ನಾರ್ಮಲ್ ಡೆಲಿವರಿ ಆದ ತಕ್ಷಣ ಹೊಟ್ಟೆಗೆ ಬಟ್ಟೆ ಕಟ್ಟಿದ ನಟಿ ಅಮೃತಾ; ಮಗು ಆದ್ಮೇಲೆ ಸಣ್ಣ ಆಗೋದು ಹೀಗೆ
ಪ್ರೆಗ್ನೆನ್ಸಿ ಜರ್ನಿ ಹಂಚಿಕೊಂಡ ಕಿರುತೆರೆ ನಟಿ ಅಮೃತಾ ರಾಮಮೂರ್ತಿ. ಪ್ರೆಗ್ನೆನ್ಸಿ ಹೊಟ್ಟೆ ಕಡಿಮೆ ಮಾಡಿಕೊಳ್ಳುವುದು ಹೇಗೆ?
ಕನ್ನಡ ಕಿರುತೆರೆ ಜನಪ್ರಿಯ ನಟಿ ಅಮೃತಾ ರಾಮಮೂರ್ತಿ ಮತ್ತು ರಘು ತಮ್ಮ ಮುದ್ದಾದ ಮಗಳಿಗೆ ಧೃತಿ ಎಂದು ನಾಮಕರಣ ಮಾಡಿದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಫ್ಯಾನ್ ಆಗಿರುವ ಕಾರಣ ಅವರ ಮಗಳ ಹೆಸರನ್ನು ತಮ್ಮ ಮಗಳಿಗೆ ಇಟ್ಟಿದ್ದಾರೆ. ಮಗು ಆದ ಮೇಲೆ ಅಮೃತಾ ತುಂಬಾನೇ ಫಿಟ್ ಆಂಡ್ ಫೈನ್ ಆಗಿರುವ ಕಾರಣ ಬಾಣಂತನದ ಬಗ್ಗೆ ಹೇಳಿ ಎಂದು ಅಭಿಮಾನಿಗಳು ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು. ಹೀಗಾಗಿ ತಾಯಿ ಜೊತೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್‌ಪಾರ್ಟಮ್ ಜರ್ನಿ ಹಂಚಿಕೊಂಡಿದ್ದಾರೆ.
'ಪ್ರೆಗ್ನೆನ್ಸಿ ಸಮಯದಲ್ಲಿ ನನಗೆ ಸಿಕ್ಕಾಪಟ್ಟೆ ವಾಕರಿಕೆ ಆಗುತ್ತಿತ್ತು. ಏನೂ ತಿನ್ನಲಾಗುತ್ತಿರಲಿಲ್ಲ ನೀರು ಕುಡಿದರೂ ವಾಂತಿ ಆಗುತ್ತಿತ್ತು ಇದನ್ನು ನೋಡಿ ನನ್ನ ತಾಯಿಗೆ ತುಂಬಾ ಬೇಸರ ಆಗಿತ್ತು. ಗರ್ಭಿಣಿ ಆದ 4-5 ತಿಂಗಳು ತೂಕ ಕಡಿಮೆ ಅಯ್ತು. ಸಾಮಾನ್ಯವಾಗಿ ಬಸರಿ ತೂಕ ಹೆಚ್ಚಾಗಬೇಕು ಎನ್ನುತ್ತಾರೆ ಆದರೆ ಡಾಕ್ಟರ್ ಇದಕ್ಕೆ ತಲೆ ಕೆಡಿಸಿಕೊಳ್ಳಬೇಡಿ ಎಂದರು. ನೆಕ್ಸಟ್ 4 ತಿಂಗಳು ವಾಂತಿ ಕಡಿಮೆ ಆಯ್ತು ಆದರೆ ಹೆರಿಗೆ ಆಗುವವರೆಗೂ ವಾಂತಿ ಮಾಡುತ್ತಿದ್ದೆ. ಇಷ್ಟೆಲ್ಲಾ ಕಷ್ಟ ಎದುರಿಸಿದ ಮೇಲೆ ಆರೋಗ್ಯವಾಗಿ ಮಗಳು ಧೃತಿ ಹುಟ್ಟಿದ್ದಳು. ನನಗೆ ನಾರ್ಮಲ್ ಡೆಲಿವರಿ ಆಗಿದ್ದು ಸಿ-ಸೆಕ್ಷನ್ ಅಲ್ಲ. ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ನೋವು ತಡೆಯುವುದಿಲ್ಲ ಎಂದು ಸಿ-ಸೆಕ್ಷನ್ ಮಾಡಿಸಿಕೊಳ್ಳಿ ಎಂದರು ಆದರೆ ನನ್ನ ಕುಟುಂಬ ನಾರ್ಮಲ್ ಡೆಲಿವರ್ ಅಗಿಬೇಕು ಎಂದು ನಿರ್ಧಾರ ಮಾಡಿದ್ದು ಏಕೆಂದರೆ ಎಲ್ಲವೂ ನಾರ್ಮಲ್ ಅಗಿತ್ತು. ಮಗಳ ಚಲನವಲನ ಮತ್ತು ಪ್ಲಾಸೆಂಟಾದಲ್ಲಿದ್ದ ಲಿಕ್ವಿಡ್ ಎಲ್ಲನೂ ನಾರ್ಮಲ್ ಆಗಿತ್ತು' ಎಂದು ಅಮೃತಾ ಮಾತನಾಡಿದ್ದಾರೆ.
