ನಕ್ಷತ್ರ ಅಭಿನಯಕ್ಕೆ ಫಿದಾ ಆದ ಜಗನ್ನಾಥ್; ಲಕ್ಷಣ ಕಥೆಗೆ ವೀಕ್ಷಕರು ಫಿದಾ!
ಸೂಪರ್ ಡೂಪರ್ ಆಗಿದೆ ನಕ್ಷತ್ರ - ಭೂಪತಿ ಕಾಂಬಿನೇಷನ್. ಇಷ್ಟು ದಿನಗಳ ಕಾಲ ನೋಡಿದ ಬಣ್ಣದ ತಾರತಮ್ಯ ಕಥೆಗಳಿಗಿಂತ ವಿಭಿನ್ನವಾಗಿದೆ 'ಲಕ್ಷಣ'.
ಕಲರ್ ಕನ್ನಡ ವಾಹಿನಿಯಲ್ಲಿ ಪ್ರಸಾರಾಗುತ್ತಿರುವ ವಿಭಿನ್ನ ಕಥೆಯುಳ್ಳ 'ಲಕ್ಷಣ' ಧಾರಾವಾಹಿ ದಿನೇ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ನಿಜ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿ ಬಣ್ಣದ ತಾರತಮ್ಯ ಎದುರಿಸಿರುತ್ತಾರೆ. ಇದರ ಬಗ್ಗೆ ಸಿನಿಮಾಗಳು ಹಾಗೂ ಸಾಕಷ್ಟು ಧಾರಾವಾಹಿಗಳೂ ಬಂದು ಹೋಗಿವೆ. ಇದೇ ಕಾನ್ಸೆಪ್ಟ್‌ಗೆ ಡಿಫರೆಂಟ್ ಸ್ಟೋರಿ ನೀಡಿದ್ದಾರೆ. ನಕ್ಷತ್ರ ಕಪ್ಪು ಬಣ್ಣದ ಹುಡುಗಿ, ಶ್ವೇತಾ ಬಿಳಿ ಬಣ್ಣದ ಸಿರಿವಂತ ಹುಡುಗಿ.
ಭೂಪತಿ ಪಾತ್ರದಲ್ಲಿ ನಟ ಜಗನ್ನಾಥ್, ನಕ್ಷತ್ರ ಪಾತ್ರದಲ್ಲಿ ವಿಜಯಲಕ್ಷ್ಮಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ವೇತಾ ಪಾತ್ರದಲ್ಲಿ ಅಗ್ನಿಸಾಕ್ಷ್ಮಿ ಖ್ಯಾತಿಯ ಸುಕೃತಾ ನಾಗ್ ಕಾಣಿಸಿಕೊಂಡಿದ್ದಾರೆ. ನಕ್ಷತ್ರ ಹಾಗೂ ಶ್ವೇತಾ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿರುತ್ತಾರೆ. ಆದರೆ ಬಣ್ಣ ಬೇರೆ ಬೇರೆ ಇದ್ದ ಕಾರಣ ಅದಲು ಬದಲಾಗಿ ಬೇರೆ ಬೇರೆ ಪೋಷಕರ ಮಡಿಲು ಸೇರುತ್ತಾರೆ. 20 ವರ್ಷಗಳ ನಂತರ ವೈದ್ಯೆ ಅವರ ಪೋಷಕರನ್ನು ಹುಡುಕಿ ಸತ್ಯ ಹೇಳುವ ಪ್ರಯತ್ನ ಮಾಡುತ್ತಾರೆ. ಆದರೆ ಶ್ವೇತಾ ಅತ್ತೆ ಇದನ್ನು ತಡೆಯುತ್ತಾರೆ.
ಅಪ್ಪನ ಹುಡುಕುತ್ತಿರುವೆ, ಸಾಯುವ ಮುನ್ನ ಒಮ್ಮೆಯಾದರೂ ನೋಡಬೇಕು: ನಟಿ ವೈಷ್ಣವಿ'ಕೆಲವೊಮ್ಮೆ ನೀವು ಮಾಡುವುದರ ಬಗ್ಗೆ ನಿಮಗೆ ಇಷ್ಟವಾಗಿ ಬಿಡುತ್ತದೆ. ಲಕ್ಷಣ ಕೂಡ. 12 ಗಂಟೆಗಳ ಕಾಲ ಮಳೆಯಲ್ಲಿ ತೆಗೆದ ದೃಶ್ಯ ಇದು. ಕಥೆ ಬರೆಯುತ್ತಿರುವ ನಿಶಿತಾ ಅವರಿಗೆ ಧನ್ಯವಾದಗಳು,' ಎಂದು ಜಗನ್ ಬರೆದುಕೊಂಡಿದ್ದಾರೆ. ಧಾರಾವಾಹಿಯಲ್ಲಿ ಭೂಪತಿ ಸಿರಿವಂತ ಹುಡುಗ, ಜನ ಸಾಮಾನ್ಯರ ಜೀವ ಅರ್ಥ ಮಾಡಿಕೊಳ್ಳಬೇಕು, ಹಣವಿಲ್ಲದೆ ಹೆಸರಿಲ್ಲದೆ ಜೀವನ ನಡೆಸುವುದು ಹೇಗೆ ಎಂದು ತಿಳಿದುಕೊಳ್ಳಲು ಸಣ್ಣ ಹೋಟೆಲ್‌ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಾನೆ. ಅಲ್ಲದೇ ನಕ್ಷತ್ರ ಮನೆಯಲ್ಲಿಯೇ ಪೇಯಿಂಗ್ ಗೆಸ್ಟ್ ಆಗಿರುತ್ತಾನೆ. ಯಾರ ಬಳಿಯೂ ಸತ್ಯ ಹೇಳಿಕೊಳ್ಳಲಾಗದೇ ಜೀವನ ನಡೆಸುತ್ತಿರುವ ಭೂಪತಿ, ಪ್ರತಿ ವಿಚಾರವನ್ನು ಡೈರಿಯಲ್ಲಿ ದಾಖಲಿಸಿ ಇಡುತ್ತಿರುತ್ತಾನೆ. ಶ್ವೇತಾಗೆ ಈ ಹಿಂದೆಯೇ ಭೂಪತಿ ಮದುವೆ ಆಗುವ ಪ್ರಪೋಸಲ್ ಇತ್ತು. ಈಗಲೇ ಮದುವೆ ಬೇಡ ಎಂದು ನಿರಾಕರಿಸಿರುತ್ತಾಳೆ. ಆದರೆ ಭೂಪತಿ ಸಿರಿವಂತ ಎಂದು ತಿಳಿಯುತ್ತಿದ್ದಂತೆ, ಭೂಪತಿಯನ್ನು ವರಿಸಲು ನಕ್ಷತ್ರಳ ಸ್ನೇಹ ಸಂಪಾದಿಸುವ ನಾಟಕ ಆಡುತ್ತಿದ್ದಾಳೆ.