'ಭಾಗ್ಯಲಕ್ಷ್ಮಿ' ಧಾರಾವಾಹಿಗೆ ಟ್ವಿಸ್ಟ್: ಗೊಣ್ಣೆ ತೆಗೆಯಲೂ ಬರೋಲ್ಲವೆಂದು ಮಗಳಿಗೇ ಕುಟುಕಿದ ಭಾಗ್ಯ
ಮಗಳಿಗೂ ಎದುರಾಡದೇ ಸುಮ್ಮನಿದ್ದ ಭಾಗ್ಯಲಕ್ಷ್ಮಿಯಿಂದ ನಿರಾಸೆಗೊಂಡ ಪ್ರೇಕ್ಷಕರಿಗೆ ಈಗ ಹೊಸತನ ನೀಡುತ್ತಿದೆ ಧಾರಾವಾಹಿ. ಏನದು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ ಏಳುಗಂಟೆಗೆ ಪ್ರಸಾರ ಆಗುತ್ತಿರುವ ಭಾಗ್ಯಲಕ್ಷ್ಮೀ (BhagyaLakshmi) ಸೀರಿಯಲ್ ಟಿಆರ್‌ಪಿಯಲ್ಲೂ ಮುಂದಿದೆ. ಆದರೆ ಇಷ್ಟೂ ಸಂಚಿಕೆಯಲ್ಲಿಯೂ ಭಾಗ್ಯಳನ್ನು ಅಳುಮುಂಜಿ ಪಾತ್ರದಲ್ಲಿಯೇ ನೋಡಿರೋ ಪ್ರೇಕ್ಷಕರಿಗೆ ಯಾಕೋ ಇನ್ನೂ ಅಸಮಾಧಾನ. ದಯಮಾಡಿ ಆ ಪಾತ್ರಕ್ಕೆ ಶಕ್ತಿ ತುಂಬಿ. ಖುದ್ದು ಮಗಳನ್ನೂ ಎದುರಿಸಲಾಗದ ಭಾಗ್ಯಳ ಪಾತ್ರವನ್ನು ದಯವಿಟ್ಟು ಬದಲಿಸಿ. ಭಾಗ್ಯ ಕೇವಲ ಧಾರಾವಾಹಿಯ ಹೆಣ್ಣಲ್ಲ, ಈಕೆ ಪ್ರತಿಯೊಂದು ಮನೆಯ ಗೃಹಿಣಿಯ ಪ್ರತಿರೂಪ. ಆದರೆ ಇತರ ಹಲವು ಧಾರಾವಾಹಿಗಳಿಂದ ಭಾಗ್ಯಳ ಪಾತ್ರವನ್ನೂ ಅಳುಮುಂಜಿ ಮಾಡಿಬಿಟ್ಟರೆ ಈ ಧಾರಾವಾಹಿಯ ವೀಕ್ಷಕರಿಸಿದೆ ತಲೆ ಚಿಟ್ಟು ಹಿಡಿಯುತ್ತದೆ, ಈಕೆ ಗಟ್ಟಿಯಾದರೆ ಈ ಥರ ಇರೋ ಹೆಣ್ಮಕ್ಕಳಿಗೂ ಪಾಠ ಆಗುತ್ತೆ ಅನ್ನೋ ಮಾತನ್ನು ವೀಕ್ಷಕರು ಕಳೆದ ಕೆಲವು ಸಮಯದಿಂದ ಹೇಳುತ್ತಲೇ ಬಂದಿದ್ದಾರೆ. ಈ ಕುರಿತು ಸಾಕಷ್ಟು ಕಮೆಂಟ್ಗಳು ಸಾಮಾಜಿಕ ಜಾಲತಾಣದಲ್ಲಿ (Social Media)ಹರಿದಾಡುತ್ತಲೇ ಇದೆ.
