ಗುಟ್ಟಾಗಿ ಮದುವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಹೆಂಡ್ತಿ ಸುಂದರವಾಗಿದ್ರೂ ಮದ್ವೆ ಆಗಿಲ್ಲ ಅನ್ನೋದು ಯಾಕೆ?
ವೈರಲ್ ಆಯ್ತು ಚಂದ್ರಪಭ ಮದುವೆ ಫೋಟೋ ಮತ್ತು ವಿಡಿಯೋಗಳು. ಚಂದ್ರಪ್ರಿಯಾ ಟ್ರೆಂಡ್ ಶುರು...
ಮಜಾ ಭಾರತ (Maja Bharatha) ಕಾಮಿಡಿ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿ ಕಲಾವಿದ ಚಂದ್ರಪ್ರಭ ಮದುವೆಯಾಗಿದ್ದಾರೆ.
ಸದ್ಯ ಗಿಚ್ಚಿ ಗಿಲಿಗಿಲಿ ಸೀಸನ್ 1 ಮತ್ತು 2ರಲ್ಲಿ ಕಾಣಿಸಿಕೊಳ್ಳುತ್ತಿರುವ ಚಂದ್ರಪ್ರಭ ವಯಸ್ಸಾಯ್ತು ಮದುವೆ ಆಗಿಲ್ಲ ಹುಡುಗಿ ಬೇಕು ಎಂದು ಆಗಾಗ ಹೇಳುತ್ತಿರುತ್ತಾರೆ.
ಆದರೆ ಚಂದ್ರಪ್ರಭ ಮದುವೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಂದ್ರ ಮದುವೆಯಾಗಿರುವ ಹುಡುಗಿ ಪ್ರಿಯಾ ಅಪ್ಲೋಡ್ ಮಾಡಿದ್ದಾರೆ.
ಚಂದ್ರಪ್ರಭ ಮದುವೆಯಾಗಿರುವ ಹುಡುಗಿ ಹೆಸರು ಭಾರತಿ ಪ್ರಿಯಾ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಾ ಮೂರುವರೆ ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ಭಾರತಿ ಪ್ರಿಯಾ ಅಪ್ಲೋಡ್ ಮಾಡುತ್ತಿರುವ ವಿಡಿಯೋ ಮತ್ತು ಫೋಟೋ ಪ್ರಕಾರ ಮದುವೆಯಾಗಿ ಒಂದು ವಾರ ಆಗಿರಬಹುದು. ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.
ದೇವಸ್ಥಾನದಲ್ಲಿ ಮದುವೆ ನಡೆದಿದೆ ಆನಂತರ ಮನೆ ಪ್ರವೇಶ್ ಮಾಡುವಾಗ ಪೂಜೆ ಮಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ರೀಲ್ಸ್ ರೂಪದಲ್ಲಿ ಫೋಟೋ ಹಾಕಿದ್ದಾರೆ.
ಕೆಂಪಕ್ಕಾ, ನಿಂಗಕ್ಕ,ಕರಗಕ್ಕ,ಕಾಳಕ್ಕ, ಯಾರನ್ನು ಕರಿದೇ ಗುಟ್ಟಾಗಿ ಮದುವೆ ಮಾಡಿಕೊಂಡ್ರಾ ಚಂದ್ರಣ್ಣೋ.... happy married life ಎಂದು ಫಾಲೋವರ್ ಶಿಲ್ಪ್ ಕೆ ಎನ್ ಕಾಮೆಂಟ್ ಮಾಡಿದ್ದಾರೆ.