ಬಾಣಂತನವನ್ನು ಸಿಂಪಲ್ ಆಂಡ್ ಹಳೆ ಕಾಲದಲ್ಲಿ ಹೇಗೆ ಮಾಡುತ್ತಿದ್ದರು ಎಂದು ಕೆಂಡಸಂಪಿಗೆ ನಟಿ ಅಮೃತಾ ರಾಮಮೂರ್ತಿ ಹಂಚಿಕೊಂಡಿದ್ದಾರೆ. 

ಕನ್ನಡ ಕಿರುತೆರೆ ಜನಪ್ರಿಯ ನಟಿ ಅಮೃತಾ ರಾಮಮೂರ್ತಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಬಾಣಂತನ ಮುಗಿಸಿಕೊಂಡು ಫಿಟ್ ಅಗಿ ಕಮ್ ಬ್ಯಾಕ್ ಮಾಡಿರುವ ಅಮೃತಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಟಿಪ್ಸ್‌ ಹಂಚಿಕೊಂಡಿದ್ದಾರೆ. ಬಾಣಂತಿಯರು ಏನೆಲ್ಲಾ ತಿನ್ನಬೇಕು?

ಕಾಳು ಮೆಣಸಿನ ರಸಂ:

ಬೆಳ್ಳುಳ್ಳಿಯಿಂದ ಹಾಲು ಚೆನ್ನಾಗಿ ಆಗುತ್ತೆಅದನ್ನು ಬಳಸಿ ಮೆಣಸಿನ ರಸಂ ಮಾಡಬೇಕು. ಚೆನ್ನಾಗಿ ತುಪ್ಪ ಹಾಕಿ 10 ದಿನಗಳ ಕಾಲ ಊಟ ಮಾಡಬೇಕು.ಈ 10 ದಿನ ಮುಗಿದ ಮೇಲೆ ಮೊಸರು ಚೆನ್ನಾಗಿ ಕೊಡುತ್ತಾರೆ. ಮೊಸರು ಕೊಡುವುದಕ್ಕೆ ಕಾರಣ ಜೀರ್ಣ ಚೆನ್ನಾಗಿ ಆಗುತ್ತದೆ ಎಂದು. 'ಸುಮಾರು 10 ದಿನಗಳ ಕಾಲ ಬಾತ್‌ರೂಮ್‌ ಬಳಸುವುದಕ್ಕೆ ಬಿಟ್ಟು ಬೇರೆ ಯಾವ ಕಾರಣಕ್ಕೂ ಹಾಸಿಗೆಯಿಂದ ಕೆಳಗೆ ಇಳಿಯಲಿಲ್ಲ. ಊಟ ತಿಂಡಿ ನೀರು ಪ್ರತಿಯೊಂದು ರೂಮ್‌ಗೆ ತೆಗೆದುಕೊಂಡು ಬರುತ್ತಿದ್ದರು. ಬಿಸಿ ಬಿಸಿ ಊಟ ತಿನ್ನಬೇಕು. 10 ದಿನ ಆದ್ಮೇಲೆ ಮೊಸರು ತಿನ್ನಬೇಕು. ಫ್ರಿಡ್ಚ್‌ನಲ್ಲಿ ಇಟ್ಟಿರುವ ಮೊಸರು ಕೊಡುತ್ತಿರಲಿಲ್ಲ, ಬೆಳಗ್ಗೆ ಹೆಪ್ಪು ಹಾಕುತ್ತಿದ್ದರು ಮಧ್ಯಾಹ್ನ ಮೊಸರು ಕೊಡುತ್ತಿದ್ದರು. ಕಫ ಅಥವಾ ಕೆಮ್ಮು ಆಗುತ್ತದೆ ಎನ್ನುತ್ತಾರೆ, ದೇವರ ದಯೆ ಏನೂ ಆಗುವುದಿಲ್ಲ. ಊರಿನ ಶೈಲಿಯಲ್ಲಿ ಬಾಣಂತನ ಮಾಡಿಸಿಕೊಳ್ಳಬೇಕು ಎಂದು ಫಿಕ್ಸ್‌ ಆಗಿದ್ದೆ' ಎಂದು ಅಮೃತಾ ಬಾಣಂತನದ ಬಗ್ಗೆ ಮಾತನಾಡಿದ್ದಾರೆ. 

ತರಕಾರಿಗಳು:

