ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಸೀತಾ ವಲ್ಲಭ' ಶಾಶ್ವತವಾಗಿ ಮುಕ್ತಾಯವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ 500 ಸಂಚಿಕೆಗಳನ್ನು ಯಶಸ್ವಿಯಾಗಿ ಮುಗಿಸಿದ್ದ  ಧಾರಾವಾಹಿಯ ಕಥೆಯನ್ನು  ಮೆಚ್ಚಿಕೊಂಡಿರುವ ಅಭಿಮಾನಿಗಳು ತಮ್ಮ ನೆಚ್ಚಿನ ಪಾತ್ರಧಾರಿಗಳಿಗೆ ಮೆಸೇಜ್‌ ಮಾಡಿ ಪ್ರಶ್ನಿಸುತ್ತಿದ್ದಾರೆ.

ನಟಿ ಅಮೂಲ್ಯ ಸಹೋದರಿ ಈಗ ಕಿರುತೆರೆಯ ಖ್ಯಾತ ನಟಿ; ಯಾರು ಗೊತ್ತಾ?

ಜನ ಮೆಚ್ಚಿದ ಜೋಡಿ:

ವರ್ಷದ ಜನ ಮೆಚ್ಚಿದ ಜೋಡಿ ಅವಾರ್ಡ್ ಪಡೆದುಕೊಂಡಿದ್ದ  ಮೈಥಿಲಿ ಅಲಿಯಾಸ್‌ ಸುಪ್ರೀತಾ ಸತ್ಯನಾರಾಯಣ್ ಹಾಗೂ ಆರ್ಯ ಅಲಿಯಾಸ್ ಜಗನ್ ಚಂದ್ರಶೇಖರ್‌ ಆನ್‌ ಸ್ಕ್ರೀನ್ ಕೆಮಿಸ್ಟ್ರಿಯನ್ನು ವೀಕ್ಷಕರು ಮಿಸ್ ಮಾಡಿಕೊಳ್ಳುವುದರಲ್ಲಿ ಅನುಮಾವಿಲ್ಲ. ಕೆಲ ದಿನಗಳ ಹಿಂದೆ 500 ಎಪಿಸೋಡ್‌ ಪ್ರಸಾರ ಪೂರೈಸಿದ ಸಂಭ್ರಮ ಆಚರಸಿತ್ತು.  ಧಾರಾವಾಹಿಯಲ್ಲಿ ನಟಿಸಿದ ಅನುಭವದ ಬಗ್ಗೆ ಸುಪ್ರೀತಾ ಬರೆದುಕೊಂಡಿದ್ದಾರೆ.

'ನೀವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಕ್ಷಣ ಈಗ ಬಂದಿದೆ. ಆರ್ಯ ಹಾಗೂ ಮೈಥಿಲಿ ಒಂದಾಗಿದ್ದಾರೆ. ಟ್ವಿಸ್ಟ್‌ ಇಲ್ಲದಿದ್ದರೆ ಅದು ಕಥೆಯೇ ಅಲ್ಲ ಅಲ್ವಾ? ದಯವಿಟ್ಟು ಮಿಸ್ ಮಾಡದೆ ಸೀತಾವಲ್ಲಭ  ಈ ಸಂಚಿಕೆಯನ್ನು ರಾತ್ರಿ 8.30ಕ್ಕೆ ತಪ್ಪದೇ ವೀಕ್ಷಿಸಿ. ಧಾರಾವಾಹಿಯನ್ನು ವೀಕ್ಷಿಸುತ್ತಾ ನಮ್ಮಲ್ಲೇ ಒಬ್ಬರಾಗಿದ್ದ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿಯಿಂದಲೇ ನಾವು 500 ಸಂಚಿಕೆಯನ್ನು ಪೂರೈಸಿದ್ದು  ಎಂದು ಬರೆದುಕೊಂಡಿದ್ದಾರೆ.

'ಶನಿ' ತಂಗಿ ಯಮಿ ಪಾತ್ರಧಾರಿ ಶ್ವೇತಾ ಖೇಳ್ಗೆ; 'ಇದೇ ಅಂತರಂಗ ಶುದ್ಧಿ'ಯಲ್ಲಿ ಬ್ಯುಸಿಯಾಗಿದ್ದಾರೆ!

 

ಕಥೆ ಏನು?

ಪಕ್ಕಾ ಮಹಿಳಾ ಪ್ರಧಾನ ಕಥೆಯಾಗಿದ್ದ 'ಸೀತಾ ವಲ್ಲಭ'. ಅಚ್ಚು-ಗುಬ್ಬಿ ಸ್ನೇಹದ ಬಗ್ಗೆ ತೋರಿಸಲಾಗಿತ್ತು, ದೊಡ್ಡವರಾದ ಮೇಲೆ ಮೈಥಿಲಿ -  ಆರ್ಯ ಪ್ರೀತಿ ಬಗ್ಗೆ ಹೇಳಲಾಗಿದ್ದು ಈ ನಡುವೆ ತಂದೆ-ತಾಯಿ ಹಾಗೂ ಸಹೋದರರ ಪ್ರೀತಿ ಸಂಬಂದ ಬಗ್ಗೆ ಕಥೆ ಹೆಣೆಯಲಾಗಿತ್ತು.