ಸಣ್ಣಗಿದ್ದರೂ ದಪ್ಪಗಾದರೂ ಸೀರೆ ಧರಿಸಬಹುದು; ಸೀರೆ ಮಹತ್ವ ಸಾರಿದ ರಾಮಚಾರಿ ಧಾರಾವಾಹಿ!
ಮಾಡ್ರನ್ ಚಾರುಲತಾ ಮೈಂಡ್ ಸೆಟ್ ಬದಲಾಯಿಸಲು ಮುಂದಾದ ರಾಮಚಾರಿ. ಸೀರೆ ಧರಿಸುತ್ತಾಳಾ ಚಾರು?
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ (Ramachari) ಧಾರಾವಾಹಿಯಲ್ಲಿ ದಿನೇ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ಹಠಮಾರಿ ಚಾರು, ಶಾಂತ ಸ್ವಭಾವಿ ರಾಮಚಾರಿ ಕಾಂಬಿನೇಷನ್ ಸೂಪರ್ ಹಿಟ್ ಆಗಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆಯುತ್ತಿದೆ. ತಂದೆ ಸವಾಲಿಗೆ ರಾಮಚಾರಿ ಮನೆಯಲ್ಲಿರುವ ಚಾರು ಮಾಡ್ರನ್ ಡ್ರೆಸ್ ಧರಿಸುತ್ತಿರುವುದಕ್ಕೆ ಮನೆಯ ಹೆಣ್ಣು ಮಕ್ಕಳು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಹೀಗಾಗಿ ಹೆಂಗಸರು ಸೇರಿಕೊಂಡು ಚಾರು ಗುಣ ಬದಲಾಯಿಸುವುದಕ್ಕೆ ಮುಂದಾಗಿದ್ದಾರೆ.
'ನಮ್ಮ ಮನೆ ಸಂಸ್ಕಾರ ಸೀರೆಯಲ್ಲಿದೆ ಹೊರತು ನೀನು ಧರಿಸುವ ತುಂಡು ಬಟ್ಟೆಯಲ್ಲಿ ಅಲ್ಲ'ಎಂದು ರಾಮಚಾರಿ ತಾಯಿ ಹೇಳುತ್ತಾರೆ. 'ನಾನು ಧರಿಸುವುದು ಬ್ರ್ಯಾಂಡ್ ಬಗ್ಗೆ ನೀವು ಧರಿಸುವ ಸೀರೆಗಿಂತ ದುಬಾರಿ. ನಿಮಗೆ ನನ್ನ ರೀತಿ ಫಿಸಿಕ್ ಮತ್ತು ಫಿಗರ್ ಇಲ್ಲ. ಅಸಹ್ಯವಾಗಿ ಬಾಡಿ ಮೇನ್ಟೈನ್ ಮಾಡಿದ್ದೀರಾ ಅದನ್ನು ಮುಚ್ಚಿಕೊಳ್ಳುವುದಕ್ಕೆ ಸೀರೆ ಧರಿಸಿದ್ದೀರಾ. ಹುಟ್ಟಿದಾಗಿನಿಂದಲೂ ನಾನು ಬ್ಯೂಟಿ ಅದಿಕ್ಕೆ ಹೀಗಿ ಇರುವುದು. ನಿಮ್ಮ ಸೊಸೆ ನೋಡಿ ಹಾವು ಹೊಡೆಯುವ ಕೋಲು ರೀತಿ ಇದ್ದಾಳೆ ಅದಿಕ್ಕೆ ಮೈ ತುಂಬಾ ಸೀರೆ ಇಷ್ಟ ಪಡುತ್ತಾಳೆ. ನಿಮ್ಮ ವೀಕ್‌ನೆಸ್ ಮುಚಿಕೊಳ್ಳುವುದಕ್ಕೆ ಸೀರಿ ಅದನ್ನು ಕವರ್ ಮಾಡುವುದಕ್ಕೆ ಸಂಸ್ಕಾರ ಅನ್ನುವ ಪದ ಕೊಡುತ್ತೀರಾ' ಎಂದು ಚಾರುಲತಾ ಹೇಳುತ್ತಾರೆ.
'ಆ ಸೀರೆಗೆ ಇರುವ ಯೋಗ್ಯತೆ ನಿಮ್ಮ ತುಂಡು ಬಟ್ಟೆಗೆ ಬರಲು ಸಾಧ್ಯವಿಲ್ಲ. ಮೈಗೆ ಬಟ್ಟೆ ಹಾಕುವುದು ತಾಪ ಮತ್ತು ಉಷ್ಣತೆಯಿಂದ ದೇಹವನ್ನು ಕಾಪಾಡುವುದಕ್ಕೆ ಅಲಂಕಾರ ಮಾಡಿಕೊಳ್ಳುವುದಕ್ಕೆ ಅಲ್ಲ. ದೇಹನ ಮುಚ್ಚುವ ಬಟ್ಟೆ ಆಗಿದ್ದರೆ ಸಾಕು. ಮುಚ್ಚೋ ದೇಹವನ್ನು ವಾತಾವರಣಕ್ಕೆ ಬಿಟ್ಟರೆ ಅನಾರೋಗ್ಯ ಹುಡುಕಿಕೊಂಡು ಬರುತ್ತದೆ. ನಿಮ್ಮ ಡ್ರೆಸ್ ಇವತ್ತು ಹಾಕಿ ನಾಳೆ ದಪ್ಪ ಆಯ್ತು ಅಂತ ಮೂಲೆಗೆ ಎಸೆಯುತ್ತೀರಾ, ಸಣ್ಣ ಆದ ಮೇಲೆ ಲೂಸ್ ಆಯ್ತು ಅಂತ ಎಸೆಯುತ್ತೀರಾ. ಕೊನೆಗೆ ಅದರ ಸ್ಥಾನ ಮೂಲೆನೇ' ಎಂದು ರಾಮಚಾರಿ ಹೇಳುತ್ತಾನೆ.
