ಬೋಟಿ ನೀನು ತುಂಬಾ ನಾಟಿ; 90ರ ದಶಕದಲ್ಲಿ ಸಿಗುತ್ತಿದ್ದ ಕುರುಕುಲು ತಿಂಡಿ ರುಚಿ ನೋಡಿದ ನಿವೇದಿತಾ ಗೌಡ ಮತ್ತು ಯಶಸ್ವಿನಿ
90ರ ದಶಕದಲ್ಲಿ ಸಿಗುತ್ತಿದ್ದೆ ಡಿಫರೆಂಟ್ ಕುರುಕುಲು ತಿಂಡಿಗಳ ರುಚಿ ನೋಡಿದ ನಿವೇದಿತಾ ಗೌಡ ಮತ್ತು ಯಶಸ್ವಿನಿ...ವಿಡಿಯೋ ವೈರಲ್....
ಕನ್ನಡ ಕಿರುತೆರೆ ಬಾರ್ಬಿ ಡಾಲಿ ನಿವೇದಿತಾ ಗೌಡ ಮತ್ತು ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ಪತ್ನಿ ಯಶಸ್ವಿನಿ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಹೀಗಾಗಿ ಇಬ್ಬರೂ ಸೇರಿಕೊಂಡು 90ರ ದಶಕದಲ್ಲಿ ಮಕ್ಕಳು ಹೆಚ್ಚಿಗೆ ತಿನ್ನುತ್ತಿದ್ದ ಕುರುಕುಲು ತಿಂಡಿಗಳನ್ನು ತಂಡು ರುಚಿ ನೋಡಿದ್ದಾರೆ.
'ಮೊದಲ ಸಲ ವಿಡಿಯೋ ಮಾಡಲು ಇಷ್ಟೊಂದು ಖುಷಿಯಾಗುತ್ತಿರುವುದು. ಮೊದಲ ಕಾರಣ ನಿರಂಜನ್ ದೇಶಪಾಂಡೆ ಪತ್ನಿ ಯಶಸ್ವಿನಿ ನನ್ನ ಜೊತೆಗಿದ್ದಾರೆ, ಎರಡನೇ ಕಾರಣ 90ರ ದಶಕದಲ್ಲಿ ಯಾವ ರೀತಿ ತಿನಿಸುಗಳು ಇತ್ತು ಎಂದು ತೋರಿಸುತ್ತಿದ್ದೀವಿ. ಆಗಿನ ಕಾಲದ ಯಾವುದೇ ತಿನಿಸು ನೋಡಿದರೂ ಕ್ಯೂರಿಯಾಸಿಟಿ ಹೆಚ್ಚಾಗುತ್ತದೆ. ಈ ವಿಡಿಯೋದಲ್ಲಿ ಒಂದು ಚಾಲೆಂಜ್ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದೀವಿ...ಏನೆಂದರೆ ನನ್ನ ಬಳಿ 11 ಐಟಂ ಇರುತ್ತದೆ ಯಶಸ್ವಿನಿ ಬಳಿ 11 ಐಟಂ ಇರಲಿದೆ..ನಾವು ಕಣ್ಣು ಮುಚ್ಚಿಕೊಂಡು ಯಾವುದು ಹೆಚ್ಚಿಗೆ ಕಂಡು ಹಿಡಿಯುತ್ತಾರೆ ನೋಡಬೇಕು. ಇದರಲ್ಲಿ ಗೆಲ್ಲುವವರು ಒಂದು ದಿನ ಹೊರ ಕರೆದುಕೊಂಡು ಊಟ ಕೊಡಿಸಬೇಕು' ಎಂದು ನಿವೇದಿತಾ ಗೌಡ ಮಾತನಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ದಿನಕ್ಕೊಂದು ಪೋಸ್ಟ್ ಹಾಕುವ ನಿವೇದಿತಾ; ಪೆಕ್ರು ಪೆಕ್ರು ಥರ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು
