ಬೀದಿಗೆ ಬಂದಿರುವ 'ಲಕ್ಷಣ' ಶಕುಂತಲಾ ದೇವಿ ಸಂಸಾರ ಟ್ರೋಲ್ ಮೇಲೆ ಟ್ರೋಲ್!
ಶ್ವೇತಾ ಏನೋ ಷಡ್ಯಂತ್ರ ಮಾಡಲು ಶಕುಂತಲಾದೇವಿ ಮನೆ ಬಂದು ನಿಂತಿರಲು, ಲಕ್ಷಣ ಸೇರದಂತೆ ಮನೆಯವರೆಲ್ಲರೂ ಅವಳನ್ನು ಅವಮಾನ ಪಡಿಸುವರು. ಅದನ್ನೆಲ್ಲ ನಿರೀಕ್ಷಿಸದೇ ಇದ್ದ ಶ್ವೇತಾ ಹಾಗೂ ಅವಳಪ್ಪ ಶಾಕ್ ಆಗುವರು. ಅದರೆ, ತಮಗಾದ ಶಾಕ್ ತೋರಿಸಿಕೊಳ್ಳದಿರಲು ಪ್ರಯತ್ನಿಸುವರು.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರೋಮೋದಲ್ಲಿ ಕಂಡುಬರುತ್ತಿರುವ ಸ್ಟೋರಿ ಲೈನ್ ನೋಡಿದರೆ ಕಥೆ ರಿವರ್ಸ್ ಗೇರ್ ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಂದರೆ, ಧಾರಾವಾಹಿ ಮುಗಿಯುವ ಹಂತಕ್ಕೆ ಬಂದಿದೆ ಎಂದು ಲಕ್ಷಣ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ 'ತಾನೇ ಎಲ್ಲಾ, ತನ್ನ ಬಿಟ್ರೆ ಯಾರಿಲ್ಲ ಎಂದು ಮೆರೆಯುತ್ತಿದ್ದ ಶ್ವೇತಾಗೆ ಎಲ್ಲವೂ ಉಲ್ಟಾ ಹೊಡೆಯುತ್ತಿರುವ ಸಮಯ ಬಂದಿದೆ ಎನ್ನಬಹುದು.
ಬೀದಿಯಲ್ಲಿ ಬಿದ್ದಿರುವ ಶಕುಂತಲಾ ದೇವಿ ಸಂಸಾರವನ್ನು ನೋಡಿ ಶ್ವೇತಾ ಮತ್ತು ಅವರಪ್ಪ ಭಾರೀ ಖುಷಿ ಅನುಭವಿಸುತ್ತಿದ್ದಾರೆ. ಆದರೆ ಆ ಖುಷಿ ಜಾಸ್ತಿ ಹೊತ್ತು ಉಳಿಯುವ ಲಕ್ಷಣ ಕಾಣುತ್ತಿಲ್ಲ. ಶಕುಂತಲಾ ದೇವಿ ಸಂಸಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ವೇತಾ ವಿರುದ್ಧ ಸೈಲೆಂಟ್ ಆಗಿ ತಿರುಗಿ ಬಿದ್ದಿದ್ದಾರೆ. ಆದರೆ, ಅದು ಶ್ವೇತಾಗೆ ಗೊತ್ತಿಲ್ಲ ಅಷ್ಟೇ. ಹೊಟೆಲ್ ಮಾಡಲು ದುಡ್ಡು ಕೊಟ್ಟಿದ್ದು ಅಲ್ಲದೇ, ಶ್ವೇತಾ ಅದರ ಸೆಟ್‌ಅಪ್‌ಗೆ ಅಂತಲೂ ದುಡ್ಡು ಕೊಟ್ಟಿದ್ದಾಳೆ. ಸ್ವಾಭಿಮಾನಿ ಶಕುಂತಲಾ ದೇವಿ ಅದನ್ನು ಕೂಡ ಪಡೆದುಕೊಂಡಿದ್ದರ ಹಿಂದೆ ಭಾರೀ ಬುದ್ಧಿವಂತಿಕೆ ಇದ್ದಂತಿದೆ.
ದಂಪತಿ ಫುಟ್‌ಪಾತ್ ಮೇಲಿಂದ ಕೆಳಗಿಳಿದು ರಸ್ತೆಗೆ ಬಂದರು: ಅಪಘಾತದ ಬಗ್ಗೆ ಮೌನ ಮುರಿದ ನಾಗಭೂಷಣ್!
ಶ್ವೇತಾ ಏನೋ ಷಡ್ಯಂತ್ರ ಮಾಡಲು ಶಕುಂತಲಾದೇವಿ ಮನೆ ಬಂದು ನಿಂತಿರಲು, ಲಕ್ಷಣ ಸೇರದಂತೆ ಮನೆಯವರೆಲ್ಲರೂ ಅವಳನ್ನು ಅವಮಾನ ಪಡಿಸುವರು. ಅದನ್ನೆಲ್ಲ ನಿರೀಕ್ಷಿಸದೇ ಇದ್ದ ಶ್ವೇತಾ ಹಾಗೂ ಅವಳಪ್ಪ ಶಾಕ್ ಆಗುವರು. ಅದರೆ, ತಮಗಾದ ಶಾಕ್ ತೋರಿಸಿಕೊಳ್ಳದಿರಲು ಪ್ರಯತ್ನಿಸುವರು. ಆದರೆ, ಲಕ್ಷಣ-ಭೂಪತಿ ಕೂಡ ಶ್ವೇತಾಳನ್ನು ಅಣಕಿಸುವಂತೆ ಜೋರಾಗಿ ಬಿದ್ದು ಬಿದ್ದು ನಗುವರು. ಲಕ್ಷಣ ನಗುವನ್ನು ನೋಡಿ ಶ್ವೇತಾ ಪಿತ್ತ ನೆತ್ತಿಗೇರುವುದು.
ವೇದಾಂತ್ ಸ್ಕೆಚ್ ನೋಡಿ ಬಿದ್ದು ಬಿದ್ದು ನಕ್ಕ ಆರತಿ; ಅಮೂಲ್ಯ ಮಾಡಿದ್ದೇನು ನೋಡಿ..!
ಮುಂದೇನಾಗುವುದೋ ಏನೋ? ಏಕೆಂದರೆ, ಪ್ರೋಮೋ ನೋಡಿ ಸಂಪೂರ್ಣ ಕಥೆಯನ್ನು ಊಹಿಸಲು ಅಸಾಧ್ಯ. ಅದಿರಲಿ, ಪ್ರೊಮೋ ನೋಡಿ ಪೂರ್ತಿ ಸಂಚಿಕೆಯನ್ನು ಸಹ ಅರ್ಥೈಸಿಕೊಳ್ಳಲು ಆಗದು. ಆದ್ದರಿಂದ, ಲಕ್ಷಣ ಧಾರಾವಾಹಿಯಲ್ಲಿ ಮುಂದೇನಾಗುವುದೋ ಎಂಬುದನ್ನು ನೋಡಲು ಪ್ರತಿದಿನ ರಾತ್ರಿ 10-30ಕ್ಕೆ (ಸೋಮವಾರದಿಂದ-ಶುಕ್ರವಾರ) ಕಲರ್ಸ್ ಕನ್ನಡ ಚಾನೆಲ್ ನೋಡಿ..