ದುರಹಂಕಾರಿ ಚಾರುಲತಾಗೆ ಕ್ಲಾಸ್; ಕಪಾಳಕ್ಕೆ ಹೊಡದ ತಂದೆನೇ ಸರಿ!
ರಾಮಚಾರಿ ಧಾರಾವಾಹಿಯಲ್ಲಿ ಜನರಿಗೆ ನೀತಿಪಾಠ. ಹೆಣ್ಣು ಮಕ್ಕಳು ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ಹೇಳಿಕೊಟ್ಟ ತಂದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರಾವಾಹಿ ದಿನೇ ದಿನೇ ವೀಕ್ಷಕರಿಗೆ ಒಳ್ಳೆಯ ಸಂದೇಶ ನೀಡಿ ವಾರ ವಾರವೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದೆ. ಚಾರುಲತಾ ಮತ್ತು ರಾಮಚಾರಿ ಎಷ್ಟು ಸಲ ಜಗಳ ಮಾಡಿದರೂ, ಸತ್ಯಕ್ಕೆ ಜಯ ಎಂದು ಪದೇ ಪದೇ ಎದ್ದು ಕಾಣುತ್ತದೆ. ರಾಮಚಾರಿನ ಸೋಲಿಸಬೇಕು ಎಂದು ಚಾರುಲತಾ ಮತ್ತು ಮಾನ್ಯತಾ ಮಾಡುತ್ತಿರುವ ಪ್ಲ್ಯಾನ್ ವರ್ಕ್ ಆಗುತ್ತಾ?
ರಾಮಚಾರಿ ಏನೇ ಮಾಡಿದರೂ ಅದರ ಹಿಂದೆ ಒಳ್ಳೆ ಉದ್ದೇಶ ಇರುತ್ತೆ ಅನ್ನೋದು ಜೈಶಂಕರ್‌ಗೆ ಗೊತ್ತಿರುತ್ತೆ. ಸ್ವಂತ ಕಾಲಿನ ಮೇಲೆ ನಿಲ್ಲುತ್ತೇನೆ ಜಯಶಾಲಿ ಆಗುತ್ತೇನೆ ಎಂದು ತಂದೆಗೆ ಸವಾಲ್ ಹಾಕಿ ದುಡಿಯಲು ಚಾರುಲತಾ ಶುರು ಮಾಡಿದ್ದಾಳೆ. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಅತಿ ಕಡಿಮೆ ಅವಧಿಯಲ್ಲಿ ರಾಮಚಾರ ಪ್ರಮೋಷನ್ ತೆಗೆದುಕೊಳ್ಳುತ್ತಾನೆ ಅವನ ಯಶಸ್ಸು ಸಹಿಸಿಕೊಳ್ಳಲಾಗದೆ ಚಾರು ಒಂದೊಂದೆ ಸಮಸ್ಯೆ ಕೊಡಲು ಶುರು ಮಾಡುತ್ತಾಳೆ.
Lakshana Serial: ನಕ್ಷತ್ರಾ ಗೆ ಭೂಪತಿ ಮನೆಗೆ ಎಂಟ್ರಿ ಇಲ್ಲ, ಮತ್ತೆಲ್ಲಿ ಹೋಗ್ತಾಳವಳು?ದೇವಸ್ಥಾನ ಆಭರಣ ಕಳ್ಳತನ ಮಾಡಿಸಿ ರಾಮಚಾರಿ ತಂದೆ ಮೇಲೆ ಆರೋಪ ಮಾಡಿದ ಚಾರುಲತಾ ತಾಯಿ ಮಾನ್ಯತಾಗೆ ಪತಿ ಜೈಶಂಕರ್ ಕಪಾಳಕ್ಕೆ ಹೊಡೆದು ಬುದ್ಧಿ ಮಾತು ಹೇಳುತ್ತಾನೆ. ತಾಯಿಗೆ ಅವಮಾನ ಮಾಡಿದಕ್ಕೆ ರಾಮಚಾರಿಗೆ ಅವಮಾನ ಮಾಡಲು ಚಾರು ಮುಂದಾಗುತ್ತಾಳೆ. ರಾಮಚಾರಿ ಕೆಲಸ ಮಾಡುವ ಕ್ಯಾಬಿನ್‌ನಲ್ಲಿ ಕ್ಯಾಮೆರಾ ಇಲ್ಲ ಎಂದು ತಿಳಿಯುತ್ತಿದ್ದಂತೆ ಪದೇ ಪದೇ ಅವನಿರುವ ಸ್ಥಳಕ್ಕೆ ಚಾರು ಹೋಗುತ್ತಾಳೆ. ಸಂಸ್ಥೆಯ ಮುಖ್ಯಸ್ಥರು ಬರುವ ಸಮಯಕ್ಕೆ ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ಅತ್ಯಾಚಾರ ಆರೋಪ ಮಾಡುತ್ತಾಳೆ. ರಾಮಚಾರಿ ಸತ್ಯ ತಿಳಿಸಲು ಪ್ರಯತ್ನ ಪಟ್ಟರೂ ಯಾರು ಕೇಳುವುದಿಲ್ಲ. ಮಾಡದ ತಪ್ಪಿಗೆ ಅವಮಾನ ಎದುರಿಸಿ ಕೆಲಸದಿಂದ ಹೊರ ನಡೆಯುತ್ತಾನೆ.