'ಮೊದಲು ಯಶಸ್ವಿನಿ ಆರೇಂಜ್ ಬಣ್ಣದ ರಸಗುಲ್ಲ ರುಚಿ ನೋಡಿದ್ದಾರೆ. 'ಅಂಗಡಿಗಳಲ್ಲಿ ಡಬ್ಬ ಡಬ್ಬ ರಸಗುಲ್ಲಾ ಇಟ್ಟಿರುವುದನ್ನು ನೋಡುತ್ತಿದ್ದರೆ ಆದರೆ ತಿಂದಿರಲಿಲ್ಲ' ಎನ್ನುತ್ತಾರೆ ನಿವಿ. ಎರಡನೇಯದಾಗಿ ಪೆಪರ್‌ಮಿಂಟ್‌ನ ಯಶಸ್ವಿನಿ ಗೆಸ್ ಮಾಡುತ್ತಾರೆ. 3ನೇ ತಿನಿಸು ಚಾಕಿ ಚಾಕಿ, 4ನೇ ಹುಣಸೆ ಹಣ್ಣು ತಿನಿಸು, 5ನೇ ತಂಡ ತಂಡ ಕೋಲ ತಿನಿಸು ಗೆಸ್ ಮಾಡಿಲ್ಲ, 6ನೇ ಚಿಕ್ಕಿ ತಿನಿಸು ಗೆಸ್ ಮಾಡಿದ್ದಾರೆ, 7ನೇ ತಿನಿಸು ರುಚಿ ಹೇಳಿದ್ದಾರೆ ಅದರೆ ಹೆಸರು ಗೊತ್ತಾಗಿಲ್ಲ, 8ನೇ ಬೂಮರ್ ತಿನಿಸು ಗೆಸ್ ಮಾಡಿದ್ದಾರೆ. ' ಈ ಚಾಲೆಂಜ್‌ನಿಂದ ನನ್ನ ಬಾಲ್ಯದ ನೆನಪುಗಳು ಮರುಳಿ ಬಂದಿದೆ. ನಿವಿ ನನ್ನ ಬೆಸ್ಟ್ ಫ್ರೆಂಡ್ ಆಗಿರುವುದಕ್ಕೆ ಗ್ರೇಟ್' ಎಂದು ಯಶಸ್ವಿನಿ ಹೇಳಿದ್ದಾರೆ.
ತಾಯಿಗೆ ಕಳ್ಳರ ಭಯ, ನನಗೆ ಫ್ರೀಡಂ ಬೇಕೆಂದು ಮದುವೆಯಾದೆ: ವೇದಿಕೆ ಮೇಲೆ ಕಣ್ಣೀರಿಟ್ಟ ನಿವೇದಿತಾ ಗೌಡ
ಈಗ ನಿವೇದಿತಾ ಗೆಸ್ ಮಾಡಲು ಮುಂದಾಗಿದ್ದಾರೆ. ಮೊದಲು ಹಾಲ್ಕೋವಾ ತಿಂದ ನಿವಿ ಬಾಲ್ಯದಲ್ಲಿ ಯಾವತ್ತೂ ತಿಂದಿಲ್ಲ ಆದರೆ ಯಶಸ್ವಿನಿ ಹೇಳಿರುವುದನ್ನು ಕೇಳಿ ಕೇಳಿ ಗೆಸ್ ಮಾಡಿರುವುದು. 2ನೇ ತಿನಿಸು ನಿಪ್ಪಟ್ಟು, 3ನೇ ತಿನಿಸು ತಂಡ ತಂಡ ಮ್ಯಾಂಗೋ, 4ನೇ ತಿನಿಸು ಇಮಲಿ, 5ನೇ ತಿನಿಸು ಜೆಲ್ಲಿ ಜೆಲ್ಲಿ, 6ನೇ ತಿನಿಸು ಪುರಿ ಉಂಡೆ, 7ನೇ ತಿನಿಸು ಲಿಟಲ್ ಹಾರ್ಟ್‌ನ ಗೆಸ್ ಮಾಡಿಲ್ಲ, 8ನೇ ತಿನಿಸು ಬೋಟಿ, 9ನೇ ತಿನಿಸು ಲಾಲಿ ಪಾಪ್,10ನೇ ತಿನಿಸು ಜೆಲ್ಲಿ ಜೆಲ್ಲಿ, 11ನೇ ತಿನಿಸು ಕಂಡು ಹಿಡಿದಿಲ್ಲ ನಿವಿ.
'ಈಗಿನ ಕಾಲದಲ್ಲಿ ಮಕ್ಕಳಿಗೆ ಬರುತ್ತಿರುವ ತಿನಿಸುಗಳು ವೇಸ್ಟ್ ಎನ್ನಬಹುದು ಏಕೆಂದರೆ ಅದರಲ್ಲಿ ರುಚಿ ಇರುವುದಿಲ್ಲ ಹಾಗೆ ಅಟವಾಡಲು ಆಗಲ್ಲ. ನಾವು ಲಿಪ್‌ಸ್ಟಿಕ್ ರೀತಿಯಲ್ಲಿ ಲಾಲಿ ತಿಂದಿದ್ದೀವಿ. 90ರ ಮಕ್ಕಳು ಬೆಸ್ಟ್ ಎನ್ನಬಹುದು. ನಮಗೆ ಎಲ್ಲಾ ರೀತಿ ರುಚಿನೂ ಗೊತ್ತಿದೆ' ಎಂದು ನಿವಿ ಮತ್ತು ಯಶಸ್ವಿನಿ ಹೇಳಿದ್ದಾರೆ....