ಬಾಸ್‌ ಮನೆಯನ್ನು ರಣರಂಗವಾಗಿಸಿತ್ತು. ಇದೀಗ ಇಟ್ಟಿಗೆ ಟಾಸ್ಕ್‌ ಸ್ಪರ್ಧಿಗಳನ್ನು ಮತ್ತೆ ಕಾದಾಡುವಂತೆ ಮಾಡಿದೆ. ಇದರಲ್ಲಿ ಕಳೆದ ಕೆಲವು ವಾರಗಳಿಂದ ಬದ್ಧ ವೈರಿಗಳಂತೆ ಆಡುತ್ತಿದ್ದರು ಪ್ರಶಾಂತ್ ಸಂಬರಗಿ ಹಾಗೂ ಲ್ಯಾಗ್‌ ಮಂಜ. ಆದರೆ ಈಗ ಅವರಿಬ್ಬರ ನಡುವೆ ಕೊಂಚ ವಾತಾವರಣ ತಿಳಿಯಾಗಿದೆ. ಆದರೂ ಮಂಜನ ಅದೃಷ್ಟ ಕೈ ಕೊಟ್ಟಂತಿದೆ. ಅವರಿಗೆ ಒಂದು ಕಡೆ ಕ್ಯಾಪ್ನ್ಸಿನೂ ಸಿಕ್ತಿಲ್ಲ. ಇನ್ನೊಂದು ಕಡೆ ರಾಜೀವ್‌ ದೆಸೆಯಿಂದ ಹಲ್ಲೇ ಮುರಿದು ಹೋಗಿದೆ. ಜೊತೆಗೆ ಅವರಿಗೆ ಈ ನೋವಿಗೆ ತಲೆಸುತ್ತು ಬಂದಿದೆ. ಅದ್ಯಕ್ಕೀಗ ಮಂಜ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದದ್ದೇನು?

ಅರೆ ವಾವ್..! ಲವ್‌ ರಿಹರ್ಸಲ್‌ನಲ್ಲಿ ಸಿಂಪಲ್‌ ಸ್ಟಾರ್‌ ...

ಮಂಜನ ಹಲ್ಲು ಮುರಿದಿದ್ದು ಹೇಗೆ?
ಈ ವಾರದ ಕ್ಯಾಪ್ಟನ್‌ ವಿಶ್ವನಾಥ್‌ಗೆ ಎರಡು ಟೀಮ್‌ ಮಾಡುವಂತೆ ಸೂಚಿಸಲಾಗಿತ್ತು. ಬಿಗ್‌ ಬಾಸ್‌ ಆಣತಿಯಂತೆ ಎರಡು ಟೀಮ್‌ ಮಾಡಿ ದಿವ್ಯಾ ಉರುಡುಗ ಹಾಗೂ ಶುಭಾ ಪೂಂಜಾ ಅವರನ್ನು ಕ್ಯಾಪ್ಟನ್‌ಗಳಾಗಿ ಮಾಡಿದ್ರು ವಿಶ್ವನಾಥ್‌. ದಿವ್ಯಾ ಟೀಮ್‌ಗೆ ಅನುಬಂಧ ಅನ್ನುವ ಹೆಸರಿದ್ದರೆ, ಶುಭಾ ಟೀಮ್‌ ಹೆಸರು ಜಾತ್ರೆ. ಮೊದಲ ಬೆಲೂನ್‌ ಟಾಸ್ಕ್‌ ವಿನ್‌ ಆದ ಜಾತ್ರೆ ಟೀಮ್‌ ಬಿಗ್‌ಬಾಸ್‌ನಿಂದ ಚಾಕ್ಲೇಟ್‌ ಗಿಫ್ಟ್‌ ಪಡೆಯಿತು. ಈಗ ಮತ್ತೊಂದು ಟಾಸ್ಕ್‌ ಹೆಂಚು ಒಡೆಯೋ ಟಾಸ್ಕ್. ಇದರಲ್ಲಿ ರಾಜೀವ್ ದಿವ್ಯಾ ಅವರ ಅನುಬಂಧ ಟೀಮ್‌ನಲ್ಲಿದ್ದರೆ, ಮಂಜು ಅವರು ಶುಭಾಪೂಂಜಾ ಅವರ ಜಾತ್ರೆ ಟೀಮ್‌ನಲ್ಲಿದ್ರು. ಒಂದು ಟೀಮ್‌ ಸಂಗ್ರಹಿಸುವ ಹೆಂಚನ್ನು ಇನ್ನೊಂದು ಟೀಮ್‌ ಒಡೆಯಬೇಕು ಇದು ಟಾಸ್ಕ್‌.


