Asianet Suvarna News Asianet Suvarna News

ನಿವೇದಿತಾ ಗೌಡ ಆದಾಯ ಒಂದೆರಡಲ್ಲ; ನಾಲ್ಕೈದು ಕಡೆಯಿಂದ ಬರ್ತಿದೆ ಲಕ್ಷ ಲಕ್ಷ ಹಣ!!

ಕಿರುತೆರೆ ಬಾರ್ಬಿ ಡಾಲ್‌ ಬ್ಯಾಂಕ್‌ ಅಕೌಂಟ್‌ ಫುಲ್ ಫುಲ್ ಫುಲ್....ಎಲ್ಲಿಂದ ಬರ್ತಿದೆ ನಿವಿ ಸಂಬಳ....
 

Colors kannada Niveditha gowda income sources and details revealed vcs
Author
First Published Sep 19, 2024, 5:10 PM IST | Last Updated Sep 19, 2024, 5:29 PM IST

ಕನ್ನಡ ಕಿರುತೆರೆಯ ಬಾರ್ಬಿ ಡಾಲ್, ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಮತ್ತು ರ್ಯಾಪರ್ ಚಂದನ್ ಶೆಟ್ಟಿ ವಿಚ್ಛೇದನದ ನಂತರ ಸಾಕಷ್ಟು ನೆಗೆಟಿವ್ ಕಾಮೆಂಟ್ ಮತ್ತು ಪರ್ಸನಲ್ ಲೈಫ್‌ ಬಗ್ಗೆ ನೆಟ್ಟಿಗರ ಹುಡುಕಾಟ ಶುರು ಮಾಡಿದ್ದಾರೆ. ಮನೆಯಲ್ಲಿ ಕೊಂಚ ನೆಮ್ಮದಿ ಹಾಳಾಗುತ್ತಿದ್ದಂತೆ ನಿವೇದಿತಾ ಗೌಡ ಯೂಟ್ಯೂಬ್‌ನಿಂದ ಸ್ವಲ್ಪ ದೂರ ಉಳಿದುಬಿಟ್ಟರು ಅಷ್ಟೇ ಯಾಕೆ ಮಾಡುತ್ತಿದ್ದ ಕಿರುತೆರೆ ಕಾರ್ಯಕ್ರಮಗಳಿಂದ ದೂರ ಸರಿದುಬಿಟ್ಟರು.ಆಗ ಯಾರಿಗೂ ಡಿವೋರ್ಸ್‌ ವಿಚಾರ ತಿಳಿದಿರಲಿಲ್ಲ ಇರಲಿ ಬಿಡಿ ಚಂದನ್ ಹೇಗಿದ್ರೂ ಹಣ ಮಾಡಿಟ್ಟಿದ್ದಾನೆ ಅದನ್ನು ಖರ್ಚು ಮಾಡುತ್ತಿದ್ದಾಳೆ ಅಂತ ಟ್ರೋಲ್ ಮಾಡಿದ್ದರು. ಒಮ್ಮೆ ಡಿವೋರ್ಸ್ ಕನ್ಫರ್ಮ್ ಮಾಡಿದ ಮೇಲೆ ನಿವಿ ಮತ್ತೆ ತಮ್ಮ ಸ್ವಂತ ಕಾಲಿನ ಮೇಲೆ ನಿಂತು ದುಡಿಯಲು ಮುಂದಾಗಿದ್ದಾರೆ.

ನಿವೇದಿತಾ ಮೂಲತಃ ಮೈಸೂರಿನ ಹುಡುಗಿ, ತಂದೆ ಮನೆಯಲ್ಲಿ ತುಂಬಾ ಅನುಕೂಲವಿದೆ ಏನು ಟೆನ್ಶನ್ ಅಂದುಕೊಳ್ಳಬೇಡಿ. ನಿವೇದಿತಾಳನ್ನು ಮೇನ್ಟೈನ್ ಮಾಡೋದು ಸಿಕ್ಕಾಪಟ್ಟೆ ಕಷ್ಟ ಏಕೆಂದರೆ ಆಕೆ ಧರಿಸುವುದು ಬ್ರ್ಯಾಂಡೆಡ್‌ ಬಟ್ಟೆಗಳು ಚಪ್ಪಲಿಗಳು, ತಿನ್ನುವುದು ಸ್ಟಾರ್ ಹೋಟೆಲ್‌ನಲ್ಲಿ. ಇಷ್ಟೋಂದು ಖರ್ಚು ಇದ್ಮೇಲೆ ನಿವೇದಿತಾ ದುಡಿಮೆ ಏನಿದೆ ಎಂದು ಹುಡುಕುತ್ತಿದ್ದವರಿಗೆ ಇಲ್ಲದೆ ಉತ್ತರ:

ಬಿಗ್ ಬಾಸ್ ಸಂಭಾವನೆ:

