Asianet Suvarna News Asianet Suvarna News

ಅಮೃತಧಾರೆ: ಭೂಮಿ ಪ್ರೀತಿಗೆ ಮಾರುಹೋದ್ರಾ ಗೌತಮ್.., ದೂರ ಹಾರಿಹೋಯ್ತಾ ಶಕುಂತಲಾ ನಿದ್ದೆ!

"ನೀವು ಮಾಡಿರೋದು ಇಂಗ್ಲಿಷ್‌ನಲ್ಲಿ ಡಬ್ಬಲ್ ಡಿಗ್ರಿ. ಆದರೆ ಕನ್ನಡದಲ್ಲಿ ಎಷ್ಟು ಮುದ್ದುಮುದ್ದಾಗಿ ಮೆಚ್ಯೂರ್ಡ್‌ ಆಗಿ ಬರಿತೀರಾ" ಎಂದು ಗೌತಮ್ ಭೂಮಿಗೆ ಕೇಳುತ್ತಾನೆ. ಜತೆಗೆ, ಭೂಮಿ ಕುರಿತು ಒಳ್ಳೆಯ ಮಾತುಗಳನ್ನು ಆಡುತ್ತಾನೆ. ಆಗ ಭೂಮಿ "ನಾನು ಇಂಗ್ಲಿಷಿನಲ್ಲಿ ಡಬ್ಬಲ್ ಡಿಗ್ರಿ ಮಾಡಿದ್ದು ಹೌದು. ಆದರೆ, ನಾನು ಕನ್ನಡ ಮೇಸ್ಟ್ರ ಮಗಳು.." ಎಂದು ಹೇಳಿ ನಗುತ್ತಾಳೆ.

Zee Kannada serial Amruthadhaare story takes important turning point srb
Author
First Published Oct 18, 2023, 1:56 PM IST

ಜೀ ಕನ್ನಡದಲ್ಲಿ ಸಾಯಂಕಾಲ 7.00 ಗಂಟೆಗೆ ಪ್ರಸಾರ ಕಾಣುತ್ತಿರುವ 'ಅಮೃತಧಾರೆ' ಸೀರಿಯಲ್ ಭಾರೀ ಜನಮನ್ನಣೆ ಗಳಿಸಿದೆ. ಇತ್ತೀಚೆಗೆ ಧಾರಾವಾಹಿಯಲ್ಲಿ ಆಸ್ತಿಗೆ ಸಂಬಂಧಪಟ್ಟು ಹೊಸ ತಿರುವು ಮೂಡಿದ್ದು, ಸೀರಿಯಲ್ ಇನ್ನೂ ಹೆಚ್ಚಿನ ಕುತೂಹಲ ಕೆರಳಿಸತೊಡಗಿದೆ. ಹಿರಿಯ ನಟಿ ವನಿತಾ ವಾಸು ಮುಖ್ಯ ಭೂಮಿಕೆಯಲ್ಲಿ ವಿಲನ್ ಪಾತ್ರ ನಿರ್ವಹಿಸುತ್ತಿದ್ದು, ಅವರ ಪಾತ್ರ ಹಾಗೂ ನಟನೆಗೆ ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ. 

ಇನ್ನು ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ನಾಯಕ-ನಾಯಕಿಯರಾಗಿ ಕಾಣಿಸಿಕೊಂಡಿರುವ ಹಿರಿಯ ಕಲಾವಿದರಾದ ರಾಜೇಶ್ ನಟರಂಗ (ಗೌತಮ್) ಹಾಗೂ ಚಿಟ್ಟೆ ಸಿನಿಮಾ ಖ್ಯಾತಿ ನಟಿ ಛಾಯಾ ಸಿಂಗ್ (ಭೂಮಿ) ನಟನೆಗೂ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಧಾರಾವಾಹಿಯಲ್ಲಿ ಭೂಮಿ-ಗೌತಮ್ ಲವ್ ಸ್ಟೋರಿ ಹೈಲೈಟ್ ಆಗುತ್ತಿದ್ದು, ಗೌತಮ್ ನಿಧಾನವಾಗಿ ಭೂಮಿ ಕಡೆ ವಾಲುತ್ತಿರುವುದು ಕಂಡುಬರುತ್ತಿದೆ. ಭೂಮಿಗೆ ಕನ್ನಡ ಭಾಷೆಯ ಮೇಲೆ ಇರುವ ಹಿಡಿತ ನೋಡಿ ಗೌತಮ್ ಅಚ್ಚರಿಗೊಂಡಿದ್ದಾನೆ. 

