ಥೈಲ್ಯಾಂಡ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ನಾಗಿಣಿ-2 ನಟಿ ನಮ್ರತಾ ಗೌಡ!
ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕಿರುತೆರೆ ನಟಿ. ಸೋಷಿಯಲ್ ಮೀಡಿಯಾದಲ್ಲಿ ಹಾಟ್ ನಾಗಿಣಿ ಫೋಟೋ ವೈರಲ್.
ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಮ್ರತಾ ಗೌಡ (Namratha Gowda) ಇದೀಗ ಕನ್ನಡ ಕಿರುತೆರೆಯ ಬಹುಬೇಡಿಕೆಯ ನಟಿ.
ಪುಟ್ಟಗೌರಿ ಮದುವೆ ಧಾರಾವಾಹಿ ನಂತರ ನಾಗಿಣಿ-2ರಲ್ಲಿ ಸಖತ್ ಸ್ಟೈಲಿಷ್ ಶಿವಾನಿಯಾಗಿ ಕಾಣಿಸಿಕೊಂಡ ನಮ್ರತಾ ಗೌಡ ಇದೀಗ ಜಾಲಿ ಮೂಡ್‌ನಲ್ಲಿದ್ದಾರೆ.
ಈ ವರ್ಷ ಹುಟ್ಟುಹಬ್ಬವನ್ನು ನಮ್ರತಾ ಗೌಡ ಥೈಲ್ಯಾಂಡ್‌ನಲ್ಲಿ ಸ್ನೇಹಿತೆ ಜೊತೆ ಆಚರಿಸಿಕೊಂಡಿದ್ದಾರೆ. ವಿಭಿನ್ನ ಲುಕ್‌ಗಳ ಫೋಟೋ ಹಂಚಿಕೊಂಡಿದ್ದಾರೆ.
ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಮ್ರತಾ ಗೌಡ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಟ್ರಿಪ್, ಫ್ಯಾಷನ್ ಮತ್ತು ಬ್ಯೂಟಿ ಬಗ್ಗೆ ಅಪ್ಡೇಟ್ ಮಾಡಲಿದ್ದಾರೆ.
ಕಿರುತೆರೆ ಸ್ಟೈಲಿಷ್ ನಟಿಯರಲ್ಲಿ ನಮ್ರತಾ ಕೂಡ ಒಬ್ಬರು. ಒಂದು ಸಲ ಧರಿಸಿದ ಉಡುಪನ್ನು ಮತ್ತೆ ಧರಿಸುವುದಿಲ್ಲ, ಒಂದು ಸಲ ಮಾಡಿದ ಹೇರ್‌ಸ್ಟೈಲ್ ರಿಪೀಟ್ ಮಾಡುವುದಿಲ್ಲ.
'ಜೀವನದಲ್ಲಿ ನೀವು ಹೆದರಿಕೊಳ್ಳುವುದು ಬಿಟ್ಟರೆ, ಜೀವನ ಲಿಮಿಟ್‌ಲೆಸ್ ಆಗಿರುತ್ತದೆ' ಎಂದು ಬರೆದುಕೊಂಡು ನಮ್ಮಿ ಟ್ರ್ಯಾವಲ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಥೈಲ್ಯಾಂಡ್ ಪ್ರವಾಸದ ಫೋಟೋಗಳು ಮತ್ತು ವಿಡಿಯೋಗಳನ್ನು ನಮ್ರತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 8 ಲಕ್ಷ 12 ಸಾವರಿ ಫಾಲೋವರ್ಸ್‌ನ ಹೊಂದಿದ್ದಾರೆ.