Bhagyalakshmi serial : ಭಾಗ್ಯ ಗಂಡನನ್ನು ಮೀರಿಸೋ ಬುದ್ಧಿವಂತೆ ಆಗ್ತಾಳ? ಅತ್ತೆ ಸೊಸೆ ಬಗ್ಗೆ ವೀಕ್ಷಕರು ಏನಂತಾರೆ?

ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಅತ್ತೆ ಕುಸುಮಾ ಸೊಸೆ ಭಾಗ್ಯಳಿಗೆ ಬೆನ್ನುಲುಬಾಗಿ ನಿಂತಿದ್ದಾಳೆ. ಅವಳನ್ನು ಓದಿಸಿ ಎಲ್ಲದರಲ್ಲೂ ಜಾಣೆ ಮಾಡೋದಾಗಿ ಕುಸುಮ ಹೇಳ್ತಿದ್ದಾಳೆ. ಕುಸುಮಾಳನ್ನು ಓದಿಸಿ ತನ್ನ ಮಗ ತಾಂಡವ್‌ ಮೀರಿಸೋ ಬುದ್ಧಿವಂತೆ ಮಾಡ್ತಾಳ ಕುಸುಮಾ?

Colors Kannada serial bhagyalakshmi to be intelligent than husband story updates

'ಕನ್ನಡತಿಯಲ್ಲಿ ಅಮ್ಮಮ್ಮ, ಇಲ್ಲಿ ಕುಸುಮ ಅಮ್ಮ.ಕನ್ನಡತಿ ನಿರ್ದೇಶಕರಾದ ಯಶವಂತ್ ಪಾಂಡು ಅವರ ನಿರ್ದೇಶನ ಅಂದ್ರೆ ಹಾಗೆ ಅಲ್ಲಿ ಅತ್ತೆ ಸೊಸೆ ಜಗಳ ಇರಲ್ಲ. ಬದಲಾಗಿ ಪ್ರೇರಿ ಪಾತ್ಸಲ್ಯ ತುಂಬಿರುತ್ತೆ ಅನ್ನೋದಕ್ಕೆ ಇನ್ನೊಂದು ಉದಾಹರಣೆ ಭಾಗ್ಯಲಕ್ಷ್ಮಿ. ಎಷ್ಟೇ ಅಂದ್ರು ಯಶವಂತ್ ಅವರು ಸೀತಾರಾಮ್ ಅವರ ಗರಡಿಯಿಂದ ಬಂದವರು ಅಲ್ಲವೇ? ಅತ್ತೆ ಪಾತ್ರದಲ್ಲಿ ಪದ್ಮಜಾ ರಾವ್ ಅವರ ಅಭಿನಯ ಒಂದು ಮೈಲುಗಲ್ಲು ಅಂತಲೇ ಹೇಳಬಹುದು. ಆ ಪಾತ್ರಕ್ಕೆ ಬೆರೆಯವರನ್ನ ಕಲ್ಪನೆ ಕೂಡ ಮಾಡಿಕೊಳ್ಳಲೂ ಸಾಧ್ಯ ಇಲ್ಲದಷ್ಟು ಅದ್ಭುತ ಅಭಿನಯ ನೀಡಿದ್ದಾರೆ. ಪದ್ಮಜಾ ರಾವ್ ನಿಮ್ಮ ನಟನೆಗೆ ಹ್ಯಾಟ್ಸಾಪ್.'

'ಈಗ ಭಾಗ್ಯ 10ನೇ ತರಗತಿ ಸಾವಲಾಗಿ ತಗೊಂಡು ಪಾಸ್ ಮಾಡಬೇಕು. ಅವಳ ಮಗಳ 9ನೇ ತರಗತಿ ಮುಗಿತಿದೆ. SSLC ಎಕ್ಸಾಮ್‌ ಹೊತ್ತಿಗೆ ಅವಳು ಬರ್ತಾಳೆ. ಇಬ್ಬರು ಕಾಂಪಿಟೇಷನ್ ಮಾಡಬೇಕು ಅವಾಗ ತನ್ವಿ ಫೇಲ್ ಆಗ್ಬೇಕು.. ಭಾಗ್ಯ ಪಾಸ್ ಆಗ್ಬೇಕು ಚೆನ್ನಾಗಿರುತ್ತೆ. ಅವಾಗ ಯಾರು ದಡ್ಡಿ ಅಂತ ಗೊತ್ತಾಗುತ್ತೆ.'

