Ramachari serial: ಅಯ್ಯಯ್ಯೋ, ರಾಮಾಚಾರಿ ಪಕ್ಕದಲ್ಲೇ ಮಲ್ಕೊಂಬಿಟ್ಲು ಚಾರು, ಮುಂದೇನು?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ 'ರಾಮಾಚಾರಿ' ಸೀರಿಯಲ್ ನಲ್ಲೀಗ ಮಜವಾದ ಸ್ಟೋರಿ ನಡೀತಿದೆ. ಸಂಸ್ಕಾರ ಕಲಿಯಲೆಂದು ರಾಮಾಚಾರಿ ಮನೆಗೆ ಬಂದಿರೋ ಚಾರುವನ್ನು ಅಜ್ಜಿ ಹಾಗೂ ಮೊಮ್ಮಕ್ಕಳು ಮನೆಯಿಂದಾಚೆ ಓಡಿಸೋ ಪ್ಲಾನ್ ಮಾಡುತ್ತಿದ್ದಾರೆ. ಆದರೆ ಇದು ಚಾರು ಮತ್ತು ರಾಮಾಚಾರಿಯನ್ನು ಹತ್ತಿರಕ್ಕೆ ತರುತ್ತಿದೆ.
'ರಾಮಾಚಾರಿ' (Ramachari) ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಸೀರಿಯಲ್ ಶುರುವಾಗಿ ಎರಡ್ಮೂರು ತಿಂಗಳಾಗಿರಬಹುದಷ್ಟೇ, ಆದರೆ ಶುರುವಿನಿಂದ ಈಗಿನವರೆಗೂ ಸಖತ್ ಇಂಟರೆಸ್ಟಿಂಗ್ ಸ್ಟೋರಿ ಲೈನ್ ಮೂಲಕ ಸೀರಿಯಲ್ ಪ್ರಿಯರ ಗಮನಸೆಳೆಯುತ್ತಿದೆ. ಒಂದಿಷ್ಟು ಅವಮಾನ, ಜಗಳ, ನೋವು ಇತ್ಯಾದಿ ಎಮೋಶನಲ್ ಡ್ರಾಮಾ ಬಳಿಕ ಫನ್ನಿ ಹಾಗೂ ರೊಮ್ಯಾಂಟಿಕ್ ಶೇಡ್‌ನತ್ತ ಕತೆ ಟರ್ನ್ ಆಗುತ್ತಿದೆ. ಈ ಸೀರಿಯಲ್‌ನ ಹೀರೋ ರಾಮಾಚಾರಿ (Ramachari). ನಾಯಕಿ ಚಾರು. ರಾಮಾಚಾರಿ ಸಂಪ್ರದಾಯಸ್ಥ ಪುರೋಹಿತ ಹಿನ್ನೆಲೆಯ ಶುದ್ಧ ಮನಸ್ಸಿನ ಹುಡುಗ ಆದರೆ ಚಾರು (Charu) ಶ್ರೀಮಂತ ಬ್ಯುಸಿನೆಸ್‌ಮ್ಯಾನ್ ಜೈ ಶಂಕರ್ (Jai Shankar) ಮಗಳು. ಜೈ ಶಂಕರ್ ಅವರ ಇಬ್ಬರು ಹೆಂಡತಿಯರಲ್ಲಿ ಮೊದಲನೆಯವಳಾದ ಮಾನ್ಯತಾ ಎಂಬ ಮಹಾನ್ ದೌಲತ್ತಿನ ಹೆಂಗಸಿನ ಮಗಳು. ಆಳದಲ್ಲಿ ಚಾರು ಒಳ್ಳೆಯವಳಾದರೂ ಅಮ್ಮನ ಪ್ರಭಾವದಿಂದ ಅವಳಲ್ಲೂ ಸೊಕ್ಕು, ಹಣದ ಮದ ಸೇರಿಕೊಂಡಿದೆ. ಇತ್ತ ಸಾತ್ವಿಕ ಹಿನ್ನೆಲೆಯ ರಾಮಾಚಾರಿ ನೆರಳು ಕಂಡರೂ ಚಾರುಗೆ ಹಾಗೂ ಅವಳ ತಾಯಿ ಮಾನ್ಯತಾಗೆ ಮೈಯೆಲ್ಲ ಉರಿಯೋ ಸಿಟ್ಟು. ಆದರೆ ಇವರಿಬ್ಬರೂ ರಾಮಾಚಾರಿಯನ್ನು ಹಣಿಯಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿವೆ.
