ಇನ್‌ಸ್ಟಾಗ್ರಾಂನಲ್ಲಿ ದಿನಕ್ಕೊಂದು ಪೋಸ್ಟ್ ಹಾಕುವ ನಿವೇದಿತಾ; ಪೆಕ್ರು ಪೆಕ್ರು ಥರ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು

ಇನ್‌ಸ್ಟಾಗ್ರಾಂ ಫಸ್ಟ್‌ ಫೋಟೋ ಯಾವುದು? ತಮ್ಮ ಅಕೌಂಟ್‌ನಲ್ಲಿ ಏನೆಲ್ಲಾ ಇದೆ ಎಂದು ಹಂಚಿಕೊಂಡ ಬಾರ್ಬಿ ಡಾಲ್...
 

Colors Kannada Gicchi Gili gili Niveditha Gowda whats in my Instagram goes viral vcs

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಿವೇದಿತಾ ಗೌಡ What's On My Instagram ಎನ್ನುವ ವಿಡಿಯೋ ಮಾಡಿದ್ದಾರೆ. ನೇಮ್ ಅಂಡ್ ಫೇಮ್ ತಂದುಕೊಟ್ಟ ಆಪ್‌ನಲ್ಲಿ ಮೊದಲು ಹಾಕಿದ ಪೋಸ್‌ ಮತ್ತು ಮರೆಯಲಾಗದ ಪೋಸ್ಟ್‌ಗಳ ಬಗ್ಗೆ ಹಂಚಿಕೊಂಡಿದ್ದಾರೆ. 

'ಇಷ್ಟು ದಿನ ಎಲ್ಲರು ನನ್ನ ಫೋನ್‌ನಲ್ಲಿ ಏನಿದೆ? ನನ್ನ ಬ್ಯಾಗಲ್ಲಿ ಏನಿದೆ ಎಂದು ನೋಡಿದ್ದೀರಿ ಇದೇ ಮೊದಲು ನನ್ನ ಇನ್‌ಸ್ಟಾಗ್ರಾಂನಲ್ಲಿ ಏನಿದೆ ಎಂದು ತೋರಿಸಲು ವಿಡಿಯೋ ಮಾಡುತ್ತಿರುವುದು.  ಸಾಮಾನ್ಯವಾಗಿ ಇನ್‌ಸ್ಟಾಗ್ರಾಂ ಫೋಟೋ ಮತ್ತು ವಿಡಿಯೋ ಅಂತ ಶೇರ್ ಮಾಡ್ತಾನೆ ಇರ್ತೀವಿ ನಾನು ಅತಿ ಹೆಚ್ಚು ಬಳಸುವ ಅಪ್ ಅಂದ್ರೆ ಇನ್‌ಸ್ಟಾಗ್ರಾಂ. ಇಷ್ಟು ವರ್ಷದಿಂದ ಬಳಸುತ್ತಿರುವುದುಕ್ಕೆ ಮರೆಯಲಾಗದ ಪೋಸ್ಟ್‌ಗಳ ಬಗ್ಗೆ ಮಾತನಾಡುತ್ತೀನಿ.  ಸುಮಾರು 1600 ಪೋಸ್ಟ್‌ಗಳನ್ನು ನಾನು ಅಪ್ಲೋಡ್ ಮಾಡಿರುವೆ..ಪ್ರತಿ ದಿನ ಒಂದೊಂದು ಅಂತ ಹಾಕಿದ್ದೀನಿ' ಎಂದು ನಿವಿ ವಿಡಿಯೋ ಆರಂಭಿಸಿದ್ದಾರೆ. 