.. ಇವೆಲ್ಲ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ 'ಭಾಗ್ಯಲಕ್ಷ್ಮೀ' ಸೀರಿಯಲ್‌ಗೆ ಬರ್ತಿರೋ ಕಮೆಂಟ್‌ಗಳ ಸ್ಯಾಂಪಲ್‌. ಈ ಸೀರಿಯಲ್‌ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಲೇ ಇದೆ. ಇದಕ್ಕೆ ಹೆಚ್ಚೆಚ್ಚು ಪ್ರತಿಕ್ರಿಯೆಗಳು ಹರಿದು ಬರುತ್ತಲೇ ಇವೆ. ಟಿಆರ್‌ಪಿಯಲ್ಲೂ (TRP) ಈ ಸೀರಿಯಲ್ ಟಾಪ್‌ ಐದರಲ್ಲಿ ಒಂದಾಗಿ ಗುರುತಿಸಿಕೊಳ್ಳುತ್ತಲೇ ಇದೆ. ಇದರ ಕಥೆ, ಚಿತ್ರಕಥೆ, ಅದನ್ನು ಸೀರಿಯಲ್‌ಗೆ ಅಳವಡಿಸಿರೋ ರೀತಿ, ಜೊತೆಗೆ ಉತ್ತಮ ಡೈರೆಕ್ಷನ್ ಟೀಮ್ ಎಲ್ಲವೂ ಬಹುಶಃ ಈ ಸೀರಿಯಲ್‌ ಅನ್ನು ಹೆಚ್ಚೆಚ್ಚು ಇಂಟರೆಸ್ಟಿಂಗ್ ಮಾಡ್ತಿದೆಯೇನೋ. ಇದೀಗ ಈ ಸೀರಿಯಲ್ ಮತ್ತೊಂದು ತಿರುವಿಗೆ ಹೊರಳಿಕೊಳ್ಳುತ್ತಿದೆ.

Bhagya Lakshmi Serial: ಮಗನಿಗೆ ಸವಾಲು ಹಾಕಿ ಸೊಸೆ ಬೆಂಬಲಕ್ಕೆ ನಿಂತ ಕುಸುಮಾ

ಇಲ್ಲೀವರೆಗೆ ಗಂಡ ತಾಂಡವ್‌ ಕಣ್ಣಲ್ಲಿ ಗುಗ್ಗು ಅಂತ, ಮಗಳು ತನ್ವಿ ಕಣ್ಣಲ್ಲಿ ಪೆದ್ದಿ ಅಂತೆಲ್ಲ ಕರೆಸಿಕೊಳ್ಳುವ ಭಾಗ್ಯಳ ಸಪೋರ್ಟ್‌ಗೆ (Support) ಅತ್ತೆ ಕುಸುಮಾ ನಿಂತಿದ್ದಾಳೆ. ಭಾಗ್ಯ ಓದಲ್ಲ, ಬರೆಯೋಕೆ ಬರಲ್ಲ, ಜಾಗತಿಕ ಸಮಸ್ಯೆಗಳು (Global Issues) ಅವಳಿಗೆ ಗೊತ್ತಿಲ್ಲ. ಭಾಗ್ಯಗೆ ಇಂಗ್ಲಿಷ್‌ನ ಒಂದು ಪದವೂ ಗೊತ್ತಿಲ್ಲ. ಅವಳ ಹೇರ್‌ಸ್ಟೈಲ್‌ (Hairstyle) ಚೆನ್ನಾಗಿಲ್ಲ, ಯಾವಾಗಲೂ ಹರಳೆಣ್ಣೆ ಹಾಕಿಕೊಂಡು ಕೂದಲು ಬಾಚುತ್ತಾಳೆ. 365 ದಿನವೂ ಅವಳು ಸೀರೆ ಉಡ್ತಾಳೆ, ಸೀರೆಯನ್ನು ಸರಿಯಾಗಿ ಹಾಕಿಕೊಳ್ಳೋಕೆ ಬರಲ್ಲ. ಅತ್ತೆ-ಮಾವನ ಮುದ್ದಿನ ಸೊಸೆ ಭಾಗ್ಯಳ ಮೇಲೆ ಅವಳ ಗಂಡ ಮತ್ತು ಮಗಳು ಮಾಡಿರುವ ಕಂಪ್ಲೇಂಟ್ಸ್ (Complaints) ಇವು. ನಾನು ಅಂದುಕೊಂಡ ಕನಸಿನ ಹೆಂಡ್ತಿ (Dream Wife) ಇವಳಲ್ಲ ಅಂತ ತಾಂಡವ್‌ ಸದಾ ಭಾಗ್ಯಗೆ ಬೈಯುತ್ತಾನೆ. ಮಗ ತಾಂಡವ್‌ ತನ್ನ ಸೊಸೆಯನ್ನು ಹಂಗಿಸುತ್ತಾನೆ, ತನ್ನ ಮಗನಿಂದಲೇ ಭಾಗ್ಯಲಕ್ಷ್ಮೀ ಅವಮಾನಕ್ಕೆ ಒಳಗಾಗುತ್ತಾಳೆ. ತಾನೇ ಭಾಗ್ಯಳನ್ನ ತನ್ನ ಮಗನಿಗೆ ಮದುವೆ ಮಾಡಿರುವ ಕುಸುಮಾ ಭಾಗ್ಯಗೆ ಶಿಕ್ಷಣ(Education) ಕೊಡಿಸಲು ಮುಂದಾಗಿದ್ದಾಳೆ.

