Asianet Suvarna News Asianet Suvarna News

ಗರ್ಭಕೋಶದಲ್ಲಿ ಗೆಡ್ಡೆ, ವರ್ಷದಲ್ಲಿ ಮದ್ವೆಯಾಗಿ ಮಗು ಮಾಡಿಕೊಳ್ಳಬೇಕು ಎಂದ ವೈದ್ಯರು: ರಮ್ಯಾ

ಮುದ್ದಿನಗಳು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆಗೆ ಸಪೋರ್ಟ್ ಮಾಡುತ್ತಿರುವ ರಮ್ಯಾ. ಆರ್ಕೆಸ್ಟ್ರಾ ಸಿಂಗರ್ ರಮ್ಯಾ ಕಥೆ.... 

Colors Kannada Nanamma super star 3 Ramya talks about Chukki birth journey vcs
Author
First Published Feb 13, 2024, 1:16 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3ರಲ್ಲಿ ಪಟಪಟ ಅಂತ ಮಾತನಾಡುವ ಚುಕ್ಕಿ ಸಿಕ್ಕಾಪಟ್ಟೆ ಹೈಲೈಟ್ ಆಗುತ್ತಿದ್ದಾರೆ. ಆದಿಚುಂಚನಗಿರಿ ಸಂಸ್ಥೆಯಲ್ಲ ಯುಕೆಜಿ ಓದುತ್ತಿರುವ ಚುಕ್ಕಿ 'ಚಿರದ್ವಿತಾ, ಆಮ್ರಪಾಲಿ, ಮಿನಿ ಆಮ್ರಪಾಲಿ ಮತ್ತು ಚಕ್ಲಿ...ಅಷ್ಟು ಹೆಸ್ರುನೂ ಇಲ್ಲ. ಅದು ಬಿಟ್ಟಿ ದಯವಿಟ್ಟು ಬೇರೆ ಹೆಸರು ಕರೆಯಬೇಡಿ' ಎಂದು ವಿಟಿ ಆರಂಭದಲ್ಲಿ ಹೇಳಿರುವ ಮಾತುಗಳು ಸಖತ್ ವೈರಲ್‌ ಆಗಿದೆ. ಓದುವುದರಲಿ ಮೊದಲು ಇರುವ ಚುಕ್ಕಿ ಕ್ಲಾಸ್‌ನಲ್ಲಿ ಕದ್ದು ತಿನ್ನುವುದು ಜಾಸ್ತಿ ಅಂತೆ. 

ಆರ್ಕೆಸ್ಟ್ರಾ ಸಿಂಗರ್ ರಮ್ಯಾ ಅವರ ಮುದ್ದಿನ ಪುತ್ರಿ ಚುಕ್ಕಿ. ಹಲವಾರು ಧಾರಾವಾಹಿಗಳಲ್ಲಿ ನಟಿಸಿ, ಸಿನಿಮಾಗಳಲ್ಲಿ ಸಣ್ಣ ಪುಟ್ಟ ಮಾಡಿರುವ ರಮ್ಯಾ ಮಗಳನ್ನು ಮುದ್ದಾಗಿ ಬೆಳೆಸಿದ್ದಾರೆ. ಹಳ್ಳಿಯಲ್ಲಿ ಹುಟ್ಟಿ ಬೆಳೆದಿರುವ ರಮ್ಯಾ ಬೆಂಗಳೂರಿಗೆ ಬಂದು ಇರೋ ಬರೋ ಆಡಿಷನ್‌ಗಳನ್ನು ನೀಡಿದ್ದಾರೆ. ಚೆಂದ ಮೇಕಪ್ ಮಾಡಿಕೊಂಡರೆ ಅವಕಾಶಗಳು ಸಿಗುತ್ತಿತ್ತು ಆದರೆ ಪೇಮೆಂಟ್‌ ಇರುತ್ತಿರಲಿಲ್ಲವಂತೆ, ಏನೂ ರೆಡಿಯಾಗದೆ ಹೋದರೆ ರಿಜಿಕ್ಟ್‌ ಅಗುತ್ತಿದ್ದರಂತೆ. 

5 ವರ್ಷ ಮಗುನೇ ಬೇಡ ಅನ್ಕೊಂಡಿದ್ದೆ ಆದರೆ ದೇವ್ರು ಇಬ್ರುನ ಕೊಟ್ಬಿಟ್ಟ: ರಶ್ಮಿ

'ಇದ್ದಕ್ಕಿದ್ದಂತೆ ನನ್ನ ಆರೋಗ್ಯದಲ್ಲಿ ಏರುಪೇರು ಕಂಡಿತ್ತು. ಯುಟರಸ್‌ನಲ್ಲಿ ಫೈಬರೈಡ್‌ಗಳು ಇತ್ತು. ಅದು ಗೆಡ್ಡೆ. ಒಂದು ವರ್ಷದಲ್ಲಿ ಮದುವೆ ಮಾಡಿಕೊಂಡು ಮಗು ಮಾಡಿಕೊಳ್ಳಬೇಕು. ವೃತ್ತಿ ಜೀವನದಲ್ಲೂ ಸೆಟಲ್ ಅಗಿಲ್ಲ ಈಗ ಮಗುನೂ ಆಗಲ್ಲ ಏನು ಮಾಡುವುದು? ನಾನು ಸೂಸೈಟ್ ಮಾಡಿಕೊಳ್ಳುತ್ತೀನಿ ಅಂತ ತೀರ್ಮಾನ ಮಾಡಿದೆ. ಸಾಯಬೇಕು ಅಂತ ತೀರ್ಮಾನ ಮಾಡಿದರೆ ಸತ್ತೋಗು ನನಗೆ ಬೇಜಾರ್ ಇಲ್ಲ ಅದರೆ ಸಾಯುವುದಕ್ಕಿಂತ ನನ್ನನ್ನು ಮದುವೆಯಾಗು ಅಂತ ಹೇಳುತ್ತಾರೆ. ನಾನು ಗರ್ಭಿಣಿ ಆದ ಮೇಲೆ..ಮಗು ಹುಟ್ಟುವವರೆಗೂ ಕಷ್ಟ ಇತ್ತು. ಮಗಳ ಹುಟ್ಟಿದ ಮೇಲೆ ಒಂದು ಚೂರು ನಿದ್ರೆ ಮಾಡುತ್ತಿರಲಿಲ್ಲ. ತುಂಬಾ ಬೇಗ ಮಾತನಾಡಲು ಕಲಿತಲು. ನಾನು ಟಿವಿಯಲ್ಲಿ ಬರಬೇಕು ನಾನು ಥಿಯೇಟರ್‌ನಲ್ಲಿ ಕಾಣಿಸಿಕೊಳ್ಳಬೇಕು ಅಂತ ಮಗಳಿಗೆ ಆಸೆ ಇದೆ ಅದಿಕ್ಕೆ ನಾನು ಸಪೋರ್ಟ್ ಮಾಡುತ್ತಿರುವೆ' ಎಂದು ರಮ್ಯಾ ಮಾತನಾಡಿದ್ದಾರೆ. 

 

Follow Us:
Download App:
  • android
  • ios