ನಟ ರಕ್ಷಿತ್‌ ಶೆಟ್ಟಿಈಗ ವರ್ಕ್ ಶಾಪ್‌ ಮೂಡ್‌ನಲ್ಲಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕಾಗಿ ಅವರು ಮಾಡುತ್ತಿರುವ ತಾಲೀಮಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಅಡುಗೆ ಮಾಡುವುದು, ಮ್ಯೂಸಿಕ್‌ ಕೇಳುವುದು, ಕಿಚನ್‌ನಲ್ಲಿ ಪ್ರೇಮದ ಹೆಜ್ಜೆ ಗುರುತುಗಳನ್ನು ನೆನಪಿಸುವ ಸಿಂಪಲ್‌ ಸ್ಟಾರ್‌ ಜತೆಗೆ ನಿರ್ದೇಶಕ ಹೇಮಂತ್‌ ರಾವ್‌, ಚಿತ್ರದ ನಾಯಕಿ ರುಕ್ಮಿಣಿ ವಸಂತ್‌ ಕೂಡ ಇದ್ದಾರೆ.

ಬಾಲಿವುಡ್‌ನಲ್ಲಿ ಯೂ ಟರ್ನ್‌ ರೀಮೇಕ್‌

ಇನ್ನೂ ಚಿತ್ರಕ್ಕಾಗಿ ನಡೆಯುತ್ತಿರುವ ಪೂರ್ವ ತಯಾರಿಯಲ್ಲಿ ರಕ್ಷಿತ್‌ ಹಾಗೂ ರುಕ್ಮಿಣಿ ಅವರ ರೋಮ್ಯಾಂಟಿಕ್‌ ಫೋಟೋಗಳಿಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಕವನಗಳನ್ನು ರಚನೆ ಮಾಡುವ ಮಾಡುತ್ತಿದ್ದಾರೆ.

‘777 ಚಾರ್ಲಿ’ ಚಿತ್ರದ ಶೂಟಿಂಗ್‌ ಮೂಡ್‌ನಿಂದ ಆಚೆ ಬಂದಿರುವ ರಕ್ಷಿತ್‌ ಶೆಟ್ಟಿಈಗ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕಾಗಿ ಪೂರ್ವ ತರಬೇತಿ ಪಡೆಯುತ್ತಿದ್ದಾರೆ. ಅಂಥ ನಾಲ್ಕಾರು ಸನ್ನಿವೇಶಗಳು ಇಲ್ಲಿವೆ.