ಮುಂದಿನ ಸಂಚಿಕೆಗಳೆಲ್ಲ ಆ ಕತೆಯ ಹಿನ್ನೆಲೆಯಲ್ಲೇ ಸಾಗುತ್ತವೆ. ಈ ಬಗ್ಗೆ ಪ್ರೋಮೋಗಳು(Program) ಕಳೆದ ವಾರದಿಂದ ಪ್ರಸಾರವಾಗುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಗಳೂ ಹರಿದು ಬರುತ್ತಿವೆ. ಇಲ್ಲಿವರೆಗೆ ಅತ್ತೆ, ಮಾವ, ಗಂಡ, ಮಕ್ಕಳೇ ತನ್ನ ಪ್ರಪಂಚ (World) ಅಂದುಕೊಂಡಿರುವ ಭಾಗ್ಯಳನ್ನು ತೋರಿಸುತ್ತಿದ್ದರು. ಮುಂದಿನ ದಿನಗಳಲ್ಲಿ ಭಾಗ್ಯ ಇನ್ನಷ್ಟು ಸ್ಟ್ರಾಂಗ್‌ ಆಗ್ತಾಳ, ಪೆದ್ದಿ, ಗುಗ್ಗು ಅಂತೆಲ್ಲ ಕರೆಸಿಕೊಳ್ಳುತ್ತಿದ್ದಳು ದೊಡ್ಡ ಸಾಧಕಿಯಾಗಿ ಸಾಧನೆ ಮಾಡ್ತಾಳ ಅನ್ನೋದನ್ನು ಕಾದು ನೋಡಬೇಕಿದೆ. ಭಾಗ್ಯ ಪಾತ್ರದಲ್ಲಿ ಸುಷ್ಮಾ ಕೆ ರಾವ್, ಕುಸುಮಾ ಪಾತ್ರದಲ್ಲಿ ಪದ್ಮಜಾ ರಾವ್, ತಾಂಡವ್ ಸೂರ್ಯವಂಶಿ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್, ಶ್ರೇಷ್ಠ ಪಾತ್ರದಲ್ಲಿ ಕಾವ್ಯಾ ಗೌಡ ನಟಿಸುತ್ತಿದ್ದಾರೆ.

ರಾಮಾಚಾರಿ ಸೀರಿಯಲ್‌ನಲ್ಲಿ ನುಗ್ಗೇಕಾಯಿ ಜಗಳ, ಎರಡನೇ ಒಲೆ ಹೊತ್ತಿಸಿದ ವೈಶಾಖ!

Latest Videos
Follow Us:
Download App:
  • android
  • ios