ಒಂದು ಹೊತ್ತು ಊಟಕ್ಕೂ ಕಷ್ಟ ಪಡುತ್ತಿದ್ವಿ; ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಕಣ್ಣಿರಿಟ್ಟ ಚಿಲ್ಲರ್ ಮಂಜು

ಮೊದಲ ಸಲ ವೇದಿಕೆ ಮೇಲೆ ಪೋಷಕರನ್ನು ಕಂಡು ಭಾವುಕರಾದ ಚಿಲ್ಲರ್ ಮಂಜು. ಅಲ್ಲಿದ್ದ ಪ್ರತಿಯೊಬ್ಬರ ಕಣ್ಣಲೂ ನೀರು.......

Colors Kannada Gicchi gili gili 3 grand finale chiller manju family breaks down vcs

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಸೀಸನ್ 3 ಗ್ರಾಂಡ್ ಫಿನಾಲೆ ಹಂತ ತಲುಪಿದೆ. 15 ಸೆಪ್ಟೆಂಬರ್ ಸಂಜೆ 6 ಗಂಟೆಗೆ ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಲಿದೆ. 8 ತಿಂಗಳು, 52 ಸಂಚಿಕೆಗಳಲ್ಲಿ 150ಕ್ಕೂ ಹೆಚ್ಚು ಸ್ಕಿಟ್‌ಗಳನ್ನು ಗಿಚ್ಚಿ ಗಿಲಿಗಿಲಿ ತಂಡ ನೀಡಿದೆ. ಬಿಗ್ ಬಾಸ್ ಸೀಸನ್ 10 ಮುಗಿದ ಮೇಲೆ ಜನರನ್ನು ಮನೋರಂಜಿಸಲು ಗಿಚ್ಚಿ ಗಿಲಿಗಿಲಿ ಸೀಸನ್ 3 ಆರಂಭವಾಗಿತ್ತು, ತೀರ್ಪುಗಾರರ ಸ್ಥಾನದಲ್ಲಿ  ನಟಿ ಶ್ರುತಿ, ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಮತ್ತು ವಿಶೇಷ ಅತಿಥಿಯಾಗಿ ಈ ವರ್ಷ ನಟ ಕೋಮಲ್ ಎಂಟ್ರಿ ಕೊಟ್ಟರು. ಫಿನಾಲೆ ಹಂತವನ್ನು 6-7 ಮಂದಿ ತಲುಪಿದ್ದಾರೆ. 

ಫಿನಾಲೆ ವೇದಿಕೆಯಲ್ಲಿ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಕೂಡ ಸ್ಕಿಟ್ ಮಾಡುತ್ತಾರೆ. ತಮ್ಮ 8 ತಿಂಗಳ ಜರ್ನಿಯಲ್ಲಿ ವೇದಿಕೆ ಮೇಲೆ ಹಂಚಿಕೊಳ್ಳುತ್ತಾರೆ. ಸೀಸನ್ 1ರಿಂದ 3ರವರೆಗೂ ಜನರನ್ನು ಮನೋರಂಜಿಸುತ್ತಿರುವ ಚಿಲ್ಲರ್ ಮಂಜು ಮೊದಲ ಸಲ ಭಾವುಕರಾಗಿದ್ದಾರೆ. ಮಂಜು ಕಷ್ಟಗಳನ್ನು ನೋಡಿ ಅಲ್ಲಿದ್ದ ಇನ್ನಿತ್ತರ ಸ್ಪರ್ಧಿಗಳು ಕಣ್ಣೀರಿಟ್ಟಿದ್ದಾರೆ.

ಸಕ್ಕರೆ ಬಿಟ್ಟರೆ ನೀನೇ ಅಪ್ಸರೆ; ಮಂಗಳೂರು ಬೆಡಗಿ ಕೃತಿ ಶೆಟ್ಟಿ ಬಿಚ್ಚಿಟ್ಟ ಬ್ಯೂಟಿ ಸೀಕ್ರೆಟ್

'ಮೊದಲ ಸಲ ನನ್ನ ಫ್ಯಾಮಿಲಿ ವೇದಿಕೆ ಮೇಲೆ ಬಂದಿರುವುದು. ಭೂಮಿ ಮೇಲೆ ನನ್ನ ಅಪ್ಪ ಇಷ್ಟ ಆದಂತೆ ಯಾರೂ ಇಷ್ಟ ಆಗುವುದಿಲ್ಲ..ಸಿಕ್ಕಾಪಟ್ಟೆ ಪ್ರಾಣ ಅವರು ಅಂದ್ರೆ. ಒಂದು ಹೊತ್ತು ಊಟಕ್ಕೂ ಕಷ್ಟ ಪಟ್ಟಿದ್ದೀನಿ...ಊಟ ಮಾಡುವ ಸಮಯದಲ್ಲಿ ಯಾಕೆ ಈ ಅಪ್ಪ ಈ ರೀತಿ ಆಡುತ್ತಾರೆ ಎಂತ ಸುಮಾರು ಸಲ ಅತ್ತಿದ್ದೀನಿ' ಎಂದು ಚಿಲ್ಲರ್ ಮಂಜು ಕಣ್ಣೀರಿಟ್ಟಿದ್ದಾರೆ.

ಸಿಂಪಥಿಗೋಸ್ಕರ್ ವರ್ಷ ಕಾವೇರಿ ಹೊಸ ಗೇಮ್ ಶುರು? ಕೈ ಹಿಡಿಯುವ ಹುಡುಗನ ಬಗ್ಗೆ ಚಿಂತಿಸುತ್ತಿರುವ ರೀಲ್ಸ್ ರಾಣಿ!

'ನನ್ನ ಜೇಬಿನಲ್ಲಿ 50 ರೂಪಾಯಿ ಇಟ್ಟಿದ್ದೀನಿ ಹೊರಗಡೆ ಊಟ ಮಾಡಿಕೋ ಎಂದು ಹೇಳಿ ಹೊರಡುತ್ತಿದ್ದರೆ ಆದರೆ ಅವನು ಮಾತ್ರ ನೀರು ಕುಡಿದುಕೊಂಡು ಜೀವನ ಮಾಡುತ್ತಿದ್ದ. ತುಂಬಾ ತ್ಯಾಗ ಮಾಡಿದ್ದಾನೆ ನಮಗೋಸ್ಕರ' ಎಂದು ವೇದಿಕೆ ಮೇಲೆ ಮಂಜು ಸಹೋದರ ಭಾವುಕರಾಗಿದ್ದಾರೆ. ಕಲಾವಿದನಾಗಬೇಕು ಎಂದು ಮಂಜು ಆಸೆಗೆ ಪೋಷಕರು ಸಾಥ್ ಕೊಟ್ಟಿದ್ದಾರೆ. ಮಂಜು ಇಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಈ ವರ್ಷ ಚಿಲ್ಲರ್ ಬಿಗ್ ಬಾಸ್‌ ಮನೆಗೆ ಕಾಲಿಡಬೇಕು, ಗಿಚ್ಚಿ ಗಿಲಿಗಿಲಿ ಟ್ರೋಫಿ ಚಿಲ್ಲರ್ ಕೈ ಸೇರಬೇಕು, ಚಿಲ್ಲರ್‌ಗೆ ಸಿನಿಮಾದಲ್ಲಿ ಅವಕಾಶಗಳು ಸಿಗಬೇಕು ಎಂದು ನೆಟ್ಟಿಗರು ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ. 

 

Latest Videos
Follow Us:
Download App:
  • android
  • ios