Asianet Suvarna News Asianet Suvarna News

Bodybuilder Mamatha: 98ರಿಂದ 75 ಕೆಜಿ ತೂಕ ಇಳಿಸಿದೆ, ಬಿಕಿನಿಗೆ ಮನೆಯವರು ಬೇಡ ಅಂದಿದ್ದರು!

ಸೀರೆಯಲ್ಲಿ ವೇಟ್‌ ಲಿಫ್ಟ್‌ ಮಾಡಿ ವೀಕ್ಷಕರಿಗೆ ಬಿಗ್ ಶಾಕ್ ಕೊಟ್ಟ ಬಾಡಿ ಬಿಲ್ಡರ್ ಈಗ ಸೂಪರ್ ಮಾಮ್. 

Colors Kannada Namamma superstar Mamatha talks about her bodybuilding journey vcs
Author
Bangalore, First Published Dec 1, 2021, 2:32 PM IST
  • Facebook
  • Twitter
  • Whatsapp

ಕಲರ್ಸ್ ಕನ್ನಡ (Color Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ (Nammamma Super Star) ಕಾರ್ಯಕ್ರಮದಲ್ಲಿ ಬಾಡಿ ಬಿಲ್ಡರ್ ಮಮತಾ (Bodybuilder Mamatha)ಮತ್ತು ಅವರು ಪುತ್ರಿ ಪೂರ್ವಿಕಾ (Purvika) ಭಾಗಿಯಾಗುತ್ತಿದ್ದಾರೆ. ಮದುವೆ ಆದ್ಮೇಲೆ ಪುರುಷ ಪ್ರಧಾನವಾದ ಬಾಡಿ ಬ್ಯುಲ್ಡಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಾರಣವೇನು? ಇಂಥದ್ದೊಂದು ಕ್ಷೇತ್ರದಲ್ಲಿ ಕೆಲಸ ಮಾಡಲು ಆರಂಭಿಸಿದಾಗ ಕುಟುಂಬಸ್ಥರ ಪ್ರತಿಕ್ರಿಯೆ ಹೇಗಿದೆ ಎಂದು ಮಮತಾ ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ. 

ಮಮತಾ ಅವರಿಗೆ ಮೊದಲ ಮಗು ಪೂರ್ವಿಕಾ ಹುಟ್ಟಿದ ನಂತರ ಇದ್ದಕ್ಕಿದ್ದಂತೆ 98 ಕೆಜಿ ತೂಕ (Weight) ಹೆಚ್ಚಾಗಿದ್ದರು. ತೂಕ ಇಳಿಸಿಕೊಳ್ಳಬೇಕು ಎಂದು ಜಿಮ್‌ಗೆ (Gym) ಸೇರಿಕೊಂಡಿದ್ದರು.  ಡಯಟ್ (Diet) ಮತ್ತು ವರ್ಕೌಟ್‌ಗೆ (Workout) ಪಾಲಿಸಿ 75 ಕೆಜಿಗೆ ಬಂದು ನಿಂತಿದ್ದಾರೆ. ತೂಕ ಕಡಿಮೆ ಆದ ಮೇಲೆ ಫಿಟ್ನೆಸ್‌ (Fitness) ಕಡೆ ಒಲವು ಹೆಚ್ಚಿದ ಕಾರಣ ವಿಭಿನ್ನ ರೀತಿಯಲ್ಲಿ ವರ್ಕೌಟ್ ಮಾಡಲು ಆರಂಭಿಸಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ (Social Media) ಅನೇಕರು ತಮ್ಮ ವರ್ಕೌಟ್ ಮತ್ತು ಫಿಟ್ನೆಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ಮಮತಾ ಅವರ ಕಣ್ಣಿಗೆ ಬಿದ್ದಿದ್ದು 37 ವರ್ಷದ ಸೋನಾಲಿ ಸ್ವಾಮಿ (Sonali Swamy) ಅವರ ಬಾಡಿ ಬಿಲ್ಡಿಂಗ್ ವಿಡಿಯೋ. 23 ವರ್ಷಕ್ಕೆ ಮಗಳು ಹುಟ್ಟಿದ್ದಾಳೆ. 25ನೇ ವಯಸ್ಸಿಗೆ ನಾನು ಯಾಕೆ ಬಾಡಿ ಬಿಲ್ಡರ್ ಆಗಬಾರದು, ಎನ್ನುವ ಪ್ರಶ್ನೆ ಆ ವೀಡಿಯೋ ನೋಡಿದ ಮಮತಾರಿಗೆ ಮೂಡಿತ್ತಂತೆ. ಹೀಗೆ ತಮ್ಮ ಜರ್ನಿ ಆರಂಭಿಸಿದ ನಂತರ ಒಂದು ಸ್ಪರ್ಧೆಯಲ್ಲಿ ಮಮತಾ ಅವರು ಬಿಕಿನಿ ಧರಿಸಬೇಕಿತ್ತು. ಇದಕ್ಕೆ ಮನೆಯವರು ಮತ್ತು ಪಾಲಕರು ಯಾರೂ ಒಪ್ಪಲಿಲ್ಲವಂತೆ. ಬಿಕಿನಿ (Bikini) ಧರಿಸಿ ವೇದಿಕೆ ಮೇಲೆ ನಿಲ್ಲುವುದಕ್ಕೆ ಭಯ ಆಗುತ್ತಿತ್ತು. ಆದರೆ ಒಂದು ಹೊಸ ಪ್ರಯತ್ನ ಮಾಡುತ್ತಿರುವೆ ಎನ್ನುವುದು ಮನಸ್ಸಿನಲ್ಲಿತ್ತು ಎಂದಿದ್ದಾರೆ. 

