Asianet Suvarna News Asianet Suvarna News

ಮಗಳನ್ನು ಯಾರೂ ಮುಟ್ಟಬಾರದು, ಫ್ಯಾಮಿಲಿ ಸಪೋರ್ಟ್‌ ಬೇಕೇ ಬೇಕು; 'ಕೆಂಡಸಂಪಿಗೆ' ನಟಿ ಅಮೃತಾ Postpartum ಜರ್ನಿ

ಬಾಣಂತಿಯರಿಗೆ ಯೋಗ ಮತ್ತು ಮನೆ ಮದ್ದಿನ ಮಹತ್ವ ತಿಳಿಸಿದ ಕಿರುತೆರೆ ನಟಿ ಅಮೃತಾ ರಾಮಮೂರ್ತಿ. Postpartum ಜರ್ನಿ ಹೇಗಿರಬೇಕು ಎಂದು ಹಂಚಿಕೊಂಡ ನಟಿ.... 
 

Colors Kannada Kendasampige Amrutha Ramamoorthy says family is important in postpartum journey vcs
Author
First Published Feb 21, 2023, 5:13 PM IST

ಕೆಂಡಸಂಪಿಗೆ ನಟಿ ಅಮೃತಾ ರಾಮಮೂರ್ತಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಎರಡು ತಿಂಗಳ ಬಾಣಂತನ ಜರ್ನಿ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ. ಈಗಾಗಲೆ 4 ಭಾಗಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು ಮನೆ ಮದ್ದು, ಯೋಗ ಮತ್ತು ಫ್ಯಾಮಿಲಿ ಮಹತ್ವ ಸಾರಿದ್ದಾರೆ.

ಮದ್ದು:

'ನನ್ನ ಚಿಕ್ಕಮ್ಮ ಹೇಳಿದ ಹಾಗೆ ನಾನು ಶತಾವರಿ ಲೇಹ ತೆಗೆದುಕೊಳ್ಳುತ್ತಿದ್ದೆ. ದಿನಕ್ಕೆ ಮೂರು ಹೊತ್ತು ತೆಗೆದುಕೊಳ್ಳುತ್ತಿದ್ದೆ ಇದರಿಂದ ಬೆನ್ನು ನೋವಿಗೆ, ಗರ್ಭಕೋಶ ಮತ್ತು ಹಾಲು ಆಗುವುದಕ್ಕೆ ತುಂಬಾ ಸಹಾಯ ಮಾಡುತ್ತದೆ. ದೇಹ ಸಂಪೂರ್ಣವಾಗಿ ಹೀಲ್ ಆಗುವುದಕ್ಕೆ  ದಶಮೂಲಾರಿಷ್ಠ ತೆಗೆದುಕೊಳ್ಳುತ್ತಾರೆ.  ದೇಹದಲ್ಲಿ ಗ್ಯಾಸ್‌ ಫಾರ್‌ಮೇಷನ್‌ ಆದಾಗ ಧನ್ವಂತರಿ ವಡ್ಡಿ ತೆಗೆದುಕೊಳ್ಳುತ್ತಿದ್ದೆ.  ಶತಾವರಿ ಲೇಹವನ್ನು ಡೆಲಿವರಿ ಮುನ್ನ ತೆಗೆದುಕೊಳ್ಳಲು ಶುರು ಮಾಡಿದೆ. 

ಯೋಗ:

