Asianet Suvarna News Asianet Suvarna News
breaking news image

ಬಿಗ್ ಬಾಸ್ ಆದ್ಮೇಲೆ ಕಷ್ಟ ಜಾಸ್ತಿ ಆಯ್ತು, ದುಡ್ಡು ಬಿಡಿ ಬಿಡಿ ಕೊಟ್ಟರೆ ಎಲ್ಲೋಗುತ್ತೆ ಗೊತ್ತಾಗಲ್ಲ: ಚಂದನ್ ಶೆಟ್ಟಿ

ಜನಪ್ರಿಯತೆ ಬಂದ್ಮೇಲೆ ಬದಲಾದ ಜೀವದ ಬಗ್ಗೆ ಸತ್ಯ ಬಿಚ್ಚಿಟ್ಟ ಚಂದನ್ ಶೆಟ್ಟಿ. ಸಂಭಾವನೆ ವಿಚಾರದಲ್ಲಿ ಏನಾದ್ರೂ ಸಮಸ್ಯೆ ಆಯ್ತಾ?

Kannada rapper Chandan shetty talks about life and money after bigg boss kannada vcs
Author
First Published Jul 8, 2024, 12:11 PM IST

ಕನ್ನಡ ಚಿತ್ರರಂಗದ ಖ್ಯಾತ ರ್ಯಾಪರ್, ಬಿಗ್ ಬಾಸ್ ಸ್ಪರ್ಧಿ..ಈಗ ಸ್ಯಾಂಡಲ್‌ವುಡ್‌ ನಟ ಆಗಲಿರುವ ಚಂದನ್ ಶೆಟ್ಟಿ ತಮ್ಮ ಚೊಚ್ಚಲ ಸಿನಿಮಾ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಸಾಕಷ್ಟುಗಳನ್ನು ಹಂಚಿಕೊಂಡಿದ್ದಾರೆ.

'ಬಿಗ್ ಬಾಸ್‌ ನನಗೆ ಸಹಾಯ ಮಾಡಿದೆ, ಕಷ್ಟನೂ ತೋರಿಸಿದೆ. ಬಿಗ್ ಬಾಸ್ ಮುನ್ನ ಯೂಟ್ಯೂಬ್ ಬಳಕೆದಾರರಿಗೆ ಮಾತ್ರ ನಾನು ಗೊತ್ತಿದ್ದೆ ಬಿಗ್ ಬಾಸ್ ಆದ್ಮೇಲೆ ನನಗೆ ತುಂಬಾ ಆಡಿಯನ್ಸ್ ಸಿಕ್ಕರು. ಬಿಗ್ ಬಾಸ್ ಫೇಮ್‌ನ ಹ್ಯಾಂಡಲ್ ಮಾಡಬೇಕು ಅದು ತುಂಬಾ ಕಷ್ಟ ಆಯ್ತು ಅಲ್ಲಿ ಜಾಸ್ತಿ ಕಷ್ಟಕ್ಕೆ ಸಿಲುಕಿಕೊಂಡೆ. ಬಡಪಾಯಿ ಸಾಮಾನ್ಯ ಸಿಂಗರ್‌ಗೆ ದೊಡ್ಡ ಸ್ಟಾರ್ ಮಟ್ಟದಲ್ಲಿ ಫೇಮ್ ಸಿಕ್ಕಿದೆ ಆದರೆ ಅಷ್ಟು ಸಂಭಾವನೆ ಸಿಗುವುದಿಲ್ಲ ಆಗ ದಬ್ಬಾಳಿಕೆ ಶುರುವಾಗುತ್ತದೆ ಕೆಟ್ಟದಾಗಿ ಕಾಮೆಂಟ್ ಮಾಡುವುದು ಹೀಗೆ ಏನ್ ಏನೋ ಪವರ್ ಜನರಿಗೆ ಸಿಗುತ್ತದೆ' ಎಂದು ಖಾಸಗಿ ಸಂದರ್ಶನದಲ್ಲಿ ಚಂದನ್ ಶೆಟ್ಟಿ ಮಾತನಾಡಿದ್ದಾರೆ.

