- Home
- Entertainment
- Sandalwood
- ದಾಂಪತ್ಯಕ್ಕೆ ಕಾಲಿಟ್ಟ 'ಮುಂಗಾರು ಮಳೆ' ಹುಡುಗಿ ಪೂಜಾ ಗಾಂಧಿಗೆ ವಿಶ್ ಮಾಡಿದ ಸಿನಿ ಸೆಲೆಬ್ರಿಟಿಗಳು
ದಾಂಪತ್ಯಕ್ಕೆ ಕಾಲಿಟ್ಟ 'ಮುಂಗಾರು ಮಳೆ' ಹುಡುಗಿ ಪೂಜಾ ಗಾಂಧಿಗೆ ವಿಶ್ ಮಾಡಿದ ಸಿನಿ ಸೆಲೆಬ್ರಿಟಿಗಳು
ಸಾಯಂಕಾಲ ಮದುವೆ ನಡೆದಿದ್ದು, ಮದುವೆಗೆ ಬಂದವರಿಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎರಡೂ ಶೈಲಿಯ ಖಾದ್ಯ-ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಾಂಪ್ರದಾಯಿಕ ಶೈಲಿಯಲ್ಲಿ ಬಾಣಸಿಗರು ಊಟ ಬಡಿಸಿದ್ದು ಸಹ ವಿಶೇಷ ಎನಿಸುವಂತಿತ್ತು.

ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಮದುವೆ ನಡೆದಿದ್ದು, ಈ ಮೂಲಕ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಓನರ್ ವಿಜಯ್ ಜತೆ ನಟಿ ಪೂಜಾ ಗಾಂಧಿ ಮಂತ್ರ ಮಾಂಗಲ್ಯದ ಮೂಲಕ ಮದುವೆ ಆಗಿದ್ದಾರೆ.
29 ನವೆಂಬರ್ 2023ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ನಡೆದಿದೆ. ಬಹಳಷ್ಟು ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಪಾಲ್ಗೊಂಡು ನವ ವಧು-ವರರಿಗೆ ಶುಭ ಹಾರೈಸಿದ್ದಾರೆ.
ನಿರ್ದೇಶಕರಾದ ಯೋಗರಾಜ್ ಭಟ್, ಗೀತ ಸಾಹಿತಿ ಜಯಂತ್ ಕಾಯ್ಕಿಣಿ, ನಟಿಯರಾದ ಸುಧಾರಾಣಿ, ಶುಭಾ ಪೂಂಜಾ, ಸುಂದರ್ ರಾಜ್-ಪ್ರಮಿಳಾ ಜೋಶಾಯ್ ದಂಪತಿಗಳು, ಸ್ಯಾಂಡಲ್‌ವುಡ್‌ನ ಹಲವು ನಟನಟಿಯರು ಹಾಗೂ ಸಿಹಿಕಹಿ ಚಂದ್ರು ದಂಪತಿಗಳು, ಸುಜಯ್ ಹೆಗಡೆ, ಚಂದು ಸೇರಿದಂತೆ ಹಲವು ಕಿರುತೆರೆಯ ಕಲಾವಿದರು ಭಾಗಿಯಾಗಿದ್ದರು.
ಸಾಯಂಕಾಲದ ಸಮಯದಲ್ಲಿ ನಡೆದ ಈ ಮಂತ್ರ ಮಾಂಗಲ್ಯ ಮದುವೆಯಲ್ಲಿ ಸೌತ್ ಹಾಗೂ ನಾರ್ತ್ ಸಂಪ್ರದಾಯಗಳ ಸಂಗಮ ಎದ್ದು ಕಾಣುವಂತಿತ್ತು ಎನ್ನಲಾಗಿದೆ. ವಧು-ವರರ ಡ್ರೆಸ್, ಮದುವೆ ನಡೆದ ಶೈಲಿ ಹಾಗು ಅಲ್ಲಿ ಸೇರಿದ್ದ ಜನರಲ್ಲಿ ಭಿನ್ನತೆಯಲ್ಲಿ ಏಕತೆ ಎದ್ದು ಕಾಣುತ್ತಿತ್ತು.