ನಮ್ಮ ದೇಹಕ್ಕೆ ಯೋಗ ತುಂಬಾನೇ ಮುಖ್ಯವಾಗುತ್ತದೆ ನಾವೇ ಸೇವಿಸಿದರೂ ಅದು ನಮ್ಮ ಫಿಸಿಕಲ್ ಹೀಲಿಂಗ್ ಮಾತ್ರ ಆದರೆ ಈ ಸಮಯದಲ್ಲಿ ತುಂಬಾ ಮಂದಿ ಡಿಪ್ರೆಶನ್ ಎದುರಿಸುತ್ತಾರೆ ಹಲವರಿಗೆ ಮನೆಯಲ್ಲಿ ಸಪೋರ್ಟ್ ಇರುವುದಿಲ್ಲ. ಮಗುವನ್ನು ಈ ರೀತಿ ಹೆತ್ತಿರುವುದು, ಪೋಸ್ಟ್‌ ಪಾರ್ಟಮ್ ಹೀಗಿತ್ತು ಎಂದು ಅನೇಕರು ನನಗೆ ಮೆಸೇಜ್ ಮಾಡಿ ಹೇಳುತ್ತಿದ್ದರು. ಬಾಣಂತನದ ಬಗ್ಗೆ ಗೊತ್ತಿಲ್ಲ ಅಥವಾ ನಿಮ್ಮ ಮನೆಯಲ್ಲಿ ಯಾರೂ ನೋಡಿಲ್ಲ ಅಂದ್ರೆ ನನ್ನ ವಿಡಿಯೋಗಳನ್ನು ಅವರಿಗೆ ತೋರಿಸಿ. ಮನೆಯಲ್ಲಿ ಪ್ರತಿಯೊಬ್ಬರ ಸಪೋರ್ಟ್ ಬೇಕಾಗುತ್ತದೆ ಏಕೆಂದರೆ ಒಂದು ಹೆಣ್ಣಿನ ದೇಹದಲ್ಲಿ ಹಾರ್ಮೋನ್‌ ಬದಲಾವಣೆ ತುಂಬಾ ಆಗುತ್ತದೆ. 95% ಹ್ಯಾಪಿ ಹರ್ಮೋನ್‌ ಇದ್ದರೆ ಮಗು ಆದ್ಮೇಲೆ 5% ಬಂತು ನಿಲ್ಲುತ್ತದೆ ಅಷ್ಟು ಬದಲಾವಣೆ ನಾವು ತಡೆದುಕೊಳ್ಳಬೇಕು ಅಂದ್ರೆ ನಮ್ಮ ಕುಟುಂಬ ಸಪೋರ್ಟ್ ಮಾಡುತ್ತಾರೆ. ನಮ್ಮ ತಂದೆ ತಾಯಿ ಮತ್ತು ಪತಿ ರಘು ಚೆನ್ನಾಗಿ ನೋಡಿಕೊಂಡರು. ನನಗೆ ತುಂಬಾ ಟೆನ್ಶನ್ ಆಗುತ್ತಿತ್ತು ಮಗಳು ಧೃತಿನ ಯಾರೂ ಮುಟ್ಟಬಾರದು ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದೆ ಯಾರು ಮನೆಗೂ ಬರ ಬಾರದು ಎನ್ನುತ್ತಿದ್ದೆ. ಕೊರೋನಾ ಸಮಯದಲ್ಲಿ ಮಗಳು ಹುಟ್ಟಿದ ಕಾರಣ ಸುಮ್ಮನೆ ಟೆನ್ಶನ್‌ ತೆಗೆದುಕೊಳ್ಳುತ್ತಿದೆ. ಈ ಹಂತವನ್ನು ಪ್ರತಿಯೊಬ್ಬರೂ ಎದುರಿಸುತ್ತೀರಿ ಚಿಂತೆ ಮಾಡಬೇಡಿ ಆದಷ್ಟು ಬೇಗ ಇದರಿಂದ ಹೊರ ಬರುತ್ತೀರಿ. ಏನೂ ಆಗಲ್ಲ ಸಮಯ ಬೇಗ ಕಳೆಯುತ್ತದೆ ಎಂದು ಹೇಳಿಕೊಳ್ಳುತ್ತಿರಿ. ಮೆಂಟಲಿ ನಾವು ಸರಿ ಇದ್ದರೆ ಫಿಸಿಕಲಿ ಸಂಪೂರ್ಣವಾಗಿ ಆರೋಗ್ಯವಾಗಿರುತ್ತೀರಿ. 