ನಿವೇದಿತಾಗೆ ತಂದೆ ತಾಯಿ ಕಷ್ಟನೇ ತೋರಿಸಿಲ್ಲ: 3ನೇ ವಾರ್ಷಿಕೋತ್ಸವದ ದಿನ ಭಾವುಕರಾದ ಚಂದನ್-ನಿವಿ

'ಸೆಪ್ಟೆಂಬರ್ 28, 2015ರಲ್ಲಿ ನಾನು ಮೊದಲ ಪೋಸ್ಟ್ ಹಾಕಿರುವುದು. ಯಾವುದೋ ಕಾಲೇಜ್‌ ಕಾರ್ಯಕ್ರಮದಲ್ಲಿ Ramp ವಾಕ್ ಮಾಡಿರುವ ಫೋಟೋ ಹಾಕಿರುವೆ. ಒಂದು ದಿನ ಸಂಜೆ ನ್ಯೂಸ್ ಪೇಪರ್ ಓದಲು ತೆಗೆದುಕೊಂಡೆ ಮೊದಲ ಪೇಜ್‌ನಲ್ಲಿ ನನ್ನ ಫೋಟೋ ಇತ್ತು. ತುಂಬಾ ಖುಷಿ ಆಯ್ತು. ಅದೇ ವರ್ಷ ಕೆಲವು ತಿಂಗಳುಗಳ ನಂತರ ನನ್ನ ಆಭರಣ ಜಾಹೀರಾತಿನ ಫೋಟೋ ಹಾಕಿರುವೆ. ಅದೇ ವರ್ಷ ಮಕ್ಕಳ ದಿನಾಚರಣೆ ದಿನ ಅಮ್ಮ ನನ್ನನ್ನು ಮುದ್ದಾಡುತ್ತಿರುವ ಫೋಟೋ ಹಂಚಿಕೊಂಡಿರುವೆ. ನನ್ನ ಫೆವರೆಟ್‌ ಪೋಟೋ ಇದು ಎನ್ನಬಹುದು. ಹಲವಾರು ಕಾರ್ಯಕ್ರಮಗಳಲ್ಲಿ ಫ್ಯಾಷನ್ ವಾಕ್ ಮಾಡಿರುವೆ ಆ ಫೋಟೋಗಳು ಇದೆ' ಎಂದು ನಿವೇದಿತಾ ಮಾತನಾಡಿದ್ದಾರೆ. 

'ಮರೆಯಲಾಗದ ಮತ್ತೊಂದು ಫೋಟೋ ಅಂದ್ರೆ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದು. 18 ವಯಸ್ಸಿಗಿಂತ ಚಿಕ್ಕವಳು ಎಂದು ನನಗೆ ವಿನ್ನರ್ ಟ್ರೋಫಿ ಕೊಡದೇ ರನ್ನರ್ ಟ್ರೋಫಿ ಕೊಟ್ಟರು. ಆಗ ನನಗೆ ತುಂಬಾ ಬೇಸರ ಆಗಿತ್ತು. ನನ್ನ ತಾಯಿ ಜೊತೆ ಕುಳಿತುಕೊಂಡು ಅಳುತ್ತಿದ್ದೆ. ನನ್ನ ತಮ್ಮನ ಜೊತೆಗಿರುವ ಫೋಟೋ ಕ್ಯೂಟ್ ಆಗಿದೆ. ಈಗ ನನ್ನಗಿಂದ ದೊಡ್ಡವನಾಗಿದ್ದಾನೆ. ಮೊದಲು ಅಪ್ಲೋಡ್ ಮಾಡಿದ ಡಬ್ ಸ್ಮ್ಯಾಶ್‌ನಲ್ಲಿ ಅಳುತ್ತಿರುವ ವಿಡಿಯೋ ಹಾಕಿದ್ದೆ' ಎಂದು ನಿವಿ ಹೇಳಿದ್ದಾರೆ.

ನಾನು ಪ್ರೆಗ್ನೆಂಟ್ ಅನ್ನೋದು ನನಗೆ ಗೊತ್ತಿಲ್ಲ, ಪಾಳು ಬಂಗಲೆಗೆ ಹೋಗಬೇಕು; ನಿವೇದಿತಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಶಾಕ್

'2017ರ ಹೊಸ ವರ್ಷವನ್ನು ಡೆಲ್ಲಿಯಲ್ಲಿ ಅಚರಿಸಿದ್ದು ಮೊದಲ ಸಲ ಟಿವಿಯಲ್ಲಿ ಕಾಣಿಸಿಕೊಂಡೆ. ಅಂದೇ ನನ್ನ ತಾಯಿಗೆ ಒಂದು ಮಾತು ಕೊಟ್ಟೆ ಈ ಸಲ ಕೆಲವು ನಿಮಿಷ ಅಷ್ಟೇ ಟಿವಿಯಲ್ಲಿ ಬಂದಿರುವುದು ಮುಂದಿನ ವರ್ಷ ದಿನವೂ ಟಿವಿಯಲ್ಲಿ ಇರುವೆ ನೋಡಿ ಎಂದು. ಅದರಂತೆ ಬಿಗ್ ಬಾಸ್ ಆಫರ್‌ ಕೂಡ ಪಡೆದುಕೊಂಡೆ. ಅದಿಕ್ಕೆ ಹೇಳುವುದು ನಾವು ಸದಾ ಪಾಸಿಟಿವ್ ಆಗಿ ಯೋಚನೆ ಮಾಡಬೇಕು' ಎಂದಿದ್ದಾರೆ ನಿವೇದಿತಾ. ಹೀಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿ ಫೋಟೋ ಹಿಂದಿರುವ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

 

Latest Videos
Follow Us:
Download App:
  • android
  • ios