5 ವರ್ಷ ಮಗುನೇ ಬೇಡ ಅನ್ಕೊಂಡಿದ್ದೆ ಆದರೆ ದೇವ್ರು ಇಬ್ರುನ ಕೊಟ್ಬಿಟ್ಟ: ರಶ್ಮಿ
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ರಶ್ಮಿ ಮತ್ತು ಅಧಿತಾ. ಓಪನಿಂಗ್ ಎಪಿಸೋಡ್‌ನಲ್ಲೇ ತುಂಟಿ ಅಧಿತಾ ಮಾತಿಗೆ ಫಿದಾ ಆದ ವೀಕ್ಷಕರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿ ಶೋನಲ್ಲಿ ಸೋಷಿಯಲ್ ಮೀಡಿಯಾ influencer ರಶ್ಮಿ ಮತ್ತು ಪುತ್ರಿ ಅಧಿತಾ ಸ್ಪರ್ಧಿಸುತ್ತಿದ್ದಾರೆ.
'ಫೇಸ್‌ಬುಕ್ ಲೈವ್ ನಂದು...ಕೇವಲ 6 ತಿಂಗಳು ಲವ್ ಮಾಡಿದ್ದು 7ನೇ ತಿಂಗಳಿಗೆ ಮದುವೆ ಆಯ್ತು. ನಾವು 5 ವರ್ಷ ಮಗು ಬೇಡ ಅಂತ ಪ್ಲ್ಯಾನ್ ಮಾಡಿಕೊಂಡಿದ್ವಿ' ಎಂದು ಪ್ರೋಮೋದಲ್ಲಿ ಹೇಳಿದ್ದಾರೆ.
'ಆದರೆ ದೇವರು ಒಂದು ಬೇಡ ಅಂತ ಹೇಳಿದ್ಯಾ ಅಲ್ವಾ ಅದಿಕ್ಕೆ ಎರಡು ತಗೋ ಅಂತ ಕೊಟ್ರು. ನಾನು ಎಲ್ಲೇ ಹೋದರು ಜನರು ನನ್ನನ್ನು ಕಂಡು ಹಿಡಿಯುತ್ತಿದ್ದಾರೆ'
'ಅಲ್ಲಿ ನೋಡ್ರೋ ಟ್ವಿನ್ಸ್ ಮಾಮ್ ಅಂತ ಕರೆಯುತ್ತಾರೆ. ಎರಡು ಮಕ್ಕಳ ತಾಯಿ ಅಂತಾನೆ ಕರೆಯುತ್ತಾರೆ. ಅಧಿತಾಗೆ ಏನೇ ಹೇಳಿಕೊಟ್ಟರು ತುಂಬಾ ಬೇಗ ಕಲಿಯುತ್ತಾಳೆ'
'ನಾನು ಬೇಜಾರ್‌ನಲ್ಲಿ ಇದ್ದಾಗ ಅಧಿತಾ ಬಂದು ಏನಾಯ್ತು ಅಂತ ಕೇಳುತ್ತಾಳೆ. ಅವಳಿಗೆ ಎಲ್ಲವೂ ಅರ್ಥವಾಗುತ್ತದೆ. ಪ್ರಶ್ನೆ ಮಾಡುತ್ತಾರೆ. ಅಪ್ಪ-ಅಮ್ಮ ತುಂಬಾನೇ ಇಷ್ಟ ಆದರೆ ಆಕೆ ಡಾಡ್ಸ್ ಮಗಳು'
'ಮನೆಯಲ್ಲಿ ಇಬ್ಬರು ಜಗಳ ಮಾಡುತ್ತಾರೆ ಆದರೆ ಸ್ಕೂಲ್‌ನಲ್ಲಿ ನನ್ನ ಮಗಳು ಮಗನನ್ನು ನೋಡಿಕೊಳ್ಳುತ್ತಾಳೆ. ತಮ್ಮನನ್ನು ಚೆನ್ನಾಗಿ ಕಾಪಾಡಿಕೊಳ್ಳುತ್ತಾಳೆ'
'ನನ್ನ ಅಮ್ಮ ಜಾಸ್ತಿ ಫೋನ್ ನೋಡ್ತಾರೆ ಅದಿಕ್ಕೆ ನನಗೆ ಕೋಪ ಬರುತ್ತದೆ. ಅಮ್ಮ ಜಾಸ್ತಿ ಫೋನ್ ನೋಡಿದರೆ ನನಗೆ ಜಾಸ್ತಿ ಕೋಪ ಬರುತ್ತೆ' ಎಂದು ಅಧಿತಾ ಹೇಳಿದ್ದಾರೆ.
'ತುಂಬಾ ಹೆಮ್ಮೆಯಿಂದ ಹೇಳುತ್ತಿರವೆ ನಾವು ಯಾರ ಹಂಗಿನಲ್ಲಿ ಬದುಕುತ್ತಿಲ್ಲ. ನಾನು ದುಡಿದು ನನ್ನ ಸ್ವಂತ ದುಡ್ಡಿನಲ್ಲಿ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿರುವೆ' ಎಂದು ರಶ್ಮಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.