ನಾರ್ಮಲ್‌ ಡೆಲಿವರಿ ಆದ ತಕ್ಷಣ ಹೊಟ್ಟೆಗೆ ಬಟ್ಟೆ ಕಟ್ಟಿದ ನಟಿ ಅಮೃತಾ; ಮಗು ಆದ್ಮೇಲೆ ಸಣ್ಣ ಆಗೋದು ಹೀಗೆ

ಉಂಡೆ:

ಎರಡು ತಿಂಗಳ ಜರ್ನಿಯಲ್ಲಿ ಇಷ್ಟು ಮಾಡಲಾಗುತ್ತದೆ. ಎರಡು ತಿಂಗಳು ಆದ ಮೇಲೆ ನಮ್ಮ ಕಡೆ ಮದ್ದು ಮಾಡುತ್ತಾರೆ. ಇದನ್ನು ಸೇವಿಸುವುದರಿಂದ ನಮ್ಮ ದೇಹ ಚೆನ್ನಾಗಿ ಇರುತ್ತದೆ ಎನ್ನುವ ಕಾರಣಕ್ಕೆ. ಎಲ್ಲಾ ರೀತಿಯ ಡ್ರೈ ಫ್ರೋಟ್ಸ್‌ಗಳನ್ನು ಹಾಕಿ ಅಂಟು ಮಾಡಬೇಕು. ಹಿಂದಿನ ಕಾಲದಲ್ಲಿ ಅದರ ಪುಡಿ ಮಾಡುತ್ತಿದ್ದರು ಆದರೆ ಈಗ ಯಾರೂ ಪುಡಿ ತೆಗೆದುಕೊಳ್ಳುವುದಿಲ್ಲ ಎಂದು ಅಂಟಿನ ಉಂಡೆ ಮಾಡುವೆ. ದಿನಕ್ಕೆ ಎರಡು ಸಲ ಉಂಡೆ ಸೇವಿಸಬೇಕು. ಬಾಣಂತಿಯರಿಗೆ ಕಾಲಿ ಹೊಟ್ಟೆಯಲ್ಲಿ ಕೊಡುತ್ತಾರೆ. ಇದಕ್ಕೆ ಸಕ್ಕರೆ ಬಳಸುವುದಿಲ್ಲ ಇದನ್ನು ಯಾವಾಗ ಬೇಕಿದ್ದರೂ ಕೊಡಬಹುದು. 

ಮೊಸರು ತುಪ್ಪ ತಿಂದ್ರೆ ದಪ್ಪ ಆಗಲ್ಲ; ಬಾಣಂತನದಲ್ಲಿ ಏನ್ ತಿನ್ಬೇಕು ತಿನ್ನಬಾರದು ಎಂದು ಹೇಳಿದ ಕಿರುತೆರೆ ನಟಿ ಅಮೃತಾ

ಸಪೋರ್ಟ್‌:

ನನ್ನ ತಾಯಿ ನನಗೆ ಚೆನ್ನಾಗಿ ಬಾಣಂತನ ಮಾಡಿದರು. ಸುಮಾರು 2 ತಿಂಗಳುಗಳ ಕಾಲ ನನ್ನ ಜೊತೆ ಮಲಗಿದ್ದಾರೆ. ನಿದ್ರೆಯಲ್ಲಿ ನಾನು ಬೆಚ್ಚು ಬೀಳುತ್ತಿದ್ದೆ. ಒಂದು ದಿನ ನಿದ್ರೆಯಲ್ಲಿ ಜೋರಾಗಿ ಕೂಗಿಕೊಂಡು ಎದ್ದು ಕುಳಿತುಕೊಂಡಿದ್ದೆ ಏನೂ ಆಗುವುದಿಲ್ಲ ಮಗು ಆರಾಮ ಆಗಿದ್ದಾಳೆ ನೀನು ಆರಾಮ್ ಆಗಿರು ಎಂದು ಅಮ್ಮ ಸಮಾಧಾನ ಮಾಡುತ್ತಿದ್ದರು. ನನ್ನ ಈ ಪಾಸಿಟಿವ್ ಜರ್ನಿಗೆ ಕಾರಣ ಅಂದ್ರೆ ಅಮ್ಮನೇ. ಎಲ್ಲ ರೀತಿ ಅಮ್ಮ ನನಗೆ ಸಹಾಯ ಮಾಡಿದ್ದಾರೆ' ಎಂದು ಅಮೃತಾ ಹೇಳಿದ್ದಾರೆ. 

 

Follow Us:
Download App:
  • android
  • ios