ಬಿಗ್ ಬಾಸ್ ಕನ್ನಡ ಸೀಸನ್ 10; ಇಷ್ಟೊಂದು ದೊಡ್ಡ ಮನೆ ಬೇರೆಲ್ಲೂ ಇಲ್ಲ..!
ಬಿಗ್ ಬಾಸ್ ಮನೆ ಹೊಸದು ಮಾತ್ರವಲ್ಲ, ಅತ್ಯಂತ ವಿಶಾಲವಾಗಿದೆಯಂತೆ. ಈ ಮೊದಲು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಿಸಲಾಗಿದ್ದ ಮನೆಗಿಂತ ಈಗ ದೊಡ್ಡ ಆಲದ ಮರದ ಸಮೀಪ, ಬೆಂಗಳೂರು ಹೊರವಲಯದಲ್ಲಿ ನಿರ್ಮಾಣವಾಗಿರುವ ಮನೆ ತುಂಬಾ ದೊಡ್ಡದು ಎನ್ನಲಾಗಿದೆ.

ಕಲರ್ಸ್ ಕನ್ನಡ ಬಿಗ್ ಬಾಸ್ ಶೋ ನಾಳೆ (08 ಅಕ್ಟೋಬರ್ 2023, ರಾತ್ರಿ 6.00 ಗಂಟೆಗೆ) ಶುರುವಾಗಲಿದೆ. ಕೋಟ್ಯಾಂತರ ಕನ್ನಡಿಗರ ಅಚ್ಚುಮೆಚ್ಚಿನ ಶೋ ಆಗಿರುವ ಬಿಗ್ ಬಾಸ್ ಈ ಬಾರಿ ಹೊಸತನಕ್ಕೆ ಸಾಕ್ಷಿಯಾಗಲಿದೆ ಎನ್ನಲಾಗುತ್ತಿದೆ. ಕಾರಣ ಹಲವು ಇರಬಹುದು, ಅದರಲ್ಲೊಂದು ಖಂಡಿತವಾಗಿಯೂ ಈ ಬಾರಿ ಹೊಸದಾಗಿ ನಿರ್ಮಾಣವಾಗಿರುವ ಹೊಸ ಮನೆ. ಹೌದು, ಎಲ್ಲಾ ಸೀಸನ್‌ಗಳಲ್ಲಿ ನಾವೆಲ್ಲ ನೋಡಿದ ಮನೆಯಲ್ಲ ಈ ಬಾರಿ ಬಿಗ್ ಬಾಸ್ ಮನೆ, ಹೊಚ್ಚ ಹೊಸದು!
ಬಿಗ್ ಬಾಸ್ ಮನೆ ಹೊಸದು ಮಾತ್ರವಲ್ಲ, ಅತ್ಯಂತ ವಿಶಾಲವಾಗಿದೆಯಂತೆ. ಈ ಮೊದಲು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಿಸಲಾಗಿದ್ದ ಮನೆಗಿಂತ ಈಗ ದೊಡ್ಡ ಆಲದ ಮರದ ಸಮೀಪ, ಬೆಂಗಳೂರು ಹೊರವಲಯದಲ್ಲಿ ನಿರ್ಮಾಣವಾಗಿರುವ ಮನೆ ತುಂಬಾ ದೊಡ್ಡದು ಎನ್ನಲಾಗಿದೆ. 12000 ಸ್ವ್ಕೇರ್ ಫೀಟ್ ಸೈಜ್‌ನಲ್ಲಿ ನಿರ್ಮಾಣವಾಗಿರುವ ಈ ಮನೆ, ಉಳಿದ ಭಾಷೆಗಳ ಬಿಗ್ ಬಾಸ್ ಮನೆಗಿಂತಲೂ ವಿಸ್ತೀರ್ಣದಲ್ಲಿ ಬಹಳಷ್ಟು ದೊಡ್ಡದಾಗಿದೆಯಂತೆ. ಇದನ್ನು ಸ್ವತಃ ಕಲರ್ಸ್ ಕನ್ನಡ ಅಧಿಕೃತವಾಗಿ ಹೇಳಿಕೊಂಡಿದೆ.
ಬಿಗ್ ಬಾಸ್ ಸೀಸನ್ -10 ಕ್ಕೆ ರೆಡಿಯಾಗಿರುವ ಈ ಹೊಸ ಮನೆಯಲ್ಲಿ ವಿಶಾಲವಾದ ಜಾಗ, ಬಹಳಷ್ಟು ಹೊಸ ವಿನ್ಯಾಸ ಹಾಗೂ ಕಲರ್‌ಫುಲ್ ಆಗಿದೆ ಎನ್ನಲಾಗಿದೆ. ಈ ಮನೆಯಲ್ಲಿ ಈ ಮೊದಲು ಆಡಲಾಗಿದ್ದ ಗೇಮ್‌ಗಳನ್ನು ಹೊರತುಪಡಿಸಿ ಹೊಸ ಹೊಸ ಗೇಮ್‌ಗಳಿಗೂ ಜಾಗವಿದೆಯಂತೆ. ಅಂದರೆ, ಈ ಬಾರಿ ಹೊಸ ಹೊಸ ಗೇಮ್‌ಗಳು ಶೋದಲ್ಲಿ ಕಾಣಿಸಲಿರುವುದು ಕನ್ಫರ್ಮ್ ಎನ್ನಲಾಗುತ್ತಿದೆ.
ಬಿಗ್ ಬಾಸ್ ಸೀಸನ್ 10ಕ್ಕೆ ಕ್ಷಣಗಣನೆ; ಪರಮೇಶ್ವರ್ ಗುಂಡ್ಕಲ್ ಮಿಸ್ ಮಾಡಿಕೊಳ್ತಿರೋ ವೀಕ್ಷಕರು!
ಒಟ್ಟಿನಲ್ಲಿ ಈ ಬಾರಿಯ ಬಿಗ್ ಬಾಸ್ ಶೋ ಹೊಸ ಮನೆ ಮೂಲಕ ತುಂಬಾ ಕುತೂಹಲ ಕೆರಳಿಸಿದೆ. 16 ಹೊಸ ಮನಸ್ಸುಗಳು ಹೊಸ ಮನೆ ಪ್ರವೇಶಿಸಲಿದ್ದು, ಇನ್ನೇನು ನಾಳೆ ಸಾಯಂಕಾಲ 6.00 ಗಂಟೆಗೆ ಯಾರೆಲ್ಲ ಅಲ್ಲಿ ಇರಲಿದ್ದಾರೆ ಎಂಬುದು ತಿಳಿದುಬರಲಿದೆ. ಬಿಗ್ ಬಾಸ್ ಶೋ ನೋಡಲು ಸಿದ್ಧರಾಗಿ..