ಅಂದು ಅವಮಾನಿಸಿದವರು ಇಂದು ನೆನಪಿದ್ದೀನಾ ಅಂದ್ರು- ಕನ್ನಡತಿಯ ಕಿರಣ್‌ ರಾಜ್‌ ಬಿಚ್ಚಿಟ್ಟ ಕತೆ

ಕನ್ನಡತಿ ಸೀರಿಯಲ್‌ನ ಹೀರೋ ಕಿರಣ್‌ ರಾಜ್ ಇದೀಗ ಬಿಗ್‌ಬಾಸ್‌ ಮಿನಿ ಸೀಸನ್‌ನಲ್ಲಿ ತಮಗಾದ ಅವಮಾನದ ಕತೆ ಹೇಳಿಕೊಂಡಿದ್ದಾರೆ. ಅವತ್ತು ಅವಮಾನ ಮಾಡಿದವರೇ ಇವತ್ತು ಕಿರಣ್‌ ನಾನು ನೆನಪಿದ್ದೀನಾ ಅಂತ ಕೇಳಿದ್ರಂತೆ, ಅದಕ್ಕೆ ಕಿರಣ್ ಏನಂದ್ರು..

 

colors Kannada serial Kannadathi actor Kiran Raj reveals ups and downs of his life

ಕಲರ್ಸ್ ಕನ್ನಡದ ಬಿಗ್‌ಬಾಸ್‌ ಮಿನಿ ಶೋ ಕಿರುತೆರೆ ನಟ ನಟಿಯರ ಖುಷಿ, ಎನ್‌ಜಾಯ್‌ಮೆಂಟ್‌ ಜೊತೆಗೆ ಅವರು ಅನುಭವಿಸಿದ ನೋವು, ಅವಮಾನಗಳನ್ನು ತೋಡಿಕೊಳ್ಳಲೂ ವೇದಿಕೆ ಆಗುತ್ತಿದೆ. ಬಿಗ್‌ ಬಾಸ್‌ ಮಿನಿ ಶೋ ನಲ್ಲಿ ಆರಂಭದಿಂದಲೂ ತಮ್ಮ ನೇರ ಮಾತು, ವರ್ತನೆಗಳಿಂದ ಪ್ರೇಕ್ಷಕರಿಗೆ ಹತ್ತಿರವಾದವರು ಕನ್ನಡತಿ ನಟ ಕಿರಣ್‌ ರಾಜ್‌. ಅವರು ಕನ್ನಡಿಗರಾದರೂ ಹುಟ್ಟಿ ಬೆಳೆದದ್ದು ಉತ್ತರ ಭಾರತ, ಬಾಂಬೆಗಳಲ್ಲಿ. ಕನ್ನಡದ ಸೀರಿಯಲ್‌ಗಳ ನಾಯಕ ನಟನಾಗಿ ಮಿಂಚುವ ಮೊದಲು ಹಿಂದಿ ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದರು.

ಅವರು ಕನ್ನಡದ ಕಿರುತೆರೆಗೆ ಬಂದ ಆರಂಭದ ದಿನಗಳು ಸುಲಭದ್ದಾಗಿರಲಿಲ್ಲ. ಅದಕ್ಕೆ ಕಾರಣ ಅವರ ಭಾಷೆ. ಕರ್ನಾಟಕದಿಂದ ಬಹಳ ಕಾಲ ದೂರ ಇದ್ದದ್ದಕ್ಕೆ ಕನ್ನಡ ಭಾಷೆ ಸರಿಯಾಗಿ ಬರುತ್ತಿರಲಿಲ್ಲ. ಈ ಕಾರಣಕ್ಕೆ ಅವರು ಸೆಟ್‌ಗಳಲ್ಲಿ ಸಾಕಷ್ಟು ಅವಮಾನ ಅನುಭವಿಸಬೇಕಾಯ್ತು. ಈಗ ಕಿರಣ್‌ ರಾಜ್‌ ಅಂದರೆ ಕಿರುತೆರೆಯ ಹರ್ಷ ಅಂತಲೇ ಎಲ್ಲಾ ಕಡೆ ಫೇಮಸ್‌. ಅದರ ಜೊತೆಗೆ ಹಲವು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಜೊತೆಗೆ ಕೋವಿಡ್‌ ಹೆಚ್ಚಾಗಿದ್ದ ದಿನಗಳಲ್ಲಿ ಪ್ರತಿನಿತ್ಯ ನೂರಾರು ಜನರಿಗೆ ಊಟ ನೀಡುತ್ತಿದ್ದರು. ಇತರ ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ತಮ್ಮ ಬರ್ತ್ ಡೇ ಸಮಯದಲ್ಲಿ ಅಭಿಮಾನಿಗಳಿಗೆಲ್ಲ ಗಿಫ್ಟ್ ಕೊಟ್ಟು ಅವರ ಮುಖದಲ್ಲಿ ನಗು ಅರಳಿಸಿದ್ದರು. ಸೀರಿಯಲ್, ಸಿನಿಮಾ ಜೊತೆಗೆ ಮಾಡೆಲಿಂಗ್‌ನಲ್ಲೂ ಕಿರಣ್ ಬ್ಯುಸಿ ಇರ್ತಾರೆ. 