ಸಾಯಂಕಾಲ ಮದುವೆ ನಡೆದಿದ್ದು, ಮದುವೆಗೆ ಬಂದವರಿಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎರಡೂ ಶೈಲಿಯ ಖಾದ್ಯ-ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಾಂಪ್ರದಾಯಿಕ ಶೈಲಿಯಲ್ಲಿ ಬಾಣಸಿಗರು ಊಟ ಬಡಿಸಿದ್ದು ಸಹ ವಿಶೇಷ ಎನಿಸುವಂತಿತ್ತು.
ಇದೀಗ ಪೂಜಾ ಗಾಂಧಿ ಅವರನ್ನು ಮದುವೆ ಮಾಡಿಕೊಂಡಿರುವ ವಿಜಯ್ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿದ್ದು ಎಂಬ ಮಾಹಿತಿಯೂ ಲಭ್ಯವಾಗಿದೆ. ಈಗ ಪೂಜಾ ಅಪ್ಪಟ ಕನ್ನಡಿಗರಂತೆ ಮಾತನಾಡುತ್ತಾರೆ ಎಂಬುದು ವಿಶೇಷ ಸಂಗತಿ.
ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿ, ಕನ್ನಡವನ್ನು ಕಲಿತು ಭೇಷ್ ಎನಿಸಿಕೊಂಡಿದ್ದಾರೆ. ತಮ್ಮ ಸಿನಿಮಾಗಳಿಗೆ ತಾವೇ ಡಬ್ಬಿಂಗ್ ಕೂಡ ಮಾಡಿ ಕನ್ನಡ ಹಲವು ನಟಿಯರೂ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.
ನಟಿ ಪೂಜಾ ಮದುವೆ ಸುದ್ದಿ ಇಡೀ ಕರ್ನಾಟಕದ ತುಂಬಾ ಹಬ್ಬಿದೆ. ಈಗ ಕರ್ನಾಟಕದ ಸೊಸೆ ಎನಿಸಿಕೊಂಡಿರುವ ನಟಿಗೆ ಹಲವರು ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ. ಹಲವರು ಸ್ವತಃ ಅವರಿಬ್ಬರ ಲವ್ ಮ್ಯಾರೇಜ್‌ಗೆ ಹಾಜರಿ ಹಾಕಿದ್ದಾರೆ.
ದಶಕದ ಹಿಂದೆ ನಟಿ ಪೂಜಾ ಗಾಂಧಿ ಕನ್ನಡದಲ್ಲಿ ಬಹುಬೇಡಿಕೆ ನಟಿಯಾಗಿ ಭಾರೀ ಗಮನ ಸೆಳೆದವರು. ನಟಿ ಪೂಜಾ ಗಾಂಧಿ ಇದಕ್ಕೆ ತ್ದವಿರುದ್ಧ ಎಂಬಂತೆ ತಾವೇ ಸ್ವತಃ ಕನ್ನಡ ಕಲಿತು ತಮ್ಮ ಸಿನಿಮಾಗೆ ಡಬ್ಬಿಂಗ್ ಮಾಡಿದ್ದಾರೆ.
Pooja Gandhi Wedding
ಕನ್ನಡ ಕಲಿಯುವ ಮೂಲಕ ನಟಿ ತಮಗೆ ಅನ್ನ ಕೊಟ್ಟ ಭಾಷೆಗೆ ಗೌರವ ನೀಡಿ ಅಭಿಮಾನ ಮರೆದು ತಾವೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅವರಿಗೆ ಕನ್ನಡಿಗ ವಿಜಯ್ ಎಂಬವರು ನಮ್ಮ ಕನ್ನಡ ಭಾಷೆ ಕಲಿಯಲು ಸಹಾಯ ಮಾಡಿದವರು, ಅವರು ಬೆಂಗಳೂರಿನಲ್ಲಿ ಲಾಜಿಸ್ಟಿಕ್ ಕಂಪನಿ ಓನರ್ ಎನ್ನಲಾಗಿದೆ.
