ಮಂತ್ರ ಹೇಳ್ಬೇಕಾಗುತ್ತೆ ಅಂತ ನಾನ್‌ವೆಜ್ ಬಿಟ್ರಂತೆ ಋತ್ವಿಕ್: ಕಂಡಹಾಗಲ್ಲ ಈ ರಾಮಾಚಾರಿ ಹೀರೋ!
ದೇವಿ, ದೇವರ ಪಾತ್ರ ಮಾಡುವ ನಟ ನಟಿಯರು ಮಾಂಸಾಹಾರ ಬಿಡೋದನ್ನು ನೋಡಿದ್ದೇವೆ. ಆದರೆ ಈಗ ರಾಮಾಚಾರಿ ಸೀರಿಯಲ್ ಹೀರೋ ಋತ್ವಿಕ್ ಕೃಪಾಕರ್ ತನ್ನ ಪಾತ್ರಕ್ಕಾಗಿ ನಾನ್‌ವೆಜ್ಜು ತ್ಯಾಗ ಮಾಡಿದ್ದಾರೆ. ಡೆಡಿಕೇಶನ್ ಅಂತ ಬಂದ್ರೆ ಇವ್ರನ್ನ ಮೀರಿಸೋಕ್ಕಾಗಲ್ಲ ಅಂತಿದ್ದಾರೆ ಋತ್ವಿಕ್ ಫ್ಯಾನ್ಸ್.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರ ಆಗ್ತಿರೋ ಸಖತ್ ಪಾಪ್ಯುಲರ್ ಸೀರಿಯಲ್ 'ರಾಮಾಚಾರಿ' (Ramachari). ಬೇರೆಲ್ಲ ಸೀರಿಯಲ್ ಕತೆಗಳು ಹೆಣ್ಣಿನ ಕಷ್ಟ, ನೋವು, ಪ್ರೀತಿಯ ಸುತ್ತ ಸುತ್ತುತ್ತಿದ್ರೆ ಈ ಸೀರಿಯಲ್ ಪಕ್ಕಾ ಗಂಡು ಸೀರಿಯಲ್. ಅಂದರೆ ಸಂಪ್ರದಾಯಸ್ಥ ಬ್ರಾಹ್ಮಣ (Brahmin) ಮನೆತನದ ಹುಡುಗ ತನ್ನೆಲ್ಲ ಕಷ್ಟ ಸವಾಲುಗಳನ್ನು ಮೀರಿ ಹೇಗೆ ಸಾಧನೆ ಮಾಡ್ತಾನೆ ಅನ್ನೋದರ ಬಗ್ಗೆ ಇರುವಂಥದ್ದು. ಈ ಸೀರಿಯಲ್‌ನಲ್ಲಿ ರಾಮಾಚಾರಿ ಪಾತ್ರ ಮಾಡ್ತಿರೋದು ಋತ್ವಿಕ್ ಕೃಪಾಕರ್. ಸೀರಿಯಲ್‌ನಲ್ಲಿ ಇವರು ಮಾಡುವ ಪಾತ್ರದ್ದು ಒಂದು ಕತೆ ಆದರೆ ರಿಯಲ್ ಲೈಫ್‌ನಲ್ಲಿ ಇವ್ರದ್ದು ಮತ್ತೊಂದು ಕತೆ.