ಪ್ರೇಕ್ಷಕರಿಗೆ ಈಗ ಭಾಗ್ಯ ಗುಡ್ನ್ಯೂಸ್ (Good News) ಕೊಟ್ಟಿದ್ದಾಳೆ. ಅಳುಮುಂಜಿತನವನ್ನು ತೊರೆದು ಮಗಳ ಎದುರು ಗಟ್ಟಿಗಿತ್ತಿಯಾಗಿದ್ದಾಳೆ. ಪ್ರತಿಯೊಂದು ಮಾತಿಗೂ ಅಮ್ಮ ಪೆದ್ದು ಎಂದು ಹಂಗಿಸುವ ಮಗಳಿಗೆ ತಕ್ಕಶಾಸ್ತಿ ಮಾಡಿದ್ದಾಳೆ. ಇದರ ಪ್ರೋಮೋ ನೋಡಿ ಭಾಗ್ಯಲಕ್ಷ್ಮಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಧಾರಾವಾಹಿಗೆ ಇದರಿಂದ ಇನ್ನಷ್ಟು ಟಿಆರ್ಪಿ ಬರಲಿದೆ ಎನ್ನುತ್ತಿದ್ದಾರೆ. ಇದನ್ನು ಎಲ್ಲ ತಾಯಂದಿರೂ ಪಾಲಿಸಬೇಕು. ಈ ಧಾರಾವಾಹಿ ನೋಡಿ ಬರೀ ಗುಡ್ ಭಾಗ್ಯ ಅನ್ನೋ ಬದಲು, ನಮ್ಮ ಮಕ್ಕಳಿಗೆ ಶಿಸ್ತು (Discipline) , ಭಯ ಭಕ್ತಿಯನ್ನು ಕಲಿಸಿದರೆ ಈ ಧಾರಾವಾಹಿ ನೋಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಕಮೆಂಟಿಗರು ಹೇಳುತ್ತಿದ್ದಾರೆ. ಇನ್ನು ಕೆಲವರು ಅಮ್ಮನನ್ನು ತಿರಸ್ಕಾರ ಮಾಡುವ ಮಗಳಿಗೆ ಕಮೆಂಟ್ ಮೂಲಕ ಬುದ್ಧಿಮಾತು ಹೇಳಿದ್ದಾರೆ. ಇದು ಮನೆಮನೆಯ ನೈಜ ಕಥೆಯೇನೋ ಎನ್ನುವ ರೀತಿಯಲ್ಲಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
Bhagyalakshmi serial : ಭಾಗ್ಯ ಗಂಡನನ್ನು ಮೀರಿಸೋ ಬುದ್ಧಿವಂತೆ ಆಗ್ತಾಳ? ಅತ್ತೆ ಸೊಸೆ ಬಗ್ಗೆ ವೀಕ್ಷಕರು ಏನಂತಾರೆ?
ಹೌದು. ಇಷ್ಟೆಲ್ಲಾ ಭಾಗ್ಯಲಕ್ಷ್ಮಿ ಫ್ಯಾನ್ಸ್ ಖುಷಿ (Fans) ಪಡುವಂಥದ್ದೇನಿದೆ ಈ ವಿಡಿಯೋದಲ್ಲಿ ಎಂದು ನೋಡುವುದಾದರೆ, ಅಮ್ಮನನ್ನು ಪೆದ್ದು, ಆಕೆಗೆ ಏನೂ ಗೊತ್ತಾಗುವುದಿಲ್ಲ ಎನ್ನುತ್ತಲೇ ಇರುವ ಮಗಳ ಮಾತನ್ನು ಭಾಗ್ಯಲಕ್ಷ್ಮಿ ಇಲ್ಲಿಯವರೆಗೆ ಸಹಿಸಿಕೊಂಡಿದ್ದಾಳೆ. ಆದರೆ ಈಗ ಚಿತ್ರಣ ಬದಲಾಗಿದೆ. ಇಲ್ಲಿಯವರೆಗೆ ಒಂದು ಭಾಗ್ಯಲಕ್ಷ್ಮಿಯಾದರೆ, ಇನ್ನು ಮುಂದೆ ಈ ಅಮ್ಮನ ಇನ್ನೊಂದು ರೂಪ ನೋಡಬಹುದು. ಮಗಳಿಗೆ ಅಮ್ಮನಾಗಿ ತಾನು ಮಾಡುತ್ತಿರುವ ಕರ್ತವ್ಯಗಳ ಬಗ್ಗೆ ಮಗಳಿಗೆ ಮನದಟ್ಟಾಗುವಂತೆ ಭಾಗ್ಯ ಹೇಳುತ್ತಾಳೆ. ಅದು ಸೌಮ್ಯವಾಗಿ ಹೇಳಿದರೆ ಮಗಳಿಗೆ ಅರ್ಥವಾಗುವುದಿಲ್ಲ ಎನ್ನುವ ಕಾರಣಕ್ಕೆ ತುಸು ಕಟುವಾಗಿಯೇ ಮಗಳನ್ನು ಕುಟುಕುತ್ತಾಳೆ. ದಿನವೂ ಶಾಲೆಗೆ (School) ಹೋಗುವಾಗ ರೆಡಿ ಮಾಡುವುದು, ಅಡುಗೆ ಮಾಡುವುದು ಮಾತ್ರವಲ್ಲದೇ ಪಾಠಗಳನ್ನು ಹೇಳಿಕೊಡುವುದು, ಗಣಿತ ಸಮಸ್ಯೆಗಳನ್ನು ಬಿಡಿಸುವುದು... ಇತ್ಯಾದಿ ಕರ್ತವ್ಯ ನಿರ್ವಹಿಸುವುದೆಲ್ಲಾ ಯಾರು ಎಂದಾಗ ಮಗಳು ಬೇರೆ ವಿಧಿಯಿಲ್ಲದೇ ಸಿಟ್ಟಿನಿಂದಲೇ 'ನೀನು' ಎನ್ನುತ್ತಾಳೆ.
