ವೇದಾಂತ್ ಸ್ಕೆಚ್ ನೋಡಿ ಬಿದ್ದು ಬಿದ್ದು ನಕ್ಕ ಆರತಿ; ಅಮೂಲ್ಯ ಮಾಡಿದ್ದೇನು ನೋಡಿ..!
ವೇದಾಂತ್ ಸ್ಕೆಚ್ ನೋಡಿದರೆ ಆತ ಚಿಕ್ಕಮಕ್ಕಳಂತೆ ಸ್ಕೆಚ್ ಮಾಡಿದ್ದಾನೆ. ಅದು ಅಮೂಲ್ಯ ಹಾಗೂ ಜೂನಿಯರ್‌ಗೆ ಯಾವುದೇ ರೀತಿಯಲ್ಲೂ ಹೋಲಿಕೆ ಆಗುವುದಿಲ್ಲ. ಕೋಪಗೊಂಡ ಅಮೂಲ್ಯ ವೇದಾಂತ್ ಮೇಲೆ ಹುಸಿ ಮುನಿಸು ತೋರಿಸುತ್ತ ಅವನನ್ನು ಅಟ್ಟಿಸಿಕೊಂಡು ಹೋಗಿ ಮನೆಯ ಹಾಲ್ ತುಂಬಾ ಓಡಾಡಿಸುತ್ತಾಳೆ.
ವೇದಾಂತ್ ಸ್ಕೆಚ್ ಮಾಡುತ್ತಿದ್ದಾನೆ. ಅಮೂಲ್ಯ ಹಾಗೂ ಜೂನಿಯರ್ ಚಿತ್ರ ಬಿಡಿಸುತ್ತೀನಿ ಎಂದು ಹೇಳಿ ಮಗುವನ್ನು ಅಮೂಲ್ಯ ಕೈನಲ್ಲಿ ಹಿಡಿಸಿ ನಿಲ್ಲಿಸಿಬಿಟ್ಟಿದ್ದಾನೆ ವೇದಾಂತ್. ತನ್ನ ಮತ್ತು ಪಾಪುನ (ಜೂನಿಯರ್) ಚೆಂದದ ಚಿತ್ರ ನೋಡಲು ಅಮೂಲ್ಯಾ ಕಾಯುತ್ತಿದ್ದಾಳೆ. ಆದರೆ, ಒಂದೂವರೆ ಗಂಟೆಯಿಂದ ಚಿತ್ರ ಬಿಡಿಸುತ್ತಲೇ ಇರುವ ವೇದಾಂತ್, ಅದನ್ನಿನ್ನೂ ಯಾರಿಗೂ ಡಿಸ್‌ಪ್ಲೇ ಮಾಡಿಲ್ಲ. ಆಗ ಅಲ್ಲಿಗೆ ಬಂದ ಆರತಿ, ವೇದಾಂತ್ ಹೇಳಿದರೂ ಕೇಳದೇ ಅವನು ಬಿಡಿಸುತ್ತಿರುವ ಡ್ರಾಯಿಂಗ್ ಸ್ಕೆಚ್ ನೋಡಿ ಜೋರಾಗಿ ನಗುತ್ತಾಳೆ.
ಆರತಿ ನಗುವನ್ನು ನೋಡಿ, ಅಮೂಲ್ಯಳಿಗೆ ಏನೋ ಸಂದೇಃ ಕಾಡುತ್ತದೆ. ಆದರೆ ಚಿತ್ರ ಚೆನ್ನಾಗಿದೆಯೋ ಕೆಟ್ಟದಾಗಿದೆಯೋ ಎಂಬುದು ತಕ್ಷಣಕ್ಕೆ ಹೊಳೆಯುವುದಿಲ್ಲ. ಆಗ ಆರತಿಗೆ ಜೂನಿಯರ್ ಕೊಟ್ಟು ಅಮೂಲ್ಯ ವೇದಾಂತ್ ಮಾಡಿರುವ ಸ್ಕೆಚ್ ನೋಡುವಳು. ಅದನ್ನು ನೋಡಿ ಅವಳಿಗೆ ಕೋಪ ಉಕ್ಕೇರುವುದು. ಕಾರಣ, ಸ್ಕೆಚ್‌ಗಾಗಿ ಅಮೂಲ್ಯ ತನ್ನ ಪಾಪುವನ್ನು ಕಳೆದ ಒಂದೂವರೆ ಗಂಟೆಯಿಂದ ಕೈನಲ್ಲಿ ಹಿಡಿದುಕೊಂಡು ಕೈ ನೋವು ಅನುಭವಿಸುತ್ತಿದ್ದಾಳೆ.
