ನಟ ಅಲ್ಲ ಡ್ಯಾನ್ಸರ್ ಆಗಬೇಕೆಂದು ಕಿರುತೆರೆ ಕಾಲಿಟ್ಟಿದ್ದು: Arjun Yogi Raj
ಸ್ಟಾರ್ ನಟ,ನಟಿಯರು ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್ ಟ್ರೋಫಿ ಗೆಲ್ಲಲ್ಲು ಸಜ್ಜಾಗಿದ್ದಾರೆ. ಅವರ ಸಾಲಿಗೆ ನಟ ಅರ್ಜುನ್ ಯೋಗಿ ಎಂಟ್ರಿ ಕೊಟ್ಟಿದ್ದಾರೆ.
'ಅಕ್ಕ' ಧಾರಾವಾಹಿ ಮೂಲಕ 2012ರಲ್ಲಿ ಕಿರುತೆರೆ ಜರ್ನಿ ಆರಂಭಿಸಿದ ನಟ ಅರ್ಜುನ್ ಯೋಗಿ ರಾಜ್ ಹಲವು ವರ್ಷಗಳ ನಂತರ ಮತ್ತೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.
ಕಲರ್ಸ್ ಕನ್ನಡ ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಅರ್ಜುನ್ ಜೋಡಿ ಯಾರೆಂದು ಇನ್ನೂ ರಿವೀಲ್ ಮಾಡಿಲ್ಲ.
'ಹೊಸ ವರ್ಷಕ್ಕೆ ಹೊಸ ಸ್ಟಾರ್. ನನ್ನ 10 ವರ್ಷಗಳ ಕನಸು ನನಸಾಗುವ ಸಮಯ. ಧನ್ಯವಾದಗಳು,' ಎಂದು ಅರ್ಜುನ್ ಬರೆದುಕೊಂಡಿದ್ದಾರೆ.
'ಡ್ಯಾನ್ಸರ್ ಆಗಬೇಕೆಂದು ನಾನು ಡ್ಯಾನ್ಸಿಂಗ್ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು. ನಾನು ಆಡಿಷನ್ ಕೊಟ್ಟ ಮೊದಲ ದಿನ ನೆನಪಿದೆ,' ಎಂದು ಬೆಂಗಳೂರು ಟೈಮ್ಸ್ ಜೊತೆ ಮಾತನಾಡಿದ್ದಾರೆ.
'ನಾನು ಆಡಿಷನ್ ಕೊಟ್ಟಾಗ ತೀರ್ಪುಗಾರರು ನನಗೆ ಸಲಹೆ ಕೊಟ್ಟರು. ನನ್ನ ಫೇಷಿಯಲ್ ಎಕ್ಸಪ್ರೆಶನ್ ನೋಡಿ ಒಮ್ಮೆ ಆ್ಯಕ್ಟಿಂಗ್‌ನಲ್ಲಿ ಪ್ರಯತ್ನ ಮಾಡಬೇಕೆಂದು. ವಾಹಿನಿಯಿಂದ ಅವಕಾಶ ಬಂದಾಗ ಒಪ್ಪಿಕೊಂಡೆ,' ಎಂದಿದ್ದಾರೆ.
'ವೃತ್ತಿ ಜೀವನ ಆರಂಭದಿಂದಲೂ ನಾನು ನೃತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇನೆ,' ಎಂದು ಸಂತೋಷದಿಂದ ಈ ಶೋಗೆ ಎಂಟ್ರಿ ಕೊಟ್ಟ ಬಗ್ಗೆ ಹಂಚಿಕೊಂಡಿದ್ದಾರೆ.
ಅಕ್ಕ ಧಾರಾವಾಹಿ ನಂತರ ಅರ್ಜುನ್ 'ಮದುವೆಯ ಮಮತೆಯ ಕರೆಯೋಲೆ' ಮತ್ತು ಹಾಗೇ 'ಏನೆಂದು ಹೆಸರಿಡಲ್ಲಿ' ಸಿನಿಮಾದಲ್ಲಿ ನಟಿಸಿದ್ದಾರೆ.