Asianet Suvarna News Asianet Suvarna News

ತಂದೆ-ತಾಯಿಗೆ ಕಣ್ಣಿಲ್ಲ, 7 ತಿಂಗಳಿಗೆ ಹುಟ್ಟಿದ್ದ ತುಂಟ ಪುತ್ರ: Geetha ಧಾರಾವಾಹಿ ನಟಿಯ ಜೀವನವಿದು!

ನೀನಾ ನೀನಾ ಎಂದು ಪದೇ ಪದೇ ಸೃಜನ್ ಲೋಕೇಶ್‌ಗೆ ಪ್ರಶ್ನೆ ಮಾಡುವ ಮೂಲಕ ಪಾಪ್ಯೂಲರ್ ಆಗಿರುವ ಅಮ್ಮ-ಮಗ ಜೋಡಿ..... 

Colors Kannada Namamma Super Star actress Vindya Rohit wins netizen love in introduction round vcs
Author
Bangalore, First Published Dec 1, 2021, 12:44 PM IST
  • Facebook
  • Twitter
  • Whatsapp

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ನನ್ನಮ್ಮ ಸೂಪರ್ ಸ್ಟಾರ್' (Nanamma Super Star). ನಟಿ ತಾರಾ ಅನುರಾಧ (Tara Anuradha), ಟಾಕಿಂಗ್ ಟಾಮ್ ಸೃಜನ್ ಲೋಕೇಶ್ (Srujan Lokesh) ಮತ್ತು ನಟಿ ಅನು ಪ್ರಭಾಕರ್ (Anu Prabhakar) ತೀರ್ಪುಗಾರಿಕೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ವೀಕ್ಷಕರ ಗಮನ ಸೆಳೆದಿರುವುದು ತುಂಟ ಹುಡುಗ ರೋಹಿತ್ (Rohit) ಮತ್ತು ಅವರ ಅಮ್ಮ ವಿಂದ್ಯಾ (Vindya). 

ಗೀತಾ (Geetha) ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯ ಸ್ನೇಹಿತೆಯಾಗಿ ಕಾಣಿಸಿಕೊಂಡಿರುವ ವಿಂದ್ಯಾ ಅವರು ಇದೀಗ ಪುತ್ರನ ಜೊತೆ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.  ನವೆಂಬರ್ (November) ಕೊನೆಯ ವಾರದಲ್ಲಿ ಶೋ ಗ್ರ್ಯಾಂಡ್ ಓಪನಿಂಗ್ ಮಾಡಲಾಗಿತ್ತು ಪ್ರತಿಯೊಂದು ಕುಟುಂಬವನ್ನು (Family) ವೀಕ್ಷಕರಿಗೆ ಪರಿಚಯ ಮಾಡಿಕೊಡಲಾಗಿತ್ತು. ಈ ವೇಳೆ ವಿಂದ್ಯಾ ಅವರ ವೈಯಕ್ತಕ ಜೀವನದ ಬಗ್ಗೆ ಕೇಳಿ ಅದೆಷ್ಟೋ ಜನ ಹೆಮ್ಮೆ ಪಟ್ಟಿದ್ದಾರೆ ಇನ್ನು ಕೆಲವರು ಭಾವುಕರಾಗಿದ್ದಾರೆ. 

ವೇದಿಕೆ ಮೇಲೆ ರೋಹಿತ್ ತುಂಟನ ನೋಡಿ ಸೃಜನ್ ಅವರು ವಿಂದ್ಯಾಗೆ ಪ್ರಶ್ನೆ ಮಾಡಿದ್ದಾರೆ. ಇವನು ಹೊಟ್ಟೆಯಲ್ಲಿದ್ದಾಗ ನೀವು ಏನು ತಿಂತಿದ್ದೆ ಅಮ್ಮ? ಎಂದು. 'ಇಲ್ಲ ಸರ್ ಅವನು 7 ತಿಂಗಳಿಗೆ ಹುಟ್ಟಿರುವುದು ಅವನು ಪ್ರೀ ಮೆಚುರ್ ಬೇಬಿ (Pre Mature baby)' ಎಂದು ವಿಂದ್ಯಾ ಹೇಳುತ್ತಾರೆ. ಇವನು ಇಷ್ಟು ತುಂಟ ಅಂದ್ಮೇಲೆ ಖಂಡಿತ ಬೇಗ ಬಂದಿರುತ್ತಾನೆ, ಎಂದು ತಾರಾ ಹೇಳುತ್ತಾರೆ. ಆನಂತರ ನಿರೂಪಕಿ ಅನುಪಮಾ ಗೌಡ (Anupama Gowda), ವಿಂದ್ಯಾ ಕುಟುಂಬವನ್ನು ಪರಿಚಯ ಮಾಡಿಕೊಡುತ್ತಾರೆ. 