ಆಫೀಸ್‌ನಲ್ಲಿ ನಡೆದ ಘಟನೆಯಿಂದ ಬಾಸ್ ಬೇಸರಕೊಂಡು ಮಧ್ಯಪಾನ ಸೇವಿಸಿ ಜೈಶಂಕರ್‌ಗೆ ಕರೆ ಮಾಡಿ ಸಂಪೂರ್ಣ ಘಟನೆ ಬಗ್ಗೆ ವಿವರಿಸುತ್ತಾರೆ. ಮಗಳನ್ನು ಸರಿಯಾದ ದಾರಿಗೆ ತರಲೇ ಬೇಕು ಎಂದು ಜೈಶಂಕರ್ ಚಾರುಲತಾಗೆ ಕಪಾಳಕ್ಕೆ ಹೊಡೆದು ಮನೆಯಿಂದ ಹೊರ ಹಾಕುತ್ತಾನೆ. ಮನೆಯೊಳಗೆ ಮಗಳು ಬರಬೇಕು ಅಂದ್ರೆ ನನ್ನದು ಎರಡು ಶರತುಗಳಿದೆ ಎಂದು ಹೇಳುತ್ತಾರೆ. ಏನು ಬೇಕಿದ್ದರೂ ನಾನು ಮಾಡೋಕೆ ರೆಡಿ ಎಂದು ಚಾರುಲತಾ ಒಪ್ಪಿಕೊಳ್ಳುತ್ತಾರೆ.
ಥೈಲ್ಯಾಂಡ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ನಾಗಿಣಿ-2 ನಟಿ ನಮ್ರತಾ ಗೌಡ!ತಂದೆಗೆ ಪ್ರಮಾಣ ಮಾಡಿರುವುದಕ್ಕೆ ಚಾರು ಆಫೀಸ್‌ಗೆ ಹೋಗಿ ತಾನು ಬೇಕೆಂದು ಮಾಡಿರುವ ಕ್ರಿಮಿನಲ್ ಪ್ಲ್ಯಾನ್ ಬಗ್ಗೆ ರಿವೀಲ್ ಮಾಡುತ್ತಾಳೆ. ರಾಮಚಾರು ಮತ್ತೆ ಕೆಲಸ ಶುರು ಮಾಡಬೇಕು ಆಫೀಸ್‌ಗೆ ಬರಬೇಕು ಎಂದು ಜೈಶಂಕರ್ ಬಾಸ್ ಬಳಿ ಮನವಿ ಮಾಡಿಕೊಳ್ಳುತ್ತಾರೆ. ರಾಮಚಾರಿ ಮನೆಗೆ ಚಾರುಲತಾಳನ್ನು ಕರೆದುಕೊಂಡು ಬಂದು ಕ್ಷಮೆ ಕೇಳುತ್ತಾರೆ. ಬೇಸರದಲ್ಲಿರುವ ಇಡೀ ಕುಟುಂಬಕ್ಕೆ ಕ್ಷಮೆ ಕೇಳಿ ರಾಮಚಾರಿ ಮತ್ತೆ ಕೆಲಸ ಶುರು ಮಾಡುವಂತೆ ಜೈಶಂಕರ್ ಒಪ್ಪಿಸುತ್ತಾರೆ.
'ಹೆಣ್ಣು ಮಕ್ಕಳನ್ನು ಹೇಗೆ ಬೆಳಸಬೇಕು. ತಂದೆ ಯಾವ ರೀತಿ ಮನೆ ನಡೆಸಬೇಕು ಎಂದು ಈ ಧಾರಾವಾಹಿ ನೋಡಿದರೆ ಜನರಿಗೆ ಜೀವನ ಸುಲಭವಾಗಿ ಅರ್ಥವಾಗುತ್ತದೆ. ಹೆಣ್ಣು ಮಕ್ಕಳಿಗೆ ಹಠ ಇರಬಾರದು, ಗಂಡು ಮಕ್ಕಳಿಗೆ ತಾಳ್ಮೆ ಹೆಚ್ಚಿರಬೇಕು ಅನ್ನೋದು ಈ ಧಾರಾವಾಹಿ ಸಿಂಪಲ್ ಪಾಠ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.