ಸಾಹಸಸಿಂಹ ವಿಷ್ಣುವರ್ಧನ್‌ ಓದಿರುವ ಬೆಂಗಳೂರಿನ ಚಾಮರಾಜಪೇಟೆಯ ಮಾಡೆಲ್‌ ಹೈಸ್ಕೂಲ್‌ಅನ್ನು ಉಳಿಸುವ ಕೆಲಸಕ್ಕೆ ಪ್ರಣೀತಾ ಸುಭಾಷ್‌ ಮುಂದಾಗಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಣೀತಾ, ತಾನು ನಡೆಸುವ ಪ್ರಣೀತಾ ಚಾರಿಟೇಬಲ್‌ ಟ್ರಸ್ಟ್‌ನ ಮೂಲಕ ಈ ಶಾಲೆಯ ನೆರವಿಗೆ ಬರುವುದಾಗಿ ಹೇಳಿಕೊಂಡಿದ್ದಾರೆ.

‘ಇದು ಬೆಂಗಳೂರಿನ ಪ್ರಮುಖ ಕನ್ನಡ ಮಾಧ್ಯಮ ಶಾಲೆ. ಮೇರು ನಟ ಡಾ. ವಿಷ್ಣುವರ್ಧನ್‌ ಓದಿರುವ ಶಾಲೆಯೂ ಹೌದು. ಇದನ್ನು ಮುಚ್ಚಲು ಹೊರಟಿರುವುದು ಬಹಳ ಬೇಸರ ತಂದಿದೆ.

ಕಾಂಗ್ರೆಸ್ ಸೇರಿದ ಜೆಡಿಎಸ್ ಹಿರಿಯ ನಾಯಕ, ಮಾಜಿ ಸಚಿವ

ಸರ್ಕಾರ ಕೂಡಲೇ ಈ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ನಮ್ಮ ಟ್ರಸ್ಟ್‌ನಿಂದಲೂ ನೆರವು ನೀಡಲು ಸಿದ್ಧಳಿದ್ದೇನೆ’ ಎಂದು ಪ್ರಣೀತಾ ಹೇಳಿದ್ದಾರೆ. ವಿದ್ಯಾರ್ಥಿಗಳ ಕೊರತೆಯಿಂದ 150 ವರ್ಷಗಳ ಇತಿಹಾಸ ಇರುವ ಈ ಶಾಲೆಯನ್ನು ಮುಚ್ಚಲು ಶಾಲೆಯ ಆಡಳಿತ ಮಂಡಳಿ ನಿರ್ಧರಿಸಿತ್ತು.