"ನೀವು ಮಾಡಿರೋದು ಇಂಗ್ಲಿಷ್‌ನಲ್ಲಿ ಡಬ್ಬಲ್ ಡಿಗ್ರಿ. ಆದರೆ ಕನ್ನಡದಲ್ಲಿ ಎಷ್ಟು ಮುದ್ದುಮುದ್ದಾಗಿ ಮೆಚ್ಯೂರ್ಡ್‌ ಆಗಿ ಬರಿತೀರಾ" ಎಂದು ಗೌತಮ್ ಭೂಮಿಗೆ ಕೇಳುತ್ತಾನೆ. ಜತೆಗೆ, ಭೂಮಿ ಕುರಿತು ಒಳ್ಳೆಯ ಮಾತುಗಳನ್ನು ಆಡುತ್ತಾನೆ. ಆಗ ಭೂಮಿ "ನಾನು ಇಂಗ್ಲಿಷಿನಲ್ಲಿ ಡಬ್ಬಲ್ ಡಿಗ್ರಿ ಮಾಡಿದ್ದು ಹೌದು. ಆದರೆ, ನಾನು ಕನ್ನಡ ಮೇಸ್ಟ್ರ ಮಗಳು.." ಎಂದು ಹೇಳಿ ನಗುತ್ತಾಳೆ. ಆ ನಗುವಿನಲ್ಲಿ ಅದೆಷ್ಟೋ ಅರ್ಥಗಳನ್ನು ಕಂಡುಕೊಂಡಿದ್ದಾನೆ ಗೌತಮ್. ಇತ್ತ ಭೂಮಿಗೂ ಕೂಡ ಗೌತಮ್ ಮೇಲೆ ದಿನದಿನಕ್ಕೂ ಗೌರವ ಹೆಚ್ಚಾಗತೊಡಗಿದೆ ಎನ್ನಬಹುದು. 

BK10: ದೊಡ್ಮನೆಯಲ್ಲಿ ಭಾರೀ ಕಾದಾಟ, 'ರೌಡಿಸಂ' ನಡೆಯಲ್ಲ ಎಂದು ವಿನಯ್‌ಗೆ ಕೂಗಾಡಿದ ತನಿಷಾ

ಭೂಮಿ-ಗೌತಮ್ ಲವ್ ಸ್ಟೋರಿ ಬೆಳೆದಷ್ಟೂ ವಿಲನ್ ಶಕುಂತಲಾಗೆ ಭಾರೀ ಆಘಾತ ಆಗುತ್ತಿದೆ. ಏಕೆಂದರೆ, ಶಕುಂತಲಾ ಗೌತಮ್ ಆಸ್ತಿ ಮೇಲೆ ಕಣ್ಣಿಟ್ಟು ಕೂತಿದ್ದಾಳೆ. ಆದರೆ, ಗೌತಮ್ ಏನಾದರೂ ಭೂಮಿಯನ್ನು ಮದುವೆಯಾದರೆ ಆಸ್ತಿ ಭೂಮಿ ಪಾಲಾಗುತ್ತದೆ ಎಂಬುದು ಶಕುಂತಲಾಗೆ ಗೊತ್ತಿಲ್ಲದ ಸಂಗತಿಯಲ್ಲ. ಹೀಗಾಗಿ ಶಕುಂತಲಾ ಗೌತಮ್-ಭೂಮಿ ಒಂದಾಗದಿರಲು ತನ್ನಿಂದಾಗುವ ಎಲ್ಲ ಪ್ರಯತ್ನ ಮಾಡುತ್ತಿದ್ದಾಳೆ. ಈ ಪ್ರಯತ್ನದಲ್ಲಿ ಆಕೆ ಸಫಲತೆ ಕಾಣುತ್ತಾಳಾ? ಇಂದುನ ಸಂಚಿಕೆ ನೋಡಿದರೆ ಈ ಪ್ರಶ್ನೆಗೆ ಉತ್ತರ ಸಿಗಬಹುದು ನೋಡಿ..

ಒಲವಿನ ನಿಲ್ದಾಣ: ವಿಕ್ರಾಂತ್ ರೋಣ ನಟಿ ನೀತಾ ಅಶೋಕ್

Follow Us:
Download App:
  • android
  • ios