Asianet Suvarna News Asianet Suvarna News

Reality Show: ನನ್ನಮ್ಮ ಸೂಪರ್‌ಸ್ಟಾರ್‌ಗೆ ಅನು ಪ್ರಭಾಕರ್ ಜಡ್ಜ್

ಮಕ್ಕಳ ಜೊತೆ ಹೊಸ ರಿಯಾಲಿಟಿ ಶೋ. ಅಮ್ಮ ಸೂಪರ್ ಸ್ಟಾರ್ ಎಂದು ಹೇಳಲು ಬರ್ತಿದ್ದಾರೆ ಪುಟಾಣಿ ಪಂಟರ್‌ಗಳು.

Colors Kannada actress Anu Prabhakar as a judge in Nanamma Superstar reality show vcs
Author
Bangalore, First Published Nov 26, 2021, 5:36 PM IST
  • Facebook
  • Twitter
  • Whatsapp

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ರಾಜಾ ರಾಣಿ (Raja Rani) ರಿಯಾಲಿಟಿ ಶೋ ಮುಗಿದ ನಂತರ ಮತ್ತೊಂದು ಬಿಗ್ ಬಜೆಟ್ ರಿಯಾಲಿಟಿ ಶೋ ಆರಂಭವಾಗುತ್ತಿದೆ. ಅದೇ ನನ್ನಮ್ಮ ಸೂಪರ್ ಸ್ಟಾರ್ (Nanamma Super star) ಎಂದು. ನಟಿ ತಾರಾ ಅನುರಾಧ (Tara Anuradha) ಮತ್ತು ಸೃಜನ್ ಲೋಕೇಶ್‌ (Srujan Lokesh) ಜೊತೆ ಮೊದಲ ಬಾರಿ ನಟಿ ಅನು ಪ್ರಭಾಕರ್ (Anu Prabhakar) ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನವೆಂಬರ್ 27ರಂದು ಆರಂಭವಾಗುತ್ತಿರುವ ಈ ಶೋ, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ (Social media) ಹವಾ ಕ್ರಿಯೇಟ್ ಮಾಡುತ್ತಿದೆ. 

ನನ್ನಮ್ಮ ಸೂಪರ್ ಸ್ಟಾರ್ ಶೋನ ತೀರ್ಪುಗಾರರಾಗಬೇಕು ಅಂದ್ರೆ ಅವ್ರು ಕೂಡ ಪುಟ್ಟ ಮಕ್ಕಳ ಜೊತೆ ಏಗಿ ಮುದ್ದಾಡಿ, ಅವರ ತುಂಟಾಟ ಅನುಭವಿಸಿರಬೇಕು. ತಾರಾ ಅವರಿಗೂ ಪುಟ್ಟ ಮಗನಿದ್ದಾನೆ, ಸೃಜನ್‌ಗೆ ಡಬಲ್ ಧಮಾಕಾ. ಏಕೆಂದರೆ ಇಬ್ಬರು ನಾಟಿ ಗಂಡು ಮಕ್ಕಳಿವೆ ಅವರಿಗೆ. ಹಾಗೇ ಅನು ಪ್ರಭಾಕರ್ ಅವರ ಮಗಳು ನಂದನಾ (Nandana Prabhakar) ಕೂಡ ಎಷ್ಟು ಕ್ಯೂಟ್ ಎಂದು ನೀವು ಅವರ ಇನ್‌ಸ್ಟಾಗ್ರಾಂನಲ್ಲಿ (Instagran) ನೋಡಿರುತ್ತೀರಿ. ಹೀಗಾಗಿ ಇವರೇ ಪರ್ಫೆಕ್ಟ್‌ ಜೆಡ್ಜ್‌ (Prefect Judge) ಅಂದ್ರೆ ತಪ್ಪಾಗದು ನೋಡಿ. 

Raja Rani ಕಿರೀಟ ಮತ್ತು ದೊಡ್ಡ ಮೊತ್ತ ಪಡೆದುಕೊಂಡ ನೇಹಾ-ಚಂದು!