ಇಷ್ಟಕ್ಕೆ ಸುಮ್ಮನಾಗುವುದಿಲ್ಲ ಭಾಗ್ಯ. ಮಗಳ ವಯಸ್ಸಿನಲ್ಲಿ ತಾನಿದ್ದಾಗ ಇಡೀ ಕುಟುಂಬದ ಜವಾಬ್ದಾರಿಯನ್ನು ಹೇಗೆ ಹೊತ್ತಿದ್ದೆ, ಮನೆಯನ್ನು ಹೇಗೆ ನೋಡಿಕೊಂಡಿದ್ದೆ. ತಂಗಿಯನ್ನೂ ಹೇಗೆ ನಿಭಾಯಿಸಿದ್ದೆ ಎಂದೆಲ್ಲಾ ಮಗಳ ಮನಸ್ಸಿಗೆ ನಾಟುವಂತೆ ಹೇಳುತ್ತಾಳೆ, ಆದರೆ ಮಗಳು ಇನ್ನೂ ಕನಿಷ್ಠ ಕೆಲಸವೂ ಬರುವುದಿಲ್ಲ, ಎಲ್ಲ ಕೆಲಸಗಳಿಗೂ ಅಪ್ಪ-ಅಮ್ಮನನ್ನೇ ಅವಲಂಬಿಸಿರುವ ಬಗ್ಗೆಯೂ ಹೇಳಿದಾಗ ಅಳುತ್ತಲೇ ಇರುವ ಮಗಳಿಗೆ ಅಮ್ಮನ ಮಾತುಗಳು ನಾಟುವುದನ್ನು ನೋಡಬಹುದು. ಅಷ್ಟೇ ಅಲ್ಲದೇ ಎಲ್ಲರಿಗೂ ತುಂಬಾ ಇಷ್ಟವಾಗುವ ಮಾತು ಭಾಗ್ಯಳ ಬಾಯಿಯಿಂದ ಬರುತ್ತದೆ, ಅದೇನೆಂದರೆ ನೀನು ನನ್ನನ್ನು ನೋಡಿಕೊಂಡ ಹಾಗೆ ನಾಳೆ ನಿನ್ನ ಮಗಳೂ ನಿನಗೆ ಮಾಡಬಹುದು ಎನ್ನುವ ಮಾತದು.
Bhagya Lakshmi Serial: ಮಗನಿಗೆ ಸವಾಲು ಹಾಕಿ ಸೊಸೆ ಬೆಂಬಲಕ್ಕೆ ನಿಂತ ಕುಸುಮಾ
ಈ ಪ್ರೋಮೋ (Promo) ನೋಡಿ ನೆಟ್ಟಿಗರು ಥಹರೇವಾರಿ ಕಮೆಂಟ್ ಮಾಡುತ್ತಿದ್ದು, ಇನ್ನು ಮುಂದೆ ಭಾಗ್ಯಲಕ್ಷ್ಮಿ ಧಾರಾವಾಹಿಗೆ ಇನ್ನಷ್ಟು ಅರ್ಥ ಬರುತ್ತದೆ. ಅತ್ತೆ- ಸೊಸೆಯ ಪ್ರೀತಿಯ ಸಂಬಂಧವನ್ನು ನೋಡಿ ಧಾರಾವಾಹಿಗೆ ಮನಸೋತ ಪ್ರೇಕ್ಷಕರು ಇನ್ನು ಮುಂದೆ ಭಾಗ್ಯಲಕ್ಷ್ಮಿಯನ್ನು ಅಳುಮುಂಜಿ ಪಾತ್ರದ ಹೊರತಾಗಿಯೂ ನೋಡುವುದಕ್ಕೆ ಖುಷಿಯಾಗುತ್ತಿದೆ ಎನ್ನುತ್ತಿದ್ದಾರೆ.