ಜೀ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ ನಡೆಯಲಿವೆಯಂತೆ. ಈ ಮೂಲಕ ಹೊಸಬರಿಗೆ ಬಂಪರ್‌ ಅವಕಾಶ ಎನ್ನಬಹುದು. 

ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಎಂದು ಎಲ್ಲರೂ ಹೇಳೋದುಂಟು. ಈಗ ಕಿರುತೆರೆಗೆ ಪ್ರಭಾವಶಾಲಿ ಮತ್ತು ಅರ್ಥಪೂರ್ಣವಾದ ಕಥೆಗಳನ್ನು ಒದಗಿಸುವ ಜೀ ಕನ್ನಡ ಈಗ ಯುವಕಥೆಗಾರರಿಗೆ ಒಂದು ಅದ್ಭುತ ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ. ಅದರ ಜೊತೆಗೆ ಡ್ಯಾನ್ಸರ್ ಗಳು ಹಾಗು ಕಾಮಿಡಿಯನ್ ಗಳಿಗೂ ಇಲ್ಲಿದೆ ಸುವವಕಾಶ. ಜೀ಼ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ಸ್ ಸೆಪ್ಟೆಂಬರ್ 7 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಜೀ ರೈಟರ್ಸ್ ರೂಮ್‌ನಲ್ಲಿ ಭಾಗವಹಿಸುವವರು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು, ಆಯ್ಕೆ ಆದ ಯುವಪ್ರತಿಭೆಗಳು ಮುಂದಿನ ಸುತ್ತಿಗೆ ಹೋಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳು ಜೀ಼ ರೈಟರ್ಸ್ ರೂಮ್‌ಗೆ ಸೇರಲು ಅವಕಾಶವನ್ನು ಹೊಂದಿರುತ್ತಾರೆ, ಅಲ್ಲಿ ಅವರು ಇಂಡಸ್ಟ್ರಿಯ ವೃತ್ತಿಪರರಿಂದ ಮಾರ್ಗದರ್ಶನ ಪಡೆಯುತ್ತಾರೆ ಹಾಗೂ ಜೀ಼ ನ ಮುಂಬರುವ ಯೋಜನೆಗಳಿಗೆ ಕೆಲಸ ಮಾಡುವ ಸುವವಕಾಶ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್‌ನಲ್ಲಿ ಉತ್ತೀರ್ಣರಾದವರು ಮುಂದಿನ ಸುತ್ತಿದೆ ಆಯ್ಕೆ ಆಗುತ್ತಾರೆ.

ಇಲ್ಲಿದೆ ಆಡಿಷನ್ಸ್ ನ ವಿವರಗಳು: