ದಂಪತಿ ಫುಟ್‌ಪಾತ್ ಮೇಲಿಂದ ಕೆಳಗಿಳಿದು ರಸ್ತೆಗೆ ಬಂದರು: ಅಪಘಾತದ ಬಗ್ಗೆ ಮೌನ ಮುರಿದ ನಾಗಭೂಷಣ್!

ಕಾರು ಅಪಘಾತದ ಬಗ್ಗೆ ಸ್ವ ಇಚ್ಚಾ ಹೇಳಿಕೆ ನೀಡಿದ ನಟ ನಾಗಭೂಷಣ್. ನಿಜಕ್ಕೂ ರಾತ್ರಿ ಏನಾಯ್ತು?

Kannada actor Naghabushan voluntary statement about Bengaluru car accident vcs

ಕನ್ನಡ ಚಿತ್ರರಂಗದಲ್ಲಿ ಈಗಷ್ಟೆ ಹೆಸರು ಮಾಡುತ್ತಿದ್ದ ಪಕ್ಕಾ ಮಿಡಲ್ ಕ್ಲಾಸ್ ಹುಡುಗ ನಾಗಭೂಷಣ್ ಸೆಪ್ಟೆಂಬರ್ 30ರಂದು ರಾತ್ರಿ ತಮ್ಮ ಕಿಯಾ ಕಾರಿನಲ್ಲಿ ವೇಗವಾಗಿ ಬಂದು ದಂಪತಿಗೆ ಗುದ್ದಿದ್ದು ಪತ್ನಿ ಮೃತಪಟ್ಟರೆ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಬಗ್ಗೆ ನಾಗಭೂಷನ್ ಸ್ವ ಇಚ್ಚಾ ಹೇಳಿಕೆ ನೀಡಿದ್ದಾರೆ.