ಕನ್ನಡ ಕಲಿಯುವ ಮೂಲಕ ನಟಿ ತಮಗೆ ಅನ್ನ ಕೊಟ್ಟ ಭಾಷೆಗೆ ಗೌರವ ನೀಡಿ ಅಭಿಮಾನ ಮರೆದು ತಾವೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅವರಿಗೆ ಕನ್ನಡಿಗ ವಿಜಯ್ ಎಂಬವರು ನಮ್ಮ ಕನ್ನಡ ಭಾಷೆ ಕಲಿಯಲು ಸಹಾಯ ಮಾಡಿದವರು, ಅವರು ಬೆಂಗಳೂರಿನಲ್ಲಿ ಲಾಜಿಸ್ಟಿಕ್ ಕಂಪನಿ ಓನರ್ ಎನ್ನಲಾಗಿದೆ.
ಈಗ ಮದುವೆ ಬಂಧನದಲ್ಲಿ ಒಂದಾಗಿರುವ ಪೂಜಾ ಗಾಂಧಿ ಹಾಗೂ ವಿಜಯ್ ಕಳೆದ ಕೆಲವು ವರ್ಷಗಳಿಂದ ಪ್ರೇಮಿಸುತ್ತಿದ್ದರು ಎನ್ನಲಾಗಿದೆ. ಪೂಜಾಗೆ ಕನ್ನಡದ ಟೀಚರ್ ಆಗಿದ್ದ ವಿಜಯ್ ಈಗ ಬಾಳ ಸಂಗಾತಿಯೂ ಆಗಿದ್ದಾರೆ ಎನ್ನುವುದು ವಿಶೇಷ.
ಪಂಜಾಬಿ ಮೂಲದ ನಟಿ ಪೂಜಾ ಗಾಂಧಿ ಕನ್ನಡ ಸಿನಿಮಾಗಳಲ್ಲಿ ನಟಿಸಿ, ಕನ್ನಡ ಕಲಿತು ಇದೀಗ ಕನ್ನಡಿಗನನ್ನು ಮದುವೆಯಾಗಿ ಕರ್ನಾಟಕದ ಸೊಸೆಯೇ ಆಗಿಬಿಟ್ಟಿದ್ದಾರೆ. ಈ ಮೊದಲು ಮಾಲಾಶ್ರೀ, ಸುಮಲತಾ ಸೇರಿದಂತೆ ಹಲವರು ಮಾಡಿದ್ದ ಸಾಧನೆಯ ಲಿಸ್ಟ್‌ಗೆ ಈಗ ನಟಿ ಪೂಜಾ ಗಾಂಧಿ ಕೂಡ ಸೇರಿದ್ದಾರೆ.
ಒಟ್ಟಿನಲ್ಲಿ ಹಲವು ಸಿನಿಮಾಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತ, ಇಲ್ಲಿಯೇ ನೆಲೆಸಿ ಇಲ್ಲಿನ ಬಾಷೆ ಕನ್ನಡ ಕಲಿತು ಕನ್ನಡಿಗಳಾಗಿ ಇದೀಗ ಕರ್ನಾಟಕದ ಸೊಸೆ ಎನಿಸಿರುವ ನಟಿ ಪೂಜಾ ಗಾಂಧಿಗೆ ಹಲವು ಸಾಮಾಜಿಕ ಮಾಧ್ಯಮಗಳ ಮೂಲಕ ಇಡೀ ಕರ್ನಾಟಕ ಶುಭ ಹಾರೈಸುತ್ತಿದೆ.