Asianet Suvarna News Asianet Suvarna News

ಯಾರೋ ಬಂದು ಏನೇ ಹೇಳಿಕೊಟ್ರು ಕಲಿಯುತ್ತಿದ್ದಾನೆ ಅನ್ನೋ ಭಯ ಶುರುವಾಗಿತ್ತು:ಮಗನ ಬಗ್ಗೆ ಮೇಘನಾ ರಾಜ್ ಟೆನ್ಶನ್

ಮಗ ಸ್ಕೂಲ್‌ಗೆ ಕಾಲಿಟ್ಟಾಗ ಎಷ್ಟು ಖುಷಿ ಆಯ್ತು ಎಷ್ಟು ಟೆನ್ಶನ್ ಆಯ್ತು ಎಂದು ಹಂಚಿಕೊಂಡ ನಟಿ ಮೇಘನಾ ರಾಜ್.... 
 

Kannada actress Meghana Raj talks about son Raayan raj sarja first day of school experience vcs
Author
First Published Jun 19, 2024, 9:58 AM IST

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ಮಗನ ಬಗ್ಗೆ ಮಾತನಾಡದ ದಿನವಿಲ್ಲ ಕ್ಷಣವಿಲ್ಲ. ಯಾರಿಗೆ ಮೇಘನಾ ಮೊದಲು ಸಿಕ್ಕರೂ ಕೇಳುವುದು ರಾಯನ್‌ ಎಲ್ಲಿ, ಹೇಗಿದ್ದಾನೆ, ಏನ್ ಮಾಡ್ತಿದ್ದಾನೆ ಎಂದು. ಸೋಷಿಯಲ್ ಮೀಡಿಯಾದಲ್ಲಿ ರಾಯನ್ ಫೋಟೋ ಅಥವಾ ವಿಡಿಯೋ ನೋಡಿದರೆ ಎಲ್ಲರಿಗೂ ಫುಲ್ ಖುಷಿ. ರಾಯನ್‌ ಸ್ಕೂಲ್‌ನಲ್ಲಿ ಹೇಗೆ?

'ರಾಯನ್‌ ಮೊದಲು ಸ್ಕೂಲ್‌ಗೆ ಸೇರಿಸಿದ ದಿನ ಎಂದೂ ಮರೆಯುವುದಿಲ್ಲ. ಸುಮಾರು ಒಂದು ಗಂಟೆಗಳ ಕಾಲ ಪೋಷಕರು ಮಕ್ಕಳ ಜೊತೆ ಸ್ಕೂಲ್‌ನಲ್ಲಿ ಕೂರಬಹುದು ಎಂದಿದ್ದರು ಏಕೆಂದರೆ ನಾವು ಇದ್ದೀವಿ ಅನ್ನೋ ಧೈರ್ಯ ಮಕ್ಕಳಿಗೆ ಬರುತ್ತೆ ಅಂತ. ಸರಿ ಅಂತ ಹೇಳಿ ನಾನು ಹೋಗಿ ಕುಳಿತುಕೊಂಡೆ..ಎಷ್ಟು ನೀಟ್ ಆಗಿ ಅವನು ವರ್ತಿಸಿದ. ನಾವು ಎಂದೂ ಮನೆಯಲ್ಲಿ ಚಕ್ಮ್‌ಬಕ್ಲು ಹಾಕೊಂಡು ಕೂತಿರಲಿಲ್ಲ ಆದರೆ ಟೀಚರ್ ಹೇಳಿದ ತಕ್ಷಣ ರಾಯನ್ ಮಾಡಿದ. ಟೀಚರ್ ಹೇಳಿದ ತಕ್ಷಣ ಅವನು ಕೇಳಿಬಿಟ್ಟ ಅಂತ ನನಗೆ ಏನೋ ಫೀಲಿಂಗ್..ಯಾರ್ಯಾರೋ ಏನೋ ಬಂದು ಹೇಳಿದರೆ ಇವನು ಕೇಳುತ್ತಿದ್ದಾನೆ ಅಲ್ವಾ ಅಂತ. ಟೀಚರ್ ಮಾತು ಕೇಳಬೇಕು ಆದರೆ ನನಗೆ ಮನಸ್ಸಿನಲ್ಲಿ ಅಯ್ಯೋ ಎಲ್ಲಾ ಮಾತು ಕೇಳುತ್ತಿದ್ದಾನೆ ಅಂತ ಟೆನ್ಶನ್ ಶುರುವಾಯ್ತು' ಎಂದು ಕನ್ನಡ ಖಾಸಗಿ ಸಂದರ್ಶನದಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ.