ನಿವೇದಿತಾ ಗೌಡ ಬಿಗ್ ಬಾಸ್ ಸೀಸನ್ 5ಕ್ಕೆ ಕಾಲಿಡುವ ಮುನ್ನ Dubsmash, Musically ಮತ್ತು ಟಿಕ್‌ಟಾಕ್‌ನಲ್ಲಿ ಮಿಂಚುತ್ತಿದ್ದರು. 19 ವರ್ಷದ ಹುಡುಗಿ ನೋಡಲು ಬಾರ್ಬಿ ಡಾಲ್ ರೀತಿ ಇದ್ದಾಳೆ ಜನರು ಇಷ್ಟ ಪಟ್ಟಿದ್ದಾರೆ ಎಂದು ಬಿಗ್ ಬಾಸ್ ಆಫರ್‌ ಮನೆ ಬಾಗಿಲಿಗೆ ಬಂತು. ಬಿಗ್ ಬಾಸ್‌ನಲ್ಲಿ ವಾರ ಲೆಕ್ಕದಲ್ಲಿ ಪೇಮೆಂಟ್ ಮಾತನಾಡುತ್ತಾರೆ. 100 ದಿನಕ್ಕೂ ಮೂರ್ನಾಲ್ಕು ದಿನ ಕಡಿಮೆ..ಫಿನಾಲೆ ವಾರ ಮುಟ್ಟಿ ನಿವಿ ಹೊರ ಬಂದರು. ಅಲಿಗೆ ಬಿಗ್ ಬಾಸ್ ದೊಡ್ಡ ಮೊತ್ತ ಕೈ ಸೇರಿತ್ತು. ಬಿಗ್ ಬಾಸ್ ಸಂಭಾವನೆ ಮಾತ್ರ ಅಂದುಕೊಳ್ಳಬೇಡಿ, ಬಿಬಿ ಮನೆಯಲ್ಲಿ ನಿವಿ ಧರಿಸುತ್ತಿದ್ದ ಬಟ್ಟೆಗಳನ್ನು ಡಿಸೈನರ್‌ಗಳು ಪ್ರಚಾರಕ್ಕೆಂದು ಕೊಡುತ್ತಿದ್ದರು ಹೀಗಾಗಿ ಅವರಿಂದಲೂ ಹಣ ಪಡೆದಿರುತ್ತಾರೆ.

100 ಕೋಟಿ ಆಸ್ತಿ ಬೇಡ, ಒಬ್ಬ ತಂದೆಯಾಗಿ ನನಗಿದು ಖುಷಿಯಾದ ವಿಷಯ: ಚಂದನ್ ಶೆಟ್ಟಿ ತಂದೆ ರಿಯಾಕ್ಷನ್

ಸೋಷಿಯಲ್ ಮೀಡಿಯಾ:

ಬಿಗ್ ಬಾಸ್ ಮುಗಿದೆ ಮೇಲೆ ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು. ಅಲ್ಲಿ ಖಾಸಗಿ ಬ್ರ್ಯಾಂಡ್‌ಗಳ ಪ್ರಚಾರಕ್ಕೆ ಇಳಿದರು. ಸಣ್ಣ ಪುಟ್ಟ ಡಿಸೈನರ್ ಅಂಗಡಿಗಳು, ಹೊಸ ಮೇಕಪ್ ಆರ್ಟಿಸ್ಟ್‌ಗಳು, ಫೋಟೋಗ್ರಾಫರ್‌ಗಳ ಜೊತೆ ಕೈ ಜೋಡಿಸಿ ಕೆಲಸ ಮಾಡಿದ ನಿವೇದಿತಾ ಅಲ್ಲೂ ಆದಾಯ ಬರುವಂತೆ ಮಾಡಿಕೊಂಡರು. ನೇಮ್ ಆಂಡ್ ಫೇಮ್ ಇದ್ದ ಕಾರಣ ನಿವೇದಿತಾ ಯೂಟ್ಯೂಬ್ ಚಾನೆಲ್‌ ಕೂಡ ಆರಂಭಿಸಿದ್ದರು. ಒಂದು ವಿಡಿಯೋವನ್ನು ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ವಿಡಿಯೋ ನೋಡಿದರೆ ಕನಿಷ್ಠ ಅಂದ್ರು 75 ಸಾವಿರ ರೂಪಾಯಿ ಅಕೌಂಟ್‌ಗೆ ಬಂದು ಬೀಳುತ್ತದೆ. ಅಯ್ಯೋ ನಿವೇದಿತಾ ವಿಡಿಯೋವನ್ನು ಇಷ್ಟೋಂದು ಮಂದಿ ನೋಡುತ್ತಾರೆ ಅಂತ ಮತ್ತೆ ಅಲ್ಲಿಯೂ ಬ್ರಾಂಡ್ ಪ್ರಮೋಷನ್ ಶುರು ಮಾಡಿ ಡಬಲ್ ಡಬಲ್ ಆದಾಯ ಬರುವಂತೆ ಮಾಡಿಕೊಂಡರು.

