ಸ್ಯಾಂಡಲ್‌ವುಡ್‌ ಟಗರು ಪುಟ್ಟಿ ಮಾನ್ವಿತಾ ಹರೀಶ್ ಕಿರುತೆರಯ ಜನ ಮೆಚ್ಚಿದ ಧಾರಾವಾಹಿ ಕನ್ನಡತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರ ಪಾತ್ರವೇನು? ಯಾವ ಕಾರಣಕ್ಕೆ ಸಿನಿಮಾ ಬಿಟ್ಟು ಇಲ್ಲಿಗೆ ಬಂದಿದ್ದಾರೆ ಎಂಬ ಕುತೂಹಲಕ್ಕೆ ಇಲ್ಲಿದೆ ಮಾಹಿತಿ...

'ಮೂರುಗಂಟು' ಜ್ಯೋತಿ ರೈ- ಪರದೆ ಮೇಲೆ ಸ್ವಾರ್ಥಿ, ನಿಜದಲ್ಲಿ ತ್ಯಾಗಮೂರ್ತಿ! 

ಪಾರ್ಟಿಯಲ್ಲಿ ಹೆಜ್ಜೆ:
ಖಾಸಗಿ ವೆಬ್‌ಸೈಟ್‌ ವರದಿ ಮಾಡಿರುವ ಪ್ರಕಾರ ಧಾರವಾಹಿಯಲ್ಲಿ ನಡೆಯಲಿರುವ ಪಾರ್ಟಿಯಲ್ಲಿ ಮಾನ್ವಿತಾ ಹರೀಶ್ ಹೆಜ್ಜೆ ಹಾಕಲಿದ್ದಾರಂತೆ. ಚಿತ್ರೀಕರಣದ ವೇಳೆ ಮಾನ್ವಿತಾ ಜೊತೆ ಉತ್ತಮ ಸಮಯ ಕಳೆದ ರಂಜನಿ ಮಿಸ್ ಮಾಡದೇ ಧಾರಾವಾಹಿ ನೋಡಿ ಎಂದು ವೀಕ್ಷಕರಿಗೆ ಮನವಿ ಮಾಡಿದ್ದಾರೆ.

ಕನ್ನಡತಿ ಧಾರಾವಾಹಿ ಸಮಾಜಮುಖಿ ವಿಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದೆ. ಈ ಹಿಂದೆ ಡ್ರಗ್ಸ್ ಸೇವಿಸುವುದರಿಂದ ಆಗುವ ತೊಂದರೆ, ಅದರಿಂದ ಯಾರಿಗೆಲ್ಲಾ ನಷ್ಟ, ಏನೆಲ್ಲಾ ಅನಾಹುತ ಆಗುತ್ತದೆ ಎಂದು ಮಹತ್ವವಾದ ಮಾಹಿತಿಯನ್ನು ಸಾರಿದ್ದರು. ಇದೀಗ ಪಾರ್ಟಿ ಸನ್ನಿವೇಶದಲ್ಲೂ ಮಾನ್ವಿತಾ ಜನರಲ್ಲಿ ಅರಿವು ಮೂಡಿಸಲು ಬಂದಿದ್ದಾರೋ ಅಥವಾ ಇದು ಕೇವಲ ಮನೋರಂಜನೆನಾ ಎಂದು ಕಾದು ನೋಡಬೇಕಿದೆ.

ಪಡ್ಡೆ ಹುಡುಗರ ನಿದ್ದೆ ಕೆಡಿಸಿದ 'ಕನ್ನಡತಿ' ಧಾರಾವಾಹಿಯ ಸೌಮ್ಯಾ ಭಟ್ ಯಾರು ಗೊತ್ತಾ?

ಇನ್ನು ದಿನೆ ದಿನೇ ಕುತೂಹಲ ಹೆಚ್ಚಿಸುತ್ತಿರುವ ಅಮ್ಮಮ್ಮ ನಿರ್ಧಾರ ಹಾಗೂ ಹರ್ಷ ಮದುವೆ ವಿಚಾರ ವೀಕ್ಷಕರನ್ನು ತುದಿಗಾಲಿನಲ್ಲಿ ನಿಂತು ಧಾರಾವಾಹಿಗಾಗಿ ಕಾಯುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ಆಸ್ತಿಯನ್ನು ಭುವಿಗೆ ಬರೆಯುತ್ತಿದ್ದಾರಾ? ವರೂಧಿನಿ ಸೊಸೆಯಾಗಬೇಕೆಂಬ ಪ್ಲಾನ್ ಏನಾಯ್ತು? ಎಲ್ಲಾ ಗೊಂದಲಕ್ಕೂ ಅತೀ ಶ್ರೀಘ್ರದಲ್ಲಿಯೇ ಉತ್ತರ ಸಿಗಲಿದೆ.