ತಂದೆ-ತಾಯಿಗೆ ಕಣ್ಣಿಲ್ಲ, 7 ತಿಂಗಳಿಗೆ ಹುಟ್ಟಿದ್ದ ತುಂಟ ಪುತ್ರ: Geetha ಧಾರಾವಾಹಿ ನಟಿಯ ಜೀವನವಿದು!

'ಬಾಡಿ ಬಿಲ್ಡಿಂಗ್‌ನಲ್ಲಿ ಕೈಯಲ್ಲಿ ನರಗಳು (vains) ಎದ್ದು ಕಾಣಿಸುತ್ತವೆ. ಆಗ ಕೆಲವರು ಹೇಳುತ್ತಾರೆ, ನೋಡು ನೀನು ಹುಡುಗ (Men) ಆಗ್ತಿದ್ಯಾ ಅಂತಾರೆ. ಸಂಬಂಧಿಕರು ನಿನ್ನ ಮುಖ ಈಗ  ನೋಡೋಕೆ ಚೆನ್ನಾಗಿಲ್ಲ ಎಂತಾರೆ. ಬಾಡಿ ತುಂಬಾ ಸಣ್ಣ ಆದಂಗೆ ಕಾಣ್ಸುತ್ತೆ ಅಂತಾನೂ ಹೇಳ್ತಾರೆ. ನಿನಗೆ ರೋಗ ಬಂದಂಗಿದೆ ಅಂತ ಕಮೆಂಟ್ ಮಾಡುತ್ತಾರೆ. ತುಂಬಾ ಜನ ನನ್ನ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಬಿಕಿನಿ ಲುಕ್‌ ಬಗ್ಗೆ ಕೆಟ್ಟದಾಗಿಯೇ ಮಾತನಾಡಿದ್ದಾರೆ.  10 ಜನರಲ್ಲಿ ಇಬ್ಬರು ಮಾತ್ರ ಸಪೋರ್ಟ್ (Support) ಮಾಡಿದ್ದಾರೆ. ನನ್ನ ಪೋಷಕರಿಗೆ (Parents) ಮತ್ತು ಪತಿಗೆ (Husband) ನಾನು ನಂಬಿಕೆ ಇಡಲು ಹೇಳುತ್ತಿದ್ದೆ. ನನ್ನ ಎದುರಿಗೆ ಕೆಲವರು ಹೇಳಿದ್ದಾರೆ, ನಿನ್ನ ವಾಯ್ಸ್ (Voice) ಯಾಕೆ ಈ ರೀತಿ ಆಗಿದೆ? ಹುಡುಗರ ತರ ಅಂದಿದ್ದಾರೆ,' ಎಂದು ಮಮತಾ ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Viral Video: ಕಂತೆ ಕಂತೆ ಹಣ ತರ್ತಾರಂತೆ ಮಾಸ್ಟರ್ ಆನಂದ್, ಪುತ್ರಿ ವಂಶಿಕಾ ಮಾತು ಕೇಳಿ!

'ಮೂರು ಗೋಲ್ಡ್‌ ಮೆಡಕಲ್ (Gold medal), ಒಂದು ಸಿಲ್ವರ್ ಮೆಡಲ್ (Silver Medal) ಬಂದಿವೆ. ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ (Karnataka book of record) ಮತ್ತು ವರ್ಲ್ಡ್‌ ಬುಕ್ ಆಫ್ ರೆಕಾರ್ಡ್‌ನಲ್ಲಿ recognisation ಸಿಕ್ಕಿದೆ. ವರ್ಲ್ಡ್‌ ಲೀಡರ್‌ಶಿಪ್ ವುಮೆನ್ ಅವಾರ್ಡ್ ಸಿಕ್ಕಿದೆ. ತುಂಬಾನೇ ಅವಾರ್ಡ್‌ಗಳು ಬಂದಿವೆ,' ಎಂದು ಮಮತಾ ಮಾತನಾಡಿದ್ದಾರೆ. 

ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ನಟಿಯರು, ಆರ್‌ಜೆ, ನೃತ್ಯಗಾರ್ತಿ ಹೀಗೆ ವಿಭಿನ್ನ ಕ್ಷೇತ್ರಗಳಿಂದ ಅಮ್ಮಂದಿರು ತಮ್ಮ ಮಕ್ಕಳನ್ನು ಕರೆದುಕೊಂಡು ಮಜಾ ಮಾಡುತ್ತಾ, ಟ್ರೋಫಿ ಗೆಲ್ಲುವುದಕ್ಕೆ ಬಂದಿದ್ದಾರೆ.  ಮೊದಲ ದಿನವೇ ನಟಿ ತಾರಾ ಅನುರಾಧ (Tara Anuradha) ಮಕ್ಕಳಿಗೆ ಗಿಫ್ಟ್‌ ನೀಡಿದ್ದಾರೆ. ಮೊದಲ ಬಾರಿ ಅನು ಪ್ರಭಾಕರ್ ತೀರ್ಪುಗಾರ್ತಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು. ಪುಟ್ಟ ಮಕ್ಕಳು ಅಪ್ಪ ಅಮ್ಮನಿಗೆ ಕಾಟ ಕೊಡುವ ರೀತಿ ನೋಡಿ ನನ್ನ ಮಗಳು ನಂದನಾ ಕೂಡ ಇದೇ ರೀತಿ ಮಾಡಬಹುದು, ಎಂದು ಅನು ಪ್ರಭಾಕರ್ (Anu Prabhakar) ಚಿಂತಿಸುತ್ತಿದ್ದಾರೆ.

Follow Us:
Download App:
  • android
  • ios