Asianet Suvarna News Asianet Suvarna News

ನನ್ನ ಗಂಡ ಕುಡಿತಾನೆ, ಹೊಡಿತಾನೆ ಎನ್ನುತ್ತಿದ್ದ ರೀಲ್ಸ್‌ ರೇಶ್ಮಾ ಈಗ ಫುಲ್ ಚೇಂಜ್; ಮಲಗೋದೇ ಇಲ್ಲ ಎಂದು ಕೇಳಿ ಎಲ್ಲರೂ ಶಾಕ್!

ವೇದಿಕೆ ಮೇಲೆ ಯಾಸೀನ್‌ ಸಪೋರ್ಟ್‌ ಬಗ್ಗೆ ಮಾತನಾಡಿದ ರೀಲ್ಸ್ ಅಂಟಿ ರೇಶ್ಮಾ....ಗಂಡನ ಬಗ್ಗೆ ಒಂದು ಚೂರು ದೂರಿಲ್ಲ. 

Colors Kannada Gicchi gili gili Reeshma talks about husband Yasin support vcs
Author
First Published Jul 4, 2024, 9:57 AM IST

ಸೋಷಿಯಲ್ ಮೀಡಿಯಾದಲ್ಲಿ ಹಾಯ್ ಫ್ರೆಂಡ್ಸ್‌ ಎಂದು ಜೋರಾಗಿ ಕಿರುಚಾಡಿ ರೀಲ್ಸ್ ಮಾಡುತ್ತಿದ್ದ ರೇಶ್ಮಾ ಆಂಟಿ ಕೆಲವು ಎಪಿಸೋಡ್‌ಗಳಿಂದ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಸೀಸನ್ 3 ರಿಯಾಲಿಟಿ ಶೋನಲ್ಲಿ ಗೊಬ್ಬರಗಾಲ ತಂಡದಲ್ಲಿದ್ದಾರೆ. ದಿನದಿಂದ ದಿನಕ್ಕೆ ರೇಶ್ಮಾ ಆಂಕ್ಟಿಂಗ್‌ ಅದ್ಭುತವಾಗಿದೆ ಎಂದು ಮೆಚ್ಚುಗೆ ಮತ್ತು ಗೋಲ್ಡನ್ ಬಜರ್‌ ಬರುತ್ತಿದೆ. ವೇದಿಕೆ ಮೇಲೆ ಈ ಕೊಡುಗೆಯನ್ನು ತಮ್ಮ ಪತಿಗೆ ಅರ್ಪಿಸಿದ್ದಾರೆ.

'ನನ್ನ ಬೆಳವಣಿಗೆ ಸಪೋರ್ಟ್ ಮಾಡುತ್ತಿರುವುದು ನನ್ನ ಗಂಡ ಯಾಸೀನ್ ರೇಷ್ಮಾ. ನನ್ನನ್ನು ಶೂಟಿಂಗ್ ಸೆಟ್‌ಗೆ ಕರೆದುಕೊಂಡು ಬರುತ್ತಾರೆ ಜೊತೆಗಿದ್ದು ಮುಗಿಸಿಕೊಂಡು ಹೋಗುತ್ತೀವಿ. ಯಾವುದೇ ಪ್ರಮೋಷನ್ ಇದ್ದರೂ ಆ ಕೆಲಸ ಮುಗಿಯುವವರೆಗೂ ಇದ್ದು ಆನಂತರ ಹೋಗುತ್ತಾರೆ. ಏನೇ ಇರಲಿ ಜೊತೆಗಿರುತ್ತಾರೆ'ಎಂದು ರೇಶ್ಮಾ ವೇದಿಕೆ ಮೇಲೆ ಮಾತನಾಡಿದ್ದಾರೆ. ರೇಶ್ಮಾಗೆ ಸರ್ಪ್ರೈಸ್‌ ನೀಡಲು ಪತಿ ಯಾಸೀನ್‌ ಅವರನ್ನು ನಿರೂಪಕ ನಿರಂಜನ್ ದೇಶಪಾಂಡೆ ಕರೆಸುತ್ತಾರೆ. ಬರುತ್ತಿದ್ದಂತೆ ವೇದಿಕೆ ಮುಟ್ಟಿ ನಮಸ್ಕಾರ ಮಾಡಿಕೊಳ್ಳುವ ಯಾಸೀನ್‌ನ ನೋಡಿ 'ಅಯ್ಯೋ ಬರುತ್ತಿದ್ದಂತೆ ಹೆಂಡತಿ ಕಾಲಿಗೆ ನಮಸ್ಕಾರ ಮಾಡಿಕೊಂಡ್ರಾ'ಎಂದು ಸಾಧುಕೋಕಿಲಾ ಹಾಸ್ಯ ಮಾಡುತ್ತಾರೆ.