ಮಂತ್ರ ಹೇಳ್ಬೇಕಾಗುತ್ತೆ ಅಂತ ನಾನ್‌ವೆಜ್ ಬಿಟ್ರಂತೆ ಋತ್ವಿಕ್: ಕಂಡಹಾಗಲ್ಲ ಈ ರಾಮಾಚಾರಿ ಹೀರೋ!
'ಸೀರೆ ಹಾಗಲ್ಲ ಮೇಡಂ, ಇವತ್ತು ತೆಗೆದುಕೊಳ್ಳುತ್ತೀರಾ ಇವತ್ತು ಹಾಕುತ್ತೀರಾ 10 ದಿನ ಬಿಟ್ಟು ಹಾಕುತ್ತೀರಾ 10 ವರ್ಷ ಬಿಟ್ಟು ಹಾಕುತ್ತೀರಾ. ದಪ್ಪ ಆದರೂ ಹಾಕುತ್ತೀರಾ ಸಣ್ಣಗಾದರೂ ಹಾಕುತ್ತೀರಾ. ನನ್ನ ಅಜ್ಜಿ ಧರಿಸಿರುವುದು ಅವರ ಮುತ್ತಜ್ಜಿ ಕೊಟ್ಟಿರುವ ಸೀರೆ, ಅಮ್ಮ ಧರಿಸಿರುವುದು ಅಜ್ಜಿ ಕೊಟ್ಟ ಸೀರೆ, ಅತ್ತಿಗೆ ಧರಿಸಿರುವುದು ಅಮ್ಮ ಕೊಟ್ಟ ಸೀರೆ, ನನ್ನ ತಂಗಿ ಧರಿಸಿರುವ ಚೂಡಿದಾರವನ್ನು ಅಮ್ಮ ಸೀರೆಯಿಂದ ಮಾಡಿರುವುದು. ತಲ ತಲಾಂತರದಿಂದ ಸೀರೆ ಜೊತೆಗೆ ಪ್ರೀತಿನೂ ಬರುತ್ತೆ. ಅದು ನಮ್ಮ ಸಂಸ್ಕೃತಿ. ಸೀರೆನ ನಾವು ಹಾಕಬೋದು ಬೇರೆ ಅವರಿಗೂ ಕೊಡಬಹುದು. Use and Throw ಕಲ್ಚರ್ ಸರಿ ಇಲ್ಲ. ನಿಮಗೆ ಅದು ಸಂಸ್ಕಾರ ಹೇಳಿಕೊಳ್ಳುವುದಿಲ್ಲ'ಎಂದಿದ್ದಾನೆ ರಾಮಚಾರಿ.
'ಸೀರೆ ತೊಟ್ಟರೆ ಸೀರೆ, ಹೊದಿಕೊಂಡರೆ ಕಂಬಳಿ, ಹಾಸಿದರೆ ಬೆಡ್ ಶೀಟ್ ಆಗುತ್ತೆ. ಚಿಕ್ಕ ವಯಸ್ಸಿನಲ್ಲಿ ತಾಯಂದಿರು ಮಕ್ಕಳಿಗೆ ಟವಲ್ ಅಗುತ್ತೆ ಖರ್ಚೀಫ್ ಅಗುತ್ತೆ. ಸೀರೆ ಬಾರ್ಡರ್ ಸುತ್ತಿ ಕಿವಿಗೆ ಇಟ್ಟರೆ ನ್ಯಾಚುರಲ್ ear buds ಆಗುತ್ತೆ. ಮಕ್ಕಳನ್ನು ತೂಗುವ ಜೋಕಾಲಿ ಆಗುತ್ತೆ, ಮಡಿಲು ತುಂಬುವ ಗಂಟು ಆಗುತ್ತೆ, ತಾಯಿ ನೆನಪಿನ ನಂಟು ಆಗುತ್ತೆ. ಎಲ್ಲರಿಗೂ ಸಲ್ಲುವ ಸೀರೆ ಸಂಸ್ಕಾರ ನಿಮ್ಮ ಡ್ರೆಗೆ ಸಿಗುತ್ತೆ? ವೀಕ್ ನೆಸ್‌ನ ಮುಚ್ಚಿಡುತ್ತಾ? ಸೀರೆ ನಮ್ಮ ಭಾರತದ ಗ್ರೇಟ್‌ನೆಸ್ ತೋರಿಸುವ ಸಾಂಸ್ಕೃತಿಕ ಸಂಕೇತ. ಮುತ್ತೈದೆಯರ ಬಾಗೀಣದ ಬಂದು, ಹಬ್ಬದ ಸಂಭ್ರಮದ ಫ್ರೆಂಡು, ಸೀರೆ ಸೆರಗು ಕಟ್ಟಿದ್ದರೆ ಕಿತ್ತೂರು ರಾಣಿ ಚೆನ್ನಮ್ಮ ಸೀರೆ ಸೆರಗು ಬಿಟ್ಟರೆ ಅಲ್ಲಿ ಕಾಣಿಸುತ್ತಿರುವ ನನ್ನ ಅಮ್ಮ' ಎಂದು ರಾಮಚಾರಿ ಸೀರೆ ಮಹತ್ವ ಹೇಳುತ್ತಾನೆ.