'ಈ ಹಿಂದೆ ಡ್ಯಾನ್ಸ್ ಶೋನ (Dance show) ಜಡ್ಜ್‌ ಮಾಡಿದ್ದೆ. ಆದರೆ ಈ ಶೋ ನನ್ನ ಮನಸ್ಸಿಗೆ ತುಂಬಾನೇ ಹತ್ತಿರವಾಗಿದೆ. ಏಕೆಂದರೆ ನಾನು ದಿನವೂ ಮಗಳ ಜೊತೆ ಎಕ್ಸಪೀರಿಯನ್ಸ್ (Experience) ಮಾಡುವ ಕ್ಷಣಗಳಿವು. ನಿರೂಪಕಿ ಅನುಪಮಾ (Anupama Gowda) ತುಂಬಾನೇ ಸ್ಪಾನ್ಟೇನಿಯಸ್ (Spontaneous), ಸೃಜನ್ ಮತ್ತು ನಾನು ಬಾಲ್ಯ ಸ್ನೇಹಿತರು. ನಾವು ಆಗಲೇ ಒಟ್ಟಿಗೆ ಕೆಲಸ ಮಾಡ್ತಿದ್ದೀವಿ. ತಾರಮ್ಮ ಕೂಡ ನಮ್ಮ ಜೊತೆ ಇದ್ದಾರೆ. ನಮ್ಮನ್ನ ಇಷ್ಟು ಪಡುವವರ ಬಳಿ ಬೇಗ ಹತ್ತಿರ ಕರೆದುಕೊಂಡು ಹೋಗುವುದು ಕಿರುತೆರೆ. ಅವರ ಮನೆ, ಅವರ ಲೀವಿಂಗ್ ಏರಿಯಾದಲ್ಲಿ (Living area) ನಮ್ಮನ್ನ ದಿನ ನೋಡುತ್ತಾರೆ. ನಾನು ಇವತ್ತು ಏನೇ ಇದ್ದರೂ ಅದು ನನ್ನ ತಾಯಿ ಗಾಯಿತ್ರಿ ಪ್ರಭಾಕರ್ (Gayathri Prabhakar) ಅವರ ಮಗಳಾಗಿ. ನಾನು ಚಿತ್ರರಂಗಕ್ಕೆ ಬಂದಿದ್ದು ಪಾರ್ವತಮ್ಮ (Parvathamma Rajkumar) ಅವರಿಂದ. ಗಾಯಿತ್ರಿ ಮಗಳು ಇದ್ದಾಳೆ ಅಂತ, ಅವರೇ ಬಣ್ಣದ ಲೋಕಕ್ಕೆ ಕರೆ ತಂದರು. ನನ್ನ ಜೀವನದಲ್ಲಿ ತಾಯಿ ಕೊಡುಗೆ ಅಪಾರ,' ಎಂದು ಅನು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

 

'ನನ್ನ ಮಗಳು 15 ತಿಂಗಳು ಇದ್ದಾಗ ನಾನು ಮೊದಲು ಬಣ್ಣ ಹಚ್ಚಿದ್ದು. ಖಂಡಿತ ನಾನು ಇಲ್ಲ ಅಂದ್ರೆ ಮಿಸ್ ಮಾಡಿಕೊಳ್ಳುತ್ತಾಳೆ. ವಿಮಾನದಲ್ಲಿ (Aeroplane) ಹೋಗ್ತೀದ್ದೀನಿ, ಅದು ಇದು ಅಂತ ಸುಮ್ಮನೆ ಹೇಳ್ತಿದ್ವಿ. ಈಗ ಅವಳಿಗೆ ಶೂಟಿಂಗ್ (Shooting) ಅನ್ನೋ ಪದದ ಅರ್ಥವೂ ಗೊತ್ತಿಲ್ಲ. ಆದರೆ ಶೂಟಿಂಗ್ ಅಂದ್ರೆ ಕೆಲಸ ಅಂತ ಗೊತ್ತಾಗಿದೆ. ಹೊರಗಡೆ ಚಿತ್ರೀಕರಣ ಮಾಡಿ ಬಂದಾಗ, ನಾನು ಆಕೆಯ ಕಣ್ಣು ಮುಂದಯೇ ಇರಬೇಕು. ಆ ಕಡೆ ಈ ಕಡೆ ಹೋಗಬಾರದು. ತಂದೆ ಕೆಲಸಕ್ಕೆ ಹೋದರೂ, ಆಕೆ ಹಾಗೆ ಮಾಡುತ್ತಾಳೆ,' ಎಂದು ಅನು ಹೇಳಿದ್ದಾರೆ. 

ನಂದನಾ ಪ್ರಭಾಕರ್ ಮುಖರ್ಜಿಗೆ 3 ವರ್ಷ: ಅದ್ಧೂರಿ ಬರ್ತಡೇ ಹೇಗಿತ್ತು ನೋಡಿ!

ಇನ್ನು ಸ್ಪರ್ಧಿಗಳಾಗಿ ಕಿರುತೆರೆ ನಟಿಯರು ಮತ್ತು ಅವರ ಮಕ್ಕಳು ಕಾಣಿಸಿಕೊಳ್ಳಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋಗಳು ವೈರಲ್ ಆಗುತ್ತಿವೆ. ಆದರೆ ವ್ಯಕ್ತಿ ಪರಿಚಯ ಶನಿವಾರ ಮತ್ತು ಭಾನುವಾರ ನಡೆಯಲಿದೆ. ಅದರಲ್ಲೂ ಮಾಸ್ಟರ್ ಆನಂದ್ (Master Anand) ಪುತ್ರಿಯ ತುಂಟ ಮಾತುಗಳು ಈಗಾಗಲೇ ಹಲವರ ಗಮನ ಸೆಳೆದಿದೆ.

Follow Us:
Download App:
  • android
  • ios