ಬೆಂಗಳೂರು ನನ್ನ ಕಾಲ ಕೆಳಗೆ ಇರಬೇಕು, ಕಿಟ್ಟಿ ಹೇಳಿದಂಗೆ ಕೇಳ್ಬೇಕು; ಡೈಲಾಗ್ ಕೇಳಿ ಪೊಲೀಸ್ ಸುಸ್ತು!
ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ರಾಮಾಚಾರಿ ಹೆಂಡತಿಯಾಗಿ ಮನೆಗೆ ಬಂದು ವಾಸ ಮಾಡತೊಡಗಿದ್ದಾಳೆ. ತನ್ನ ಒಳ್ಳೆಯ ಸ್ವಭಾವದಿಂದ ಮನೆಯವರ ನಂಬಿಕೆ, ಗೌರವ ಸಂಪಾದಿಸಿರುವ ಚಾರು, ತನ್ನ ಮಾವನ ಆರೋಗ್ಯ ಸರಿ ಹೋಗಲಿ ಎಂದು ಹರಕೆ ಕೂಡ ತೀರಿಸಿದ್ದರು.
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ರಾಮಾಚಾರಿ ಸೀರಿಯಲ್ ಹೊಸ ಆಯಾಮ ಪಡೆದುಕೊಂಡಿದೆ. ಇಷ್ಟು ದಿನಗಳು ಬರೀ ರಾಮಾಚಾರಿಯನ್ನು ಮಾತ್ರ ನೋಡುತ್ತಿದ್ದ ವೀಕ್ಷಕರಿಗೆ ಇನ್ಮಂದೆ ರಾಮಾಚಾರಿ ತದ್ರೂಪಿ ಕ್ರಿಮಿನಲ್ ಕಿಟ್ಟಿ ದರ್ಶನವೂ ಆಗಲಿದೆ. ಹೌದು, ರಾಮಾಚಾರಿಯಂತೆ ಇರುವ ಇನ್ನೊಬ್ಬ ವ್ಯಕ್ತಿ ಕಿಟ್ಟಿ ಇದೀಗ ಕಿರು ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರಾಮಾಚಾರಿ ಕೊಲೆಗೆ ಮಾನ್ಯತಾ ಇದೀಗ ಕ್ರಿಮಿನಲ್ ಕಿಟ್ಟಿ ಮೊರೆ ಹೋಗಿದ್ದಾರೆ. ಎತ್ತರವಾದ ಜಾಗವೊಂದರಲ್ಲಿ ನೆಲೆ ಹೊಂದಿರುವ ರಾಮಾಚಾರಿ ಜತೆ ಡೀಲ್ ಮಾಡಲು ಹೋಗಿರುವ ಮಾನ್ಯತಾ ಕಿಟ್ಟಿ ಬಳಿ ಮಾತುಕತೆ ನಡೆಸುತ್ತಿದ್ದಾಳೆ.
ರಾಮಾಚಾರಿ ತುಂಬಾ ಸಾಫ್ಟ್ ಮತ್ತು ಡೀಸೆಂಟ್ ವ್ಯಕ್ತಿ ಎಂಬುದು ಕಿರುತೆರೆ ರಾಮಾಚಾರಿ ಸೀರಿಯಲ್ ವೀಕ್ಷಕರಿಗೆ ಗೊತ್ತಿರುವ ಸಂಗತಿ. ಇದೀಗ ಅವನಂತೆ ಇರುವ ಈ ಕ್ರಿಮಿನಲ್ ಕಿಟ್ಟಿ ಯಾರು ಎಂಬುದು ತೀವ್ರ ಕುತೂಹಲ ಕೆರಳಿಸುವ ಸಂಗತಿ. ರಾಮಾಚಾರಿಯ ವಿರುದ್ಧ ವ್ಯಕ್ತಿತ್ವ ಹೊಂದಿರುವ ಆತ ಸೀರಿಯಲ್‌ನಲ್ಲಿ ಡಬ್ಬಲ್ ರೋಲ್ ನಿರ್ವಹಿಸುತ್ತಿರುವುದು ಹೌದು. ಆದರೆ, ನಿಜವಾಗಿ ಆತ ಯಾರು? ರಾಮಾಚಾರಿ ಮತ್ತು ಕ್ರಿಮಿನಲ್ ಕಿಟ್ಟಿ ಸಹೋದರರೇ, ಅವಳಿಗಳೇ ಎಂಬುದು ಮುಂದೆ ರಿವೀಲ್ ಆಗಲಿದೆ. ಸದ್ಯಕ್ಕೆ ಕಿಟ್ಟಿಗೆ ರಾಮಾಚಾರಿ ಫೋಟೋ ತೋರಿಸಿ ಮಾನ್ಯತಾ ಎನೋ ಡೀಲ್‌ಗೆ ತೊಡಗಿದ್ದಾಳೆ.