ಇದೀಗ ಚಾರುವನ್ನು ಸಂಸ್ಕಾರ ಕಲಿಯುವ ಉದ್ದೇಶದಿಂದ ಅವಳ ತಂದೆ ಉದ್ಯಮಿ ಜೈ ಶಂಕರ್ ರಾಮಾಚಾರಿ ಮನೆಯಲ್ಲಿ ಬಿಟ್ಟಿದ್ದಾರೆ. ಅವಳು ಇಲ್ಲಿದ್ದು ಸಂಸ್ಕಾರ ಕಲಿಯದಿದ್ದರೆ ಅವಳಿಗೆ ಸಿಇಓ(CEO) ಪೋಸ್ಟ್ ಕೊಡೋದಿಲ್ಲ ಅಂದಿರೋ ಕಾರಣ ಎಷ್ಟೇ ಕಷ್ಟ ಆದರೂ ಚಾರು ಈ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಚಾರು ಈ ಮನೆಯಲ್ಲಿ ಇರೋದು ರಾಮಾಚಾರಿ ಬಿಟ್ಟರೆ ಮತ್ಯಾರಿಗೂ ಇಷ್ಟ ಇದ್ದಂತಿಲ್ಲ. ಆದರೆ ರಾಮಾಚಾರಿ ತಂದೆ ನಾರಾಯಣಾಚಾರ್ಯರು ಇದಕ್ಕೆ ಒಳ್ಳೆಯ ಮನಸ್ಸಿಂದ ಒಪ್ಪಿಗೆ ಕೊಟ್ಟಿದ್ದಾರೆ. ಈ ಮನೆಯಲ್ಲಿ ನಾರಾಯಣಾಚಾರ್ಯರ ತಾಯಿ ಅಜ್ಜಿ ಇದ್ದಾರೆ. ಜೊತೆಗೆ ರಾಮಾಚಾರಿ ತಂಗಿ ಹಾಗೂ ಮಾವನ ಮಗಳಿದ್ದಾಳೆ. ಅಜ್ಜಿ ಹಾಗೂ ಮೊಮ್ಮಕ್ಕಳು ಇದೀಗ ಚಾರುವನ್ನು ಈ ಮನೆಬಿಟ್ಟು ಓಡಿಸಲು ಏನೇನೋ ಪ್ಲಾನ್ ಮಾಡ್ತಿದ್ದಾರೆ. ಆದರೆ ಅವರ ಪ್ಲಾನ್ ಒಂದೊಂದಾಗಿ ಉಲ್ಟಾ ಹೊಡೀತಿದೆ. ರಾಮಾಚಾರಿ ಮತ್ತು ಚಾರುವನ್ನು ಹತ್ತಿರ ತರುತ್ತಿದೆ.
Ramachari Serial : ಹೀರೋಯಿನ್ ಮೌನಾ ಗುಡ್ಡೆಮನೆ, ರಿಯಲ್ ಲೈಫಲ್ಲೂ ಧಿಮಾಕಿನ ಹೆಣ್ಣಾ?