10-15 ದಿನಗಳ ನಂತರ ಗ್ಯಾಸ್‌ ಇಲ್ಲದ ತರಕಾರಿಗಳನ್ನು ತಿನ್ನಲು ಕೊಡುತ್ತಾರೆ. ಮಂಗಳೂರು ಸೌತೆಕಾಯಿಯನ್ನು ಹೋಳು ರೀತಿ ಸಾಂಬರ್ ಮಾಡಿ ಕೊಡಲಾಗುತ್ತದೆ. ಬಾಳೆ ಹೂವಿನಿಂದ ಮಾಡಿರುವ ಕೊಡಿಗಟ್ಟಿ ಚಟ್ನಿ ಮಾಡಿ ಕೊಡುತ್ತಾರೆ ಪ್ರತಿ ದಿನ ಇದನ್ನು ಸೇವಿಸುವುದರಿಂದ ಗರ್ಭಕೋಶ ಹೀಲ್ ಆಗಿ ಕಿರಿಯದಾಗುತ್ತದೆ. ಗರ್ಭದಲ್ಲಿ ಏನೇ ಕಸ ಉಳಿದುಕೊಂಡಿದ್ದರೂ ಹೊರ ತೆಗೆಯುತ್ತದೆ. ಕೆಲವರು ಬಾಳೆ ಹೂವಿನಿಂದ ಮಾಡುತ್ತಾರೆ ಇನ್ನೂ ಕೆಲವರು ದಾಳಿಂಬೆ ಅಥವಾ ಸೀಬೆಹಣ್ಣಿನ ಚಿಗುರು ಬಳಸಿ ಕೊಡಿಗಟ್ಟಿ ಮಾಡುತ್ತಾರೆ. ಎರಡು ತಿಂಗಳುಗಳ ಕಾಲ ಇದನ್ನು ಸೇವಿಸಹುದು. ಅನ್ನ ಮತ್ತು ತುಪ್ಪದ ಜೊತೆ ಕೊಡಿಗಟ್ಟಿಯನ್ನು ಮಿಕ್ಸ್‌ ಮಾಡಿಕೊಂಡು ಸೇವಿಸಬಹುದು.

ಯೋಗ ಮಾಡಬಹುದು:

ಈ ಆಹಾರ ಕ್ರಮವನ್ನು ಪಾಲಿಸುವಾಗ ಯೋಗ ಶುರು ಮಾಡಬಹುದು. ನಾನು ಯೋಗ ಮಾಡಲಿಲ್ಲ ಆದರೆ ಮಾಡಬಹುದು ಎಂದು ವೈದ್ಯರು ಹೇಳುತ್ತಾರೆ ಎಂದಿದ್ದಾರೆ ಅಮೃತಾ. 

ಟಿಪ್ಸ್‌:

'ಮೊಸರು ಮತ್ತು ತುಪ್ಪ ಚೆನ್ನಾಗಿ ಸೇವಿಸಿರುವೆ. ತುಪ್ಪ ತಿಂದರೆ ದಪ್ಪ ಆಗುತ್ತೀವಿ ಎನ್ನುತ್ತಾರೆ ಆದರೆ ಅದೆಲ್ಲಾ ಸುಳ್ಳು. ತುಪ್ಪ ಹೆಚ್ಚಿಗೆ ಸೇವಿಸುವುದರಿಂದ ಬೆನ್ನಿಗೆ ಒಳ್ಳೆಯದು. ಬಾಣಂತಿಯರಿಗೆ 5 ತಿಂಗಳು ನಂತರ ಬೆನ್ನು ನೋವು ಹೆಚ್ಚಿಗೆ ಬರುತ್ತೆ. 'ಹೋಳು ತಿನ್ನಬೇಕು ಎಂದು ಅಮ್ಮ ಹೇಳಿದಾಗ ಬೇಡ ಬೇಡ ಎನ್ನುತ್ತಿದ್ದೆ. ಹಳೆ ಕಾಲದಲ್ಲಿ ಹೇಗೆ ಮಾಡುತ್ತಾರೆ ಅದೇ ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದೆ. ದೇಹಕ್ಕೆ ಪೌಷ್ಟಿಕಾಂಶ ಬೇಕು ಹೀಗಾಗಿ ತಿನ್ನಲು ಶುರು ಮಾಡಿದೆ' ಎಂದು ಅಮೃತಾ ಹೇಳಿದ್ದಾರೆ. 

ಓಂ ಕಾಳಿನ ನೀರು:

'ಓಂ ಕಾಳಿನ ನೀರು ತುಂಬಾ ಮುಖ್ಯವಾಗುತ್ತದೆ. ಒಂದು ಲೀಟರ್‌ ನೀರಿಗೆ ಒಂದುವರೆ ಸ್ಪೂನ್‌ಗೆ ಓಂ ಕಾಳು ಹಾಕಿ ಕುದಿಸಬೇಕು. ಬಿಸಿ ಬಿಸಿ ನೀರು ಕುಡಿಯಬೇಕು. ಗ್ಯಾಸ್ಟ್ರಿಕ್‌ ಇದ್ದರೆ ಕಡಿಮೆ ಅಗುತ್ತದೆ ಹಾಗೇ ಮಗುವಿಗೆ ಹಾಲು ಕುಡಿಸುವಾಗ ಗ್ಯಾಸ್ ಆಗುವುದಿಲ್ಲ. 'ನನಗೆ ಗ್ಯಾಸ್ಟ್ರಿಕ್ ಸಮಸ್ಯೆ ತುಂಬಾನೇ ಇದೆ. ಏನ್ ತಿಂದರೂ ಗ್ಯಾಸ್ ಆಗುತ್ತದೆ. ಧ್ರುತಿ ಹುಟ್ಟಿದ ಮೇಲೆ ಗ್ಯಾಸ್ಟ್ರಿಕ್‌ ಸಮಸ್ಯೆ ಕಡಿಮೆ ಆಯ್ತು. ಬಾಣಂತನದ ಜರ್ನಿ ಚೆನ್ನಾಗಿತ್ತು ಹೀಗಾಗಿ ಆರೋಗ್ಯವಾಗಿರುವೆ. ನನ್ನ ಮಗಳಿಗೆ 15 ತಿಂಗಳು ಈಗಲೂ ಓಂ ಕಾಳಿನ ನೀರು ಕುಡಿಯುವೆ' ಎಂದಿದ್ದಾರೆ ಅಮೃತಾ. 

YouTube video player