ಚಿಕ್ಕ ವಯಸ್ಸಿಂದಲೇ ಮಾಡೆಲಿಂಗ್‌ನಲ್ಲಿ (Modelling) ಗುರುತಿಸಿಕೊಂಡಿದ್ದ ಋತ್ವಿಕ್ (Ritvik Krupakar) ಒಂದು ಹಂತದಲ್ಲಿ ಕೊಂಚ ಹೆಚ್ಚೇ ದಪ್ಪ ಆದ್ರು. ಒಂದು ಹಂತದಲ್ಲಿ ತೂಕ ನೂರಾರು ಕೆಜಿಗೆ ಏರಿಕೆಯಾಯ್ತು. ಆದರೆ ನನ್ನ ಭವಿಷ್ಯ ಇರೋದೇ ನಟನೆಯಲ್ಲಿ. ನಾನು ಏನೇ ಸಾಧನೆ ಮಾಡೋದಿದ್ರೂ ಈ ಫೀಲ್ಡ್‌ನಲ್ಲೇ ಮಾಡೋದು ಅಂದುಕೊಂಡು ತೂಕ ಇಳಿಸೋಕೆ ಮುಂದಾಗ್ತಾರೆ. ಮುಂದೆ ಕಲರ್ಸ್ ಕನ್ನಡದ 'ರಾಮಾಚಾರಿ' ಸೀರಿಯಲ್ ಆಡಿಶನ್ ನಡೆಯುತ್ತೆ. ಸೀರಿಯಲ್ ಜಗತ್ತಿನಲ್ಲಿ ಬಹಳ ಅಪರೂಪದ ಹೀರೋ ಪ್ರಧಾನ ಧಾರಾವಾಹಿ 'ರಾಮಾಚಾರಿ'ಗೆ ಋತ್ವಿಕ್ ಹೀರೋ ಆಗ್ತಾರೆ. ನೂರಾರು ಕೆಜಿಗಳಿಂದ ೮೦ ಕೆಜಿಗೆ ತೂಕ ಇಳಿಸೋದು ಸಣ್ಣ ಸಂಗತಿ ಅಲ್ಲ. ಆದರೆ ಛಲದಲ್ಲಿ ಹೀರೋ ರಾಮಾಚಾರಿಯಂತೆಯೇ ಇರುವ ಋತ್ವಿಕ್ ಈ ಪಾತ್ರಕ್ಕಾಗಿ ಕಂಪ್ಲೀಟ್ ತೂಕ ಇಳಿಸಿ, ಪಕ್ಕಾ 'ರಾಮಾಚಾರಿ' ಪಾತ್ರ ಹೇಗೆ ಬರಬೇಕು ಅಂತ ನಿರ್ದೇಶಕರ, ಚಾನೆಲ್‌ನವರ ಇಮ್ಯಾಜಿನೇಶನ್ ಇತ್ತೋ ಹಾಗೇ ರೆಡಿ ಆಗಿ ಬಿಡುತ್ತಾರೆ. ಇವತ್ತು 'ರಾಮಾಚಾರಿ' ಸೀರಿಯಲ್ ಟಿಆರ್‌ಪಿಯಲ್ಲಿ ಕಲರ್ಸ್ ಕನ್ನಡದ ಟಾಪ್ ಸೀರಿಯಲ್ ಆಗಿ ಹೊರಹೊಮ್ಮೋದಕ್ಕೆ ಕಥೆ ಎಷ್ಟು ಕಾರಣವೋ, ರಾಮಾಚಾರಿ ಪಾತ್ರಧಾರಿ ಋತ್ವಿಕ್ ನಟನೆಯೂ ಅಷ್ಟೇ ಕಾರಣ.
Kannadathi Serial: ಮದ್ವೆ ಆಗಿದ್ದೇ ಹರ್ಷನ್ನ ಕಪಿ ಮುಷ್ಠಿ ಅಲ್ಲಲ್ಲ, ಬಿಗಿ ಮುಷ್ಠಿಲಿ ಹಿಡ್ಕೊತಾಳಂತೆ ಭುವಿ!
ಹೈಸ್ಕೂಲ್ ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯ ಋತ್ವಿಕ್. ಇವರ ಇನ್‌ಸ್ಟಾಗ್ರಾಂ ಇಣುಕಿದ್ರೆ ರೀಲ್ಸ್ ಮಾಡೋದು, ಆಲ್ಬಂ ಮಾಡೋದು ಇವರ ಸ್ಕಿಲ್ ಅಂತ ಗೊತ್ತಾಗುತ್ತೆ. ಈಗ ಮ್ಯಾಟರ್‌ಗೆ ಬರೋಣ. ಕಿರುತೆರೆಯಲ್ಲಿ ಸಖತ್ ಪಾಪ್ಯುಲರ್ ಆಗ್ತಿರೋ ರಾಮಾಚಾರಿ ಸೀರಿಯಲ್‌ನ ರಾಮಾಚಾರಿ ಪಾತ್ರಕ್ಕೆ ಇವ್ರು ತೂಕ ಮಾತ್ರ ಇಳಿಸಿಲ್ಲ. ಬೇರೆ ಒಂದಿಷ್ಟನ್ನೂ ತ್ಯಾಗ ಮಾಡಿದ್ದಾರೆ. ಪುರೋಹಿತರ ಮನೆಯ ಹುಡುಗ ರಾಮಾಚಾರಿ. ಸಂಪ್ರದಾಯ ಪಾಲನೆಯಲ್ಲಿ, ಸೌಜನ್ಯದ ನಡವಳಿಕೆಯಲ್ಲಿ, ಎಲ್ಲರಿಗೂ ಆದರ್ಶ ಎನಿಸುವ ಸ್ವಭಾವದಲ್ಲಿ ಮನೆಮಂದಿಗೆ ಮಾತ್ರ ಅಲ್ಲ ನೋಡುವ ವೀಕ್ಷಕರಿಗೂ ಮೆಚ್ಚಿನ ಹುಡುಗ ಆಗ್ತಿದ್ದಾನೆ. ಮೊದಲು ಸಣ್ಣ ಪುಟ್ಟದಕ್ಕೂ ಸಿಟ್ ಮಾಡುತ್ತಿದ್ದ ಋತ್ವಿಕ್ ಈ ಪಾತ್ರ ಮಾಡೋಕೆ ಶುರು ಮಾಡಿದ ಮೇಲೆ ಸಿಟ್ಟು ಮಾಡೋದು ಕಡಿಮೆ ಮಾಡ್ಕೊಂಡಿದ್ದಾರೆ. ಈ ಪಾತ್ರಕ್ಕೆ ಅವರ ಡೆಡಿಕೇಶನ್ ಎಂಥದ್ದು ಅಂದರೆ ಪಾತ್ರ ಮಾಡುತ್ತಾ ಮಾಡುತ್ತಾ ಪಾತ್ರದ ಒಳ್ಳೆಯ ಗುಣಗಳನ್ನೆಲ್ಲ ತಮ್ಮೊಳಗೂ ಅಳವಡಿಸಿಕೊಂಡು ಬಿಟ್ಟಿದ್ದಾರೆ.
