ನಟ ಜಗ್ಗೇಶ್ ದೊಡ್ಡವರು, ನಾವು ಅವರ ಚಪ್ಪಲಿಗೂ ಸಮವಲ್ಲ: ಡ್ರೋನ್ ಪ್ರತಾಪ್ ತಂದೆ ಭಾವುಕ
ಮಗನ ಆಟದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ತಂದೆ. ಡ್ರೋನ್ ಪ್ರತಾಪ್ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರಾ?
ಕರ್ನಾಟಕದ ಸಣ್ಣ ಗ್ರಾಮದಲ್ಲಿ ಹುಟ್ಟಿ ಬೆಳೆದು ತಮ್ಮ ಡ್ರೋನ್ ಸಂಶೋಧನೆಯನ್ನು ದೇಶಾದ್ಯಂತ ಪ್ರಚಾರ ಮಾಡಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಾತಾಪ್ ಈ ಸಲ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ಪ್ರತಾಪ್ ಮೊದಲ ಎಪಿಸೋಡ್‌ನಿಂದಲೇ ಸಾಕಷ್ಟು ಹೆಸರು ಗಳಿಸಿಬಿಟ್ಟರು. ತಮ್ಮ ಬಗ್ಗೆ ಎಷ್ಟೇ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಆಗುತ್ತಿದ್ದರೂ ಕೇರ್ ಮಾಡದೆ ಆಟದ ಕಡೆ ಗಮನ ಕೊಡುತ್ತಿದ್ದರು. ಈ ವಿಚಾರಗಳ ಬಗ್ಗೆ ಡ್ರೋನ್ ಪ್ರಾತಪ್ ತಂದೆ ಮಾತನಾಡಿದ್ದಾರೆ.
ಈ ಹಿಂದೆ ಡ್ರೋನ್ ಪ್ರತಾಪ್ ಮೋಸ ಮಾಡಿದ್ದಾರೆ ಎಂದು ಜಗ್ಗೇಶ್ ಆರೋಪ ಮಾಡಿದ್ದರು. ಈ ವಿಚಾರದ ಬಗ್ಗೆನೂ ಡ್ರೋನ್ ಪ್ರತಾಪ್ ತಂದೆ ಮಾತನಾಡಿದ್ದಾರೆ.'ಬಿಡಿ ಬಿಡಿ ಜಗ್ಗೇಶ್ ಸರ್ ಬಗ್ಗೆ ಮಾತನಾಡಬಾರದು. ಅವ್ರು ದೊಡ್ಡವರು ನಾವು ಕೆಳಗಿನ ಮಟ್ಟದವರು ಅವರು ಕಾಲಿನ ಚಪ್ಪಲಿಗೂ ಸಮವಲ್ಲ. ಅವರ ಬಗ್ಗೆ ಮಾತನಾಡುವ ಯೋಗ್ಯತೆನೂ ನಮಗಿಲ್ಲ. ಅವ್ರು ಏನೇ ಮಾತನಾಡಲಿ ಬಿಡಲಿ ಅದು ಅವರಿಗೆ ಸೇರಿದ್ದು' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕೆಲವೇ ದಿನಗಳಲ್ಲಿ ವರ್ತೂರ್ ಸಂತೋಷ್ ನಿಶ್ಚಿತಾರ್ಥ; ಹುಡುಗಿ ಯಾರೆಂದು ರಿವೀಲ್ ಮಾಡಿದ ರಕ್ಷಕ್!