ಬೆಂಗಳೂರಿನ ಪಬ್‌ಗೆ ಹಾಟ್‌ ಆಗಿ ಹೋದ ಖ್ಯಾತ ನಿರೂಪಕಿ; ಎಲ್ಲಿದ್ದಮ್ಮ ಇಷ್ಟು ದಿನ ಎಂದು ಕಾಲೆಳೆದ ನೆಟ್ಟಿಗರು

'ಮಕ್ಕಳು ಎಷ್ಟು ಬೇಗ ಹೊಂದಿಕೊಳ್ಳುತ್ತಾರೆ ಅನ್ನೋದು ಆಗ ಅರ್ಥವಾಯ್ತು...ಏಕೆಂದರೆ ಅವನೇ ಏನೋ ಆಕ್ಟಿವಿಟಿ ಹುಡುಕಿಕೊಂಡ ಮಾಡಲು ಶುರು ಮಾಡಿದ. ಸ್ಕೂಲ್‌ನಲ್ಲಿ ಅವನನ್ನು ನೋಡಿ..ಅಯ್ಯೋ ಇಷ್ಟು ಬೇಗ ಬೆಳೆದು ಬಿಡುತ್ತಾರಾ ಮಕ್ಕಳು ಅನಿಸಲು ಶುರುವಾಯ್ತು. ಸ್ಕೂಲ್‌ಗೆ ಹೋಗಲು ಮೊದಲು ಅಳುತ್ತಿದ್ದ ಆದರೆ ಈಗ ಬಾಯ್ ಅಮ್ಮ ಅಂತ ಖುಷಿಯಿಂದ ಹೋಗುತ್ತಾನೆ' ಎಂದು ಮೇಘನಾ ರಾಜ್‌ ಹೇಳಿದ್ದಾರೆ.

ಮನಸ್ಸಿಗೆ ಹತ್ತಿರದವರು ಕಷ್ಟ ಅನುಭವಿಸುತ್ತಿದ್ದಾರೆ, ಮುಂದಿನ ವರ್ಷದೊಳಗೆ ಏನಾದ್ರೂ ಸಾಧನೆ ಮಾಡ್ತೀನಿ: ರಕ್ಷಕ್ ಬುಲೆಟ್

'ಪ್ರತಿ ದಿನ ಟಿಫನ್‌ ಬಾಕ್ಸ್‌ಗೆ ಇಡ್ಲಿ ಬೇಕು ಎಂದು ಹಠ ಮಾಡುತ್ತಾನೆ....ಸ್ಕೂಲ್‌ನಲ್ಲಿ ಟೀಚರ್ ಅಂದುಕೊಳ್ಳಬೇಕು ನಮಗೆ ಮಾಡಲು ಕೆಲಸ ಇಲ್ಲ ಇವರ ಮನೆಯಲ್ಲಿ ಏನೂ ಅಡುಗೆ ಮಾಡಲ್ಲ ಅಂತ ಆದರೆ ಏನ್ ಮಾಡೋದು ರಾಯನ್‌ಗೆ ಪ್ರತಿ ಸಲವೂ ಇಡ್ಲಿ ಬೇಕು ಎಂದು ಕೇಳುತ್ತಾನೆ. ಇಡೀ ಬಾಕ್ಸ್‌ನ ಸ್ಕೂಲ್‌ನಲ್ಲಿ ಕಾಲಿ ಮಾಡುವುದಿಲ್ಲ...ಅರ್ಧ ಸ್ಕೂಲ್‌ನಲ್ಲಿ ತಿಂದು ಉಳಿದ ಅರ್ಧವನ್ನು ಕಾರಲ್ಲಿ ತಿನಿಸು ಅಮ್ಮ ಅಂತ ಹಠ ಮಾಡುತ್ತಾನೆ. ಕಾರಿನಲ್ಲಿ ಬರುವಾಗ ತಿನಿಸಿಕೊಂಡು ಮಾತನಾಡಿಸಿಕೊಂಡು ಬರುತ್ತೀನಿ ಆ ಸಮಯ ನನಗೆ ತುಂಬಾ ಇಷ್ಟವಾಗುತ್ತದೆ' ಎಂದಿದ್ದಾರೆ ಮೇಘನಾ ರಾಜ್. 

Latest Videos
Follow Us:
Download App:
  • android
  • ios