ದರ್ಶನ್‌ಗೆ ಪವಿತ್ರಾ ತುಂಬಾ ಟಾರ್ಚರ್‌ ಕಟ್ಟು ವ್ಯಕ್ತಿತ್ವ ನಾಶ ಮಾಡಿದ್ದಾಳೆ: ನಿರ್ದೇಶಕಿ ಚಂದ್ರಕಲಾ

'ಮ್ಯೂಸಿಕ್ ಡೈರೆಕ್ಟರ್ ಆಗಿ ನಾವು ಇಷ್ಟು ಮೊತ್ತ ಕೇಳಿದರೆ ಅದನ್ನು ಚೌಕಾಸಿ ಮಾಡಿ ಮಾಡಿ ಕೊಡುತ್ತಾರೆ. ದೊಡ್ಡ ಹಣ ಒಟ್ಟಿಗೆ ಕೊಟ್ಟಾಗ ಒಂದು ಕಡೆ ಕೂಡಬಹುದು ಆದರೆ ಬಿಡಿ ಬಿಡಿ ಆಗಿ ಕೊಟ್ಟರೆ ಅಲ್ಲಿಂದ ಅಲ್ಲಿಗೆ ಜೀವನಕ್ಕೆ ಖರ್ಚು ಆಗುತ್ತದೆ. ಫೋಟೋ ಕೊಡುತ್ತೀನಿ ಎಂದು ಹೇಳಿ ಒಂದೆರಡು ಗಂಟೆ ವೇಟ್ ಮಾಡಿಸುವುದಿಲ್ಲ. ಜನರನ್ನು ಮನೋರಂಜಿಸಬೇಕು ಹೆಚ್ಚಿಗೆ ದುಡಿಯಬೇಕು ಎಂದು ಈಗ ಸಿನಿಮಾ ಮಾಡುತ್ತಿರುವೆ. ಸಮುದ್ರ ಅಂದ್ಮೇಲೆ ಅಲೆಗಳು ಬರ್ತಾನೆ ಇರುತ್ತೆ ಪ್ರತಿಯೊಬ್ಬರ ಲೈಫ್‌ನಲ್ಲೂ ನೋವು ಇರುತ್ತದೆ. ಬ್ಯಾಡ್‌ ಮೆಮೋರೀಸ್ ಇದ್ದೇ ಇರುತ್ತದೆ ಹಾಗೆ ನನ್ನ ಲೈಫ್‌ನಲ್ಲಿ ಇದೊಂದು ಬ್ಯಾಡ್ ಮೆಮೋರಿಯಾಗಿ ಉಳಿದುಕೊಂಡಿದೆ' ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

ಸಿನಿಮಾ ಇಷ್ಟ ಆದ್ರೆ ಮಾತ್ರ ಇಂಟರ್‌ವಲ್‌ನಲ್ಲಿ ಟಿಕೆಟ್‌ ಖರೀದಿಸಿ; ಸ್ಯಾಂಡ್‌ವುಡ್‌ನ ಹೊಸ ಪ್ರಯೋಗ ಯಾವತ್ತಿಂದ ಶುರು?

ಬಿಗ್ ಬಾಸ್ ನಂತರ ಚಂದನ್ ಶೆಟ್ಟಿ ಜೀವನ ಕಟ್ಟಿಕೊಂಡಿದ್ದಾರೆ. ನಿವೇದಿತಾ ಗೌಡರನ್ನು ಪ್ರೀತಿಸಿ ಮದುವೆ ಮಾಡಿಕೊಂಡರು. ನಾಲ್ಕು ವರ್ಷದ ಸಂಸಾರಕ್ಕೆ ಮೈ ಮನಸ್ಸು, ಹೊಂದಾಣಿಕೆ ಇಲ್ಲ ಎಂದು ವಿಚ್ಛೇದನ ನೀಡಿದ್ದಾರೆ. ಸಿನಿಮಾ ರಿಲೀಸ್ ಸಮಯದಲ್ಲಿ ಡಿವೋರ್ಸ್‌ ದೊಡ್ಡ ವಿಚಾರ ಆಗಿದೆ. ಪ್ರತಿಯೊಂದನ್ನು ಚಂದನ್ ಕೂಲ್ ಆಗಿ ಹ್ಯಾಂಡಲ್‌ ಮಾಡುತ್ತಿರುವುದು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

Latest Videos
Follow Us:
Download App:
  • android
  • ios