Ramachari serial: ಅಯ್ಯಯ್ಯೋ, ರಾಮಾಚಾರಿ ಪಕ್ಕದಲ್ಲೇ ಮಲ್ಕೊಂಬಿಟ್ಲು ಚಾರು, ಮುಂದೇನು?
ಇದೆಲ್ಲಕ್ಕಿಂತ ಹೆಚ್ಚಾಗಿ ನಾನ್‌ವೆಜ್‌ಅನ್ನು ಹುಟ್ಟಿದಾಗಿಂದ ತಿನ್ನುತ್ತಾ ಬರುತ್ತಿದ್ದವರಿಗೆ ಮಾಂಸಾಹಾರದ ಮುಂದೆ ಸಸ್ಯಾಹಾರ ಸಪ್ಪೆ ಅನಿಸುತ್ತೆ. ನಾನ್‌ವೆಜ್‌ನಷ್ಟು ವೆಜ್ ಇಷ್ಟ ಆಗಲ್ಲ. ಹೀಗಿರುವಾಗ ಈ ಹುಡುಗ ತನ್ನ ರಾಮಾಚಾರಿ ಪಾತ್ರಕ್ಕಾಗಿ ನಾನ್‌ವೆಜ್ ತಿನ್ನೋದನ್ನೇ ಬಿಟ್ಟುಬಿಟ್ಟಿದ್ದಾರಂತೆ. ಈ ಪಾತ್ರದಲ್ಲಿ ಸ್ತೋತ್ರ ಹೇಳೋದು, ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಳ್ಳೋದು ಇತ್ಯಾದಿ ಆಚರಣೆಗಳನ್ನು ಪಾಲಿಸಬೇಕಾಗುತ್ತದೆ. ಯಾಕೋ ಈ ಮನಸ್ಥಿತಿಯ ಪಾತ್ರಕ್ಕೆ ನಾನ್ ವೆಜ್ ಸರಿಹೋಗಲ್ಲ ಅಂತ ಮಾಂಸಾಹಾರಕ್ಕೇ ವಿದಾಯ ಹೇಳಿ ಬಿಟ್ಟಿದ್ದಾರೆ ಋತ್ವಿಕ್. ಋತ್ವಿಕ್ ನಡವಳಿಕೆಯಲ್ಲಾದ ಬದಲಾವಣೆ, ಆಹಾರದಲ್ಲಿ ಆತ ಮಾಡಿಕೊಂಡಿರುವ ಚೇಂಜಸ್ ಅವರ ಮನೆಯವರಿಗೇ ಅಚ್ಚರಿ ತಂದಿದೆಯಂತೆ.
ಇದನ್ನೆಲ್ಲ ನೋಡಿ ಇನ್ನೂ ಮಾಸ್ಟರ್ಸ್ ಓದುತ್ತಿರುವ ಋತ್ವಿಕ್ ಕೃಪಾಕರ್‌ಗೆ ಎಂಟರ್‌ಟೈನ್‌ಮೆಂಟ್ ಫೀಲ್ಡ್‌ನಲ್ಲಿ ಸಖತ್ ಸ್ಕೋಪ್ ಇದೆ ಅಂತಿದ್ದಾರೆ ಈ ಫೀಲ್ಡ್‌ನ ತಜ್ಞರು.
Koffee with Karan ಮತ್ತೆ ಶುರು: ಹಿಂದಿ ಶೋನಲ್ಲಿ ರಶ್ಮಿಕಾ ಮಂದಣ್ಣ ಮೊದಲ ಸೆಲೆಬ್ರಿಟಿ?