Asianet Suvarna News Asianet Suvarna News

ಕೊನೆಗೂ ಮುಚ್ಚಿಟ್ಟ ಮದುವೆ ಬಗ್ಗೆ ಸತ್ಯ ಬಿಚ್ಚಿಟ್ಟ ಚಂದ್ರಪ್ರಭಾ; ಗಿಚ್ಚಿ ಗಿಲಿಗಿಲಿಯಲ್ಲಿ ಕಣ್ಣೀರಿಟ್ಟ ಜೋಡಿ!

ಕೊನೆಗೂ ಕರ್ನಾಟಕದ ಕೋಟಿ ಜನರ ಎದುರು ಮದುವೆ ಮಾಡಿಕೊಂಡ ಚಂದ್ರಪ್ರಭಾ. ಹುಡುಗಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ನೆಟ್ಟಿಗರು....
 

Colors Kannada Gicchi Giligili fame Chandra prabha ties knot with Bharati Priya vcs
Author
First Published Jun 2, 2023, 3:04 PM IST

ಕನ್ನಡ ಕಿರುತೆರೆ ಜನಪ್ರಿಯಾ ಕಾಮಿಡಿ ಶೋಗಳಾದ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಸೀಸನ್ 1 ಮತ್ತು ಸೀಸನ್ 2ರ ಸ್ಪರ್ಧಿ ಚಂದ್ರಪ್ರಭ ಕೆಲವು ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹೀಗಾಗಿ ಗಿಚ್ಚಿ ಗಿಲಿಗಿಲಿ ಸೀಸನ್ 2ರ ಗ್ರ್ಯಾಂಡ್ ಫಿನಾಲೆ ದಿನ ವೇದಿಕೆ ಮೇಲೆ ಮತ್ತೊಮ್ಮೆ ನವ ಜೋಡಿಗಳನ್ನು ಕರೆಸಿ ಮತ್ತೊಮ್ಮೆ ಮದುವೆ ಮಾಡಿಸಿ ನೂರಾರು ಕೋಟಿ ಜನರ ಆಶೀರ್ವಾದ ಪಡೆಯುವ ಅವಕಾಶ ಮಾಡಿಕೊಡಲಾಗಿದೆ. 

 'ನಾನು ಇಷ್ಟ ಪಟ್ಟಿರುವ ಹುಡುಗಿ ಎಂದು ಹೇಳಿಕೊಳ್ಳುವುದಕ್ಕಿಂತ ನನ್ನನ್ನು ಹೆಚ್ಚಿಗೆ ಇಷ್ಟ ಪಡುತ್ತಿರುವ ವ್ಯಕ್ತಿ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಕಣ್ಣೀರು ಹಾಕಿಸದಂತೆ ನೋಡಿಕೊಳ್ಳಬೇಕು ಅನ್ನೋದು ನನ್ನ ಆಸೆ' ಎಂದು ಚಂದ್ರಪ್ರಭಾ ಹೇಳಿದ್ದಾರೆ. ವೇದಿಕೆ ಮೇಲೆ ಇಡೀ ಗಿಚ್ಚಿ ಗಿಲಿಗಿಲಿ ಟೀಂ ಮತ್ತು ಚಂದ್ರಪ್ರಭಾ ಕುಟುಂಬ ಭಾಗಿಯಾಗಿದ್ದರು. ಈ ವೇಳೆ'ಜೀವನದಲ್ಲಿ ಖುಷಿಯಾಗಿರಲಿ ಅನ್ನೋದು ನನ್ನ ಆಸೆ' ಎಂದು ಚಂದ್ರಪ್ರಭಾ ತಾಯಿ ಆಶೀರ್ವಾದ ಮಾಡಿದ್ದಾರೆ.

ಗುಟ್ಟಾಗಿ ಮದುವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಹೆಂಡ್ತಿ ಸುಂದರವಾಗಿದ್ರೂ ಮದ್ವೆ ಆಗಿಲ್ಲ ಅನ್ನೋದು ಯಾಕೆ?

'ನಮ್ಮ ತಂದೆ ಇರಬೇಕಿತ್ತು ನನ್ನ ಮದುವೆ ನೋಡಬೇಕಿತ್ತು. ನನ್ನ ಮದುವೆ ನೋಡಿ ಸಾಯಬೇಕು ಅನ್ನೋದು ಅವರ ಮನಸ್ಸಿನಲ್ಲಿ ಇತ್ತು' ಎಂದು ಚಂದ್ರಪ್ರಭಾ ಕಣ್ಣೀರಿಟ್ಟಿದ್ದಾರೆ. ಚಂದ್ರಪ್ರಭಾ ಮದುವೆಯಾಗಿರುವ ಹುಡುಗಿ ಹೆಸರು ಭಾರತಿ ಪ್ರಿಯಾ ಎಂದು. ಅವರ ವೃತ್ತಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದಾರೆ. ಮದುವೆ ವಿಚಾರವನ್ನು ರೀಲ್ಸ್‌ ಮೂಲಕ ರಿವೀಲ್ ಮಾಡಿದ್ದು ಭಾರತಿ ಪ್ರಿಯಾ. 

Colors Kannada Gicchi Giligili fame Chandra prabha ties knot with Bharati Priya vcs

ಚಂದ್ರಪ್ರಭಾ ಟಾರ್ಗೇಟ್ ಯಾಕೆ?

ಚಂದ್ರಪ್ರಭಾ ಅವರಿಗೆ ವಯಸ್ಸಾಗಿದೆ. ಹಾಗಂತ ತುಂಬಾ ವಯಸ್ಸಾಗಿದೆ ಅಂತಲ್ಲ. ಮದುವೆ ಮಾಡಿಕೊಳ್ಳುವ ಯುವಕರ ವಯಸ್ಸು ದಾಟಿದ್ದಾರೆ. ಇದು ಅವರ ತಪ್ಪಲ್ಲ ಹುಡುಗಿ ಸಿಗುತ್ತಿಲ್ಲ ಹೀಗಾಗಿ ಮದುವೆ ತಡವಾಯಿತ್ತು. ಆರಂಭದಲ್ಲಿ ಇದು ಸೀರಿಯಸ್ ವಿಚಾರ ಆಗಿತ್ತು ಆನಂತರ ಆನಂತರ ಮಾತನಾಡಲು ಒಂದು ವಿಚಾರ ಆಯ್ತು..ಕೊನೆ ಕೊನೆಯಲ್ಲಿ ಮಾಡುವ ಕಾಮಿಡಿ ಸ್ಕಿಟ್‌ನಲ್ಲಿ ಇದೂ ಒಂದು ಕಾಮಿಡಿ ಆಯ್ತು. ಎಷ್ಟರ ಮಟ್ಟಕ್ಕೆ ಕಾಮಿಡಿ ಅಂದ್ರೆ ಚಂದ್ರಪ್ರಭಾ ಮದುವೆ ಮಾಡಿಕೊಂಡಿಲ್ಲ ಹುಡುಗಿ ಬೇಕು ಅನ್ನೋ ವಿಚಾರ ಪುಟ್ಟ ಮಕ್ಕಳಿಗೂ ಗೊತ್ತಾಗಲೂ ಶುರುವಾಯ್ತು.  ಹೀಗಾಗಿ ಚಂದ್ರಣ್ಣ ಮದುವೆ ಅಂದ್ರೆ ಇಡೀ ಊರಿಗೆ ಸಂಭ್ರಮವೋ ಸಂಭ್ರಮ. 

 

Follow Us:
Download App:
  • android
  • ios