ವೇದಾಂತ್ ಸ್ಕೆಚ್ ನೋಡಿದರೆ ಆತ ಚಿಕ್ಕಮಕ್ಕಳಂತೆ ಸ್ಕೆಚ್ ಮಾಡಿದ್ದಾನೆ. ಅದು ಅಮೂಲ್ಯ ಹಾಗೂ ಜೂನಿಯರ್‌ಗೆ ಯಾವುದೇ ರೀತಿಯಲ್ಲೂ ಹೋಲಿಕೆ ಆಗುವುದಿಲ್ಲ. ಕೋಪಗೊಂಡ ಅಮೂಲ್ಯ ವೇದಾಂತ್ ಮೇಲೆ ಹುಸಿ ಮುನಿಸು ತೋರಿಸುತ್ತ ಅವನನ್ನು ಅಟ್ಟಿಸಿಕೊಂಡು ಹೋಗಿ ಮನೆಯ ಹಾಲ್ ತುಂಬಾ ಓಡಾಡಿಸುತ್ತಾಳೆ. ಓಡುತ್ತಾ ಓಡುತ್ತಾ ಅಮೂಲ್ಯಳ ಕೈಯಿಂದ ಪೆಟ್ಟು ತಿನ್ನುವ ವೇದಾಂತ್ ಗತಿ ಮುಂದೇನಾಗುತ್ತೆ ಎಂಬುದು ಸೀರಿಯಲ್ ಪ್ರಿಯ ವೀಕ್ಷಕರಿಗೆ ಕುತೂಹಲ ಕೆರಳಿಸುವ ಅಂಶವಾಗಿದೆ.
ಕಥೆಯಲ್ಲಿ ಮುಂದೇನಾಗುತ್ತದೆ ಎಂದು ತಿಳಿಯಲು ಇಂದು ರಾತ್ರಿ (02 ಅಕ್ಟೋಬರ್ 2023) 8-00 ಕ್ಕೆ ಜೀ ಕನ್ನಡದಲ್ಲಿ 'ಗಟ್ಟಿಮೇಳ' ಸೀರಿಯಲ್ ನೋಡಿ. ಭಾರೀ ಕುತೂಹಲ ಕಾಯ್ದುಕೊಂಡಿರುವ ಗಟ್ಟಿಮೇಳ ಧಾರಾವಾಹಿ, ವೀಕ್ಷಕರನ್ನು ತೀವ್ರವಾಗಿ ಸೆಳೆಯುತ್ತಿದ್ದು, ಟಿಆರ್‌ಪಿ ರೇಸ್‌ನಲ್ಲಿ ಕೂಡ ಮುಂದಿದೆ. ಒಟ್ಟಿನಲ್ಲಿ, 'ರಕ್ಷಿತ್ ಗೌಡ' ಮುಖ್ಯ ಭೂಮಿಕೆಯಲ್ಲಿರುವ 'ಗಟ್ಟಿಮೇಳ' ಧಾರಾವಾಹಿ ಟಿಆರ್‌ಪಿ ಯಲ್ಲಿ 'ಟಾಪ್ 10' ರಲ್ಲಿ ಖಾಯಂ ಆಗಿ ಸ್ಥಾನ ಪಡೆಯುತ್ತಿದೆ.