Reality Show: ನನ್ನಮ್ಮ ಸೂಪರ್‌ಸ್ಟಾರ್‌ಗೆ ಅನು ಪ್ರಭಾಕರ್ ಜಡ್ಜ್

ವಿಂದ್ಯಾ ಅವರ ತಂದೆ ಮತ್ತು ತಾಯಿಗೆ ಕಣ್ಣು ಕಾಣಿಸುವುದಿಲ್ಲ. ಕಣ್ಣಿಲ್ಲದಿದ್ದರೂ ಮಗಳ ಜೀವನ ಚೆನ್ನಾಗಿರಬೇಕು ಎಂದು ಇಬ್ಬರು ಕೆಲಸ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಫೋನ್ ಬೂತ್ (Hospital Phonebooth) ನೋಡಿಕೊಳ್ಳುವ ಕೆಲಸವನ್ನು ಅವರ ತಾಯಿ ಮಾಡುತ್ತಿದ್ದರು. ಹಾಗೆ ಬಿಇಲ್‌ನಲ್ಲಿ (BEL) ಅವರ ತಂದೆ ಕೆಲಸ ಮಾಡಿದ್ದಾರೆ. ಅಲ್ಲದೆ ನ್ಯಾಷನಲ್ ಬೇಸ್ ವರ್ಕ್ ಹ್ಯಾಂಡಿಕ್ಯಾಪ್  ಪ್ರಶಸ್ತಿಯನ್ನು ವಿಂದ್ಯಾ ತಂದೆ ಸ್ವೀಕರಿಸಿದ್ದಾರೆ. ವೃತ್ತಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ವಿಂದ್ಯಾ ವಿದ್ಯಾಭ್ಯಾಸ ಮುಗಿಸಿ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಾರೆ. 

ಸಿಂಗಲ್ ಪೇರೆಂಟ್ (Single Parenting) ಆಗಿರುವ ವಿಂದ್ಯಾ ವೇದಿಕೆ ಮೇಲೆ 'ನನಗೆ ಮೂವರು ಮಕ್ಕಳಿವೆ. ತಂದೆ,ತಾಯಿ ಮತ್ತು ನನ್ನ ಪುತ್ರ. ಮೂವರನ್ನೂ ನಾನು ನೋಡಿಕೊಳ್ಳುತ್ತಿರುವೆ. ನಾನು ಕೆಲಸ ಮಾಡಬೇಕು. ಮಗನಿಗೆ ಒಳ್ಳೆಯ ಜೀವನ ನೀಡಬೇಕು, ಎಂದು ನೀನು ಕೆಲಸಕ್ಕೆ ಹೋಗು, ನಾನು ಮಗು ನೋಡಿಕೊಳ್ಳುವೆ ಎಂದು ಅಮ್ಮ ಹೇಳುತ್ತಾರೆ. ಇವರಿಂದ ಇಷ್ಟು ಸಪೋರ್ಟ್ ಸಿಗುವುದಕ್ಕೆ ನಾನು ಪುಣ್ಯ ಮಾಡಿರುವೆ,' ಎಂದು ವಿಂದ್ಯಾ ವೇದಿಕೆ ಮೇಲೆ ಮಾತನಾಡಿದ್ದಾರೆ. 

Viral Video: ಕಂತೆ ಕಂತೆ ಹಣ ತರ್ತಾರಂತೆ ಮಾಸ್ಟರ್ ಆನಂದ್, ಪುತ್ರಿ ವಂಶಿಕಾ ಮಾತು ಕೇಳಿ!

'ಇದು ಕಾಂಪಿಟೇಷನ್ (Competation) ಅನ್ನೋದಕ್ಕಿಂದ ಮಕ್ಕಳ ಜೊತೆ ಸಮಯ ಕಳೆಯುವುದಕ್ಕೆ ತುಂಬಾ ಖುಷಿ ಆಗುತ್ತಿದೆ,' ಎಂದು ವಿಂದ್ಯಾ ಲೈವ್‌ ಚಾಟ್‌ನಲ್ಲಿ (Live Chat) ಮಾತನಾಡಿದ್ದಾರೆ. 'ನಿಮಗೆ ಮದುವೆ ಆಗಿದೆ ಅಂತಾನೇ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ನೀವು ರೆಡಿ ಆಗಿರುವ ಸ್ಟೈಲ್ ಮತ್ತು ಆ ನಗುವಿನ ಹಿಂದೆ ಇಷ್ಟೊಂದು ಕಥೆ ಇದೆ ಅಂದ್ರೆ ಯಾರಿಗೂ ನಂಬೋಕೆ ಆಗಲ್ಲ. ಅದಲ್ಲದೆ ತಂದೆ ತಾಯಿ ಪರಿಸ್ಥಿತಿ, ಮಗನಿಗಾಗಿ ನೀವು ಜೀವನ ಕಟ್ಟಿಕೊಳ್ಳುತ್ತಿರುವ ರೀತಿ ಎಲ್ಲವೂ ಗ್ರೇಕ್ ಅಕ್ಕ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

 

Follow Us:
Download App:
  • android
  • ios