ಅಜ್ಜಿ ಟಾರ್ಚರ್ ಕೊಡೋ ಉದ್ದೇಶದಿಂದ ತನ್ನ ರೂಮಲ್ಲೇ ಚಾರುನ ಮಲ್ಕೊಳ್ಳೋದಕ್ಕೆ ಹೇಳಿದ್ದಾಳೆ. ಅಲ್ಲಿ ಚಾರುಗೆ ನಿದ್ದೆ ಬರದಂತೆ ಏನೋ ಪ್ರಶ್ನೆ ಕೇಳಿದಾಳೆ, ಅವಳಿಗೆ ಇನ್ನೇನು ನಿದ್ದೆ ಬಂತು ಅನ್ನೋವಾಗ ಕಾಲೆತ್ತಿ ಅವಳ ಮೇಲೆ ಹಾಕಿದ್ದಾಳೆ. ಚಾರು ಅಜ್ಜಿ ಕಾಟದಿಂದ ಬೇಸತ್ತು ಕೆಳಗೆ ಮಲ್ಕೊಂಡಿದ್ದಾಳೆ. ಸ್ವಲ್ಪ ಹೊತ್ತಿಗೆ ಅಜ್ಜಿ ಮೇಲೆದ್ದು ಕೂತು ಏನೇನೋ ಮಾತನಾಡಲು ಶುರು ಮಾಡಿದ್ದಾಳೆ. ಭಯದಲ್ಲಿ ಕಿರಿಚುತ್ತಾ ಚಾರು ಹೊರಬಂದಿದ್ದಾಳೆ. ಅವಳ ಕಿರಿಚಾಟ ಕೇಳಿ ಮನೆಯವರೆಲ್ಲ ಎದ್ದು ಬಂದಿದ್ದಾರೆ. ಅವಳಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಕೊನೆಗೆ ರಾಮಾಚಾರಿ ತನ್ನ ರೂಮನ್ನೇ ಚಾರು ಮೇಡಂಗೆ ಬಿಟ್ಟು ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಅವಳಿಗೆ ಚೆನ್ನಾಗಿ ನಿದ್ದೆ ಬರಲಿ ಅಂತ 'ರಾಮಸ್ಕಂದಂ ಹನೂಮಂತಂ' (Ramaskandam Hanumantham) ಎಂಬ ದುಃಸ್ವಪ್ನಗಳಿಲ್ಲದ ನೆಮ್ಮದಿಯ ನಿದ್ರೆ ಬರುವ ಮಂತ್ರ ಹೇಳಿಕೊಟ್ಟಿದ್ದಾನೆ. ಚಾರು ಅದನ್ನು ಹೇಳಿ ಇನ್ನೇನು ಮಲಗಬೇಕು ಅಂದುಕೊಳ್ಳುವಾಗ ಅಜ್ಜಿ ಹಾಗೂ ಮೊಮ್ಮಕ್ಕಳು ದೆವ್ವದಾಟ ಶುರು ಮಾಡಿದ್ದಾರೆ. ಗೆಜ್ಜೆ ಸದ್ದು ಮಾಡುತ್ತಾ ಅವಳು ಮಲಗಿದ ರೂಮಿನ ಸುತ್ತ ಓಡಾಡಿದ್ದಾರೆ. ದೆವ್ವದಂತೆ ಕೂಗಿದ್ದಾರೆ, ಕಿಟಕಿ ಟಪ ಟಪ ಬಡಿಯುವಂತೆ ಮಾಡಿದ್ದಾರೆ. ಇದರಿಂದ ಭಯಭೀತಳಾದ ಚಾರು ಹಾಲ್‌ಗೆ ಬಂದು ರಾಮಾಚಾರಿ ಚಾಪೆಯಲ್ಲೇ ಅವನ ಪಕ್ಕ ಮಲಗಿದ್ದಾಳೆ. ಅವಳಿಗೆ ದಿಂಬಿಲ್ಲದೇ ನಿದ್ದೆ ಬರಲ್ಲ. ಸದ್ಯಕ್ಕೆ ರಾಮಾಚಾರಿಯ ತೋಳು ಅವಳಿಗೆ ದಿಂಬಾಗಿದೆ.
ಬೆಟ್ಟದ ಹೂ ಸೀರಿಯಲ್: ಮತ್ತೆ ರಾಹುಲ್ ಕೈಲಿ ತಾಳಿ ಕಟ್ಟಿಸ್ಕೊಳ್ಳೋ ಹೂವಿ, ಯಾಕ್ಹೀಗೆ?
ತಮಾಷೆ, ರೊಮ್ಯಾಂಟಿಕ್ ಶೇಡ್ ತೆಗೆದುಕೊಳ್ಳುತ್ತಿರುವ ಈ ಸೀರಿಯಲ್‌ಅನ್ನು ಜನ ಖುಷಿಯಿಂದ ನೋಡುತ್ತಿದ್ದಾರೆ. ರಾಮಾಚಾರಿಯಾಗಿ ರುತ್ವಿಕ್ (Ruthwik), ಚಾರು ಪಾತ್ರದಲ್ಲಿ ಮೌನ (Mouna Gudemane) ನಟನೆ ಜನರಿಗೆ ಬಹಳ ಇಷ್ಟವಾಗಿದೆ.
ಹಾಲಿವುಡ್ ಖ್ಯಾತನಟನ ಹೆಂಡತಿ ಜೊತೆ ಎಲಾನ್ ಮಸ್ಕ್ ಥ್ರೀಸಮ್ ಮಾಡಿದ ಆರೋಪ