ಸ್ಪರ್ಧಿಗಳಿಂದ ಅವಮಾನ:
'ಇನ್ನಿತ್ತರ ಸ್ಪರ್ಧಿಗಳು ಅವಮಾನ ಮಾಡುವ ವಿಚಾರದ ಬಗ್ಗೆ ನಾನು ಏನೂ ಹೇಳುವುದಿಲ್ಲ ಅದರ ಬಗ್ಗೆ ನಾನು ಬೇಜಾರು ಮಾಡಿಕೊಳ್ಳುವುದಿಲ್ಲ. ಅದೆಲ್ಲಾ ಆಟ ನೋಡಿ ನಾವು ಖುಷಿ ಪಡಬೇಕು. ಯಾವ ವಿಚಾರಕ್ಕೂ ಬೇಜಾರು ಮಾಡಿಕೊಳ್ಳಬಾರದು ಅವ್ರು ನಮ್ಮ ಮಕ್ಕಳು. ಎಷ್ಟೊಂದು ಸಲ ಕಣ್ಣೀರು ಹಾಕಿದ್ದಾರೆ ಹಾಕಲಿ ಬಿಡಿ. ಎಲ್ಲರೂ ನಮ್ಮ ಮಕ್ಕಳು ಅಲ್ಲಿ. ಯಾವ ಬಗ್ಗೆನೂ ನಾವು ಮಾತನಾಡಬಾರದು. ಒಂದೊಂದು ಸಲ ತಪ್ಪಾಗಿದೆ ಅಂತ ಎಲ್ಲರೂ ಮಾತನಾಡಿಕೊಂಡು ಸರಿ ಮಾಡಿಕೊಂಡಿದ್ದಾರೆ. ಬೇರೆ ಸ್ಪರ್ಧಿಗಳನ್ನು ಅವರ ತಂದೆ ತಾಯಿ ಖುಷಿಯಾಗಿ ಕಳುಹಿಸಿಕೊಟ್ಟಿರುತ್ತಾರೆ. ಪಾಪ ಅವರು ನಮ್ಮಂತೆ ಬಡವರೋ ಶ್ರೀಮಂತರೋ ಗೊತ್ತಿಲ್ಲ ಏಕೆಂದರೆ ಬೆಂಗಳೂರು ಅಂದ್ರೆ ಏನು ಅಂತಾನೇ ನನಗೆ ಗೊತ್ತಿಲ್ಲ' ಎಂದು ಪ್ರತಾಪ್ ತಂದೆ ಹೇಳಿದ್ದಾರೆ.
ಗರಡಿಯಲ್ಲಿ 15 ವರ್ಷ ಹಿಂದಿನ ದರ್ಶನ್ ಸಿಕ್ತಾರೆ: ಬಿ.ಸಿ. ಪಾಟೀಲ್
'ನನ್ನ ಮಗ ಯಾವತ್ತು ಯಾರನ್ನೂ ಕೆಟ್ಟದಾಗಿ ನೋಡಿಲ್ಲ. ಆ ರೀತಿ ನೋಡುವಂತ ಹುಡುಗ ಆಗಿದ್ರೆ ಆ ಮಟ್ಟಕ್ಕೆ ಹೇಗೆ ಬೆಳೆಯುತ್ತಿದ್ದ? ನಾವು ಬೆಳೆದಿರುವ ವಾತಾವರಣ ಆ ರೀತಿ. ಹೆಣ್ಣು ಮಕ್ಕಳನ್ನು ನಮ್ಮ ಅಕ್ಕ ತಂಗಿಯರು ಎಂದು ಭಾವಿಸುತ್ತಾನೆ. ಅಲ್ಲಿರುವ ಹೆಣ್ಣು ಮಕ್ಕಳು ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. ದಿನ ಟಿವಿ ನೋಡುತ್ತೀವಿ. ನಮ್ಮ ಗ್ರಾಮದಲ್ಲಿ ಎಲ್ಲರೂ ನೋಡುತ್ತಾರೆ. ನನ್ನ ಮಗ ಒಳ್ಳೆ ರೀತಿಯಲ್ಲಿ ಯಾರ ಮನಸ್ಸು ನೋವಿಸದೇ ಆಟದಲ್ಲಿ ಗೆದ್ದು ಬರಬೇಕು. ಯಾರು ಏನೇ ಹೇಳಿದ್ದರೂ ನನ್ನ ಒಳ್ಳೆದು ಮಾಡುವುದಕ್ಕೆ ಎಂದು ಭಾವಿಸಿ ಕೆಲಸ ಮಾಡಬೇಕು' ಎಂದಿದ್ದಾರೆ .