ಆರೋಪಿ ಸ್ವ ಇಚ್ಚಾ ಹೇಳಿಕೆ:-
ನಾಗಭೂಷಣ್, 37 ವರ್ಷ, ಜೆಪಿನಗರ, ಬೆಂಗಳೂರು - 78

ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದುಕೊಂಡು ಫಿಲಂ ಇಂಡಸ್ಟ್ರಿಯಲ್ಲಿ ನಟನಾಗಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ ಸೆಪ್ಟೆಂಬರ್ 30 ರಂದು ನಾನು ನನ್ನ ಸ್ನೇಹಿತರನ್ನು ನೋಡಲು, ಆರ್.ಆರ್ ನಗರಕ್ಕೆ ಹೋಗಿ ಸ್ನೇಹಿತರನ್ನು ಭೇಟಿ ಮಾಡಿಕೊಂಡು ಜೆ.ಪಿ ನಗರದಲ್ಲಿರುವ ನಮ್ಮ ಮನೆಗೆ ಹೋಗಲು ನನ್ನ ಮಾಲೀಕತ್ವದ ಕಿಯಾ ಸೆಲ್ಟೋಸ್ ಕಾರು ನಂಬರ್ ಕೆಎ-01-ಎಂಜಿ-5335ರ ವಾಹನವನ್ನು ಚಾಲನೆ ಮಾಡಿಕೊಂಡು.. ವಸಂತಪುರ ಮುಖ್ಯರಸ್ತೆಯಲ್ಲಿ ಉತ್ತರಹಳ್ಳಿ ಕಡೆಯಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಹೋಗಲು ವಸಂತಪುರ ಮುಖ್ಯರಸ್ತೆಯ ಸುಪ್ರಭಾತ ಶ್ರೀಂ ಬ್ರೀಜ್ ಅಪಾರ್ಟ್ಮೆಂಟ್ ಹತ್ತಿರ ರಾತ್ರಿ 9.45ರ ಸಮಯದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ.. ಅಪಾರ್ಟ್ಮೆಂಟ್ ಹತ್ತಿರ ಒಬ್ಬ ಮಹಿಳೆ ಮತ್ತು ಒಬ್ಬರು ಗಂಡಸು ಇಬ್ಬರೂ ಫುಟ್‌ಪಾತ್ ಮೇಲಿಂದ ಕೆಳಗೆ ಇಳಿದು ರಸ್ತೆಗೆ ಬಂದರು. ಅವರು ಬಂದಿದ್ದನ್ನು ನೋಡಿ ನನಗೆ ಗಾಬರಿಯಾಗಿ ನಾನು ರಸ್ತೆಗೆ ಬಂದಿದ್ದವರಿಗೆ ಡಿಕ್ಕಿ ಮಾಡಿ, ನಂತರ ಮುಂದೆ ಹೋಗಿ ಫುಟ್‌ಪಾತ್ ಮೇಲೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದೆನು.. ಕೂಡಲೇ ಅಕ್ಕಪಕ್ಕದಲ್ಲಿದ್ದ ಜನರು ಮತ್ತು ಅಪಾರ್ಟ್ಮೆಂಟ್ ನಿವಾಸಿಗಳು ಓಡಿ ಬಂದು ರಸ್ತೆಯ ಮೇಲೆ ಬಿದ್ದಿದ್ದ ಪಾದಚಾರಿಗಳನ್ನು ಮೇಲಕ್ಕೆ ಎತ್ತಿ ರಸ್ತೆ ಬದಿಗೆ ತಂದು ಕೂರಿಸಿದರು. ನಂತರ ನಾನು ಕಾರಿನಿಂದ ಕೆಳಕ್ಕೆ ಇಳಿದು ಪಾದಚಾರಿಗಳನ್ನು ಕೂರಿಸಿದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ಮಹಿಳೆಗೆ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಏಟಾಗಿ ಮಾತನಾಡದ ಸ್ಥಿತಿಯಲ್ಲಿದ್ದರು.. ಮತ್ತೋರ್ವರಿಗೆ 2  ಕಾಲುಗಳಿಗೆ, ಹೊಟ್ಟೆ, ಬೆನ್ನು ಮತ್ತು ತಲೆಗೆ ರಕ್ತಗಾಯವಾಗಿ ಮಾತನಾಡುತ್ತಿದ್ದರು. ನಂತರ ನಾನು ಗಾಯಾಳುಗಳನ್ನು ನನ್ನ ಕಾರಿನಲ್ಲಿ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದಾಗ ನನ್ನ ಕಾರು ಸ್ಟಾರ್ಟ್ ಅಗಲಿಲ್ಲ. ನಂತರ ನಾನು ಕಾಲಿನಿಂದ ಕೆಳಕ್ಕೆ ಇಳಿದು ಒಂದು ಆಟೋ ರಿಕ್ಷಾದಲ್ಲಿ ನಾನು ಮತ್ತು ಅಲ್ಲಿದ್ದ ಜನರು ಸೇರಿಕೊಂಡು ಗಾಯಾಳುಗಳನ್ನು ಕೂರಿಸಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ದಾಖಲು ಮಾಡಿದೆವು. ವೈದ್ಯರು ಗಾಯಾಳು ಮಹಿಳೆಯನ್ನು ಪರೀಕ್ಷಿಸಿ ದಾರಿಯ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದರು. ಅಷ್ಟರಲ್ಲಿ ವಿಷಯ ತಿಳಿದು ಗಾಯಾಳುಗಳ ಮಗ ಆಸ್ಪತ್ರೆಗೆ ಬಂದರು. ಮತ್ತೋರ್ವ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅಷ್ಟರಲ್ಲಿ ವಿಷಯ ತಿಳಿದು ಆಸ್ಪತ್ರೆಗೆ ಸಂಚಾರ ಪೊಲೀಸರು ಬಂದರು. ನಾನು ಅವರೊಂದಿಗೆ ಕೆ.ಎಸ್.ಲೇಔಟ್ ಸಂಚಾರ ಪೊಲೀಸ್ ಠಾಣೆಗೆ ಬಂದು ಅಪಘಾತದ ಬಗ್ಗೆ ವಿವರಿಸಿ ವಾಹನವನ್ನು ನಾನೇ ಚಾಲನೆ ಮಾಡಿರುವುದಾಗಿ ಈ ನನ್ನ ಸ್ವ ಇಚ್ಛಾ ಹೇಳಿಕೆಯನ್ನು ನೀಡಿರುತ್ತೇನೆ. ನಾಗಭೂಷಣ್.