ನನ್ನ ಬಳಿ ಬರುವಾಗ ಹುಷಾರ್! ಬ್ಯಾಗಲ್ಲಿ ಪೆಪ್ಪರ್ ಸ್ಪ್ರೇ- ಚಾಕು ಇರುತ್ತೆ ಎಂದ ಕಿರುತೆರೆ ನಟಿ ಅಮೃತಾ ರಾಮಮೂರ್ತಿ
'ಮಗು ಹುಟ್ಟಿದ ಮೊದಲ ದಿನದಂದಲೇ ಅಮ್ಮ ಹೊಟ್ಟೆಗೆ ಬಟ್ಟೆ ಕಟ್ಟಿದರು ಎಂದು ಅಮೃತಾ ಈ ವಿಚಾರದ ಬಗ್ಗೆ ಹೆಚ್ಚಿಗೆ ಮಾಹಿತಿ ನೀಡುವಂತೆ ತಾಯಿಗೆ ಹೇಳುತ್ತಾರೆ. 'ಸಾಮಾನ್ಯವಾಗಿ ಮಗು ಹುಟ್ಟಿದ ಮೇಲೆ ಇಷ್ಟು ದಿನ ಹೊಟ್ಟೆ ಕಟ್ಟಬಾರದು ಎನ್ನುತ್ತಾರೆ ಆದರೆ ಡೆಲಿವರಿ ನಂತರ ಸ್ನಾನ ಎಲ್ಲ ಮಾಡಿಸಿದ ತಕ್ಷಣ ಹೊಟ್ಟೆಗೆ ಬಟ್ಟೆ ಕಟ್ಟಬೇಕು ಇಲ್ಲ ಅಂದ್ರೆ ಹೊಟ್ಟೆ ಸಣ್ಣ ಆಗಲ್ಲ. ಬೆನ್ನಿಗೆ ಬಲ ಸಿಗಬೇಕು ಅಂದ್ರೆ ನಾರ್ಮಲ್ ಡೆಲಿವರಿ ಆದ ಕೆಲವು ನಿಮಿಷದಲ್ಲಿ ಹೊಟ್ಟೆಗೆ ಬಟ್ಟೆ ಕಟ್ಟುತ್ತೀವಿ. ಸಿ- ಸೆಕ್ಷನ್ ಮಾಡಿಸಿಕೊಂಡರೆ ಒಂದು ವಾರ ಆದ ಮೇಲೆ ಹೊಟ್ಟೆ ಕಟ್ಟಬೇಕು' ಎಂದು ಅಮೃತಾ ತಾಯಿ ಹೇಳುತ್ತಾರೆ.