Colors kannada Niveditha gowda income sources and details revealed vcs

ರಿಯಾಲಿಟಿ ಶೋ: 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ಕಪಲ್ಸ್ ರಿಯಾಲಿಟಿ ಕಾರ್ಯಕ್ರಮದಲ್ಲಿ ನಿವೇದಿತಾ ಮತ್ತು ಚಂದನ್ ಸ್ಪರ್ಧಿಸಿದ್ದರು. ಇದು ಡಿವೋರ್ಸ್ ಪಡೆಯುವ ಮುನ್ನ. ಅಲ್ಲಿ ನಿವೇದಿತಾ ರಿಯಾಲಿಟಿ ಶೋ ಮೂಲಕ ತಮ್ಮ ಫಸ್ಟ್‌ ಆದಾಯ ಪಡೆಯಲು ಶುರು ಮಾಡಿದ್ದರು. ಈ ಕಾರ್ಯಕ್ರಮ ಹಿಟ್ ಆದ ಬೆನ್ನಲೆ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ಕೂಡ ಒಪ್ಪಿಕೊಂಡರು. ನಿವೇದಿತಾ ಪೆದ್ದು ಪೆದ್ದು ಮಾತು ಜನರಿಗೆ ಇಷ್ಟವಾಗಿ ಆಕೆಗೆ ಎರಡನೇ ಸ್ಥಾನ ಕೊಟ್ಟು ದೊಡ್ಡ ಮೊತ್ತ ಕೊಟ್ಟರು. ಗೆದ್ದವರಿಗೆ ದೊಡ್ಡ ಮೊತ್ತ ಬರುವುದು ಹೌದು ಆದರೆ ಡಿಮ್ಯಾಂಡ್‌ನಲ್ಲಿ ಇರುವ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ, ಸ್ಕಿಟ್ ಅಭ್ಯಾಸ ಮಾಡುವ ದಿನ ಪ್ರತಿಯೊಂದನ್ನು ಲೆಕ್ಕ ಮಾಡಿ ಸಂಭಾವನೆ ಪಡೆಯುತ್ತಾರೆ. ಅಲ್ಲಿಗೆ....ನಿವಿ ಇಲ್ಲಿ ಕೂಡ ಡಬಲ್ ಪೇಮೆಂಟ್ ಪಡೆದರು. 

ಬಿಗ್ ಬಾಸ್ ಆದ್ಮೇಲೆ ಕಷ್ಟ ಜಾಸ್ತಿ ಆಯ್ತು, ದುಡ್ಡು ಬಿಡಿ ಬಿಡಿ ಕೊಟ್ಟರೆ ಎಲ್ಲೋಗುತ್ತೆ ಗೊತ್ತಾಗಲ್ಲ: ಚಂದನ್ ಶೆಟ್ಟಿ

ಟಿವಿ ಜಾಹೀರಾತು:

ನಿವೇದಿತಾ ಗೌಡ ಕೂದಲು ಸಿಕ್ಕಾಪಟ್ಟೆ ಉದ್ದ ಮತ್ತು ಡಾರ್ಕ್‌ ಬ್ಲ್ಯಾಕ್ ಇರುವ ಕಾರಣ ಹಲವು ಕೂದಲು ಎಣ್ಣೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡು. ಇಲ್ಲಿ ಕಾಂಟ್ರಾಕ್ಟ್‌ ಮೇಲೆ ಕೆಲಸ ಮಾಡುತ್ತಾರೆ. ಕೆಲವು ದಿನಗಳ ಹಿಂದೆ ನಿವೇದಿತಾ ಆಭರಣ ಮತ್ತು ಸೀರೆ ಅಂಗಡಿ ಜಾಹೀರಾತಿನಲ್ಲಿ ಮಿಂಚಿದ್ದಾರೆ. ಅಲ್ಲಿಗೆ ಇದು ಕೂಡ ಆದಾಯಕ್ಕೆ ಮತ್ತೊಂದು ದಾರಿ.

ನಿರೂಪಣೆಗೂ ಎಂಟ್ರಿ:

ಕನ್ನಡ ಮಾತನಾಡಲು ಕಷ್ಟ ಪಡುತ್ತಿದ್ದ ನಿವೇದಿತಾ ಗೌಡ ಅನುಬಂಧ ಅವಾರ್ಡ್ ಕಾರ್ಯಕ್ರಮ ಪ್ರೀ-ಈವೆಂಟ್‌ಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದ ಸೀರಿಯಲ್‌ ಸೆಟ್‌ಗೆ ಭೇಟಿ ನೀಡಿ ಅಲ್ಲಿ ಸಂದರ್ಶನ ಮಾಡುತ್ತಾರೆ. ರೆಡ್‌ ಕಾರ್ಪೆಟ್‌ ಮೇಲೆ ಬರುವ ಸೆಲೆಬ್ರಿಟಿಗಳು ಮಾತನಾಡಿಸಿದ್ದಾರೆ. ಆದಾಯಕ್ಕೆ ಇದು ಮತ್ತೊಂದು ದಾರಿ. 

ಅಲ್ಲಿಗೆ ನಿವೇದಿತಾ ಗೌಡ ಅಕೌಂಟ್‌ಗೆ ಎಷ್ಟು ಲಕ್ಷ ಹಣ ಬರುತ್ತೆ ಅನ್ನೋ ಅಂದಾಜು ಬಂದಿರಬೇಕು ಅಲ್ವಾ?
 

Latest Videos
Follow Us:
Download App:
  • android
  • ios