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಕಾರು ಅಪಘಾತ: ಮಹಿಳೆ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

'30-09-23 ರಂದು ರಾತ್ರಿ 9-30 ಕ್ಕೆ ಅಪಘಾತವಾಗಿತ್ತು ,ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆಯಲ್ಲಿ ಅಪಘಾತವಾಗಿತ್ತು..ಇಬ್ಬರು ಪಾದಾಚಾರಿಗಳಾದ ಕೃಷ್ಣ ಮತ್ತು ಪ್ರೇಮಾ ಎಂಬುವರಿಗೆ ಅಪಘಾತವಾಗಿತ್ತು ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಕಾರು ಚಾಲಕ ವಾಹನ ಓಡಿಸಿದ್ದು ಅಪಘಾತಕ್ಕೆ ಕಾರಣವಾಗಿದೆ  ಆಕ್ಸಿಡೆಂಟ್ ಸ್ಪಾಟ್ ನಲ್ಲೇ ಪ್ರೇಮಾ ಮೃತಪಟ್ಟಿದ್ದಾರೆ. ಕೃಷ್ಣರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ  ಕಾರು ಚಾಲಕ ಫಿಲಂ ಆ್ಯಕ್ಟರ್ ನಾಗಭೂಷಣ್ ರನ್ನ ಅರೆಸ್ಟ್ ಮಾಡಲಾಗಿದೆ ...ಮುಂದಿನ ಪ್ರೊಸೀಜರ್ ನಡೆಸಲಾಗ್ತಿದೆ.ನಾಗಭೂಷಣ್ ರನ್ನ ಸ್ಟೇಷನ್ ಬೇಲ್ ನೀಡಿ ಕಳಿಸಲಾಗಿದೆ. ಮುಂದಿನ ವಿಚಾರಣೆಗೆ ಮತ್ತೆ ಕರೆಯಲಾಗುತ್ತೆ ಪ್ರಾಥಮಿಕ ತನಿಖೆಯಲ್ಲಿ ಅತಿ ವೇಗ ಅಪಘಾತಕ್ಕೆ ಕಾರಣವಾಗಿದೆ ..ರಾತ್ರಿಯೇ ಆಲ್ಕೊ ಹಾಲ್ ಟೆಸ್ಟಿಂಗ್ ಮೀಟರ್ ನಲ್ಲಿ ಕುಡಿದಿಲ್ಲ ಅನ್ನೋದು ಪತ್ತೆಯಾಗಿದೆಬ್ಲಡ್ ತೆಗೆದು ಟೆಸ್ಟಿಂಗ್ ಮೀಟರ್ ನಲ್ಲಿ ಕುಡಿದಿಲ್ಲ ಅನ್ನೋದು ಪತ್ತೆಯಾಗಿದೆ. ಬ್ಲಡ್ ತೆಗೆದು ಟೆಸ್ಟಿಂಗ್ ಗೂ ಕಳುಹಿಸಲಾಗಿದೆ. ಆಕ್ಸಿಡೆಂಟ್ ಮಾಡಿದ ಬಳಿಕ ಸ್ಥಳೀಯರ ಜೊತೆ ಸೇರಿ ಚಾಲಕ ಅಂದರೆ ನಟ ನಾಗಭೂಷಣ್ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ ಎಂದು ಸಂಚಾರ ದಕ್ಷಿಣ ಡಿಸಿಪಿ ಶಿವಪಕ್ರಾಶ್ ದೇವರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ. 

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ

Latest Videos
Follow Us:
Download App:
  • android
  • ios