ಮದ್ವೆಯಾಗಿ ಬೇವರ್ಸಿ ಅನಾಥೆ ತರ ಆಗಿದೆ ಜೀವನ, ಇದುವರೆಗೂ ಸುಖ ನೋಡಿಲ್ಲ; ರೀಲ್ಸ್‌ ರೇಶ್ಮಾ ಕಣ್ಣೀರು

'ನನ್ನ ಪತ್ನಿ ರೇಶ್ಮಾಗೆ ಹುಷಾರಿಲ್ಲ ಅಂದಾಗ ನಾನೇ ಅಡುಗೆ ಮಾಡುತ್ತೀನಿ ತಿನ್ನಿಸುತ್ತೀನಿ, ಮನೆ ಕೆಲಸ ಮಾಡುತ್ತೀನಿ, ಬೆಳಗ್ಗೆ ಎದ್ದು ನೀರು ಕಾಯಿಸಿ ರೆಡಿ ಮಾಡಿಸಿನೇ ನಾನು ಆಕೆಯನ್ನು ಕೆಲಸಕ್ಕೆ ಕಳುಹಿಸಿಕೊಡುತ್ತಿರುವೆ. ಮೊದಲು ಎಲ್ಲರೂ ನನ್ನನ್ನು ರಾಜ ಎಂದು ಕರೆಯುತ್ತಿದ್ದರು ಯಾವಾಗ ನನ್ನ ಪತ್ನಿ ರೇಶ್ಮಾ ರೀಲ್ಸ್ ಮಾಡುವುದಕ್ಕೆ ಶುರು ಮಾಡಿದರು ರಾಜು ಹೆಂಡತಿ ರೀಲ್ಸ್ ಮಾಡುತ್ತಿರುವುದು ರಾಜು ಹೆಂಡತಿ ವಿಡಿಯೋ ಮಾಡುತ್ತಿರುವುದು ಎನ್ನುತ್ತಿದ್ದರು ಆದರೆ ಈವಾಗ ಅವ್ರು ರೇಶ್ಮಾ ಗಂಡ ಕಣೋ ಅಂತಾರೆ' ಎಂದು ರೇಶ್ಮಾ ಪತಿ ಯಾಸೀನ್ ಮಾತನಾಡಿದ್ದಾರೆ. 

ದಿನಕ್ಕೆ ಮೂರ್ನಾಲ್ಕು ವೈರಲ್ ವಿಡಿಯೋ ಹಾಕೋ ರೇಶ್ಮಾ; ಆಂಟಿ ತುಂಬಾ ತುಂಟಿ ಎಂದ ನೆಟ್ಟಿಗರು!

ಪ್ರತಿ ದಿನ ರೇಶ್ಮಾ ಮತ್ತು ಯಾಸೀನ್‌ನ ನೋಡುವ ನಿರಂಜನ್ ದೇಶಪಾಂಡೆ 'ನಮ್ಮ ಸ್ಕಿಟ್‌ ರೀಹರ್ಸಲ್‌ ನಡೆಯುವ ದಿನಗಳು ರಾತ್ರಿ 2 ಗಂಟೆ ಆಗಲಿ ಮೂರು 3 ಆಗಲಿ ಇಲ್ಲಿ ಕುಳಿತುಕೊಂಡು ಅಕೆಯ ಸ್ಕಿಟ್‌ ಮುಗಿದ ಮೇಲೆ ಕರೆದುಕೊಂಡು ಹೋಗುತ್ತಾರೆ ಯಾಸೀನ್' ಎಂದು ಹೇಳಿದ್ದಾರೆ. 

 

Latest Videos
Follow Us:
Download App:
  • android
  • ios