'ಹೊಟ್ಟೆಗೆ ಯಾಕೆ ಕಟ್ಟಬೇಕು ಅಂದ್ರೆ ಬೆನ್ನು ಗಟ್ಟಿಯಾಗಬೇಕು ಹಾಗೆ ಹೊಟ್ಟೆ ಸಣ್ಣಗಾಗಬೇಕು ಎಂದು. ನನಗೆ ಹಳೆ ಕಾಟನ್ ಸೀರೆಗಳನ್ನು ಬಳಸಿ ಹೊಟ್ಟೆ ಕಟ್ಟುತ್ತಿದ್ದರು. ಎಷ್ಟು ಬಿಗಿಯಾಗಿ ಕಟ್ಟಿದ್ದರೂ ಹೊಟ್ಟೆ ಮೇಲೆ ಬಟ್ಟೆ ನಿಲ್ಲುತ್ತಿರಲಿಲ್ಲ ಹೀಗಾಗಿ ಬೆಲ್ಟ್ ತೆಗೆದುಕೊಂಡು ಹೊಟ್ಟೆಗೆ ಬೆಲ್ಟ್ ಕಟ್ಟಲು ಶುರು ಮಾಡಿದೆ. ಸಿ-ಸೆಕ್ಷನ್ ಮಾಡಿಸಿಕೊಂಡವರಿಗೆ ಸ್ಟಿಚ್‌ನಿಂದ ನೋವು ಹೆಚ್ಚಿಗೆ ಇರುತ್ತದೆ ಎಂದು 10 ದಿನ ಬೇಡ ಎನ್ನುತ್ತಾರೆ. ಡೆಲಿವರಿ ಆಗಿ 3 ದಿನಗಳ ನಂತರ ನಾನು ಮನೆಗೆ ಬಂದಿದ್ದು. ಕರಾವಳಿ ಕಡೆ ಹೇಗೆ ಅಂದ್ರೆ ಪ್ರತಿ ನಿತ್ಯ ಎಣ್ಣೆ ಹಚ್ಚಿ ಮೈ-ಕೈ ಮಸಾಜ್ ಮಾಡಿ ಸ್ನಾನ ಮಾಡಿಸುತ್ತಿದ್ದರು. ಪ್ರತಿ ನಿತ್ಯ ತಲೆ ಸ್ನಾನ ಮಾಡಬೇಕಿತ್ತು. ಮನೆಯಲ್ಲಿ ನನಗೆ ಏನು ಹೇಳುತ್ತಿದ್ದರು ಅದನ್ನು ಪಾಲಿಸಲು ಶುರು ಮಾಡಿದೆ' ಎಂದಿದ್ದಾರೆ ಅಮೃತಾ.
ಮಗಳನ್ನು ಚಾರ್ಲಿ ಪಪ್ಪಿ ಮಾಡಿದ ನಟಿ ಅಮೃತಾ ರಾಮೂರ್ತಿ; ವಿಡಿಯೋ ವೈರಲ್!
'ಎಣ್ಣೆ ಹಚ್ಚಿ ಸ್ವಲ್ಪ ಮಸಾಜ್ ಮಾಡಬೇಕು. ನಮ್ಮ ಊರಿನಲ್ಲಿ ಅಂಡೆ ಸ್ನಾನ ಮಾಡಿದಬೇಕು ಹೀಗಾಗಿ ಚೆನ್ನಾಗಿ ಬಿಸಿ ನೀರನ್ನು ಹೊಟ್ಟೆಗೆ ಹೊಡೆಯಬೇಕು. ಚೆನ್ನಾಗಿ ತಲೆ ಮತ್ತು ಮೈ ಸ್ನಾನ ಮಾಡಿಸಿನ ನಂತರ ನಿದ್ರೆ ಚೆನ್ನಾಗಿ ಬರುತ್ತದೆ. ಮೂರು ತಿಂಗಳು ಬಾಣಂತನ ಮಾಡಿದ ಮೇಲೆ 2 ದಿನಕ್ಕೊಮ್ಮೆ ಸ್ನಾನ ಮಾಡಿಸುತ್ತಾರೆ. ನಾಲ್ಕೈದು ಬಕೆಟ್ ಬಿಸಿ ನೀರಿನಲ್ಲಿ ಮೈಗೆ ಹೊಡೆಯುತ್ತಾರೆ. ಅದನ್ನು ಮಾಡಿದ ಕಾರಣ ಅಮೃತಾ ತೂಕ ಹೆಚ್ಚಾಗಿಲ್ಲ. ಊಟಕ್ಕೆ ಮೊದಲು 10 ದಿನ ಮನೆಯಲ್ಲಿ ತಯಾರಿಸಿದ ಪೌಡರ್ ಮತ್ತು ತುಪ್ಪು ಬಳಸಿ ತಿನ್ನಬೇಕಿತ್ತು ಆದರೆ ಅಮೃತಾ ಕೂದಲು ಚೆನ್ನಾಗಿ ಆಗಬೇಕು ಎನ್ನುವ ಕಾರಣಕ್ಕೆ ಪೆಪ್ಪರ್‌ಗೆ ಜೀರಿಗೆ ಕರಿಬೇವು ಪೌಡರ್ ಮಾಡಿದ ನಂತರ ಅದಕ್ಕೆ ತುಪ್ಪ ಹಾಕಿಕೊಂಡು ಊಟ ಮಾಡಬೇಕಿತ್ತು' ಎಂದು ಅಮೃತಾ ತಾಯಿ ಹೇಳಿದ್ದಾರೆ.