ಎದೆತುಂಬಿ ಹಾಡುವೆನು: ಉಗ್ಗು ಸಮಸ್ಯೆ ಮೆಟ್ಟಿ ಕನ್ನಡಿಗರ ಹೃದಯ ಗೆದ್ದ ಸೂರ್ಯಕಾಂತ್‌

ಅಷ್ಟಕ್ಕೂ ಆರಂಭದ ದಿನಗಳಲ್ಲಿ ಅವರಿಗಾದ ಅವಮಾನ ಎಂಥದ್ದು, ಅವರಿಗೆ ಯಾರು ಅವಮಾನ ಮಾಡಿದ್ರು ಅನ್ನೋದನ್ನು ಅವರ ಮಾತಲ್ಲೇ ಕೇಳಿ. ಇದರಲ್ಲಿ ಕಿರಣ್ ಜೊತೆಗೆ ನನ್ನರಸಿ ರಾಧೆ ಸೀರಿಯಲ್‌ನ ಹೀರೋ ಅಭಿನವ್ ಮಾತಾಡಿದ್ದಾರೆ. ಕಿರಣ್ ಮಾತುಗಳು ಹೀಗಿವೆ..
 

'ನಾನು ಶುರು ಶುರುವಿಗೆ ಬಹಳ ಉಗಿಸ್ಕೊಳ್ತಿದ್ದೆ. ಆಗ ಯಾವುದೋ ಒಂದು ಶೋ ಮಾಡ್ತಿದ್ದೆ, ಅದ್ರಲ್ಲಿ ಚೆನ್ನಾಗಿ ಬೈತಿದ್ರು. ನಾನು ನಿಮಗೂ ಹಿಂದೆ ಹೇಳಿದ್ದೆ ಅನ್ಸುತ್ತೆ ಇದನ್ನು, ನಾಲ್ಕು ಜನರ ಮುಂದೆ ಯಾವ ಕಾರಣಕ್ಕೂ ಜೋಕ್‌ ಮೆಟೀರಿಯಲ್‌ ಆಗಬೇಡಿ.  ಸೀರೀಯಲ್‌ ಸೆಟ್‌ನಲ್ಲಿ ಲೇಡೀಸ್‌ ಎಲ್ಲ ಇರ್ತಾರೆ. ಅವರೆದುರು ಆಕ್ಟ್‌ ಮಾಡೋಕೆ ನರ್ವಸ್‌ ಆಗುತ್ತೆ. ಜೊತೆಗೆ ಕನ್ನಡ ಬರ್ತಿರಲಿಲ್ಲ. ಕಲಿಯುತ್ತಿದ್ದೆ. ಡೈಲಾಗ್ ಬಾಯಿಪಾಠ ಮಾಡ್ತಿದ್ದೆ. ಅವರು ಆಗ ನೋಡಪ್ಪಾ, ರಾಜ್ಕುಮಾರ ಡೈಲಾಗ್ ಹೇಳ್ತಿದ್ದಾನೆ ಅಂದರು. ನಾನು ಬೆಳೆದದ್ದು ನಾರ್ತ್ ಇಂಡಿಯಾದಲ್ಲಿ. ಈ ಪರಿಸರದಲ್ಲೇ ಇಲ್ಲದವನಿಗೆ ಈ ಭಾಷೆ ಮಾತಾಡೋದು ಎಷ್ಟು ಕಷ್ಟ ಅಲ್ವಾ..ಅಷ್ಟೇ ಅಲ್ಲ, ಲೈಟ್ ಬಾಯ್ ಹತ್ರ, ನೋಡಪ್ಪಾ, ಹೊಸಬ ಈಗ ಆಕ್ಟಿಂಗ್‌ ಮಾಡ್ತಾನೆ, ಐವತ್ತು ರುಪಾಯಿ ಹಾಕಣಾ,, ಎಷ್ಟು ಟೇಕ್‌.. ಈ ಥರ ಇನ್‌ಸಲ್ಟ್‌ ಮಾಡುತ್ತಿದ್ದರು. ಒಂದು ರೇಂಜಲ್ಲಿ ಅದು ಯಾವ ಥರ ಟ್ರಿಗ್ಗರ್‌ ಆಯ್ತು ಅಂದ್ರೆ ಲೈಫಲ್ಲಿ ಮತ್ತೆ ಸಿಕ್ತೀನಿ ಅಂತ ಹೇಳಿದ್ದೆ. ರೀಸೆಂಟಾಗಿ ಎಲ್ಲೋ ಒಂದು ಕಡೆ ಸಡನ್ನಾಗಿ ಸಿಕ್ಕಿದ್ರು ಅವರು. 'ಕಿರಣ್, ಹೇಗಿದ್ದೀರ, ಮರ್ತು ಬಿಟ್ಟಿದ್ದೀರ ಅನ್ಸತ್ತೆ ಅಂದ್ರು. ಆದ್ರೆ ನಂಗೆ ನೆನಪಾಯ್ತು. ಆಗ ಆತ ಒಂದು ಸಿನಿಮಾ ಮಾಡ್ತಿದ್ದೀನಿ. ಸ್ವಲ್ಪ ಪ್ರಮೋಟ್ ಮಾಡಿ ಕೊಟ್ಬಿಡಿ. ಒಂದು ವೀಡಿಯೋ ಬೈಟ್ ಬೇಕಿತ್ತು ಅಂದ್ರು. 

colors Kannada serial Kannadathi actor Kiran Raj reveals ups and downs of his life

ಧರ್ಮಸ್ಥಳದಲ್ಲಿ ಬಿಗ್ ಬಾಸ್ ಮಂಜು ಪಾವಗಡ,  ಕುಟುಂಬದೊಂದಿಗೆ ಭೇಟಿ

ಈ ಥರ ತಮಗಾದ ಅವಮಾನವನ್ನು ಕಿರಣ್ ರಾಜ್ ಹಂಚಿಕೊಂಡಿದ್ದಾರೆ. ಯಾವ ಕಾರಣಕ್ಕೂ ನಟನಿಗೆ ಶುರು ಶುರುವಲ್ಲಿ ಇಂಥಾ ಅವಮಾನ ಆಗಬಾರದು, ಇದು ಕೇವಲ ಅವಮಾನ ಮಾತ್ರ ಅಲ್ಲ, ಇದು ನಟನ ಆತ್ಮವಿಶ್ವಾಸವನ್ನೇ ಕಿಲ್ ಮಾಡುತ್ತೆ ಅನ್ನೋ ಮಾತುಗಳು ಕಿರಣ್‌ ರಾಜ್‌ ಅನುಭವಕ್ಕೆ ಪ್ರತಿಕ್ರಿಯೆಯಾಗಿ ಬಂದಿವೆ. 

ಲ್ಯಾಗ್‌ ಮಂಜನ್ನ ಕಂಡ್ರೆ ದಾರೀಲಿ ಹೋಗೋರೆಲ್ಲ ನಿಲ್ಸಿ ಮಾತಾಡಿಸ್ತಾರಂತೆ!

Latest Videos
Follow Us:
Download App:
  • android
  • ios