ಅದರಂತೆ ಅನುಬಂಧ ಟೀಮ್ ಹೆಂಚುಗಳನ್ನು ಕಲೆಹಾಕಲು ಶುರು ಮಾಡಿತ್ತು. ಜಾತ್ರೆ ಟೀಮ್‌ನ ಮಂಜು ಆ ಇಟ್ಟಿಗೆಗಳನ್ನು ಒಡೆಯಲು ಮುಂದಾದರು. ಆಗ ಅಡ್ಡ ಬಂದದ್ದು ರಾಜೀವ್‌. ಅವರ ಕೈ ಬಲವಾಗಿ ಮಂಜುವಿನ ಹಲ್ಲಿಗೆ ಬಡಿಯಿತು. ಲ್ಯಾಗ್ ಮಂಜನ ಅರ್ಧ ಹಲ್ಲೇ ತುಂಡಾಯಿತು. ಅರ್ಧ ತುಂಡಾದ ಹಲ್ಲು ಗಾರ್ಡನ್ ಏರಿಯಾದಲ್ಲಿ ಬಿತ್ತು. ಆ ನೋವಿಗೆ ಮಂಜು ಅವರಿಗೆ ತಲೆಸುತ್ತು ಬಂದು ಬವಳಿ ಬರುವ ಹಾಗಾಯ್ತು. ಬಾಯಿಯಿಂದ ರಕ್ತ ಒಸರಿತು. 
ಇತ್ತ ರಾಜೀವ್‌ ಕೈಗೆ ಮಂಜನ ಹಲ್ಲು ಊರಿ ಕೈಗೆ ಬಲವಾದ ಪೆಟ್ಟು ತಾಗಿತು. ಕೈಗೆ ಬಿದ್ದ ನೋವಿಂದ ರಾಜೀವ್‌ ನರಳೋ ಹಾಗಾಯ್ತು. ಇಬ್ಬರ ನೋವು, ಒದ್ದಾಟ ಮನೆಮಂದಿಗೆ ದೊಡ್ಡ ಆಘಾತವನ್ನೇ ತಂದಿತು. ಅವರೆಲ್ಲ ಇಬ್ಬರನ್ನೂ ಸಮಾಧಾನಿಸಿದರು. ಪ್ರಶಾಂತ್ ಸಂಬರಗಿ ಮುರಿದು ಗಾರ್ಡನ್ ಏರಿಯಾದಲ್ಲಿ ಬಿದ್ದದ್ದ ಮಂಜನ ಹಲ್ಲನ್ನು ಅವರಿಗೇ ಹಸ್ತಾಂತರಿಸಿದರು. 

ವಿಷ್ಣು ಓದಿದ ಶಾಲೆ ಉಳಿಸಲು ಮುಂದಾದ ನಟಿ ಪ್ರಣೀತಾ ...

ಸಾರಿ ಕೇಳಿದ್ರು ರಾಜೀವ್‌
ರಾಜೀವ್‌ ಕ್ರೀಡೆಯಲ್ಲಿ ಎಷ್ಟೇ ಸ್ಟ್ರಾಂಗ್‌ ಅಂತ ಗುರುತಿಸಿಕೊಂಡರೂ ಮನುಷ್ಯತ್ವವನ್ನು ಬಿಟ್ಟು ಎಂದೂ ಆಡಿದವರಲ್ಲ. ಅವರ ಕ್ಯಾಪ್ಟನ್ಸಿಯಲ್ಲೂ ಅವರು ಮಾನವೀಯ ನಿರ್ಣಯಗಳನ್ನೇ ಕೊಟ್ಟು ಪ್ರೇಕ್ಷಕರ ಮನ ಗೆದ್ದಿದ್ದರು. ಈ ಪ್ರಕರಣದಲ್ಲೂ ಅವರು ಹಿಂದೆ ಮುಂದೆ ನೋಡದೇ ಲ್ಯಾಗ್‌ ಮಂಜನ ಬಳಿ ಸಾರಿ ಕೇಳಿದ್ದಾರೆ. ಅವರಿಗೆ ಈ ಘಟನೆಯಿಂದ ಬಹಳ ಬೇಸರವಾಗಿದೆ. 'ನನಗೆ ಕೈಗೆ ಏಟಾದರೆ ನಾಳೆ ಸರಿ ಹೋಗಬಹುದು. ಆದರೆ ನೀನು ಆಕ್ಟಿಂಗ್ ಪ್ರೊಫೆಶನ್‌ನಲ್ಲಿರುವವನು. ನಿನಗೆ ಹೀಗೆ ಆಗಬಾರದಿತ್ತು. ನನಗೆ ತುಂಬ ಬೇಸರವಾಗುತ್ತಿದೆ. ಸಾರಿ..' ಅಂತ ನೋವಿಂದ ಹೇಳಿದ್ದಾರೆ. ಆದರೆ ಆ ನೋವನ್ನೂ ಇದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡ ಮಂಜ ರಾಜೀವ್‌ ಅವರನ್ನ ಸಮಾಧಾನ ಮಾಡಿದ್ದಾರೆ. 'ಆಟ ಅಂದಮೇಲೆ ಇದೆಲ್ಲ ಇದ್ದದ್ದೇ' ಎಂದಿದ್ದಾರೆ. ಈ ಇಬ್ಬರೂ ಪರಸ್ಪರ ವಿರುದ್ಧ ಟೀಮ್‌ನಲ್ಲಿದ್ದರೂ ಒಬ್ಬರನ್ನೊಬ್ಬರ ಆತ್ಮೀಯವಾಗಿ ಸಮಾಧಾನ ಮಾಡಿದ್ದಾರೆ. ಇಂಥಾ ಘಟನೆಗಳಿಂದ ಮನೆಯವರಿಗೂ ನೋವಾಗುತ್ತದೆ ಎಂಬುದನ್ನ ನೆನೆಸಿಕೊಂಡಿದ್ದಾರೆ.

ಪತಿ ನಿಕ್ ಜೊತೆ ಕೆಲಸ ಮಾಡಲು ಇಷ್ಟವೇ ಇಲ್ವಂತೆ ಪಿಗ್ಗಿಗೆ! ...