ದಾಂಪತ್ಯಕ್ಕೆ ಕಾಲಿಟ್ಟ ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿಗೆ ವಿಶ್ ಮಾಡಿದ ಸಿನಿ ಸೆಲೆಬ್ರಿಟಿಗಳು
ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ರಾಮಾಚಾರಿ ಹೆಂಡತಿಯಾಗಿ ಮನೆಗೆ ಬಂದು ವಾಸ ಮಾಡತೊಡಗಿದ್ದಾಳೆ. ತನ್ನ ಒಳ್ಳೆಯ ಸ್ವಭಾವದಿಂದ ಮನೆಯವರ ನಂಬಿಕೆ, ಗೌರವ ಸಂಪಾದಿಸಿರುವ ಚಾರು, ತನ್ನ ಮಾವನ ಆರೋಗ್ಯ ಸರಿ ಹೋಗಲಿ ಎಂದು ಹರಕೆ ಕೂಡ ತೀರಿಸಿದ್ದರು. ಈ ಮೂಲಕ ಮನೆಯಲ್ಲಿ ಚಾರು ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ಮೂಡಿದೆ. ಅದನ್ನು ಸಹಿಸದ ರಾಮಾಚಾರಿ ಅತ್ತೆಯ ಮಗಳು ಹೇಗಾದರೂ ಸರಿ, ರಾಮಾಚಾರಿ ಮನಸ್ಸಿನಿಂದ ಹಾಗೂ ಮನೆಯಿಂದ ಚಾರುಳನ್ನು ಓಡಿಸಲು ಸತತ ಪ್ರಯತ್ನ ಮಾಡುತ್ತಿದ್ದಳು.
ನಿಶಿತಾ-ಅಭಿಮನ್ಯು ಮದುವೆ ತಪ್ಪಿಸುತ್ತಾಳಾ ಶ್ರಾವಣಿ, ಬಿಂದು ಪ್ಲಾನ್ ಕಥೆ ಏನುಗುತ್ತೋ; ಫುಲ್ ಆತಂಕದಲ್ಲಿ ನೆಟ್ಟಿಗರು!
ಸದ್ಯಕ್ಕೆ, ರಾಮಾಚಾರಿ ತದ್ರೂಪಿ ಕ್ರಿಮಿನಲ್ ಕಿಟ್ಟಿ ಜತೆ ಡೀಲ್‌ಗೆ ಇಳಿದಿರುವ ಮಾನ್ಯತಾ ಉದ್ಧೇಶವೇನು? ರಾಮಾಚಾರಿಯನ್ನು ಕೊಲೆ ಮಾಡಿಸುವುದೋ ಅಥವಾ ಜಸ್ಟ್ ಬ್ಲಾಕ್‌ಮೇಲ್ ಮಾಡುವುದೋ? ಕ್ರಿಮಿನಲ್ ಕಿಟ್ಟಿ ಹಾಗೂ ರಾಮಾಚಾರಿ ಮುಖಾಮುಖಿಯಾದಾಗ ಏನು ನಡೆಯುತ್ತದೆ? ಚಾರು ಮುಂದಿನ ಕಥೆ ಏನಾಗಬಹುದು? ರಾಮಾಚಾರಿ ಬಚಾವ್ ಆಗುತ್ತಾನಾ? ಸದ್ಯದಲ್ಲೇ ಈ ಧಾರಾವಾಹಿ ಈ ಸೀರಿಯಲ್ ಮುಗಿದು ಹೋಗುತ್ತಾ? ಮುಂತಾದ ಎಲ್ಲಾ ಪ್ರಶ್ನೆಗಳಿಗೆ ಇಂದಿನ ಹಾಗೂ ಮುಂದಿನ ಸಂಚಿಕೆಗಳು ಉತ್ತರ ನೀಡಲಿವೆ. ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ರಾಮಾಚಾರಿ ಸೀರಿಯಲ್ ಸೋಮವಾರದಿಂದ ಶುಕ್ರವಾರ ರಾತ್ರಿ 9.00ಕ್ಕೆ ಪ್ರಸಾರವಾಗಲಿದೆ.