kwatle kitchen show: ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಕ್ವಾಟ್ಲೆ ಕಿಚನ್’ ಶೋ ಪ್ರಸಾರ ಆಗಲಿದೆ. ಈಗ ಫಿನಾಲೆಯಲ್ಲಿ ಈ ವಾರ ಯಾರು ವಿನ್ನರ್ ಆಗ್ತಾರೆ?
ಈಗಾಗಲೇ ಪ್ರೇಕ್ಷಕರ ಮನರಂಜನೆಗಾಗಿ ಕಲರ್ಸ್ ಕನ್ನಡವು ವಿವಿಧ ಶೋಗಳನ್ನು ನೀಡುತ್ತ ಬಂದಿದೆ. ಈಗ ಇನ್ನೊಂದು ಕಾಮಿಡಿ ಕುಕ್ಕಿಂಗ್ ಶೋ 'ಕ್ವಾಟ್ಲೆ ಕಿಚನ್’ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದಿದೆ.
ಈ ಶೋನ ಫಿನಾಲೆ ಯಾವಾಗ?
ಈ ಶನಿವಾರ ‘ಕ್ವಾಟ್ಲೆ ಕಿಚನ್' ಶೋನ ಗ್ರಾಂಡ್ ಫಿನಾಲೆಯನ್ನು ಜನರಿಗೆ ತಲುಪಿಸುತ್ತಿದೆ. ಈ ಶನಿವಾರ 27 ಸೆಪ್ಟೆಂಬರ್ರಂದು ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ಈ ಕುತೂಹಲಭರಿತ ‘ಕುಕ್ಕಿಂಗ್ ಶೋ’ನ ಗ್ರಾಂಡ್ ಫಿನಾಲೆ ಶೋ ಪ್ರಸಾರವಾಗಲಿದೆ.
ಕಲಾವಿದರು ಭಾಗಿ
ನೂರಕ್ಕೆ ನೂರಷ್ಟು ಇಲ್ಲಿ ಕಾಮಿಡಿ ಕೂಡ ಇತ್ತು. 'ಕ್ವಾಟ್ಲೆ ಕಿಚನ್' ಶೋನ ಸಂಚಿಕೆಯಲ್ಲಿ ‘SU from So ‘ ಸಿನಿಮಾ ನಟ ರಾಜ್ ಬಿ ಶೆಟ್ಟಿ, ರವಿಯಣ್ಣ, ಜೆಪಿ ತುಮಿನಾಡ್ ಅತಿಥಿಗಳಾಗಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ನಟಿ ಖುಷಿ ರವಿ, ಮಾಂಗಲ್ಯ ತಂತುನಾನೇನ ಧಾರಾವಾಹಿ ನಟಿ ದಿವ್ಯಾ ಕೂಡ ಭಾಗವಹಿಸಿದ್ದರು.
ಫೈನಲಿಸ್ಟ್ ಯಾರು?
ಆರು ಮಂದಿ ಫೈನಲಿಸ್ಟ್ ಕುಕ್‌ಗಳು, ಎರಡು ರೌಂಡ್‌ನ ಮಹಾ ಪೈಪೋಟಿ. ಈ ಮೂಲಕ ಒಬ್ಬ ವಿನ್ನರ್ ತೀರ್ಮಾನವಾಗಲಿದೆ. ಕುಕ್‌ಗಳಾಗಿ ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್ ಕೆ ಚಂದನ್, ದಿಲೀಪ್ ಶೆಟ್ಟಿ, ಕಾವ್ಯಾ ಗೌಡ, ಶರ್ಮಿತಾ ಗೌಡ, ರಾಘವೇಂದ್ರ ಅವರು ಈ ಶೋನಲ್ಲಿ ಆರು ಫೈನಲಿಸ್ಟ್‌ಗಳಾಗಿದ್ದಾರೆ. ಈ ಆರು ಮಂದಿಯಲ್ಲಿ ವಿನ್ನರ್ ಯಾರು, ಟ್ರೋಫಿ ಜೊತೆಗೆ ಐದು ಲಕ್ಷ ರೂಪಾಯಿ ಗೆಲ್ಲೋ ಅದೃಷ್ಟ ಯಾರದ್ದು ಎಂಬ ಜನರ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ನಿರೂಪಕರು ಯಾರು?
ಈ ಶೋನ ತೀರ್ಪುಗಾರರಾಗಿ ಹಿರಿಯ ನಟಿ ಶ್ರುತಿ ಅವರು ಭಾಗವಹಿಸಿದ್ದರು. ಕಳೆದ 25 ವರ್ಷಗಳಲ್ಲಿ ಪಾಕಶಾಸ್ತ್ರ, ಟಿವಿಯ ಹಲವು ಪ್ರಸಿದ್ಧ ಶೋಗಳಲ್ಲಿ ಭಾಗವಹಿಸಿರುವ ಪ್ರಸಿದ್ಧ ಚೆಫ್ ಕೌಶಿಕ್ ಇದ್ದರು. ಅನುಪಮಾ ಗೌಡ, ಕುರಿ ಪ್ರತಾಪ್ ಅವರು ಈ ಶೋವನ್ನು ನಡೆಸಿಕೊಟ್ಟಿದ್ದರು. ಅಡುಗೆ ಮಾಡುವುದರ ಜೊತೆಗೆ ಇಲ್ಲಿ ಮನರಂಜನೆ ಕೂಡ ಇದೆ.
